ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ವೆಂಕಟಗಿರಿನಿಲಯನಂಘ್ರಿ ರಾ ಜೀವಯುಗಳಗಾನಮಿಸುವೆನು ಪ ಸೇವಿಪ ಜನರಿಗಮರ ತರುವೆನಿಸಿ ಧ ರಾವಲಯಾಖ್ಯ ದಿವಿಯೊಳೆಸವ ಅ.ಪ. ನಿಖಿಳ ಜಗತ್ತಿಗೆ ಪಾವನತರವೆಂದೆನಿಸುವುದು ಶ್ರೀ ವಿಧಿಭವ ಶಕ್ರಾದ್ಯರು ಆವನ ಸೇವಕ ಸೇವಕರೆನಿಸುವರು ತಾ ಉತ್ತಮ ಪುರುಷನೆನಿಸಿ ಜಗವ ಸ ದಾವಕಾಲ ಸಂತೈಸುವನು ಜೀವಾಂತರ್ಗತನಾಗಿ ವಿವಿಧ ವೇ ದಾವಳಿಯಿಂದ ತುತಿಸಿ ಕೊಂಬಾ 1 ಪಾತನೊಳಹಿಪ ವಿರೋಧಿಸೆ ತವಸ ತ್ವಾತಿಶಯನ ತೋರೆಂದೆನುತಾ ಜಾತರೂಪ ಶೈಲಾತ್ಮಜನಪ್ಪಿರೆ ವೀತಿ ಹೋತ್ರ ಸಖ ಕಿತ್ತೊಗೆಯೆ ವೀತ ಕರ್ನನಳವಳಿದು ವೇಗ ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ ಮೇತನಾಗಿ ಮೋದಿಸುತಿಪ್ಪೆ 2 ಭೂಸುರನೊರ್ವನು ತೊಂಡಮಾನ ಧರ ಣೀಶÀನ ನಿಲಯದೊಳುಳುಹಿ ಸತಿಯ ನೃಪತಿ ಮರೆಯೆ ನಿ ಶ್ವಾಸ ವನೈದಿದಳಾ ಸತಿಯು ಆ ಸಮಯದಿ ದ್ವಿಜವರ್ಯನು ಬೆಸಗೊಳೆ ಕ್ಲೇಶದಿ ಭೂಮಿಪ ಸಂಸ್ತುತಿಸೆ ಕೇಶವ ತಾನಸ್ಥಿಗಳ ತರಿಸಿ ಸು ವಾಸಿನಿ ಶಿಶು ಸಹ ಒಲಿದಿತ್ತಾ 3 ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ ಗದ್ದಿ ಕುಮಾರತ್ವವನಿತ್ತ ಅಧ್ವರವೆಸಗಿದ ಋಷಿಗಳ ಮಂತ್ರದ ಪದ್ದತಿ ತಿದ್ದಿಯಜ್ಞವ ಮಾಡ್ದ ಮಧ್ಯರಾತ್ರಿಯೊಳು ಬೆಸಗೊಂಡ ನೃಪನು ಪದ್ರವ ಕಳೆದಾಯುಧವಿತ್ತು ಮೃದ್ಭಾಂಡವ ರಚಿಸುವನಿಗೊಲಿದವನ ಚೋದ್ಯ ತೋಂಡಮಾನಗೆ ತೋರ್ದ 4 ಸಂಚಿತ ಕುಕರ್ಮಗಳ ಮನೆಯ ಮುರಿದು ಆಗಾಮಿ ಫಲಂಗಳ ಅನುಭವಕೀಯದೆ ಪ್ರಾರಬ್ದಾ ಮೂರ್ತಿ ಚಿಂ ತನೆ ಇತ್ತು ಸ್ವರೂಪಸುಖಾ ಅನುದಿನದಲಿ ವ್ಯಕ್ತಮಾಡಿಸಿ ಕೊ ಟ್ಟನಿಮಿತ್ತಾಪ್ತನೆನಿಸುತಿಪ್ಪ 5 ಏಕಮೇವ ರತ್ನಾಕರ ಮಂದಿರ ಆಕೂತಿಜ ಯಜ್ಞಾಕರನೇ ಲೊಕವಿಲಕ್ಷಣ ಸೂಕರಾತ್ಮ ಪಿ ವಿನುತ ಲಕ್ಷ್ಮೀ ಕಾಂತಾ ಗೋಕುಲ ಮಂದಿರ ಏಕಾಂತಿಗಳ ನಿ ರಾಕರಿಸಿದೆ ಲೋಕೈಕ ಸುಖ ಶೋಕ ರಹಿತ ನಿಜಲೋಕವಿತ್ತು ನಿ ರಾಕುಲ ಸುಖಗಳ ತಾ ಕೊಡುವಾ 6 ದಿನಪನೊಳಗೆ ವೃಜಿನಿ ವಸು ತಾ ಎಂ ದೆನಿಸಿ ಜಯಾಪತಿ ಪ್ರದ್ಯುಮ್ನ ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ ತನಗೆ ತಾನೆ ಪೂಜಕ ಪೂಜ್ಯ ಅನುಪಮ ನಾಮದಿ ಕರೆಸುತಲಿಹ ತ ನ್ನನು ಈ ಪರಿಧೇನಿಸುತಿಪ್ಪ ಮನುಜರಿಗೊಲಿದು ಜಗನ್ನಾಥವಿಠ್ಠಲ ಜನನ ಮರಣಗಳ ಪರಿಹರಿಪಾ 7
--------------
ಜಗನ್ನಾಥದಾಸರು
ವಾದೀಗಳಾಗೆದ್ದು ಸಿದ್ಧಾಂತ ಸ್ಥಾಪಿಸಿ ಮುದ್ದು ಕೃಷನ ತಂದ ವೇದ ವ್ಯಾಸರ ಪ್ರಿಯ ಮಧ್ವರಾಯ ಮಧ್ವರಾಯ ಪ ಬಿದ್ದೆ ನಿಮ್ಮಯ ಚಲುವ ಪಾದಪದ್ಮಂಗಳಿಗೆ ವೇದ ಮಧ್ವರಾಯ ಮಧ್ವರಾಯ ಅ.ಪ ತಂದು ಚೂಡಾಮಣಿ ನಿಂದೆ ರಾಮನ ಮುಂದೆ ಮಧ್ವರಾಯ ಮಧ್ವರಾಯ ಕಂದನು ಎಂತೆಂದು ಮುಂದೆ ಪಾಲಿಸ ಬೇಕು ಮಧ್ವರಾಯ ಮಧ್ವರಾಯ 1 ದ್ವಾಪರ ಯುಗದಲ್ಲಿ ದ್ರೌಪದಿ ಗಂಡನೆನಿಸಿ ಪಾಪಿಗಳಾಕೊಂದು ಪತಿ ಸೇವೆ ಮಾಡ್ದೆ ಮಧ್ವರಾಯ ಮಧ್ವರಾಯ ಕೋಪವು ಮಾಡದೆ ತಾಪಗಳೋಡಿಸಿ ಗೋಪಾಲ ಕೃಷ್ಣನ ಕೃಪೆಯ ಕೊಡಿಸೈಯ ಮಧ್ವರಾಯ ಮಧ್ವರಾಯ 2 ದುರುಳ ಮಾಯಿಗಳೆಲ್ಲ ಹರಿಯ ದೂರುತ್ತಿರಲು ಸುರರ ಮಧ್ವರಾಯ ಮಧ್ವರಾಯ ಭವ ಬಿಡಿಸಿ ವೀರ ವೈಷ್ಣವ ನೆನಿಸಿ ಸಾರಿ ಸಾರಿಸ ಬೇಕು ಹರಿಯ ನಾಮವನ್ನು ಮಧ್ವರಾಯ ಮಧ್ವರಾಯ 3 ಲೋಕದಿ ಸಜ್ಜನರ ಸಾಕಬೇಕು ಎಂದು ಬೇಕೆಂದು ಯತಿಯಾದೆ ಶ್ರೀಕಾಂತ ಪಟ್ಟಪುತ್ರ ಮಧ್ವರಾಯ ಮಧ್ವರಾಯ ನೂಕೋದುರಿತ ರಾಶಿ ಲೋಕಕ್ಕೆಲ್ಲಾ ಗುರು ಮಧ್ವರಾಯ ಮಧ್ವರಾಯ 4 ಸುರರೆಲ್ಲ ಪರಿವಾರ ತಾರತಮ್ಯವ ತೋರ್ದೆ ಮಧ್ವರಾಯ ಮಧ್ವರಾಯ ಸೂರಿಗಳೊಡೆಯನೆ ಭಾರತಿ ಪ್ರಾಣಕಾಂತ ಮಧ್ವರಾಯ ಮಧ್ವರಾಯ5 ಮತ್ತೆ ಹರಿಯಮತದಂತೆ ಬರೆದೆಯೊ ಹೊಸ ಭಾಷ್ಯ ಮಧ್ವರಾಯ ಮಧ್ವರಾಯ ಪೊರೆದೆ ಹರಿಯಪ್ರಧಮಾಂಗ ವೀರ ಮಾರುತಿ ದೇವ ಮಧ್ವರಾಯ ಮಧ್ವರಾಯ 6 ಬೃಹತೀಗೆ ನೀ ಪ್ರತಿಮ ಬಹುರೂಪ ಧಾರಕ ವಹಿಸೊ ಎಮ್ಮೆಯ ಅಹಿ ಭೂಷಣ ಪ್ರಿಯ ಮಧ್ವರಾಯ ಮಧ್ವರಾಯ ದಹಿಸೋ ಸೋಹಂ ಜ್ಞಾನ ಮಹಿಯೊಳು ಅಪ್ರತಿಮ ಮಧ್ವರಾಯ ಮಧ್ವರಾಯ 7 ಜಪ ಬೇರೆ ಬೇರೆ ಮಾಡಿ ಮೂರು ಗತಿಯ ತೋರ್ಪೆ ಮಧ್ವರಾಯ ಮಧ್ವರಾಯ ಭಾರೀಶಕ್ತನು ನೀನು ಆರು ಸರಿಯು ನಿನಗೆ ಮಧ್ವರಾಯ ಮಧ್ವರಾಯ 8 ಆನಂದ ಶಾಸ್ತ್ರವ ಸಾನುರಾಗದಿ ಪೇಳ್ದೆ ಮಧ್ವರಾಯ ಮಧ್ವರಾಯ ಮಾನವ ಜ್ಞಾನಾದಿಗಳ ಕೊಟ್ಟು ಕಾಯ ಬೇಕೋ ಮಧ್ವರಾಯ ಮಧ್ವರಾಯ 9 ಜಗ ಭಾರವ ವಹಿಸಿದೆ ಮೇರೆ ಗಾಣದ ಸತ್ವ ಮಧ್ವರಾಯ ಮಧ್ವರಾಯ ಹರಿಯ ಅರಿವ ಮರ್ಮ ಕರುಣದಿ ಅರುಹೈಯ್ಯ ಮಧ್ವರಾಯ ಮಧ್ವರಾಯ 10 ಅಮರ ವೃಂದಕ್ಕೆಲ್ಲ ಹರಿಯ ತೋರಿಸಿ ಕೊಟ್ಟೆ ಮಧ್ವರಾಯ ಮಧ್ವರಾಯ ಬೊಮ್ಮದೇವಗು ಬಲವ ಕೊಟ್ಟನ್ನ ಕೊಳ್ಳುವೆ ಮಧ್ವರಾಯ ಮಧ್ವರಾಯ 11 ಬಂದು ಮೂವತ್ತೇಳು ಸುಂದರ ಗ್ರಂಥ ಮಾಡ್ದೆ ಮಧ್ವರಾಯ ಮಧ್ವರಾಯ ಶುದ್ದ ಸತ್ವಮೂರ್ತಿ ಬದ್ಧನು ನೀನಲ್ಲ ವದ್ದು ಅವಿದ್ಯೆಯ ತಿದ್ದೊ ಎಮ್ಮೆಯ ಮನ ಮಧ್ವರಾಯ ಮಧ್ವರಾಯ 12 ಅಖಿಳಾಗಮಾವೇತ್ತ ಸುಖದ ಪ್ರಾರಬ್ಧವೋ ಮಧ್ವರಾಯ ಮಧ್ವರಾಯ ಸಕಲ ಲಕ್ಷಣವಂತ ಸಕಲ ತತ್ವರಪತಿ ಮಧ್ವರಾಯ ಮಧ್ವರಾಯ 13 ತತ್ವೇಶ ರೊಳಗೆಲ್ಲ ನಿನ್ನವ್ಯಾಪಾರವು ಉತ್ತಮ ನಿನ್ನಲ್ಲಿ ಹರಿಯ ವ್ಯಾಪಾರವು ಮಧ್ವರಾಯ ಮಧ್ವರಾಯ ನಿತ್ಯ ಕೃಷ್ಣನಕಾಂಬ ಸೂತ್ರನಾಮಕದೊರೆ ಮಧ್ವರಾಯ 14 ಉತ್ತುಮೋತ್ತುಮ ವಿಷ್ಣು ನಿನ್ನ ದ್ವಾರವೆ ವಲಿವ ಮಧ್ವರಾಯ ಮಧ್ವರಾಯ ನಿತ್ಯ ತೃಪ್ತನಿಗೀವೆ ನಿಷ್ಕಾಮ ಭಕ್ತಿ ನಿಧಿ ಮಧ್ವರಾಯ ಮಧ್ವರಾಯ15 ದಿವಿಜಾನಾಯಕ ನೀನು ಪಾದ್ಯ ಹೌದಯ್ಯಮಧ್ವರಾಯ ಮಧ್ವರಾಯ ಸೇವಕರೆನಿಸುವ ಭಾಗ್ಯವಿತ್ತು ಕಾಯೋ ಮಧ್ವರಾಯ ಮಧ್ವರಾಯ 16 ನಾಗಾರಿಶಿವ ಗುರುವೆ ಭವ ಬಿಡಿಸು ಮಧ್ವರಾಯ ಮಧ್ವರಾಯ ನೀಗಿಸು ಇವರ ಬಾಧೆ ಪಂಚ ಕೋಶಗ ಪ್ರಾಣ ಮಧ್ವರಾಯ ಮಧ್ವರಾಯ17 ಶ್ರೀ ಪತಿದಯದಿಂದ ತಾಳ ಹಾಕುವ ಶಕ್ತ ಮಧ್ವರಾಯ ಮಧ್ವರಾಯ ನೀಪಾಲಿಸಿದ ರುಂಟು ಏನೆಂಬೆ ನಿಮ್ಮ ಮಹಿಮೆ ಮಧ್ವರಾಯ ಮಧ್ವರಾಯ18 ಭಾನುಸ್ಥ ಪ್ರಭು ನೀನು ಆಧ್ಯಾತ್ಮಗತನಾಗಿ | ಸಾನುರಾಗದಿ ಜಗ ಜೇಷ್ಟೆಯ ನಡಿಸುವೆ ಮಧ್ವರಾಯ ಮಧ್ವರಾಯ ಶ್ರೀನಿವಾಸನ ಪೂರ್ಣ ಕೃಪೆಗೆ ನೀ ಪಾತ್ರನು | ಪೂರ್ಣ ಭೋದ ಗುರುವೆ ದೀನರೆಮ್ಮನು ಪಿಡಿ ಮಧ್ವರಾಯ ಮಧ್ವರಾಯ19 ಅಣವು ಮಹದ್ ಘನ ಪೂರ್ಣ ಪ್ರಜ್ಞನು ನೀನು | ಅನ್ನಜೀವರು ನಿನಗೆ ಅನ್ನ ಶ್ರೀಶಗೆ ನೀನು ಮಧ್ವರಾಯ ಮಧ್ವರಾಯ ನಿನ್ನ ರೂಪಗಳಲ್ಲಿ ನ್ಯೂನವಿಲ್ಲವು ಗುಣದಿ | ಮಣಿಸದೆ ಚಿತ್ತದಲ್ಲಿ ಉಣಿಸೋ ಹರಿ ಕೀರ್ತನೆ ಮಧ್ವರಾಯ ಮಧ್ವರಾಯ 20 ಭೇದಬೊಧೆಯ ನಿತ್ತು ಉದ್ದಾರ ಮಾಡಿದೆ | ವಾದಿ ಭೀಕರಯತಿ ಶ್ರೆದ್ಧೆ ಮನೋಹರ ಮಧ್ವರಾಯ ಮಧ್ವರಾಯ ಮುದ್ದು ಕೃಷ್ಣನ ತಂದು ತಿದ್ದಿ ಪದ್ದತಿಗಳ | ಶುದ್ಧವೈಷ್ಣವರಿಗೆಲ್ಲ ವೃದ್ಧಿ ಮಾಡಿದೆ ಭಕ್ತಿ ಮಧ್ವರಾಯ ಮಧ್ವರಾಯ 21 ಗುರು ಪ್ರಾಣ ನಾಥನೆ ಹರಿಯ ಮನದಂತೆ | ಪರಿಪರಿಲೀಲೆಯ ನಿರುತ ತೋರುತಲಿಪ್ಪೆ ಮಧ್ವರಾಯ ಮಧ್ವರಾಯ ಭರತ ಪ್ರಭುವೆ ನಿನ್ನ ಚರಣವ ಸಾರಿದೆ | ಗಾರು ಸಂಸಾರದಿ ದಾರಿ ತೋರಲಿ ಬೇಕು ಮಧ್ವರಾಯ ಮಧ್ವರಾಯ 22 ಜಯ ಜಯ ಜಯ ಹನುಮ ಜಯ ಜಯ ಜಯ ಭಿಮ ಮುಖ್ಯಪ್ರಾಣ ಮರಾಮರಾ ಜಯ ಜಯತೀರ್ಥ ವ್ಯಂದ್ಯನೆ ಜಯ ಕೃಷ್ಣವಿಠಲನ ಮಧ್ವರಾಯ ಮಧ್ವರಾಯ 23
--------------
ಕೃಷ್ಣವಿಠಲದಾಸರು