ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾತ ದೀನನಾಥ ಧ್ಯಾನದಾಯಕ ಜಾನಕೀ ಪ್ರೀತ ಪ ಬಹುಕುಂದುನಿಂದೆ ಸರ್ವ ಅಹುದು ಅಲ್ಲ ನಿನ್ನದಭವ ಅಹಿತಸುಖದ ಪ್ರೇಮಬಿಡಿಸಿ ದಹಿಪ ಭವದ ಬಾಧೆ ಗೆಲಿಸು 1 ಬಂದ ಬಂಧ ಬಯಲುಮಾಡಿ ಕಂದನೆಂದು ಕರಪಿಡಿದು ತಂದೆ ನಿನ್ನ ಪರಮಧ್ಯಾನಾನಂದ ಪಾಲಿಸಿ ಪೋಷಿಸೆನ್ನ 2 ಕಾವದೇವ ನೀನೆ ಪತಿತಪಾವನ ತ್ರಿಜಗಸೂತ್ರಧಾರಿ ಭಾವಜಪಿತ ಶ್ರೀರಾಮ ನಿಮ್ಮ ಸೇವಕನೆನಿಸಿ ಸಲಹು ಸತತ 3
--------------
ರಾಮದಾಸರು
ಸಿರಿ ಚರಣದಲ- ಪಾರ ಭಕುತಿಯನೀಯೋ ತವ ಸೇವಕನೆನಿಸಿ ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ ಸೂರಿ ಸುಬ್ಬಣಾಚಾರ್ಯಕರಸ- ರೋರು ಹಗಲಲಿ ಪೂಜೆಗೊಳುತಲಿ ಚಾರುತರ ಶ್ರೀ ಜಯಮಂಗಳಿಯ ತೀರದೊಳಿರುವ ವೀರ ಮಾರುತಿ ಅ.ಪ. ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ- ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ ತತಿಯನಾಲೈಸುತ | ಅತಿ ಮೋದಬಡುತ ಪರಿ ಸಂ- ಸ್ತುತಿಸೆ ಹಿಗ್ಗುತಲವರ ಸ್ವಮನೋ- ರಥಗಳ ನೀ ಸಲಿಸುವೆನೆನುತಲಿ ಅತುಳ ವಿಕ್ರಮದಭಯ ಹಸ್ತದಿ ಕೃತಿರಮಣ ಸಿರಿವರ ಹರಿಯನನು ಮತವ ಪಡೆಯುತ ರಥವ ನಡೆಸಿ ಚತುರ ದಿಕ್ಕಲಿ ಬಿಜಯ ಮಾಡುತ ಸತತ ಹರುಷವಗರೆವ ದೇವ 1 ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು ಚಿಕ್ಕ ರೂಪವಗೊಂಡು ಲಂಕೆಯ ಪೊಕ್ಕು ರಾಮನ ಸತಿಯ ಕಂಡು ತುಕ್ಕಿ ವನವನು ಸೂರೆ ಮಾಡಿ ಉಕ್ಕಿನ ಧ್ವಜಸ್ತಂಭದಿಂದ ಸೊಕ್ಕಿ ಬಂದ ದನುಜವ್ರಾತವ ಕುಕ್ಕಿ ಕೆಡಹಿ ಪುರವನುರಹಿ ಅಕ್ಕರದ ಮಣಿಸಹಿತ ಬಂದು ಪಕ್ಕಿದೇರನಿಗೆರಗಿ ನಿಂದೆ 2 ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ- ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ ಅತಿಪ್ರೀತಿಸುತ ನೀನು | ನಿಷ್ಕಾಮಯುತನು ಪತಿತರನುದ್ಧರಿಸಲು ನೀ ಸಿರಿ ಪತಿಯ ಮತದೊಳು ಹನುಮ ಭೀಮ ಯತಿಯ ರೂಪವ ತಾಳಿ ಹರುಷದಿ ಕ್ಷಿತಿಯ ಭಾರವ ಹರಸಿ ಸಲಹಿದೆ ಅತುಳ ಮಹಿಮ ನಿನ್ನಪರಿಮಿತ ಶ ಕುತಿಗೆ ನಮೊ ನಮೊ ವಾಯುತನಯನೆ ಸತತ ಮುದದೊಳು ನಿನ್ನ ಸ್ಮರಿಸುವ ಮತಿಯ ಪಾಲಿಸು ಪತಿತ ಪಾವನ 3
--------------
ರಂಗೇಶವಿಠಲದಾಸರು