ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ಪ ವಿತ್ತವುಳ್ಳವನ ಕುಲ ಎಣಿಸುವುದುಂಟೆಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ 1 ಅತ್ತೆಮನೆ ಸೇರುವಗೆ ಅಭಿಮಾನವುಂಟೆಬತ್ತಲೆ ತಿರುಗುವಗೆ ಭಯವು ಇನ್ನುಂಟೆ2 ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆಮತ್ರ್ಯದೊಳನ್ಯ ದೇವರು ಸರಿಯುಂಟೆ 3
--------------
ಕನಕದಾಸ
ಹರಿಪದಯುಗಲವನಿತ್ಯ ನೆನೆದವೆಗೆ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಮಪದವಿಯೇ ಸಾಕ್ಷಿ ||ಹರಿ -ಗುರು ದೂಷಣ ಮಾಡಿದ ಮನುಜಗೆ |ನರಕರೌರವವೆ ಸಾಕ್ಷಿ ಪ.ಕಡುಭಕ್ತಿಯಲಿ ಕೃಷ್ಣನÀ ನೆನೆದರೆ |ನಡೆಯಲಿ ಸತ್ಯವೆ ಸಾಕ್ಷಿ ||ದೃಡ ಭಕುತಿಯಿಂದ ಉಣಬಡಿಸಿದವಗೆ |ಷಡುರಸಾನ್ನವೇ ಸಾಕ್ಷಿ 1ತಾನೊಂದುಂಡು ಪರರಿಗೊಂದಿಕ್ಕುವಗೆ |ಗುಲ್ಮರೋಗವೇ ಸಾಕ್ಷಿ ||ಹೀನನಾಗಿ ಹಿರಿಯರನು ದೂಷಿಪಗೆ |ಹೀನ ನರಕವೇ ಸಾಕ್ಷಿ 2ಕನ್ಯಾದಾನವ ಮಾಡಿದವಗೆ ದಿವ್ಯ |ಹೆಣ್ಣಿನ ಭೋಗವೆ ಸಾಕ್ಷಿ ||ಕನ್ಯಾದಾನವ ಮಾಡದ ಮನುಜಗೆ |ಹೆಣ್ಣಿನ ದೈನ್ಯವೇ ಸಾಕ್ಷಿ 3ಅನ್ನದಾನ ಮಾಡಿದ ಮನುಜಗೆ ದಿ - |ವ್ಯಾನ್ನವನುಂಬುದೆ ಸಾಕ್ಷಿ ||ಅನ್ನದಾನ ಮಾಡದ ಮನುಜಗೆ ತಿರಿ -ದುಣ್ಣುತಿರುವುದೇ ಸಾಕ್ಷಿ 4ಕ್ಷೇತ್ರದಾನ ಮಾಡಿದ ಮನುಜಗೆ ಏತ - |ಛತ್ರವನಾಳ್ವುವದೆ ಸಾಕ್ಷಿ ||ಪಾತ್ರವರಿತು ಧರ್ಮಮಾಡಿದವಗೆ ಸತ್ -ಪುತ್ರರಾಗುವುದೆ ಸಾಕ್ಷಿ 5ಕಂಡ ಪುರುಷರಿಗೆ ಕಣ್ಣಿಡುವ ನಾರಿಗೆ |ಗಂಡನು ಕೇಳುವುದೆ ಸಾಕ್ಷಿ ||ಪುಂಡನಾಗಿ ಪರಸ್ತ್ರೀಯರ ಸೇರುವಗೆ |ಹೆಂಡಿರ ಕಳೆವುದೆ ಸಾಕ್ಷಿ 6ಭಕ್ತಿಯರಿಯದ ಅಧಮನಿಗೊಂದು |ಕತ್ತಲಮನೆಯೇ ಸಾಕ್ಷಿ ||ಮುಕ್ತಿಪಡೆವುದಕೆ ಪುರಂದರವಿಠಲನ |ಭಕ್ತನಾಗುವದೆ ಸಾಕ್ಷಿ 7
--------------
ಪುರಂದರದಾಸರು