ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲುಕಷ್ಟ ಬರಗಾಲ ಬಂದಿತಯ್ಯ ವೈರಿ ಜನಕೆ ಬರಬಾರದಯ್ಯ ಪ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸರಲು ಬಾಯಿಲ್ಲ ವೃದ್ಧ ಜನಕೇ ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1 ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ ಪ್ರವಾಹದಂದದಿ ವೃಧ್ಧಿಯಾಗುತಲಿಹುದು ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ ಶಿವಶಿವಾಯೆಂದು ಭವಣಿಯನನುಭವಿಸುವರು 2 ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ ಮರಮರನೆ ಮನದೊಳಗೆ ಮರುಗುವರು ಬಡಜನರೂ 3 ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ ತಾಳಿ ಮನದಲಿ ವ್ಯಥಿಯ ಕೂಲಿ ಜನರು ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ ಕೂಲಿವಲ್ಲೆವು ಎನುತ ಗೋಳಿಡುತಲಿಹರು 4 ಕಡಲೆ ಕಾಣದ ಹರಿಯು | ಕಡಲೊಳಡಗಿದ ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5 ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ ಬಳುತಿಹವು ಬಡಜನರ ಕಣ್ಣಿಂದ ನೀರು ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6 ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು ನಮ್ಮ ಸಕಲ ಜನಕೇ | ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7
--------------
ಶಾಮಸುಂದರ ವಿಠಲ
ಮಾರುತಿ ನಿಲ್ಲಿಸಯ್ಯ ನಿನ್ನ ಮೂದಲೆ ಮಾರುತಿ ಪ ನಿಲ್ಲಸಯ್ಯ ನಿನ್ನ ಮೂರುತಿಫುಲ್ಲವಿಸಿದೆ ನಿನ್ನ ಕೀರುತಿಬಲ್ಲಭಕ್ತಿಪಥವ ತೋರುತಿಎಲ್ಲರೊಳಗೆ ಸುಖವ ಬೀರುತಿ ಅ.ಪ. ಗಾಡಿಕಾರ ರಾಮನನ್ನು ನೋಡಿ ನೋಡಿಯವನ ಮೂರ್ತಿಮೂಡಿನಿಂತ ನಿನ್ನ ಕಣ್ಣ ನೋಡಿ ಧನ್ಯನಪ್ಪೆ ಮೂರ್ತಿ1 ಪ್ರೇಮಭಕುತಿಯಿಂದ ನಿರುತ ರಾಮನನ್ನು ಭಜಿಸಿ ನುಡಿವನಾಮವೆನ್ನ ಪಾಪಿ ಕಿವಿಯ ಧಾಮದಲ್ಲಿ ಸೇರುವಂತೆ 2 ಎನ್ನ ಕಾಡುವಂಥ ದುರಿತವನ್ನು ಸೌಖ್ಯವನ್ನುಇನ್ನು ಕೊಡುವ ನಿನ್ನ ದಿವ್ಯ ಸನ್ನಿಧಿ ತಾನಾಗುವಂತೆ 3 ನಿತ್ಯ ಸೇವಿಪಂತೆ ಧೀರತೆ ಬರುವಂತೆ ಎನ್ನೊಳು 4
--------------
ವೀರನಾರಾಯಣ
ಸಣ್ಣವನ ಮತವಲ್ಲ ಸಾರಿ ಹೇಳಮ್ಮ |ಕಣ್ಣ ಮುಚ್ಚಿ ಆಡುವಾಗಕಾಕುಮಾಡಲೇತಕಮ್ಮಪಮೊಸರ ಕದ್ದರೆ ನಾವು ಮೊರೆಯಿಡ ಬಂದುದಿಲ್ಲ |ಪೊಸ ಕುಚಗಳ ಮುಟ್ಟಿ ಪೊಗಲೀಸನಮ್ಮ ||ಹಸು ಮಗನರಿಯದೆ ಆವಾಗಲೂ ಪಿಡಿವ |ಬಸುರುಹಬಿ ಮೊಗ್ಗೆಯೆಂದು ಪಿಡಿದಡೇನಾಯ್ತಮ್ಮ 1ನವನೀತಬೇಡಿದರೆ ನಾವೇನೆಂಬುದಿಲ್ಲ |ಯುವತಿಯರಧರವ ಬೇಡಬೇಕೆ? ||ಅವನಾವಾಗಲೂ ಮೆಲ್ವ ಆಲದ ಪಣ್ಣೆಂದು |ಸವಿಗಂಡು ಬೇಡಿದರೆ ಸಾಧಿಸಲೇತಕಮ್ಮ 2ಭೂಮಿಗೆ ಲಂಡನು ನಮ್ಮ ಪುರುಷರಿಲ್ಲದ ವೇಳೆ |ಕಾಮಿನೆ ಗಂಡನಂದದಿ ಕರೆಯುತೈದಾನೆ ||ಪ್ರೇಮದಿ ಪುರಂದರವಿಠಲನ ನೆನೆದರೆ |ಕಾಮಿನಿಯರಿಗೆ ಕಲ್ಪವೃಕ್ಷ ಕೈಸೇರುವಂತೆ 3
--------------
ಪುರಂದರದಾಸರು