ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಥನಾತ್ಮಕ ಹಾಡುಗಳು ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ ರೂಢಿಯೊಳು ಶೇಷಾದ್ರಿನಿಲಯನ ಕೂಡಿಕೊಂಡಿಲ್ಲಿರುವನ ಪ ಚಿಪ್ಪಗಿರಿ ದಾಸಾರ್ಯರೀತರು ಪಿಪ್ಪಲವ ಕಂಡಾಗಲೇ ಕಾರ್ಪರಾರಣ್ಯೆಂಬ ಪದದಿ ಸಂಕ್ಷಿಪ್ತ ಮಹಿಮೆಯ ಪೇಳ್ದರು 1 ಅಪರದಿಗ್ಭಾಗದಲಿ ನೋಡಲು ಸಪತ ಋಷಿಗಳ ಸ್ಥಾನವು ತ್ರಿಪಥಗಾಮಿನಿ ವ್ಯಕ್ತಳಾದಳು ತಪಕೆ ವಿಶ್ವಾಮಿತ್ರರ 2 ಯತ್ರಶ್ವೇತ ಶೃಂಗ ಕೃಷ್ಣಾಚೋತ್ತರ ವಾಹಿನಿಯೊಳು ತತ್ತದಾನ ಸ್ನಾನ ಕಾಸಿಗೆ ಉತ್ತಮವು ಫಲವೀಯಲು 3 ಚಾರುಕೃಷ್ಣಾತೀರವಿದರೊಳು ಕಾರ್ಪರಾಖ್ಯ ಮುನೀಂದ್ರನಾ ಘೋರತಪ ಕೊಲಿದರಳೆ ಮರದಾಗಾರನೆನಿಸಿದ ಧೀರನ 4 ನೀರಜಾಸನ ಮುಖ್ಯ ಸುರ ಪರಿಹಾರ ಸೇವಿತ ಚರಣನ ಸೇರಿದವರಘ ದೂರ ಮಾಡುವ ಘೋರನರಹರಿ ರೂಪನ 5 ಇಂತು ಅಶ್ವತ್ಥಾಂತರದಿ ಸಿರಿಕಾಂತನರಿಯನೆ ವಿಪ್ರರೊಳ್ ಶಾಂತ ನಾರಪ್ಪಯ್ಯನೆಂಬ ಮಹಾಂತರಿಲ್ಲಿರುತಿಪ್ಪರು 6 ದೊಡ್ಡವರ ಗುರುತರಿಯದಿವರನು ದಡ್ಡರೆನ್ನುತ ಭ್ರಾತ್ರರು ದೊಡ್ಡ ಕೃಷ್ಣಾನದಿಯೊಳಿವರನು ಕಟ್ಟಿ ಹಾಕಲು ಕೋಪದಿ 7 ಕಡಲಶಯನನ ಕರುಣದಿಂದಲಿ ದಡಕೆ ಸೇರಿದನಂತರ ದೃಢ ವಿರಾಗದಿ ವೆಂಕಟಾದ್ರಿಗೆ ನಡೆದರಾಗಲೆ ಹರುಷದಿ 8 ಶುಭ ಪಂಕಜ ಷಟ್ವದಾಯಿತ ಚಿತ್ತರು ಕೃಷ್ಣನಿರುತಿಹ ಬೆಟ್ಟದಡಿಯನು ಮುಟ್ಟಿಮಲಗಲು ಸ್ವಪ್ನದಿ9 ಇಲ್ಲಿ ದರ್ಶನವಿಲ್ಲ ನೀವಿರುವಲ್ಲಿ ಪುಣ್ಯಸ್ಥಾನವು ಪೋಗಿರೋ ಭೂಸುರ 10 ಧೇನು ರೂಪದಿ ಬರುವೆ ಕಾರ್ಪರ ಕಾನನದ ಅಶ್ವತ್ಥದಿ ಕಾಣುವುದು ಕ್ಷೀರಾಭಿಷೇಚನ ಧ್ಯಾನಿಸೆನ್ನನು ದ್ವಿಜವರ 11 ಇಂತುಸ್ವಪ್ನದಿ ಸೂಚಿಸಿದ ವೃತ್ತಾಂತವನು ಸಂಚಿಂತಿಸಿ ಕಂತು ಜನಕನ ಇಚ್ಛೆಯಿಂದಲೆ ಸಂತಸದಿ ಗಿರಿಗೊಂದಿಸಿ 12 ಮುಂದೆ ನಡೆದರು ಹಿಂದೆ ಗೆಜ್ಜೆಗಳಿಂದ ಬರುತಿಹ ಗೋಗಳ ಗೋವಿಂದನಂಘ್ರಿಯ ಸ್ಮರಿಸುತ 13 ಕುರುಕಿ ಹಳ್ಳಿಯ ಗ್ರಾಮದಿ ತಿರುಮಲೇಶನ ಕಂಡರು 14 ಗುರುತನು ಕಾಣುತ ಬಂದನು ಎನ್ನುತ 15 ಮುನಿವರನು ಸುಖದಿಂದಿರುತಿರೆ ತಿರೆ 16 ಬಂದರಲ್ಲಿಗೆ ತಮ್ಮ ಗ್ರಾಮದ ಬಂಧು ಬಾಲಕರೆಲ್ಲರು ಕಾಯುವದೆನುತಲಿ 17 ಚಾರು ಶಿಲೆಯೊಳಗೊಂದುದಿನ ಅಂಗಾರದಲಿ ಪ್ರಾಣೇಶನ ಪರಿಹಾರನುನಿಮಗೆಂದರು 18 ಪಾದ ನಿಷ್ಠೆಯಿಂದಲಿ ಸೇವಿಸೆ ಸಿದ್ಧಿಗಳಾಗ್ವವು 19 ನಾರಪ್ಪಯ್ಯರೆಂಬ ಮಹಾತ್ಮರು ಹರಿ ಸಂತತ 20 ಧರಣಿಯನು ಸಂಚರಿಸುತ ಚೆನ್ನೂರ ಗ್ರಾಮದಿ 21 ತೋರಿತಂದಿನ ರಾತ್ರಿಯೋಳ್ ಮಹಿಮೆಯಾ 22 ಭೂಪನ ಸ್ಪಪ್ನದಿ ತರುವನು ತೋರಿಸಿ 23 ಕಟ್ಟಿಸೆಲೊ ಭೂಪತಿಯೆ ಮಂದಿರ ಕೃಷ್ಣವೇಣಿಯ ಗರ್ಭದಿ ಶ್ರೇಷ್ಠನೆನ್ನಯ ಕರುಣದಿ 24 ಸುಪ್ರಭಾತದಲೆದ್ದು ನೃಪತಿಯು ಸ್ವಪ್ನಸೂಚಿತ ಸ್ಥಾನವ ಕ್ಷಿಪ್ರ ನೋಡುವೆನೆನುತ ಸೈನ್ಯದಿ ಕಾರ್ಪರಕೆ ಬಂದಿಳಿದನು25 ಆನೆಗಳು ಕಟ್ಟಿರುವ ಶಿಲೆಗಳು ಕಾಣಿಸುವ ವೀಗಾದರು ನನಸೇವಿಸಿದನು 26 ಮಂದಿರವಮೇಲ್ ನಿರ್ಮಿಸಿ ಇಂದಿರೇಶನ ಪದಕೆ ಭೂಸಂಬಂಧ ವೃತ್ತಿಯನೊಪ್ಪಿಸಿ27 ಹಿಂದೆ ನೋಡಲು ಚಂದ್ರಶೇಖರ ನಂದಿಪತಿ ಮಂದಿರಗಳು ವಂದೇ ವತ್ಸರದೊಳಗೆ ಶಿಲ್ಪಿಗಳಿಂದ ಕಟ್ಟಿದ ಶಿಲೆಗಳು 28 ವೃಷ್ಟಿಯ ಮಹಿಮೆಯ ಕಾಮಿತಾರ್ಥವನೀವುದು 29 ಮಾಸ ದೊ ಶರಧಿ ಸೇರುವ ಸಮಯದಿ 30 ಷೋಡಶ ಕರಗಳಿಂ ಹೊರಟನು ವೃಕ್ಷದಿ31 ತೀರ್ಥ ಸ್ನಾನದ ನರಹರಿ ದರ್ಶನ 32 ದಕ್ಷಿಣಾಯನ ಪರ್ವದಲಿ ಈ ವೃಕ್ಷದೆಡೆಯಲಿ ಸ್ನಾನವು ಮೋಕ್ಷ ಮಾರ್ಗಕೆ ಸಾಧನವು ಪ್ರದಕ್ಷಿಣಾದಿಕಮೆಲ್ಲವು33 ಮಂದಿರವ ಕಾಣುತಲೆ ಶ್ರೀಗೋವಿಂದ ಗೋವಿಂದೆನುತಲಿ ಬಂಧು ವರ್ಗ ಸಮೇತ ಭಕುತರ ವೃಂದ ಬರುವದು ನೋಡಿರೈ34 ಪಾಲಿನಭಿಷೇಕದಿ ಅರ್ಚನ ಪಾಲಕಿಯ ಸೇವಾವಧಿ ವಾಲಗವ ಕೈಕೊಳುತ ಭಕುತರ ಪಾಲಿಸುವ ನರಸಿಂಹನ 35 ವಾರವಾರಕೆ ಭಕ್ತಜನ ಪರಿವಾರ ಸೇವೆಯಕೊಳ್ಳುತ ಘೋರತರ ಸಂಸಾರ ಭಯಪರಿಹಾರ ಮಾಡುವ ದೇವನ 36 ತಪ್ಪದಲೆ ಪ್ರತಿವರ್ಷ ದ್ವಿಜ ಸಂತರ್ಪಣಾದಿಗಳಿಂದಲಿ ಕೊಪ್ಪರದಿ ನವರಾತ್ರ ಮೊದಲಾದುತ್ಸವಾದಿಗಳಾಗ್ವವು 37 ಹಿಂದೆ ಚಾತುರ್ಮಾಸ್ಯ ಕಾಲವು ಬಂದಿರಲು ವಿಭುದೇಂದ್ರರು ಬಂದರಿಲ್ಲಿಗೆ ಶಿಷ್ಯರಾದ ಯತೀಂದ್ರ ನಾರಾಯಣಾರ್ಯರು38 ಆ ಸಮಯದಿ ರಘುನಾಥ ತೀರ್ಥ ಯತೀಶರಿಲ್ಲಿಗೆ ಬಂದರು ತೋಷದಲಿ ವಿಭುದೇಂದ್ರ ತೀರ್ಥಮುನೀಶರವರಿಗೆ ಪೇಳ್ದರು39 ವೃಕ್ಷದಲಿ ಸನಿÀ್ನಹಿತ ನರಹರಿಯಕ್ಷನೆದುರಿಗೆ ನಮ್ಮಯ ಶಿಷ್ಯರೋದುವ ಗ್ರಂಥದರ್ಥ ಪರೀಕ್ಷೆ ಮಾಡಿರಿ ಎಂದರು40 ಮೌನಿರಘುನಾಥಖ್ಯರವರನು ಏನು ಓದುತಿರೆನ್ನಲು ಆನುಪೂರ್ವಿ ಸುಧಾಖ್ಯ ಗ್ರಂಥಾರ್ಥಾನುವಾದವ ಮಾಡಲು41 ಮೇದಿನಿಯಲಿ ವಾದಿಜಯ ಸಂಪಾದಿಸಿರಿ ನೀವೆಂದರೂ ಸಾದರದಿ ನಿಮಗೆಲ್ಲ ಜನ ಶ್ರೀಪಾದರಾಜರು ಎನ್ನಲಿ42 ಸೇವೆಯ ಮಾಡಲು ಒಂದು ವತ್ಸರದೊಳಗೆ ಸತ್ಯಾನಂದ ಯತಿಗಳ ಜನನವು43 ಸತ್ಯಧರ್ಮರು ಬಂದರೀ ಸುಕ್ಷೇತ್ರದರ್ಶನ ಮಾಡಲು ಮುತ್ತಿನ್ಹಾರವ ಪದಕ ಸಹಿತಾಗಿತ್ತರೀ ನರಸಿಂಹಗೆ 44 ಇದ್ದರಿಲ್ಲಿ ಜ್ಞಾನವೃದ್ಧ ಜನಾರ್ದನಾಭಿದ ಒಡೆಯರು ಶುದ್ಧ ಮನದಲಿ ನರಹರಿಯ ಪದಪದ್ಮ ಸೇವೆಯ ಮಾಡುತ45 ಬಿಡದೆ ತಪವಾಚರಿಸಿ ಕಾರ್ಪರದೊಡೆಯನನುಪಮ ಕರುಣವ ನಿತ್ಯದಲಿ ಪರಿಶುದ್ಧ ಮಧುಕರ ವೃತ್ತಿಯಿಂ ತಂದನ್ನವ ಎತ್ತಿ ವೃಕ್ಷಕೆ ಕಟ್ಟುವರು ಇದು ಬುತ್ತಿ ನಾಳೆಗೆ ಎನ್ನುತ47 ಪನ್ನಗಾರಿ ಧ್ವಜನಿಗರ್ಪಿಸಿ ಉಣ್ಣುತಿಹರಾನಂದದಿ48 ಮಂದಮತಿ ಭೂದೇವನೊಬ್ಬನು ನಿಂದೆ ಮಾಡಿದನಿವರನು ತಂದು ಕಟ್ಟಿದ ಅನ್ನ ತಂಗಳೆಂದು ತಿಳಿಯದೆ ಉಂಬರು 49 ನಿಂದೆ ಮಾಡಿದ ವಿಪ್ರನನು ಕರೆಸೆಂದರರ್ಚನ ಸಮಯದಿ ತಂದು ವೃಕ್ಷದಿ ಕಟ್ಟಿದನ್ನವ ತಂದು ಕೆಳಗಿಡಿರೆಂದರು 50 ಪೋಗಲು ವಿಪ್ರನು ಕೆಳಗಿಂತೆಂದರು
--------------
ಕಾರ್ಪರ ನರಹರಿದಾಸರು
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ ದುರಿತ ಘನತತಿ ಮರುತ ಶ್ರೀ ರಘುದಾಂತ ತೀರ್ಥರ ಕರಜ ಶ್ರೀ ರಘುವೀರ ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ ಧರೆಯೋಳ್ ಸುಂದರ ಸುರಪುರದಿ ಜನಿಸಿ ಗುರು ವಿಠ್ಠಲಾರ್ಯರ ಚರಣಾನುಗ್ರಹದಿ ವರ ಶಬ್ದ ಶಾಸ್ತ್ರವ ತ್ವರದಿ ಕಲಿತು ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ ಭರಿತ ಪಾವನ ಚರಿತರಂಘ್ರಿಯ 1 ಹೇಮಾಲಂಕೃತ ರತ್ನನಿಚಯಯುಕ್ತ ಹೇಮ ಮಂಟಪದಿ ಸುಂದರ ಶುಭಕಾಯಾ ಶ್ರೀ ಮನೋಹರ ಕವಿಗೇಯಾ ಬ್ರಹ್ಮ ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ ಭೂಮಿ ಸುರಜನ ಸ್ತೋಮಕನುದಿನ ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ ತಾಮರಸವನು ನೇಮದಿಂದರ್ಚಿಪರ ಶುಭಪದ2 ಪರಿಶೋಭಿಸುವ ಕಾಷಾಯ ವಸ್ತ್ರ ವರನಾಮ ಮುದ್ರಾಲಂಕೃತ ತನುಸಿರಿಯ ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ ವಿರಚಿಸಿದರು ನವರತುನ ಮಾಲಿಕೆಯ ಧರಣಿಯೊಳು ಸಂಚರಿಸುತಲಿ ಬಲು ಕರುಣದಿಂದಲಿ ಶರಣು ಜನರಘ ಭವ ಭಯಹರಣ ಗುರುವರ ಚರಣಯುಗಲವ3 ವಿನುತ ಸಮೀರ ಕೃತ ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ ಘೋರ ಸಂಸೃತಿ ಭಯದೂರ ಮಾಡಿ ತೋರಿ ಸನ್ಮಾರ್ಗ ದೀಪಿಕೆಯ ಸುಸಾರ ಸೇರಿದವರಘ ದೂರ ಪರಮೋದಾರ ಗುಣ ಗಂ- ಸೂರಿಜನ ಪರಿವಾರನುತ ಜಿತ- ಮಾರ ಶ್ರೀ ರಘುವೀರ ತೀರ್ಥರ 4 ಶೇಷಾಚಲದಿ ಶಿಷ್ಯಗಣದಿ ಬಂದ ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು ವೀಶಗಮನ ಸುರೇಶ ಭಕುತರ ಸಿರಿ ನರಕೇಸರಿಗೆ ಪ್ರಿಯದಾಸ ಕೊಡಲಿವಾಸ ಕರ್ಮಂದೀಶರಂಘ್ರಿಯ 5
--------------
ಕಾರ್ಪರ ನರಹರಿದಾಸರು