ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ ಕೃಷ್ಣಮೂರುತಿ ಎನ್ನ ರಕ್ಷಿಸೈ ಪ ನಾಗೇಂದ್ರಶಯನನೆ ನಾಗೇಂದ್ರ ಮರ್ದನನೆ ನಾಗೇಂದ್ರಗೊಲಿದವನ್ಹಾಗೆ ನಾನಲ್ಲವೇನೊ 1 ತಾಪಸಸತಿ ಶಿಲಾರೂಪವ ಪೊಂದಿರಲು ಶಾಪ ಬಿಡಿಸಿ ಅವಳ ಕಾಪಾಡಲಿಲ್ಲವೇನೊ 2 ಆ ನೀಚನಿಂದ ಯಜ್ಞಸೇನೆಗೆ ಬಂದ ಮಾನ ಹಾನಿ ತಪ್ಪಿಸಿ ಅಭಿಮಾನಿಸಿ ರಕ್ಷಿಸಿದ 3 ಇಂದಿರೆಯರಸನೆ ವಂದಿಸಿ ಬೇಡುವೆನೊ ಎಂದಿಗು ಎನ್ನ ಹೃದಯಮಂದಿರ ಬಿಡದಿರೊ 4 ವರನಾಮಗಿರಿ ಸಿರಿನರಹರಿಮೂರುತಿಯ ಚರಣಸೇವಕನೆಂದು ಕರುಣ ಎನ್ನೊಳಗಿಟ್ಟು 5
--------------
ವಿದ್ಯಾರತ್ನಾಕರತೀರ್ಥರು
ಚಿತ್ತಾವೆ ಚಿಂತಿಸು ಶ್ರೀ ಹರಿಯನ್ನ | ಗುಣಗಣ ಮಣಿಯನ್ನ ಪ ದ್ರುತ :ಕೃತ್ತಿವಾಸನುತ ಹೃತ್ಕಮಲಸ್ಥನ |ಸುಸ್ಥಿರ ಚಿತ್ತದಿ ನೀ ನಿಲಿಸುತ್ತ ಅ.ಪ. ಪರ ಪರ ಪರ ಮಖಗಳೆಂದು 1 ಪರ ಪರ ಪರ ಗತಿಗಳಿಗೆಂದು 2 ಸೇವ್ಯ ಸೇವಕನೆಂದು | ಪ್ರೇರ್ಯ ಪ್ರೇರಕನೆಂದೂ |ಕಾರಣ ಕಾರ್ಯಗಳಲಿ ನಾರಾಯಣ |ಪೂರಣನಹುದೆಂದು ನೀ ನಮಿಸುತ್ತ 3 ಸೃಷ್ಟ್ಯಾದ್ಯಷ್ಟಕ ಕಾರಣ ಕರ್ತ | ಇಚ್ಛಾ ಮಾತ್ರ ಸಮರ್ಥಶಿಷ್ಟೇಷ್ಟ ಪುಷ್ಟ ಮಹಿಮನು ಎನುತ | ಹೃಷ್ಟ ನೀನಾಗೊ ಸತತಾ | ಕಷ್ಟ ಕ್ಲೇಶಹರ ಭೃತ್ಯಾಭೀಷ್ಟದ | ವೃಷ್ಟಿಕುಲೇಶನ ನಿಷ್ಠೆಯಲಿಂದ 4 ಉಂಬೂವ ಉಡುವ ಕ್ರಿಯೆಗಳನೆಲ್ಲ | ಹಂಬಲಿಸುವುದೆಲ್ಲಚುಂಬೀಸಿ ಮಕ್ಕಳ ಮುದ್ದಿಪುದೆಲ್ಲ | ಬಿಂಬನದೆಂಬ ಸೊಲ್ಲ |ಬಿಂಬನು ಗುರು ಗೋವಿಂದ ವಿಠಲ - ಸೂಕ್ಷ್ಮಾಂಬರದಲಿ ಮಾಡಿ ಮಾಡಿಪನೆಂದು 5
--------------
ಗುರುಗೋವಿಂದವಿಠಲರು
ಮಂಗಳ ಮುಖ್ಯಪ್ರಾಣೇಶಗೆ ಜಯ ಮಂಗಳ ಮೂಜಗವಂದಿತಗೆ ಪ. ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ ಕಂಜನಾಭನ ಕಾರ್ಯದನುಕೂಲಗೆ ರಂಜಿಪ ಹನುಮಗೆ ಮಂಗಳ 1 ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ ಧಮಧುಮ ಮಾಡಿ ವನವ ಕಿತ್ತು ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ ಹೇಮಾದ್ರಿ ಹನುಮಗೆ ಮಂಗಳ 2 ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ ಮುತ್ತಿ ವನಜಾಕ್ಷಿಯ ಮುಂದೆ ಬಂದು ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ ಖ್ಯಾತ ಹನುಮಗೆ ಮಂಗಳ 3 ಜಾತಿ ಬಂಧುಗಳ ಒಡಗೊಂಡು ಸಮುದ್ರದ ಸೇತುವ ಕಟ್ಟಿ ಸಾಹಸದಿಂದಲಿ ಸೀತಾಪತಿಯ ಬಲವ ನಡೆಸಿದ ಪ್ರ ಖ್ಯಾತ ಹನುಮಗೆ ಮಂಗಳ 4 ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು ಬೇಡವೆಂದು ಸೀತೆಯ ಭಯಬಿಡಿಸಿ ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ ಕೊಂಡಾಡಿಸಿಕೊಂಬಗೆ ಮಂಗಳ 5 ಬಲ್ಲಿದ ರಾವಣೇಶ್ವರನ ಮಾರ್ಬಲವನು ಕಲ್ಲು ಮರದೊಳಿಟ್ಟು ಕೆಡಹಿದಗೆ ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ ಧಲ್ಲ ಹನುಮಗೆ ಮಂಗಳ 6 ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ ಸ್ಥಿರವಾಗಿ ನಿಂದು ಭಕ್ತರ ಹೊರೆವ ಹೆಳವನಕಟ್ಟೆ ವೆಂಕಟೇಶನ ದೂತ ಚಲದಂಗ ಹನುಮಗೆ ಮಂಗಳ 7
--------------
ಹೆಳವನಕಟ್ಟೆ ಗಿರಿಯಮ್ಮ
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ
ಶ್ರೀ ಲಲಾಮನೆ ನಿನ್ನ ಚರಣಾಬ್ಜಗಳಿಗೆ ನಮೊ ನೀಲಮೇಘಶ್ಯಾಮ ನಿರುಪಮ ತ್ರಿಧಾಮ ಪ ಮೂಲಕಾರಣ ನಿನ್ನ ಹೊರತಿನ್ನು ಕಾಯುವರು ಮೂರ್ಲೋಕದೊಳಗಿಲ್ಲ ಮುರಹರ ಮುಕುಂದ ಅ.ಪ. ನಿತ್ಯ ಕಲ್ಯಾಣಗುಣ ಪೂರ್ಣ ಜಲಜನಾಭನೆ ದೇವಾ ಜಲಧಿಶಯನ ಜಲಜಜಾಂಡವ ಸೃಷ್ಟಿ ಸ್ಥಿತಿ ಪ್ರಳಯ ಕರ್ತ ನಿನ್ನ ಅಪ್ರಮೇಯ ಸ್ವರೂಪ 1 ಕುಂಭಿಣಿಯ ಪಮಾಣುಗಳನಧಿಕ ಯತ್ನದಲಿ ಅಂಬುಧಿಯ ಕಣಗಳನು ಎಣಿಸಬಹುದು ಅಂಬುಜಾಕ್ಷನೇ ನಿನ್ನ ಆನಂದ ಮೊದಲಾದ ಗಂಭೀರ ಗುಣಗಳನು ಎಣಿಸಲಾರಿಗೆ ಸಾಧ್ಯ2 ಪರಮಾತ್ಮ ಪರಂಜ್ಯೋತಿ ಪರಮ ಪಾವನರೂಪ ಪರಿಪೂರ್ಣ ಆನಂದ ಪುರುಷೋತ್ತಮ ಕರಿರಾಜವರದ ಶ್ರೀ ಕರಿಗಿರೀಶನೆ ನಿನ್ನಚರಣ ಸೇವಕನೆಂದು ಕರಪಿಡಿದು ಕಾಯೊ 3
--------------
ವರಾವಾಣಿರಾಮರಾಯದಾಸರು
ಸಾಕು ಸಾಕು ಇನ್ನು ಕಷ್ಟ ಅನೇಕಾ ಬೇಕು ಬೇಕು ನಿನ್ನ ಕರುಣ ಪ ಹಿಂದಿನಿಂದ ಎನ್ನ ಹೊಂದಿಬಂದ ದೋಷದಿಂದ ನಾನು ಬಹು ಬಳಲುತಲಿ ----------------------- ಎಂದು ಎಂದು ನಿಮ್ಮಂದ ದ್ವಯಪಾದ ಹೊಂದುವೆ ನಾನೆಂದೆನುತಲಿ----- ಬೆಂದುನೊಂದು ಈ ಚಂದದಿ ಈ ಪರಿಯಿಂದ ನಿನ್ನನಾ ಹೊಗಳುತಲಿ--- ಬೆಂದು ನೊಂದೆ ನಿನ್ನ ಮಂದಿರ ಸೇವಕನೆಂದು ಬಹಳ ಗೋವಿಂದ ಕೃಪಾಳು 1 ಘೋರ ರಾಕ್ಷಸ----ರಿದ ಅವರ ಸಂಹಾರವ ಮಾಡಿದ ಬಲವಂತ ------------------ ವೀರಶೂರ ಗಂಭೀರ ಕೃಪಾಕರ ವಾರಿಜೋದ್ಭವನ ಪಡೆದಂಥಾ ಸಾರಿಸಾರಿ ನಿಮ್ಮ ಸ್ಮರಿಸುವವರಿಗೆ ಸರ್ವ ಸಂಭ್ರಮವು ಮಾಡುವಂಥಾ ಕೀರುತಿ-----ರನು ಯನುತಲಿ ------ನಿಮ್ಮ ಸರ್ವೋತ್ತಮನಂಥಾ 2 ಗಾಧೆ ಬೋಧೆ ಗೊಳಗಾದೆ ಈ ಪರಿ ವೇದಾಂತ---ದೊಂದರಿಯೆ ಸಾಧು ಸಾಧಕರ ಬೋಧೆಗಳೆಂಬುವ ಸದಾ ಕರ್ಣದಿ ಕೇಳರಿಯೆ----ದರೆ ಮಾಧವ ಮಧುಸೂದನ ಧೊರಿಯೆ ವೇದ ಆದಿ ಅಗಾಧ ಗೋಚರನೆ ಪತಿ 'ಹೆನ್ನ ವಿಠ್ಠಲ’ ಹರಿಯೆ 3
--------------
ಹೆನ್ನೆರಂಗದಾಸರು
ಪ್ರಾಚೀನ ಕರ್ಮವು ಬಿಡಲರಿಯದುಯೋಚನೆಯ ಮಾಡಿ ನೀ ಬಳಲಬೇಡ ಪ.ಮುನ್ನಮಾಡಿದಕರ್ಮ ಬೆನ್ನಟ್ಟಿ ಬರುತಿರಲುತನ್ನಿಂದ ತಾನೆ ತಿಳಿಯಲರಿಯದೆಇನ್ನು ದೇಹವನು ಆಶ್ರಯಿಸಿ ಫಲವೇನುಉನ್ನತ ಹರುಷದಲಿ ಮನದಿ ಯೋಚಿಸುವ 1ಲೋಕಾದಿ ಲೋಕಗಳ ತಿರುಗುವರವಿ ರಥಕೆಏಕಗಾಲಿಗೆ ಏಳು ಕುದುರೆಕಟ್ಟಿಆಕಾಶ ಮಾರ್ಗದಲಿ ತಿರುಗುವ ಅರುಣನಿಗೆಬೇಕಾದ ಚರಣಗಳ ಕೊಡಲಿಲ್ಲ ಹರಿಯು 2ಸೇತುವೆಯುಕಟ್ಟಿ ಲಂಕೆಗೆ ಹಾರಿ ಹನುಮಂತಖ್ಯಾತಿಯನೆ ಮಾಡಿ ರಾವಣನ ಗೆದ್ದುಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿಪ್ರೀತಿಯಿಂ ಕೌಪೀನವ ಬಿಡಸಲಿಲ್ಲ ಹರಿಯು 3ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನುಹೊತ್ತುಕೊಂಡು ಇದ್ದ ಜಗವರಿಯಲುಅತ್ಯಂತ ಸೇವಕನೆಂದು ಮೂಗಿನಡೊಂಕುಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ 4ಇಂತೆಂದು ಈಪರಿ ತಮ್ಮೊಳಗೆ ತಾವು ತಿಳಿದುಭ್ರಾಂತನಾಗದೆ ಬಯಕೆಗಳನುಜರಿದುಶಾಂತ ಮೂರುತಿಸಿರಿ ಪುರಂದರವಿಠಲನ
--------------
ಪುರಂದರದಾಸರು