ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ನಿಂನನು ಅಂಬುಜಲೋಚನ ಅಂಬುಜೋದ್ಭವ ಪಿತ ಅಂಬುಜ ರಮಣಾ ಪ ಹಲವು ಯೋನಿಗೆ ಬಿದ್ದು ಬಲೆ ದಾಟಿ ಬಂದೇ ಬಳಲುತ್ತ ಪರಿಪರಿ ದುಃಖಗಳಿಂದ ಬಲ್ಲವಿಲ್ಲ ಸಹಿಸಲು ಭವರೋಗ ವೈದ್ಯನೇ ವಲಿದೆನ್ನ ಪಾಲಿಸೋ ಸಾನುರಾಗದಲೀ 1 ಏನು ಮಾಡಲಿ ನಿಂನ ಚರಣ ಸೇರಲಿಕೇ ಹೀನ ಪಥವ ಪಿಡಿದು ಕಡು ನೊಂದೆನಯ್ಯ ಗಾನ ಲೋಲನೆ ಭಜಿಪ ಭಾಗ್ಯವ ಕೊಡಬೇಕು ನೀನೇ ಗತಿಯೆಂದು ಯಾದವ ಪತಿಯೇ 2 ಕತ್ತಲೆಯಾವರಿಸಿತು ದೇಶವೆಲ್ಲವ ಬತ್ತಲೆಯಾಗಿ ನಿಂತರು ಮೂಢಜನರು ಮೃತ್ಯು ತುತ್ತಿಗೆಯಂನ ಕೊಡದೆ ಕತ್ತಲೆ ನೀಗಿಆತ್ಮ ಜ್ಞಾನವ ನೀಡೋ ಚನ್ನಕೇಶವನೇ3
--------------
ಕರ್ಕಿ ಕೇಶವದಾಸ
ಸುಗುಣಾಬ್ಧಿಯತಿ ರಾಯಾ ನಿನ್ನಯ ಪಾದಯುಗಳ ನಂಬಿಹರಯ್ಯ ಪ. ನೀನೆಲ್ಲಿಯಿರುವೆಯೊ ತಾನಲ್ಲಿ ಬರುವನು ಶ್ರೀನಿವಾಸನು ದಯದಿ ಯೀ ನುಡಿ ನಿಜವೆಂದು ಧ್ಯಾನಿಸುವದಕನುಮಾನವಿಲ್ಲವು ಜಗದಿ ಭಾನುತನುಜನ ತ್ರೇತೆಯೊಳು ಪರಮಾನುರಾಗದಿ ಪೊರೆದವನು ಕ ರ್ಣಾನುಜನ ದ್ವಾಪರದಿ ಸೇರಲಿಕೇನುಫಲ ಪವಮಾನ ಪೇಳೆಲೊ 1 ಇದರಿಂದ ನಿನ್ನಯ ಪದ ಕಮಲವ ಸೇರಿ ಬದುಕುವೆನೆಂಬಾಸೆಯಾ ಹೃದಯದಿ ದೃಢವಾಗಿ ವಹಿಸಿರುವೆನು ಬೇಗ ಒದಗಿ ರಕ್ಷಿಸು ಭಾಷೆಯ ಹರಿಯು ಕೃಪೆ ಮಾಡುವಂದದಿ ಜಲನಿಧಿ ಸೇರುವಂದದಿ 2 ಮಂದಮತಿಯ ಮತದಿಂದ ಸಂಗರದೊಳಗಿಂದ್ರಾರಿತವಕ- ದಿಂದಾ ಮಹಾಸ್ತ್ರವ ಬಂಧಿಸೆ ಬೇಗದಿಂದಾ ಆ ಲಂಕೆಯಿಂದಾ ಒಂದೇ ಹಾರಿಕೆಯಿಂದಾಲೌಷಧಿ ತಂದು ಹರಿಗಳ ಕಾಯ್ದ ಪೂರ್ಣ- ನಂದ ರಾಮಾವತಾರಿ ಶೇಷಗಿರೀಂದ್ರ ಕರುಣವ ಸೂರೆಗೊಂಡಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ