ಒಟ್ಟು 13 ಕಡೆಗಳಲ್ಲಿ , 10 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಎನ್ನ ರಕ್ಷಿಸೋ ಪ ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬೀಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ 1 ವಾರಿಧಿ ಮಥನದಿ ಸುರರಿಗೆ ಒಲಿದು ಮೇರು ಮಂದರವನ್ನು ನೀ ಹೊತ್ತೆ ಒಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು 2 ಧರಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣ ಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು 3 ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳ ದಾನವರ ಪ್ರಾಣವ ವಧಿಸಿದೆಯೊ ಕರಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ 4 ಕೋಮಲ ರೂಪದಿ ಭೂಮಿಯನಳೆದೆ ಆ ಮಹಾಬಲಿಯ ಪಾತಾಳಕ್ಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5 ತಾತನಪ್ಪಣೆಯಿಂದ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6 ದಶರಥನುದರದಿ ಶಿಶುವಾಗಿ ಬಂದೆ ವಸುಮತಿ ತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7 ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ 8 ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9 ವಾಜಿಯನೇರಿಯೆ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10 ಹತ್ತವತಾರದ ವಿಸ್ತಾರದಿಂದ ಕರ್ತು ವರಾಹತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೋಳ್ಭಕ್ತರ ಸಲಹುವೆನೆಂದ 11
--------------
ವರಹತಿಮ್ಮಪ್ಪ
ಅಂಕಿತನಾಮ ಸ್ತುತಿಮಂಗಳ ತಿರುಪತಿಯರಸಗೆ ಜಯಮಂಗಳ ವೆಂಕಟರಮಣನಿಗೆ ಪವಟಪತ್ರಶಯನಗೆ ಕೈಟಭ ರಿಪುವಿಗೆಸ್ಫುಟನಾಭಿ ಕಮಲಸಂಭವಪಾಲಗೆಘಟಸಿ ಬ್ರಹ್ಮಾಂಡಗಳಗಣಿತಗಳನಲ್ಲಿನಟಿಸಿ ಪ್ರಾಣಿಗಳಲ್ಲಿ ನಲಿವನಿಗೆ 1ನಿಗಮವ ತಂದಗೆ ನಗವ ತಾಳಿದನಿಗೆಜಗತಿಯ ದಂಷ್ಟ್ರದಿ ಧರಿಸಿದಗೆಭುಗಿಲೆಂದು ಕಂಭದಲುದಿಸಿ ಪ್ರಹ್ಲಾದನಮಗನೆಂದಂಕದೊಳಿಟ್ಟ ನರಸಿಂಹಗೆ 2ಅದಿತಿ ಗರ್ಭದಿ ಬಂದು ವಟುರೂಪನಾದಗೆ ಮುದದಿಂದ ಜಮದಗ್ನಿ ಸುತನಾದಗೆಪದುಮಜೆಯರಸ ಶ್ರೀ ರಘುರಾಮಚಂದ್ರಗೆಯದುಕುಲೋದ್ಭವನಾದ ಶ್ರೀ ಕೃಷ್ಣಗೆ 3ಪುರಮೂರ ಗೆಲಿದಗೆ ತುರಗ ರೇವಂತಗೆಪರಿಪರಿ ರೂಪಿನ ಪರಮಾತ್ಮಗೆಶರಧಿಸುತಾ ಮುಖಚಂದ್ರ ಚಕೋರಗೆಸುರಸಿದ್ಧ ವೃಂದವಂದಿತ ಪಾದಗೆ 4ತಿರುಪತಿಯಲಿ ನಿಂದು ಚರಣ ಸೇವಕರಿಗೆವರವಿತ್ತು ಪೊರೆವ ಕರುಣಾನಿಧಿಗೆಸ್ಮರಣೆಮಾತ್ರದಲಘತಿಮಿರ ಸಮೂಹಕ್ಕೆತರಣಿ ಶ್ರೀ ವೆಂಕಟರಮಣನಿಗೆ 5ಓಂ ದೇವಕೀನಂದನಾಯ ನಮಃ
--------------
ತಿಮ್ಮಪ್ಪದಾಸರು
ಅಷ್ಟಮಠದ ಯತಿಗಳು ನೋಡಿ ದಣಿದವೆನ್ನ ಕಂಗಳು ಉಡುಪಿಯಲ್ಲಿರುವ ಅಷ್ಟಮಠದ ಶ್ರೀಪಾದಂಗಳವರ ಪ. ಸುಧಿಂದ್ರತೀರ್ಥ ಗುರುವರ್ಯರು ಬಂದ ಭಕ್ತರಿಗೆ ಕರುಣಾಮೃತ ಮಳೆಗರೆವರು ಶ್ರೀಹರಿಯ ತೋರುವರು ನೇಮದಿಂದಲಿ ಇವರ ನಾಮ ನೆನೆದರೆ ಸ್ವಾಮಿ ಶ್ರೀರಾಮನು ಪ್ರಸನ್ನನಾಗುವನು 1 ವಿಭುದಪ್ರಿಯತೀರ್ಥ ಗುರುವರ್ಯರು ಬಂದಾ ದುರ್ಜನರ ಮನವನು ಜಯಿಸುವರು ಮಹಾನುಭಾವರು ತರ್ಕನ್ಯಾಯ ವೇದಾಂತ ನಿಪುಣರು ಮಹಾಗುಣವಂತರು 2 ವಿದ್ಯಾಪುಣ್ಯತೀರ್ಥ ಶ್ರೀಪಾದಂಗಳವರು ಬಂದ ಸೇವಕರಿಗೆ ಬ್ರಹ್ಮವಿದ್ಯಾ ಪಾಲಿಸುವರು ರ್ದುಜನರ ದುರ್ಬುದ್ಧಿ ಒದ್ದಿ ಕೆಡಹುವವರು 3 ವಿಶ್ವೇಂದ್ರತೀರ್ಥರು ಈ ಗುರುವರ್ಯರು ವಾದಿರಾಜರ ಪೂಜಿಸುವರು ಜಗಕೆ ಸುಖವ ಸುರಿಸುವರು ಭೂತಪ್ರೇತಪಿಶಾಚಾದಿ ಮಾಡುವರು ಭಕ್ತರಘ ಕಡಿವರು4 ಇವರು ಭವಸಮುದ್ರವ ನೀಗಿಸುವರು ಶಿಷ್ಯರಿಗ್ಹರುಷ ಪಡಿಸುವುದು ಆನಂದದಿಂದಲ್ಲಿ ಹೃನ್ಮಂದಿರದಲಿ ಇಂದಿರೇಶನ ನೋಡುವರು 5 ರಘುಮಾನ್ವತೀರ್ಥ ಗುರುವರ್ಯರು ಲೋಕಮಾನ್ಯರು ಭಕ್ತರಿಗತಿಪ್ರಿಯರು ಮಹಾನುಭಾವರು ಅನ್ನದಾನದಲಿ ದೈನ್ಯರು ಆನಂದ ಭರಿತರು ಸುರರಿವರು 6 ಲಕ್ಷ್ಮೀಂದ್ರತೀರ್ಥ ಶ್ರೀಗಳವರು ಇವರು ತಮ್ಮ ತುಷೆಯೊಳಗಿಟ್ಟುಕೊಂಡು ರಕ್ಷಿಸುವರು ಲಕ್ಷ್ಮೀರಮಣನ್ನ ಪಾದಾ ಅಪೇಕ್ಷೆಯ ಮಾಡುಸುವರು ಹರಿಯ ಭಜಿಸುವರು 7 ವಿಶ್ವಮಾನ್ಯತೀರ್ಥ ಈ ಗುರುವರ್ಯರು ಬಂದ ಭೂಸುರರಿಂದ ಅನುವಾದ ಮಾಡುವರು ನೋಡುವರಿಗಾನಂದ ಪಡಿಸುವರು ಸುಜ್ಞಾನ ಯತಿವರ್ಯರು 8 ಅಷ್ಟಮಠದ ಯತಿಗಳ ಮಹಿಮೆಯನ್ನು ನಿಷ್ಠೆಯಿಂದಲಿ ಪೇಳುವನು ಅವನು ಸುರನು ಇವರ ದೋಷಿ ಎಂದವರನೇ ನರಕಾಧಿ ಬಾಧಿಸುವುದು ಕೃಷ್ಣನ ಪೂಜಿಸುವರು 9
--------------
ಕಳಸದ ಸುಂದರಮ್ಮ
ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ನರಜನ್ಮವನು ಕೊಟ್ಟು ಸಲಹಿದೆ ಯೆನ್ನನು ಕೊರತೆಯೇನಿಲ್ಲವೋ ಗೋವಿಂದಾ ಪ ಉರುತರ ಜನ್ಮವ ಸುರುಚಿರಾಂಗಗಳನ್ನು ಅರಿವು ಇಂದ್ರಿಯಗಳ ಸ್ಮರಣೆಯಿಂ ಕೂಡಿದ ಅ.ಪ ನಿನ್ನಧ್ಯಾನವ ಗೈವವೊಲೆನ್ನ ಈ ರಸನೆಯು ನಿನ್ನ ಮೂರ್ತಿಯ ನೋಡಲಿ ಈ ನೇತ್ರಾ ನಿನ್ನ ಪೂಜಿಸೆ ಹಸ್ತ ನಿನ್ನ ಚರಿತೆಗೆ ತರ್ಕಾ ನಿನ್ನ ನಮಿಸಲು ಶಿರವು ನಿನ್ನಾಲಯಕೆ ಕಾಲು 1 ನಿನ್ನ ಪಾದದ ತುಳಸಿಯನ್ನು ಘ್ರಾಣಿಸ ಇನ್ನೇನು ಬೇಡವಯ್ಯ ಸನ್ನುತಾಂಗ ಗೋಪಾಲ 2 ಧನಕನಕಾಂಬರ [ವಸ]ನದ ಧರ್ಮ ಮೋಕ್ಷದೊ ಳಿನಿತಾಸೆಯೆನಗಿಲ್ಲ ಕೇಳಯ್ಯ ಜನುಮ ಜನುಮದೆ ನಿನ್ನ ಘನಪುಣ್ಯ ನಾಮವ ನೆನೆವ ಭಕ್ತಿಯು ಮಾತ್ರ ಮನದೆ ನೆಲೆಗೊಳಿಸಯ್ಯ 3 ದೇವದೇವನೆ ನಿನ್ನ ಸೇವಕರಿಗೆ ಯೆನ್ನ ಸೇವಕನೆನಿಸದೆ ಬಿಡಬೇಡಾ ದಾಸರಸೇವಿಸಲೆನ್ನ ಜೀವ ತುಡಿಯುವುದೊ ವಿಸಲೆ ದಾಸರದಾಸ ಶ್ರೀ ಮಾಂಗಿರಿಯರಸ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ 1 ಕಳೆದ ದುರಿತಾವೃತ ಉಳಿದುದು ವೋವರಾ ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ] ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ 2 ಅನ್ಯರ ಭಜಿಸೆನು ಅನ್ಯರ ನುತಿಸೆನು ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] 3 ಕಾವಧೀರನು ಇನ್ನು ಅವನೇ ಶ್ರೀಹರಿ ಸೇವಕರಿಗೆ ನಾನು ಸೇವಕನೆನ್ನುತಾ ಭಾವಿಸೋ ದೇವದೇವಾ ಮಾವಿನಾಕೆರೆರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರತಿಪದೆಯ ದಿನ ರಂಭೆ :ಓಹೊ ಬಲ್ ಬಲ್ ಬಲ್ ಶ್ಯಾಣೆ ಜಾಣೆ ಪ. ಈ ದಿವಸದಿ ನಿನ್ನೆಯ ದಿನದವನನ್ನು ಆದರಿಸಲು ಕಾರ್ಯೋದಯವೇನೆ ಓಹೋ ಬಲ್ ಬಲ್ ಶಾಣೆ ಜಾಣೆ ಅ.ಪ. ಊರ್ವಶಿ : ಚಿತ್ತಜರೂಪೆ ಸರ್ವೋತ್ತಮ ಭಾಷೆಯ ನಿತ್ತಿಹ ಕಾರಣದಿ ಉತ್ತಮ ಶ್ರೀಪಾದ ಎತ್ತಲು ಬೇಕೆಂದು ಒತ್ತಾಯಗೈದ ಮೋದಿ 1 ಮತ್ತೊಂದು ಕಾರಣ ಉಂಟು ಶ್ರೀಹರಿಗಿವ ನಿತ್ಯವಾಹನ ಕಾಣೆಲೆ ಇತ್ತ ಪಯಣಗೈವೊಡತ್ತಬೇಕಾದರೆ ಭೃತ್ಯನಿವನು ಹೇ ಬಾಲೆ 2 ಆದಕಾರಣದಿಂದ ನಾದಿನಿ ಕೇಳೆ ಪ- ಕ್ಷಾದಿಯೊಳಿವನ ಮ್ಯಾಲೆ ಪಾದವ ನೀಡಿ ವಯೋದಯದಿಂದ ಶ್ರೀ ಮಾಧವ ಬರುವ ಕಾಣೆ 3 ಕೇರಿಕೇರಿಯ ಮನೆಯಾರತಿಗಳನೆಲ್ಲ ಶ್ರೀರಮಾಧವ ಕೊಳ್ಳುತ ಭೂರಿ ವಾದ್ಯಗಳ ಮಹಾರವದಿಂದಲಿ ಸಾರಿ ಬರುವನು ಸುತ್ತ 4 ಭಾವೆ ನೀ ಕೇಳೆ ನಾನಾ ವಿಧದಿಂದಲಿ ಸೇವಕರಿಗೆ ದಯದಿ ಪಾವನಗೈದು ಮಹಾವಿನೋದೇಕಾಂತ ಸೇವೆಯ ಗೊಂಡ ಕಾಣೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಭೀಮಾ ಭವಭಯಕತಿದೂರಾ ಭೀಮಾಶಂಕರನವತಾರಾ |ಭೀಮಾತೀರದಲಿಹ ವಾಯುಕುಮಾರಾ ಸಮರಂಗಣಧೀರಾ 1 ಮಾಯಾ ಮಾಯಾ ಪಾಶದ ಸಂಗಮವನು ಬಿಟ್ಟಾ |ಲಂಕಾಪುರಿ ಸುಟ್ಟಾ 2 ಶರಣಾಗತ ಭಕ್ತರ ಕಾವಾ | ಶರಣ ಜನರಂತರ್ಭಾವಾ | ಶರಣಾ ಬ್ರಹ್ಮಾದಿಗಳಿಗೆ ಮಹದೇವಾ ಸಂಜೀವನ ತಾವಾ 3 ಕರ್ತಾ ನೆಲವಿಗಿ ಪುರದೊಳಗೆ | ಕರ್ತಾ ರಾಮರ ಸ್ಥಳದೊಳಗೆ | ಕರ್ತಾನುಷ್ಠಾನಿಕ ಸೇವಕರಿಗೆ | ಭಾವನ ಇದ್ಧಾಂಗೆ 4 ರಾಮಾ ಲಕ್ಷ್ಮಣನ ಬಂಧೂ | ರಾಮನ ಸೇವಕನೆಂದೂ |ರಾಮಾಶಂಕರ ಭೇದಿಲ್ಲೆಂದೂ | ತಿಳಿದವ ಸುಖಸಿಂಧೂ 5
--------------
ಭೀಮಾಶಂಕರ
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ ಗತಿಯನು ಪೊಂದುವರು ರಾಘವೇಂದ್ರ ಪ ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ ಮತದ ಪರಮ ಸಂಗತಿಗಳ ಹರಡಿದ ಅ.ಪ ಜಯ ಮುನಿಗಳವರ ಗ್ರಂಥಗಳಿಗೆ ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್ ಮಯ ರಾಮರ ಸೇವೆಯ ಸಂತಸದಲಿ ಗೈದು ಸುಮಂತ್ರಾಲಯದಲಿ ನೆಲೆಸಿದ 1 ಮಂಗಳಕರವಾದ ತುಂಗಾನದಿಯ ತರಂಗಗಳಲಿ ಮಿಂದು ನಿಮ್ಮನು ನಿಸ್ಸಂಗರಾದ ಸಾಧು ಸಂಘವ ಪೊರೆಯುವ 2 ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ ಸುರಧೇನುವಿನಂತೆ ಸಂತತ ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ ಸುರತರುವಂತೆ ಪ್ರಸನ್ನರಾಗುವಂಥ 3
--------------
ವಿದ್ಯಾಪ್ರಸನ್ನತೀರ್ಥರು
ವಾದಿರಾಜರ ಸ್ತೋತ್ರ ಇದಿರ್ಯಾರೋ ಗುರುವೆ ಸಮರ್ಯಾರೋ ಶ್ರೀ ಹಯವದನ ಪದ ಪ್ರಿಯ ವಾದಿರಾಜ ಪ ಸಿರಿನಿಲಯನ ಗುಣಗಳ ಸ್ಮರಿಸುತಗುರು ಮಧ್ವ ಮುನಿಪನ ಮಹಿಮೆಯ ಪೊಗಳುತನೆರೆದಿದ್ದ ಮಾಯ್ಮದ ಕರಿಗಳ ಶಿರವನುಭರದಿ ಛೇದಿಪ ಬಲಿ ವಿಬುಧ ಕೇಸರಿಯೆ 1 ಸಾರ ಸಜ್ಜನರಿಗೆ ತಿಳಿಯದೇಪರಿಪರಿ ಕುಸಮಯ ತಮ ಕವಿಯಲು ನೀಸರಸ ಭಾರತಿ ಮೊದಲಾದ ಗ್ರಂಥಗಳನುವಿರಚಿಸಿ ತಮ ಹರಿಸಿದ ದಿನಕರನೇ 2 ಸೋದೆಯ ಪುರದಲ್ಲಿರುವ ಹಯವದನನಮೋದದಿ ಭಜಿಸುತ ಈ ಧರೆಯೊಳ್ ಪೂರ್ಣಬೋಧ ತೀರ್ಥರ ಪಾದಸೇವಕರಿಗೆಆದರ ಮಾಳ್ಪ ಯತಿಕುಲ ಶಿರೋಮಣಿಯೇ 3 ಮುದ್ದು ಲಕ್ಷ್ಮೀಶ ವೆಂಕಟ ವಿಠ್ಠಲನಹೊದ್ದಿದ ಭಕ್ತರ ಸಂತಾಪ ಕಳೆಯುತ ಮಧ್ವಮುನಿಯ ಮತ ದುಗ್ಧವಾರಿಧಿಯೊಳುಉದ್ಭವಿಸಿದ ಪೂರ್ಣ ಶುದ್ಧ ಚಂದ್ರಮನೇ 4
--------------
ವೆಂಕಟೇಶವಿಟ್ಠಲ
ಸಕಲ ಕಲ್ಯಾಣ ಗುಣಾಢ್ಯಗೆ ಮಂಗಳಂ ನಿಖಿಲ ದೋಷದೂರಗೆ ಮಂಗಳಂ ಭಕುತರ ಸಂತತ ಪೊರೆಯುತಿರುವ ನಮ್ಮ ರುಕುಮಿಣಿ ಭಾಮಾರಮಣಗೆ ಮಂಗಳಂ 1 ಯಾದವ ಕುಲಭೂಷಣನಿಗೆ ಮಂಗಳಂ ಸಾಧು ಸುಧಾಮ ಸಖಗೆ ಮಂಗಳಂ ಪಾದ ಸೇವಕರಿಗೆ ಮೋದವ ನೀಡುವ ಮಾಧವನಿಗೆ ಸಂತತ ಶುಭಮಂಗಳಂ 2 ವಿವಿಧ ಸೌಭಾಗ್ಯ ಸಂಪನ್ನಗೆ ಮಂಗಳಂ ರವಿಶತ ಸಮತೇಜಗೆ ಮಂಗಳಂ ಸುವಿನಯದಲಿ ಬೇಡುವರಿಗೆ ಶುಭಗಳ ಜವದಲಿ ಕೊಡುವ ಪ್ರಸನ್ನಗೆ ಮಂಗಳಂ 3
--------------
ವಿದ್ಯಾಪ್ರಸನ್ನತೀರ್ಥರು
ಪ್ರತಿಪದೆಯ ದಿನರಂಭೆ : ಓಹೊ ಬಲ್ ಬಲ್ ಬಲ್ ಶ್ಯಾಣೆ ಜಾಣೆ ಪ.ಈ ದಿವಸದಿ ನಿನ್ನೆಯ ದಿನದವನನ್ನುಆದರಿಸಲು ಕಾರ್ಯೋದಯವೇನೆಓಹೋ ಬಲ್ ಬಲ್ ಶಾಣೆ ಜಾಣೆ ಅ.ಪ.ಊರ್ವಶಿ : ಚಿತ್ತಜರೂಪೆ ಸರ್ವೋತ್ತಮ ಭಾಷೆಯನಿತ್ತಿಹ ಕಾರಣದಿಉತ್ತಮ ಶ್ರೀಪಾದ ಎತ್ತಲು ಬೇಕೆಂದುಒತ್ತಾಯಗೈದ ಮೋದಿ 1ಮತ್ತೊಂದು ಕಾರಣ ಉಂಟು ಶ್ರೀಹರಿಗಿವನಿತ್ಯವಾಹನ ಕಾಣೆಲೆಇತ್ತ ಪಯಣಗೈವೊಡತ್ತಬೇಕಾದರೆಭೃತ್ಯನಿವನು ಹೇ ಬಾಲೆ 2ಆದಕಾರಣದಿಂದ ನಾದಿನಿ ಕೇಳೆ ಪ-ಕ್ಷಾದಿಯೊಳಿವನ ಮ್ಯಾಲೆಪಾದವ ನೀಡಿ ವಯೋದಯದಿಂದ ಶ್ರೀಮಾಧವಬರುವ ಕಾಣೆ3ಕೇರಿಕೇರಿಯ ಮನೆಯಾರತಿಗಳನೆಲ್ಲಶ್ರೀರಮಾಧವ ಕೊಳ್ಳುತಭೂರಿವಾದ್ಯಗಳ ಮಹಾರವದಿಂದಲಿಸಾರಿ ಬರುವನು ಸುತ್ತ 4ಭಾವೆನೀ ಕೇಳೆ ನಾನಾ ವಿಧದಿಂದಲಿಸೇವಕರಿಗೆ ದಯದಿಪಾವನಗೈದು ಮಹಾವಿನೋದೇಕಾಂತಸೇವೆಯ ಗೊಂಡ ಕಾಣೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಂದದೆಲ್ಲವೊ ಬರಲಿ - ಗೋ -ವಿಂದನ ದಯೆ ನಮಗಿರಲಿ ಪಮಂದರಧರ ಗೋವಿಂದ ಮುಕುಂದನಸಂದರುಶನ ನಮಗೊಂದೇ ಸಾಲದೆ ? ಅ.ಪಆರು ಅರಿಯದಿರಲೆನ್ನ - ಮುರಾರಿಯು ವರದ ಪ್ರಸನ್ನತೋರುವ ದುರಿತದ ಬೆನ್ನ -ಭವಹಾರಿ ಕೃಪಾಂಬುಧಿ ಚೆನ್ನ ||ಶ್ರೀರಮಣನ ಶ್ರೀಚರಣ ಸೇವಕರಿಗೆಘೋರಯಮನು ಶರಣಾಗತನಲ್ಲವೆ ? 1ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದುದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||ಹರಿಕೃಪೆಯವರಲ್ಲಿದ್ದ ಕಾರಣದುರಿತವೆಲ್ಲ ಬಯಲಾದುದಲ್ಲವೆ ? 2ಸಿಂಗನ ಪೆಗಲೇರಿದಗೆ - ಕರಿಭಂಗವೇಕೆ ಮತ್ತವಗೆ |ರಂಗನ ದಯವುಳ್ಳವಗೆ - ಭವಭಂಗದ ಭೀತಿಯ ಹಂಗೆ ||ವiಂಗಳ ಮಹಿಮ ಶ್ರೀಪುರಂದರ ವಿಠಲನಹಿಂಗದ ದಯೆವೊಂದಿದ್ದರೆ ಸಾಲದೆ ? 3
--------------
ಪುರಂದರದಾಸರು