ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಪರಾಧವ ಮನ್ನಿಸಿ ಪೊರೆ ಸುಪ್ರ- ಸನ್ನ ಕುಮಾರ ದೇವ ಪ ನಿನ್ನಂಥ ಕರುಣಾಳು ಇನ್ನಿಲ್ಲ ಲೋಕದೊ-ಳೆನ್ನನುದ್ಧರಿಸು ದೇವಾಅ.ಪ ನೀರಜನೇತ್ರ ಮಯೂರವಾಹನ ಭಕ್ತೋ-ದ್ಧಾರ ಶಂಕರನ ಸುತಾ | ಶೂರಾಖ್ಯ ಪೂರ್ವಸುರಾರಿಗಳಂತಕ ಮಾರನಾಕಾರದಾತಾ , ಪುನೀತಾ 1 ಕಂಬು ಕಂಧರಶರಜ ಮು-ಕುಂದನ ಸಖ ಚಿದ್ರೂಪ ಪ್ರತಾಪ 2 ಈಶನ ಸುತ ಕಮಲಾಸನಾರ್ಚಿತ ರವಿ-ಭಾಸ ಸೇನಾನಿ ಧೀರಾ ದೋಷರಹಿತ ಪಾವಂಜೇಶನೆ ತವಪಾದ ದಾಸರ ಕುಲ ಉದ್ಧಾರ | ಗಂಭೀರ 3
--------------
ಬೆಳ್ಳೆ ದಾಸಪ್ಪಯ್ಯ
ಕರ ಮುಗಿವೆ ಶರಜನೇ ಪ ಕರಗಳ ಮುಗಿವೆನು ಕರುಣಿಗಳರಸನೇ ಕರಮುಗಿವೆ ಅ.ಪ ಕಾಲಕಾಲನ ಪ್ರಿಯ ಬಾಲ ಕುಮಾರ | ಶೀಲ ಸುಗುಣ ರತ್ನಾಮಾಲ ಗಂಭೀರ | ಕರಮುಗಿವೆ 1 ಬೆನಕನನುಜ ಗುಹ ದಿನಪನ ತೇಜಾ ರಣದÀಲಿ ಸೇನಾನಿ ಸನಕಾದಿ ಪೂಜಾ | ಕರಮುಗಿವೆ2 ಚರಣ ದಾಸರಿಗಿಷ್ಟ ಕರುಣಿಸಿ ಕೊಡುವಾ ಸುರವರ ಪಾವಂಜೆ ಪುರದ ಶ್ರೀ ದೇವಾ | ಕರಮುಗಿವೇ 3
--------------
ಬೆಳ್ಳೆ ದಾಸಪ್ಪಯ್ಯ
ನಲಿಯುತ ನಲಿಯುತ ಬಂದನೆ | ವಿಶ್ವಾ - ವಳಿಯ ಪಾಲಿಪ ಶಿವನ ಕಂದನೆ ¥ ಪಾವಕನೊಳು ಬೆರೆತಿದ್ದನೆ - ದಿವಿ -ಜಾವಳಿ ನುತಿಸಲು ಎದ್ದನೆ - ನಿಗ - ಮಾವಳಿ ಪೊಗಳುವ ಸೇರಕೋದ್ಧಾರನು ನಲಿಯುತ 1 ಸೇನಾನಿ ಪದವಿಯೊಳೆದ್ದನೆ - ಸುರರ ಸೇನೆಯ ನೊಡಗೂಡಿ ಪೋದನೆ - ಧುರದಿ ದಾನವರೆರೆಯನ ಗೋಣನು ತರಿದೊಟ್ಟಿ ನಲಿಯುತ 2 ಅಘ ನಾಶ ಪಾವಂಜೆಯೊಳ್ ನಿಂದನೆ - ರವಿ ಭಾಸ ಕಾರ್ತಿಕೇಯ ದಾಸರ ಪೊರೆಯಲು ನಲಿಯುತ 3
--------------
ಬೆಳ್ಳೆ ದಾಸಪ್ಪಯ್ಯ