ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ). ವಿವಿಧ ದೇವತಾ ಸ್ತುತಿ ರುದ್ರದೇವರು ಬೇಡಿಕೊಂಬೆನು ನಾನು ರೂಢಿಗೊಡೆಯನಾಗಿ ಆಡುವನಂತೇಶನಿದಿರೊಳು ಮೂಡಿದ ಚಂದ್ರಶೇಖರನ ಪ ಒಪ್ಪುವ ಶಿರದೊಳಗೆ ಸರ್ಪನ ಮೇಲೊರಗಿಪ್ಪನ ಮಗಳನ್ನು ಒಪ್ಪದಿ ಧರಿಸಿದನ 1 ಮುಪ್ಪುರಹರನೆಂದು ಮೂರು ದೃಷ್ಟಿಗಳುಳ್ಳ ಕಪ್ಪುಕೊರಳ ದೇವನ ರೌಪ್ಯದ ಪುರವರಧೀಶನೆಂದೆನಿಸಿಯೆ ಇಪ್ಪಂಥ ಪರಶಿವನ 2 ಗಿರಿಯ ನಂದನೆಯನ್ನು ಉರದೊಳು ಧರಿಸಿಯೆ ಕರಿಚರ್ಮ ಪೊದ್ದವನ ಗರುಡನ ಭಯಕಂಜಿ ಮೊರೆಹೊಕ್ಕ ಶರಣನ ಕರುಣದಿ ಕಾಯ್ದವನ 3 ಉರಗಾಭರಣವ ಸುತ್ತಿಕೊಂಡಿರುವಂಥ ಗರುವ ದೇವರ ದೇವನ ಚರಣ ಸೇವಕರನ್ನು ಸ್ಥಿರವಾಗಿ ಸಲುಹುವ ಬಿರುದುಳ್ಳ ಪರಶಿವನ 4 ದ್ವಾರಕಿವಾಸನಾಚಾರ್ಯನ ಮುಖದಿಂದ ಸೇರಿಸಿಕೊಂಡವನ ಧಾರುಣಿ ಸುರರಿಗೆ ಶೈವ ವೈಷ್ಣವವೆಂಬ ಚಾರವ ತೋರಿದನ 5 ಮೀರಿದ ದಾರಿದ್ರ್ಯವೆಂಬ ವೃಕ್ಷದ ಬೇರ ಹಾರಿಸಿ ತರಿದವನ ಸಾರಿದ ಭಕ್ತರ ಸಲುಹುತ್ತ ಮುಂದಣ ದಾರಿಯ ತೋರ್ಪವನ 6 ಬತ್ತೀಸ ಗ್ರಾಮಕ್ಕೆ ಕರ್ತನೆಂದೆನಿಸಿಯೆ ಅರ್ತಿಯಿಂ ನಲಿವವನ ಪಾರ್ಥಸಂಗರದೊಳು ಮೆಚ್ಚಿಯೆ ಶರವಿತ್ತು ಕೀರ್ತಿಯ ಪೊತ್ತವನ 7 ಸ್ಮಾರ್ತರ ನಿಂದಿಸಿ ರಚಿಸುವ ಯಾಗಕ್ಕೆ ಮೃತ್ಯುವನೊಟ್ಟಿದನ ಮೃತ್ಯುಂಜಯನೆಂದು ಮೊರೆಹೊಕ್ಕ ನರರ ಕಾ- ಯುತ್ತಲಿರ್ಪವನ 8 ಕೊಡಲಿಯ ಪಿಡಿದವ ಪಡೆದಿಹ ಕ್ಷೇತ್ರದಿ ಉಡುಪಿನ ಸ್ಥಳವೆಂಬುದು ಪಡುವಲು ಮೂಡಲು ಎರಡಾಗಿ ತೋರುವ ಒಡಲೊಂದೆ ಮೃಡನೊಬ್ಬನೆ 9 ಕಡಗೋಲ ಪಿಡಿದಿಹ ಕೃಷ್ಣ ನಿಂತದರಿಂದ ಪೊಡವಿಯುತ್ತಮವಾದುದು ಬಡವರ ಬಡತನ ಉಡು (ಪಿಯ)1 ಕಾಣಲು ಸಡಲಿತು ಸುಲಭದಲಿ 10 ಚಿಂತೆಗಳೆನ್ನನು ಭ್ರಾಂತಿ(ಬ)2 ಡಿಸುತಿದೆ ಅಂತಕಾಂತಕ ಲಾಲಿಸು ಪಂಥವ ಮಾಡದೆ ಏಕಾಂತ ಭಕ್ತರಿಗೆಲ್ಲ ಸಂತೋಷವನು ಪಾಲಿಸು 11 ಪಿಂತೆನ್ನ ಕೃತ್ಯ ಬೆನ್ನಾಂತು ಬಂದರು ಇಭ- ವಾಂತದಿ ನೀ ಹಾರಿಸು ಸಂತತ ಎನ್ನನು ಸಲಹಯ್ಯ ಪಾರ್ವತೀ ಕಾಂತನೆ ಕಡೆ ಸೇರಿಸು 12 ಹರ ಹರ ಮಹಾದೇವ ಪರದೈವ ಶಂಕರ ಮೆರೆವ ಆ ವೃಷಭಧ್ವಜ ವರದ ಕೃತ್ತೀವಾಸ ಸ್ಮರನಾಶ ದೇವೇಶ ಸಿರಿಕಂಠ ಪುರಹರನೆ 13 ಗಿರಿಯ ಮಗಳ ಗಂಡ ಉರಿಗಣ್ಣ ಮಹಾರುದ್ರ ಸ್ಥಿರವಾದ ಶಿವಬೆಳ್ಳಿಯ ಪುರಪತಿ ಅನಂತೇಶ ವರಾಹತಿಮ್ಮಪ್ಪನ ಸರಿಯೆಂದು ತೋರ್ಪವನ14
--------------
ವರಹತಿಮ್ಮಪ್ಪ
ಅವತಾರತ್ರಯ ಚರಣ ಸೇವಕರನ್ನು ಪೊರೆದ ಪ್ರಾಣೇಶನ್ನಹರುಷಾದಿ ವಂದಿಸಿ ವರಬೇಡಿರೈ ಪ ಕರುಣ ಸಾಗರ ಕಲ್ಪತರು ಭಕ್ತ ಕುಮುದ ಚಂದಿರನೆನಿಸುತಭೀಷ್ಟ ಸುರಿಸುವ ನೋಡಿರೈ ಅ.ಪ. ಸುದತಿ ಜಾನಕಿಯಾಪದಕೆರಗಿ ಪೇಳಿದ ಮುದದಿ ರಾಮನಹೃದಯ ವಾರುತಿಯಾಮುದ್ರಿಕೆಯ ಸಲಿಸುತ ವದಗಿದಸುರತ ಒಡೆದ ಕೀರುತಿಯಾಪಿಡಿಯಲ್ಕೆ ಕ್ಷಣದೊಳು ಕದನಕಂಠಕನೆನಿಪರಾವಣನೆದುರಿಸಿ ಗರ್ವ ಶಿಕ್ಷಿಸಲುಪುಚ್ಛದಲಿ ಪಟ್ಟಣ ಸುಟ್ಟು ದಹಿಸಿದಸದಯಕಾಮನ ಕಾರ್ಯ ಪೂರ್ತಿಯಾ 1 ದುರುಳ ಹರಣ ಸಂನುತ ಚರಣ ಕಮಲª Àಧರೆಯೊಳಗೆ ಪರಿಪರಿ ಮೆರೆದಾ 2 ಮರಳಿ ಭೂಸುರನು ಮಂದಿರದೊಳು ಜನಿಸಿತಾಗುರು ಮಧ್ವಮುನಿಯೆಂದು ಕರೆಸೀದನುವರವೇದವ್ಯಾಸರಾ ಕರುಣಪಡೆದು ದೇಶ ಸಂಚರಿಸಿದಾನಿಂದಕರ ಧಿಕ್ಕರಿಸಿದಾ ಸೇವಕರನುದ್ಧರಿಸಿದಾಗ್ರಂಥಗಳ ರಚಿಸಿ ಭರದಿ ಕಲಿ ಸಂಕರನೋಳ್ವಾದಿಸಿದಾಗುರು ಇಂದಿರೇಶನೆ ಧರೆಗೆ ಪಿತನೆಂದರುಹಿ ಸಾಧಿಸಿದಾಕರಕಂಜಜಾತದಿ ಕರಕೆ ಶಾಸ್ತ್ರದರಿವ ಬೋಧಿಸಿದಾನವರತ್ನ ಭಾಸಿತ ಕರಣಕುಂಡಲಮಕುಟ ಸಕಲಾಭರಣ ಭೂಷಿತಸುಮನಸೋತ್ತುಮ ಮುನಿಪ ಮಾನಂದಾತ್ಮಬುಜಗುಣದರಸೆ ಘನಸುಂದರ ಸುಖಪ್ರದ 3
--------------
ಗುರುಇಂದಿರೇಶರು
ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ಪ ಮುನಿಜನವಂದಿತ ಅನಘ ವಿರಾಜಿತ ಅ.ಪ ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ ವಿಕಳನಾ ಮುನಿಗೇಯ ಸುಕವಿಪೂಜಿತಕಾಯ 1 ಮರೆಯಬೇಡವೋ ಯನ್ನ ಗರುಡಗಮನ ನಿನ್ನ ಚರಣ ಸೇವಕರನ್ನ ನಿರುತನೆನೆವೆ ಮುನ್ನ 2 ನಡುಗಡಲಿನೊಳಿಹೆ ತಡಬಡಿಸುತಲಿಹೆ ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ 3 ತಾಮಸನಯ್ಯ ಬೇಡ ನೀ ಮನಸೋಲಬೇಡ ಪಾಮರ ವರದನೆ | ರಾಮದಾಸಾರ್ಚಿತನೆ4 ಮಾಂಗಿರಿವರವಾಸ ರಂಗನಾಥನೆ ಶ್ರೀಶಾ ಹಿಂಗದೆ ಯನ್ನಂತರಂಗದೆ ನಿಲೊ ಈಶಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಘವೇಂದ್ರರು ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ. ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1 ಪಾದ ಚಾರು ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2 ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
--------------
ಗುರುಇಂದಿರೇಶರು
ವೆಂದೆನುತ ಬಂದೆನು ನಾ ಪ ಬಂದಾ ಬಂದಜನಕಾನಂದ ಕೊಡುತಲಿ ವಂದಿಸಿ ಭಜಿಪರಘಂಗಳ ಕಳೆದು ಸಲಹುವಿಯೋ ಸದ್ಗುರು ರಾಘವೇಂದ್ರಾ 1 ಭೀತರಾಗುತ ನಿನ್ನಡಿಗಳ ಸೇವಿಸಲು ಆದರದಿಂದಲವರ ಭವ-ಭಯವ ಪರಿಹರಿಸಿ ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ 2 ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು ಜೀವ ವಿದ್ದವನ ನಿರ್ಜೀವನೆನುತ ತರಲು ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ 3 ಕುಹಕಿ ಜನರು ಎಲ್ಲಿ ವನಕೆತುಂಡನು ತಂದು ಚಿಗುರಿಸ ಬೇಕೆನುತಲಿ ಕೇಳಲು ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ 4 ಮಾವಿನರಸದೊಳು ಮುಳುಗಿ ಮೃತನಾದಾ ಬಾಲಕನಿಗೆ ಪ್ರಾಣಗಳನಿತ್ತೆ ದಯದೀ ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ ಮಂತ್ರಾಲಯದೊರೆ ಗುರು ರಾಘವೇಂದ್ರಾ 5 ``ಶ್ರೀರಾಘವೇಂದ್ರಾಯ ನಮಃ'' ಎಂಬ ದಿವ್ಯನಾಮವ ಮನುಜನು ಪ್ರತಿದಿನ ಭಜಿಸುತ್ತಲಿರಲು ಘೋರ ದುರಿತಗಳೆಲ್ಲ ದೂರವ ಮಾಡಿ ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ6 ಶ್ರೀ ರಘುರಾಮನ ಪ್ರಿಯಭಕ್ತನಾದ ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ ನಂಬಿದ ಭಕ್ತರ ಬೆಂಬಿಡದೆ ಸಲಹುವ ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ 7
--------------
ರಾಧಾಬಾಯಿ
ಶ್ರೀನಿವಾಸನ ಸೇವೆ ಗೈಯುವ ಜಾಣರೆಲ್ಲರು ಬನ್ನಿರೈ ಪ ಧ್ಯಾನಲಭ್ಯನ ಕಾಣಲಿಚ್ಛಿಪ ಮಾನಿಪರ ಕರತನ್ನಿರೈಅ.ಪ. ಪರಮಪದ ದೊಳಗಿರದೆ- ವೆಂಕಟಗಿರಿಯೊಳಿದರ್Àನು ಪೂರ್ವದಿ ಭರದಿ ವಿಪ್ರಗೆ ವರವನಿತ್ತೀ ಗಿರಿಗೆ ಬಂದನು ಪ್ರೇಮದಿ 1 ದೂರವಲ್ಲ ವಿಚಾರಿಸಲು ಹರಿಣಾರಿ ಭೂಧರಮಿಲ್ಲಿಗೆ ಚಾರುಮೂರ್ತಿಯ ಚರಣಸೇವೆಗೆ ಸಾರುವೆವು ನಾವಲ್ಲಿಗೇ 2 ಚರಣ ಸೇವಕರನ್ನು ಮರೆಯದೆ ಪೊರೆಯು ವನು ಮೋದದಿ ಪರಮ ಪುಲಿಗಿರಿವಾಸ ವೆಂಕಟ ವರದವಿಠಲನೆಲೋಕದಿ 3
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸನ ಸೇವೆಗೈಯ್ಯುವ ಜಾಣರೆಲ್ಲರು ಬನ್ನಿರೈ ಧ್ಯಾನಲಭ್ಯನ ಕಾಣಲಿಚ್ಚಿಪ ಮಾನಿಸರ ಕರತನ್ನಿರೈ ಪ ಪರಮಪದದೊಳಗಿರದೆ ವೆಂಕಟಗಿರಿಯೊಳಿರ್ದನು ಪೂರ್ವದಿ ಭರದಿವಿಪ್ರಗೆ ವರವನಿತ್ರ್ತಿಗಿರಿಗೆ ಬಂದನು ಪ್ರೇಮದಿ 1 ದೂರವಲ್ಲ ವಿಚಾರಿಸಲು ಹರಿದಾಂ ಭೂಧರಮಿಲ್ಲಿಗೆ ಚಾರುಮೂರ್ತಿಯ ಚರಣಸೇವೆಗೆ ಸಾರುವೆವು ನಾವಲ್ಲಿಗೆ 2 ಚರಣಸೇವಕರನ್ನು ಮರೆಯದೆ ಪೊರೆಯುವನು ಮೋದದಿ ಪರಮಪುಲಿಗಿರಿವಸವೆಂಕಟ ವರದ ವಿಠಲನೆ ಲೋಕದಿ 3
--------------
ವೆಂಕಟವರದಾರ್ಯರು