ಕರುಣಾನಿಧಿ ಸುರವರ ಗುಹ ಶರಜಾ ಪರಮಪುರುಷ ಅಘಹರ ನೀನೆ ಶರಜಾ ಪ
ನಿಗಮ ವಜ್ರ ಶರಜಾ | ಅಗಜೆಯ ಮೋಹದ ಮಗ ನೀನೆ ಶರಜಾ 1
ಇಂದುವದನ ಅರವಿಂದೇಕ್ಷಣ ಶರಜಾ |ವೃಂದಾರಕ ಕುಲ ಮಂದಾರ ಶರಜಾ |ಕಂದರ್ಪ ಶತರೂಪ ಸುಂದರ ಶರಜಾ | ನಂದಿಧ್ವಜ ಜನಪ್ರಿಯ ಕಂದನೆ ಶರಜಾ 2
ವಾಸವ ವಂದ್ಯ ಸರ್ವೇಶನೆ ಶರಜಾ ಆಶಾದಿ ರಹಿತ ವಲ್ಲೀಶನೆ ಶರಜಾ ದಾಸ ಜನರ ಸದಾ ಪೋಷಕ ಶರಜಾ ವಾಸ ಪಾವಂಜೆ ಸೇನೇಶನೆ ಶರಜಾ 3