ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿ- ಶಿಷ್ಟ ಮಹಿಮೆಗಳನು ಭಕ್ತರಿಗೆ ಬಂದಾ ಕಷ್ಟ ಕಳೆಯುವೆಯೋ ನೀನು ಸುರಕಾಮಧೇನು ವಿಷ್ಣುವೇ ಪರದೈವವೆಂದು ದುಷ್ಟರಾಕ್ಷಸರನ್ನೆ ಕೊಂದು ಸೃಷ್ಟಿಪಾಲಿಪ ಶ್ರೀ ರಮೇಶನೇ ಇಷ್ಟ ಭಕುತರೊಳು ಶ್ರೇಷ್ಠನೆನಿಶಿದಿ ಪ ತಾಯಿಯೂ ಬಂದು ಸೇವೆಗೆ ರಘುಪತಿ ರಾಯನಲೆ ನಿಂದು ಬಯಸಲಿಲ್ಲಾ ಒಂದು ಶ್ರೀಹರಿಗೆ ಬಂದು ಕಾಯಬೇಕು ಸುಗ್ರೀವನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯ ಉ- ಪಾಯದಿಂದಲಿ ಕೊಲಿಸಿ ರವಿಜಗೆ ಸ- ಹಾಯ ಮಾಡಿದಿ ವಾಯುತನಯನೆ 1 ಕಡಲ ಬೇಗನೆ ಹಾರೀ ಶ್ರೀರಾಮನ ಮಡದಿಗುಂಗುರ ತೋರಿ ಅಲ್ಲಿದ್ದ ಅಸುರರ ಜಡಿದೆ ಬಲು ಹೊಂತಕಾರಿ ಮಾಡಿಯೊ ಸೂರಿ ಒಡೆಯಗ್ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರ ಹೊಡೆಸಿದಾಕ್ಷಣ ಲೋಕಮಾತೆಯ ಒಡಗೂಡಿಸಿದೆಯೋ ಶ್ರೀರಾಮಚಂದ್ರಗೆ 2 ಮೂರು ರೂಪವ ತಾಳ್ದಿ ಮಹಯೋಗ್ಯ ಜನರಿಗೆ ಸಾರ ತತ್ವವ ಪೇಳ್ದಿ ಶರಣ್ಹೊಕ್ಕ ಜನರಪಾರ ದುಃಖವ ಶೀಳ್ದಿ ಮೊರೆಯ ಕೇಳ್ದಿ ಧೀರ ಕದರುಂಡಲಗಿ ಹನುಮಯ್ಯ ಸೇರಿದೆನೊ ನಿನ್ನಂಘ್ರಿ ಕಮಲವ ಗಾರು ಮಾಡದೆ ಸಲಹೊ ಕರುಣವಾರಿಧಿ ನೀಯೆನ್ನನೀಗಲೆ 3
--------------
ಕದರುಂಡಲಗಿ ಹನುಮಯ್ಯ
ನ್ಯಾಯತಂದಿಹೆನೊ ಹರಿ ನಿನ್ನ ಸಭೆಗೆ ತೀರ್ಪುಮಾಡಿದನು ನ್ಯಾಯತಂದಿಹೆ ಪ ನ್ಯಾಯ ತಂದಿಹೆ ನೋಯದೆ ಉ ಪಾಯದಿಂದ ತೀರ್ಪುಮಾಡುವ ನ್ಯಾಯಾಧೀಶ ದಯಾಳು ಎನ್ನ ನ್ಯಾಯ ತೀರಿಸಿ ಕಾಯ್ವನೆಂದು ಅ.ಪ ಕೊಟ್ಟ ಒಡೆಯರೋ ಬೆನ್ನಟ್ಟಿ ಎನ್ನನು ಕಟ್ಟಿ ಕಾದ್ವರು ಭ್ರಷ್ಟನೆ ಮುಂದಕೆ ಕೊಟ್ಟ್ಹ್ಹೋಗೆನ್ವರು ನಿಷ್ಠುರಾಡ್ವರು ಕೊಟ್ಟು ಮುಕ್ತನಾಗ್ವೆನೆನ್ನಲು ಖೊಟ್ಟಿಕಾಸು ಕೈಯೊಳಿಲ್ಲವು ಭವ ಬೆನ್ನಟ್ಟಿ ಬಿಡದ ಕ ನಿಷ್ಟರಿಣಸೂತಕವ ಕಡಿಯೆಂದು 1 ಅನ್ನ ಕೊಟ್ಟವಗೆ ಅನ್ಯಾಯ ಯೋಚಿಸಿ ಬನ್ನ ಬಡಿಸಿದೆನೊ ಇನ್ನುಳಿಯದೆನೆಂದು ನಿನ್ನ ಸೇರಿದೆನೊ ಪನ್ನಂಗಶಯನ ಮುನ್ನ ಮಾಡಿದ ಎನ್ನ ಅವಗುಣ ಭಿನ್ನವಿಲ್ಲದೆ ನಿನ್ನೊಳ್ಪೇಳುವೆ ಸನ್ನುತಾಂಗನೆ ಮನ್ನಿಸಿ ಇದ ನಿನ್ನು ಎನ್ನಯ ಬನ್ನಬಿಡಿಸಿದೆಂದು 2 ಆಸೆಗೊಳಿಸಿದೆನೋ ಪುಸಿಯನ್ಹೇಳಿನಿ ರಾಸೆಮಾಡಿದೆನೋ ಶಾಶ್ವತದಿ ಕೊಟ್ಟ ಭಾಷೆ ತಪ್ಪಿದೆನೋ ವಸುಧೆಯೊಳು ನಾನು ಈಸುದಿನದಿಂ ಮೋಸಕೃತ್ಯದಿ ಘಾಸಿಯಾದೆನು ಧ್ಯಾಸಮರದು ಶ್ರೀಶ ಶ್ರೀನಿವಾಸ ಶ್ರೀರಾಮ ಪೋಷಿಸೆನ್ನ ಸುಶೀಲ ಗುಣವಿತ್ತು 3
--------------
ರಾಮದಾಸರು
ಬಾರೋ ಬಾರೋ ಶ್ರೀಗುರುರಾಯ ಬಾರೋ ಬಾರೋ ಭೂಸುರವರ್ಯ ಬಾರೋ ಬಾರೋ ಭಕ್ತಪ್ರೀಯ ಕಾಯ ಪ ಘೋರಾರಣ್ಯದೊಳು ಬಂದು ಸೇರಿದೆನೊ ದುಷ್ಕರ್ಮದಿ] ಕ್ರೂರ ಮೃಗಗಳೆನ್ನತಿ ಬಾಧಿಸುತಿಹವು ಚೋರರುಪದ್ರವವನ್ನು ನಾ ಸಹಿಸಲಾರೆ ಇಷ್ಟೆನುತ ದೂರ ನೋಳ್ವರೆ ವ್ಯಾಳ್ಯಕೆ ಸೂರಿವರೇಣ್ಯ 1 ಮಂದಜನ ಸಂಗದಿಂದ ತಂದೆ ತ್ವತ್ಪಾದಾರ ವಿಂದ ಪೊಂದದಿರೆ ಸಂಧಿಸಿಎನ್ನಗೆ ಬಂದÀ ಬನ್ನ ಹಿಂದೆ ನೀ ನಾಲ್ವರಿಯಲಿಲ್ಲೆ ಸಂದೇಹವ್ಯಾಕೆ 2 ಇಂದ್ರ ಸಮವಿರಾಜಿತ ಇಂದ್ರ ವಿರೋಧಿ ಸಂಭೂತ ಇಂದ್ರ ದೇವಾಧಿ ಮಾನಿತ ಆನಂದ ಪ್ರದಾತ ಇಂದ್ರ ಜಾರಿ ಸೂತ ಶಾಮಸುಂದರವಿಠಲ ದೂತ ಇಂದ್ರ ಜಾತಾಖ್ಯರ ಪ್ರೀತ ಇಂದ್ರಾರ್ಯಪೋತ 3
--------------
ಶಾಮಸುಂದರ ವಿಠಲ
ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ - ಇಂದು ಎನ್ನ ಮಾತ ಲಾಲಿಸೊ ತಂದೆ ಕುಂದು ಎಣಿಸದೆನ್ನ ಪಾಲಿಸೊ 1 ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ- ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ 2 ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ 3 ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ 4 ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ ಕಟ್ಟೆವಾಸ ವೆಂಕಟೇಶನೆ ಸಕಲ ಭಾರ ಸುಜನಪಾಲನೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಹೂವ ತರುವರ ಮನೆಗೆ ಹುಲ್ಲ ತರುವೆ ಪ ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ಅ ಈರೇಳು ಜನ್ಮದಿಂ ದಾಸನಾಗಿಹೆ ನಾನುಸೇರಿದೆನೊ ತವ ಶರಣರ ಸೇವೆಗೆಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ 1 ರಂಗನಾಥನೆ ನಿನ್ನ ಡಿಂಗರಿಗನೋ ನಾನುಡಂಗುರವ ಹೊಯಿಸಯ್ಯ ದಾಸನೆಂದುಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟುಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು 2 ಎಷ್ಟು ಮಾಡಲು ನಿನ್ನ ಬಂಟನೋ - ವೈಷ್ಣವರಹುಟ್ಟು ದಾಸಿಯ ಮಗನು ಪರದೇಶಿಯೋಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ - ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ 3
--------------
ಕನಕದಾಸ