ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಠೌಳಿಗಾರನಮ್ಮ ಗೋಪಮ್ಮ ನಿನ್ನ ಮಗ ನ್ನೆಂಥಾ ಠೌಳಿಗಾರನಮ್ಮ ಪ. ಎಂಥಾ ಠೌಳಿಗಾರ ಪಂಥಾದಿ ಬೆನ್ನಟ್ಟಿ ಬಂದು ನಿಂತಲ್ಲೆ ನಾನಾರೂಪವೆಂತು ತಾಳುವ ನೋಡೆ ಎಂಥಾ ಅ.ಪ. ನೀರೊಳು ಮೀಯಲು ಪೋದೆನೆ ಗೋಪಮ್ಮ ಸಾರಿ ಪಿಡಿಯಲು ಹೋದೆ ಆರು ಅರಿಯರೆಂದು ಪೊತ್ತು ಮರೆಯಾದನೇ ಗೋಪಮ್ಮ 1 ಗೋಪಿ ಧೂಳು ಕೆದರಿ ಕೋರೆ ತೋರುವನ ಖೂಳ ದೈತ್ಯನ ಸೀಳೆ ಕೇಳಿ ಕಂದನ ನುಡಿ ಭಾಳ ಕ್ರೂರ ಮೃಗ ಕೇಳಿದೊಡಲು ಭಯ ತಾಳಿ ಬಂದೆ ಇಂಥ2 ದೊರಕಿದನೆಂದೆ ತಿರುಕ ಬ್ರಹ್ಮಚಾರಿ ತಿರುಗಿ ನೋಡೆ ಥೋರ ಕೊಡಲಿ ಪಿಡಿದು ನಿಂತು ಮಾರುತಿ ಸೇವಿತನಾದ ಗಮನ ದೇವನು ಎಂಥಾ 3 ಚಿತ್ತಜನೈಯ್ಯನು ನಾನೆತ್ತ ಪೋದರು ಬಿಡ ಸುತ್ತಿ ಬಹನೆ ಕೃಷ್ಣಾ ಮುತ್ತ ತಾರೆನುತ ಕತ್ತಲೆಯೊಳು ಪೋದೆ ವಿಸ್ತರಿಸುವೆನೆಂತು ಗೋಪಿ ಇಂಥಾ 4 ಶ್ರೀಪತಿ ಶ್ರೀನಿವಾಸನ ಪಿಡಿದು ಗೋಪಾಲನ ಎಳತಂದೆ ನಿನ್ನೆಡೆಗೆ ತಾ ಪರಾರಿಯಾಗಿ ಗೋಪತಿ ಹಯನೇರಿ ಏಪರಿ ಪೋದನೊ ತಾಪತಾಳಲಾರೆ ಎಂಥಾ 5
--------------
ಸರಸ್ವತಿ ಬಾಯಿ
ವಿಜಯ ದಾಸರ ಭಜಿಸಿರೋ | ಸುಜನರೆಲ್ಲ ನೀವೂ ಪ ವಿಜಯ ದಾಸರ ಭಜಿಸೇ | ಕುಜನ ಮರ್ದನ ನಮ್ಮವಿಜಯ ವಿಠಲ ತಾನೇ | ನಿಜವ ತೋರುವ ಮನದೀ ಅ.ಪ. ಮುನ್ನ ಸುರಲೀಲಾ ನೆನಿಸಿ ತಾ |ಜನಿಸಿದ ತ್ರೇತಾಯುಗದಿ |ವನಧಿಜೆ ರಮಣ ಶ್ರೀ | ಹನುವ ಸೇವಿತನಾದಶ್ರೀನಿವಾಸನ ಚರಣ | ವನಜವ ಸೇವಿಸಿದಾ 1 ಸಕಲ ಸದ್ಗುಣ ಆಕರಾ |ನಿಖಿಲ ಲೋಕದ ಧಾರಕಾ |ಪಾಕಶಾಸನ ಪೂಜ್ಯ | ಗೋಕುಲರೊಡೆಯನನಿಕಂಪಾನೆನಿಸಿ ಜನಿಸಿ | ಕೃಷ್ಣನ್ನ ಪೂಜಿಸಿದ 2 ಸುರ ಪುರ ಮುನಿ ನಾರದಾ |ವರಕಲಿಯಲ್ಲಿ ಜನಿಸೇ |ತುರುಕರುವಾಗಿ ಅವರಾ | ಚರಣವ ಸೇವಿಸಿದಮರಳಿ ಅವರ ಪುತ್ರಾ | ಗುರುಮಧ್ವಪತಿ ಭೃಗುವಾ 3 ಪದಪಂಚ ಲಕ್ಷ ಗ್ರಂಥಕೇ |ಪಾದವೇ ನ್ಯೂನವಿರಲೂ | ಪದಪದ್ಯ ಸುಳ್ಹಾದಿಯಲಿ |ಪಾದ ಪೂರ್ತಿಯ ಮಾಡೆಮೋದದಲುದಿಸಿದಾ | ಬುಧನು ದಾಸಪ್ಪ ನೆನಿಸೀ 4 ಪರಮ ಕಾರುಣ್ಯ ಗುರುವೇ |ಕರವ ಪಿಡೀರಿ ಎನ್ನಾ |ಮರುತಾಂತಾರಾತ್ಮಾ ಗುರು | ಗೋವಿಂದ ವಿಠ್ಠಲನಚರಣವ ತೋರಿಸೀ | ಕರುಣದಿ ಪೋಷಿಸಿ5
--------------
ಗುರುಗೋವಿಂದವಿಠಲರು