ಒಟ್ಟು 11 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಿದರೇನು ಫಲವೊ ಪ ನೀನು ಮಾನಸ ವೃತ್ತಿ ತಿದ್ದುವತನಕ ಅ.ಪ ಪೂಜೆ ಮಾಡಿದರೇನು ತೇಜಸ್ವಿ ಇರಲೇನು ರಾಜಧಿರಾಜ ಸಂಪೂಜ್ಯನೆನಿಸಲೇನು ರಾಜತಾಸನದಲ್ಲಿ ಕುಳಿತರೂ ರಾಜಿಸದ ಮಾನಸದ ವೃತ್ತಿಯು ಜೂಜಿನಲಿ ಪಣ ಕಟ್ಟಿದಂತಿದೆ 1 ಭಾರಿ ಪಲ್ಲಕ್ಕಿಯ ಏರಿದ ಅನುಭವ ನೂರು ಜನರು ಸ್ತುತಿ ಕೇಳಿದ ಅನುಭವ ಕೀರುತಿಯ ಪರಮಾವಧಿಯನು ಸೇರಿದೆನು ನಾನಿನ್ನ ಕರುಣದಿ ತೂರುವಂದದಿ ತೂರುತಿಹುದೊ 2 ವರಗಳ ಕೊಟ್ಟಾಯ್ತು ಹಿರಿಯನೆಂದೆನಿಸ್ಯಾಯ್ತು ಅರಿತು ಶಾಸ್ತ್ರಾರ್ಥವ ಗುರುತನ ಪಡೆದಾಯ್ತು ಮನದಲಿ ತೋರುತಿಹುದೋ ಕರದಲಿರುವ ಪ್ರಸನ್ನನೇ ಹೃತ್ಸರಸಿಜದಿ ನೆಲಿಸೆಲೊ ನಿರಂತರ 3
--------------
ವಿದ್ಯಾಪ್ರಸನ್ನತೀರ್ಥರು
ಕರುಣಾಕರ ಭಕ್ತ ಪಾರಾಯಣ ಸತ್ಯನಾರಾಯಣ ಪ ಭಕ್ತಿ ಭಾವದೆ ನಿನ್ನ ಸೇರಿದೆನು ವ್ರತ ಮಾಡಿದೆನು ಸತ್ಯ ದೇವನೆ ಕೃಪೆ ತೋರುವುದು ವರ ನೀಡುವುದು ಸತ್ಯ ದೇವೇಶನೆÀ ಬೇಡುವೆನು ನುತಿ ಮಾಡುವೆನು 1 ಗಂಧ ಪುಷ್ಪಾಕ್ಷತೆ ದೀಪಗಳಿಂ ಪಂಚಫಲಂಗಳಿಂ ಇಂದಿರೇಶನೆ ನಿತ್ಯ ಭಾವಿಸಿದೆ ವಂದಾರು ಮಂದಾರ ಪಾಲಿಸೆನ್ನನು ಬೇಡಿಕೊಂಬೆನು 2 ಮೌನೀಶ ವಂದ್ಯನೆ ಸರ್ವೇಶನೆ ದೀನಪಾಲಕನೆ ಸುಜ್ಞಾನ ಭಾವಿಪುದು ನಿಜತೋರುವುದು ದಯೆಯಿಂದ ಬಹು ವಿಧದಿಂದ 3
--------------
ಬೇಟೆರಾಯ ದೀಕ್ಷಿತರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಪಾದ ಬಿಡಲಾರೆ ಎನ್ನೊಡೆಯ ರಂಗ ಭಾರ ನಿನ್ನಗೆ ಕೂಡಿತು ಪ ನೀನೆ ಚಿಂತಾಮಣಿ ನೀನೆ ಪರುಷದ ಖಣಿ ನೀನೆ ಎನ್ನಗೆ ಧಣಿ ವೇಣುಗೋಪಾಲ 1 ಪಕ್ಷಿವಾಹನ ಲೋಕರಕ್ಷಿಪನು ನೀನೆಲೊ ಅಕ್ಷಯದಿ ದ್ರೌಪದಿಯ ರಕ್ಷಿಸಿದವ ನೀನೆ 2 ಪಾರ ಮಹಿಮನೆ ಸರ್ವಭಾರ ನಿನ್ನದಯ್ಯ ಸೇರಿದೆನು ನಿಮ್ಮ ಪದಕೆ ಮಾರಪಿತ ಶ್ರೀರಾಮ 3
--------------
ರಾಮದಾಸರು
ಭವ ನಿಂದುದಗಣಿತ ಕರ್ಮವೆಂದು ನಿನ್ನವನೆನಿಪುದೊ ಹರಿಯೇ ಅ.ಪಸೂಸುತಿದೆಯಜ್ಞಾನ ಮಾಸುತಿದೆ ಸುಜ್ಞಾನದೋಷಗಳು ಬಹುವಾಗಿವೆ ಹರಿಯೇಆಶೆಯೆಂಬುದಕಂತವಿಲ್ಲ ಬಹುಬಗೆ ತರದಪಾಶದಲಿ ಬಿಗಿವಡೆದೆನೋ ಹರಿಯೇಈಶ ನಿನ್ನಯ ಮಾಯೆಯೆಂಬ ಬಲು ಹುರಿ ಬಲೆಯುಬೀಸಿ ಸೋವುತ್ತಲಿದೆಕೋ ಹರಿಯೇಕ್ಲೇಶಸಾಗರದಲ್ಲಿ ಮುಳುಗಿ ತಡಿಯನು ಕಾಣೆವಾಸುದೇವ ಕಡೆಹಾುಸೋ ಹರಿಯೇ 1ಆವರಣ ವಿಕ್ಷೇಪವೆಂದೊಂದು ಶಕ್ತಿ ತಾನಾವರಿಸಿ ಬ್ರಹ್ಮಾಂಡವ ಹರಿಯೇತೀವಿಕೊಂಡೊಳಹೊರಗೆ ವಿಕ್ಷೇಪ ಶಕ್ತಿ ತಾಜೀವಕೋಟಿಗಳ ಸೃಜಿಸಿ ಹರಿಯೇಠಾವುಗಾಣದ ತೆರದಿ ಬಹುವಿಧದ ಕರ್ಮದಲಿಜೀವರನು ಬಂಧಿಸಿಹುದು ಹರಿಯೇಈ ವಿಧದ ಮಾಯೆ ತಾ ಯೋಗಿಗಳಿಗಸದಳವುದೇವ ಕೃಪೆಮಾಡಿ ಸಲಹೋ ಹರಿಯೇ 2ಮೂರು ಗುಣ ಮೂಲದಲಿ ಮೂರು ಕರ್ಮಗಳುದಿಸಿಮೂರಾರು ಕವಲಾದುದೋ ಹರಿಯೇಸಾರಿ ವೃಕ್ಷವ ಬಳ್ಳಿ ಮೀರಿ ಮುಸುಕಿದ ತೆರದಿತೋರದಿದೆ ನಿನ್ನ ನಿಜವ ಹರಿಯೇಬೇರುವರಿದಿಹ ಕರ್ಮಲತೆಯ ಜಾರಿಸಿ ಗುಣವಮೀರುವ ಉಪಾಯವೆಂತೋ ಹರಿಯೇಸೇರಿದೆನು ನಿನ್ನ ಚರಣವನು ವೆಂಕಟರಮಣದಾರಿಯನು ತೋರಿ ಸಲಹೋ ಹರಿಯೇ 3ಕಂ||ಗುರುವಾರದರ್ಚನೆಯನಿದಗುರುವಾಗಿಯೆ ಪೇಳ್ದೆ ನೀನೆ ಮೂಢನ ಸಲಹಲ್‍ಗುರುಸೇವೆಯೆಂತೊ ತಿಳಿಯದುಗುರುವರ ಸಂಗತಿಯನರಿಯೆ ನೀನೇ ಗತಿಯೈಓಂ ದಾಮೋದರಾಯ ನಮಃ
--------------
ತಿಮ್ಮಪ್ಪದಾಸರು
ಸೇರದಾದವು ಅಶನವಸನಗಳಾರೊಡನೆ ನಾ ಪೇಳಲಿ ಪ ಸಾರಸಾಕ್ಷ ಮುರಾರಿ ಕೃಷ್ಣನ ಮೂರುತಿಯ ನಾ ಕಾಣದೆ ಅ.ಪ ಹಿಂದೆ ವನದಲಿ ಸುಂದರಾಂಗ ಮುಕುಂದ ಕೃಷ್ಣನ ಪರಿಪರಿ ಅಂದ ಲೀಲೆಗಳಿಂದ ಪೊಂದಿದ ನಂದಗಳ ನೆನೆ ನೆನೆದರೆ 1 ಮಾರಜನಕನು ಜಾರನೆಂಬ ವಿಚಾರವನು ನಾನರಿಯದೆ ಸೇರಿದೆನು ಮನಸಾರ ಮುದದಲಿ ಯಾರಿಗಳವೇ ಮರೆಯಲು 2 ಮೋಸಗಾರನ ಆ ಸೊಬಗುಗಳಿಗಾಸೆ ಪೊಂದಿದ ಪಸುಳೆಯ ಆಸೆಭಂಗದ ಕ್ಲೇಶವನು ಜಗದೀಶನೊಬ್ಬನೆ ಬಲ್ಲನು3 ತರುಲತೆಗಳು ಹರಿವ ಯಮುನಾ ಸರಿದೇನಾದರೂ ಬಲ್ಲವೆ ಸರಸದಲಿ ತಿರುತಿರುಗುತಿಹ ಮುರಹರನ ಸುದ್ಧಿಯ ಕೇಳಲೆ4 ಘನ್ನ ಮಹಿಮೆ ಪ್ರಸನ್ನ ಕೃಷ್ಣನು ತನ್ನ ಸಂತಸದಿಂದಲಿ ಎನ್ನ ಕರಗಳಿಗೊಮ್ಮೆ ಸಿಕ್ಕಲು ಇನ್ನು ಅವನನು ಬಿಡುವೆನೆ 5
--------------
ವಿದ್ಯಾಪ್ರಸನ್ನತೀರ್ಥರು
ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ಘೋರತರ ನರಕದತಿಭಯವಾ ಪದೂರ್ವೆ ಮೊದಲಾದ ತೃಣಧಾನ್ಯ ಗರ್ಭವ ಮೆಟ್ಟಿಸರ್ವ ಸ್ಥಾವರ ಜಾತಿಗಳಲಿ ಪುಟ್ಟಿಪಾರ್ವಪಕ್ಷಿಗಳ ಬಸುರೊಳು ಪುಟ್ಟಿ ಬಹಳ ಪಶೂದರ್ವೀಕರಂಗಳಲಿ ಪುಟ್ಟಿ ಕಂಗೆಟ್ಟೂ1ಮನುಜರೊಳು ಪದಿನೆಂಟು ಜಾತಿಗಳೊಳಗೆ ಬಂದುಬಿನುಗುತನದಿಂದಖಿಳ ವಿಷಯಗಳ ತಿಂದೂಅನುವರಿಯದಜ್ಞಾನದೊಳಗೆ ಬಳಿಸಂದು ಪಾರ್ವನ ಜನ್ಮದಲಿ ವಿಹಿತಕರ್ಮದಲಿ ಮನನಿಂದು2ಮೆಲ್ಲ ಮೆಲ್ಲನೆ ಕಾಮ್ಯ ನಿಷ್ಕಾಮ ಕರ್ಮಗಳಬಲ್ಲ ಬಲ್ಲಂತೆ ಮಾಡುತ ಪೂರ್ವದಾಸಲ್ಲಲಿತ ಪುಣ್ಯದೊಳು ಭಕ್ತಿಯೊಳ್ಮನ ಮುಟ್ಟಿಅಲ್ಲಲ್ಲಿ ಹರಿನಾಮ ಕಥೆಯೊಳಳವಟ್ಟೂ 3ಭಾಗವತ ಜನ ಸಂಗದಿಂದ ಹರಿಕಥೆಗಳನುರಾಗದಿಂ ಕೇಳಿ ಗುರುವಿನ ಮಹಿಮೆಯಾಶ್ರೀಗುರುಗಳಿಂದಲೆ ಧನ್ಯತ್ವವಹುದೆಂದುಯೋಗ ಸಂಪದವೆ ತನಗಾಗಬೇಕೆಂದೂ 4ಸದಸದ್ವಿವೇಕ ಶಮೆ ದಮೆ ತಿತಿಕ್ಷೆಗಳಿಂದಲಧಿಕ ಮೋಕ್ಷೇಛ್ಛೆ ಮುಂತಾದ ಸಾಧನವೂಒದವಿರಲು ಬೇಕು ಗೋಪಾಲಾರ್ಯ ಗುರುವರನಪದವೆ ಸತ್ಯಾನಂದ ರೂಪವೆಂತೆಂದೂ 5
--------------
ಗೋಪಾಲಾರ್ಯರು
ಸೇರಿದೆನು ಸೇರಿದೆನು ಜಗದೀಶನನರಕಜನ್ಮದ ಭಯವು ಎನಗೆ ಇನಿತಿಲ್ಲ ಪ ಮೂರ್ತಿ ಗಾತ್ರ ಕೃಷ್ಣನ ಮುಂದೆ1 ಹಸ್ತಗಳು ಮಂಟಪಶುದ್ಧಿಯನು ಮಾಡುತಿವೆಮಸ್ತಕವು ಹರಿಚರಣಕೆರಗುತಿದೆಕೋವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆಕಸ್ತೂರಿತಿಲಕವನು ಮೂಗು ಆಘ್ರಾಣಿಸುತಿದೆ 2 ಹರಿನಾಮಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆಹರಿಭಕುತಿ ಸುಧೆಯ ಪಾನಗಳಿಂದಲಿಹರಿಪ್ರೀತಿಯಾಗಿದೆ ನೋಡಿದರೆನ್ನ ದೇಹಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ 3
--------------
ವ್ಯಾಸರಾಯರು
ಕೈ ಮುಗಿದು ಬೇಡುವೆನು ಕೈಲಾಸವಾಸಾ ||ವಹಿಲದಲಿ ಸಲಹೆನ್ನ ಈಶ ಗಿರಿಜೇಶಾ ಪಅಷ್ಟ ಭಾಗ್ಯವು ನೀನೆ | ಇಷ್ಟಮಿತ್ರನು ನೀನೆ |ಹುಟ್ಟಿಸಿದ ತಾಯ್ತಂದೆ |ವಿದ್ಯೆಗುರುನೀನೆ |ಸೃಷ್ಟಿ ಮೂರಕೆ ನೀನೆ ಅಧ್ಯಕ್ಷನೆನಿಸಿರುವೆ |ರಕ್ಷಿಸೆನ್ನನು ಜಟಾಜೂಟ ನಿಟಿಲಾಕ್ಷ 1ಮಾಯಾಪಾಶದಿ ಸಿಕ್ಕಿ |ಕಾಯಸುಖವನು ಬಯಸಿ |ಆಯತಪ್ಪಿದೆ ಮುಂದುಪಾಯವೇನಿದಕೆ |ಜೀಯನೀನೆಂದೆಂಬ | ನ್ಯಾಯವರಿಯದೆ ಕೆಟ್ಟೆ |ಕಾಯೊ ದಯದಲಿ ಮೃತ್ಯು | ಬಾಯಿಗೊಪ್ಪಿಸದೆ 2ಘೋರತರ ಸಂಸಾರ ಸಾಗರದಿ ಮುಳುಮುಳುಗಿ |ಕ್ರೂರ ನಕ್ರನ ಬಾಯಿಗಾಹಾರವಾದೆ |ದಾರಿಕಾಣದೆ ಬಳಲಿ ಮಾರಹರ ನಿನ್ನಂಘ್ರಿ |ಸೇರಿದೆನು ಗೋವಿಂದದಾಸನನು ಸಲಹೋ 3
--------------
ಗೋವಿಂದದಾಸ