ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಮೂರುತಿ ಎನ್ನ ರಕ್ಷಿಸೈ ಕಾರುಣ್ಯನಿಧೆ ಸಿರಿ ಕೃಷ್ಣಮೂರುತಿ ಎನ್ನ ರಕ್ಷಿಸೈ ಪ ನಾಗೇಂದ್ರಶಯನನೆ ನಾಗೇಂದ್ರ ಮರ್ದನನೆ ನಾಗೇಂದ್ರಗೊಲಿದವನ್ಹಾಗೆ ನಾನಲ್ಲವೇನೊ 1 ತಾಪಸಸತಿ ಶಿಲಾರೂಪವ ಪೊಂದಿರಲು ಶಾಪ ಬಿಡಿಸಿ ಅವಳ ಕಾಪಾಡಲಿಲ್ಲವೇನೊ 2 ಆ ನೀಚನಿಂದ ಯಜ್ಞಸೇನೆಗೆ ಬಂದ ಮಾನ ಹಾನಿ ತಪ್ಪಿಸಿ ಅಭಿಮಾನಿಸಿ ರಕ್ಷಿಸಿದ 3 ಇಂದಿರೆಯರಸನೆ ವಂದಿಸಿ ಬೇಡುವೆನೊ ಎಂದಿಗು ಎನ್ನ ಹೃದಯಮಂದಿರ ಬಿಡದಿರೊ 4 ವರನಾಮಗಿರಿ ಸಿರಿನರಹರಿಮೂರುತಿಯ ಚರಣಸೇವಕನೆಂದು ಕರುಣ ಎನ್ನೊಳಗಿಟ್ಟು 5
--------------
ವಿದ್ಯಾರತ್ನಾಕರತೀರ್ಥರು
ಧೀರ ಕುಮಾರ ಮಾರಾವತಾರ ಪಾಹಿ ತ್ರ್ಯಂಬಕನ ಕುಮಾರ ಪ ನಿನ್ನಲಿ ದೇವಸೈನ್ಯದ ಭಾರ ಗಿರಿಜಾದೇವಿಯ ಮೋಹದ ಕುವರ ಪೊರೆಯೊ ಎನ್ನನು ಕರುಣಾಸಾಗರ 1 ಅಮರಸೇನೆಗೆ ನೀನಗ್ರೇಸರ ಭೂಸುರ ಹತ್ಯಾ ಪಾಪಸಂಹಾರ ನಮಿಸುವರಿಗಿಷ್ಟ ಫಲವೀವ ವೀರ 2 ವಿಪ್ರಜನರಿಗತಿಪ್ರಿಯ ವಲ್ಲೀಸೇನೆಗೆ ಪ್ರಾಣಪ್ರಿಯ ಚಕ್ರಾಭಿಮಾನಿ ಮೂರುತಿಯಾಗುತಿರುವಿ 3
--------------
ವಿಶ್ವೇಂದ್ರತೀರ್ಥ
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
--------------
ಶ್ರೀಪಾದರಾಜರು