ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕೀರಮಣ ಪೇಳು ರಘುಪತಿಯೆ ಪ ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ 1 ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆಮೃಢ ನಿನ್ನ ಸಖನಾದನೆಂಬ ಸಿರಿಯೆಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆದೃಢವಾಗಿ ಹೇಳೆನಗೆ ದೇವಕೀ ಸುತನೆ2 ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆಕಾಮ ನಿನ್ನ ಸುತನಾದನೆಂಬ ಸಿರಿಯೆಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ 3 ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆಹನುಮ ನಿನ್ನ ಬಂಟನಾದನೆಂಬ ಸಿರಿಯೆಬಿನುಗು ದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆಅನುಮಾನ ಮಾಡದೆ ಪೇಳೊ ನರಹರಿಯೆ 4 ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿಪಂಥವೇ ನಿನಗಿಚಿದು ಆವ ನಡತೆಕಂತುಪಿತ ಕಾಗಿನೆಲೆಯಾದಿಕೇಶವ ರಂಗಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ5ಚಿ
--------------
ಕನಕದಾಸ
ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ಪ. ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು ಬಾಧಿಪ ಖಳನುದರ ಸೀಳ್ದಗೆ ಸರಿದೋರು ಪಾದನಖದಿ ಬೊಮ್ಮಾಂಡವನೊಡೆದನ ಸಾರು ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1 ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು ಖ್ಯಾತ ದಿಗಂಬರದೇವನ ಕುಶಲವ ನೋಡು ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2 ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ ಕನಸಿನೊಳಾದರು ಪೋಗದಿರಧಮರ ಬಳಿಗೆ ಗು- ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3
--------------
ವಾದಿರಾಜ
ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ. ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ 1 ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ2 ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ 3 ಶೋಣಿತ ಶೂನ್ಯರಿವತೆಂದ್ಹೊಡಿ4 ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ 5 ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ 6 ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ 7 ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ 8 ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ 9
--------------
ತಂದೆವರದಗೋಪಾಲವಿಠಲರು
ಮಂಗಳಂಜಯಮಂಗಳಂ ಪ.ವಾತಸುತ ಹನುಮನ ಒಡೆಯಗೆ ಮಂಗಳದಾತ ಶ್ರೀ ರಘುಪತಿಗೆ ಮಂಗಳ ||ಸೇತುವೆಗಟ್ಟಿದ ರಾಯಗೆ ಮಂಗಳಸೀತಾರಮಣಗೆಶುಭಮಂಗಳ1ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರಹಲ್ಲ ಮುರಿದವಗೆ ಮಂಗಳ |ಕಲ್ಲಾದಹಲ್ಯೆಯನುದ್ಧಾರ ಮಾಡಿದಬಲ್ಲಿದದಾಶರಥಿಗೆ ಮಂಗಳ2ಹರಧನು ಮುರಿದ ವಿನೋದಿಗೆ ಮಂಗಳವರದ ತಿಮ್ಮಪ್ಪಗೆ ಮಂಗಳ ||ಪುರಂದರವಿಠಲರಾಯಗೆ ಮಂಗಳಸರುವೋತ್ತಮನಿಗೆ ಶುಭಮಂಗಳ 3
--------------
ಪುರಂದರದಾಸರು
ಲಾಲಿ ತ್ರಿಭುವನಪಾವನಲಾಲಿ ಪ.ಗೋವಳ ಕುಲದೊಳು ಪುಟ್ಟಿದಗೆಲಾಲಿ <?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗೋವರ್ಕಳನು ಸಲಹಿದೆಗೆಲಾಲಿ ||ಗೋವುಗಳನೆಲ ಕಾಯ್ದವಗೆಲಾಲಿಗೋವಿಂದ ಪರಮಾನಂದಗೆಲಾಲಿ..............ಲಾಲಿ1ನಖದಲಿ ಗಂಗೆಯ ಪಡೆದಗೆಲಾಲಿಶಕಟನ ಮುರಿದು ಒತ್ತಿದವಗೆಲಾಲಿ ||ಅಖಿಳ ವೇದಂಗಳ ತಂದಗೆಲಾಲಿರುಕುಮಿಣಿಯರಸ ವಿಠಲನಿಗೆಲಾಲಿ...........ಲಾಲಿ2ಗಗನವ ಮುರಿದು ಒತ್ತಿದಗೆಲಾಲಿನಿಗಮಗಳನು ತಂದಿತ್ತಗೆಲಾಲಿ ||ಹಗೆಗಳನೆಲ್ಲರ ಗೆಲಿದಗೆಲಾಲಿಜಗವನು ಉದರದಿ ಧರಿಸಿದಗೆಲಾಲಿ........ಲಾಲಿ3ಬೊಟ್ಟಿಲಿ ಬೆಟ್ಟವನೆತ್ತಿದಗೆಲಾಲಿಮೆಟ್ಟಿಲಿ ಭೂಮಿಯನಳೆದಗೆಲಾಲಿ ||ಜಟ್ಟಿಗರನೆಲ್ಲ ಗೆಲಿದಗೆಲಾಲಿಕಟ್ಟುಗ್ರ ಶ್ರೀ ನರಸಿಂಹಗೆಲಾಲಿ......................ಲಾಲಿ4ಶರಧಿಗೆ ಸೇತುವೆಗಟ್ಟಿದಗೆಲಾಲಿಸುರರ ಸೆರೆಯನು ಬಿಡಿಸಿದಗೆಲಾಲಿ ||ಕರಿಮೊರೆಯಿಡಲು ಬಂದೊದಗಿದಗೆಲಾಲಿವರದ ಪುರಂದರವಿಠಲಗೆಲಾಲಿ...........ಲಾಲಿ5
--------------
ಪುರಂದರದಾಸರು
ವಾಯುಕುಮಾರಗೆ ಮಂಗಳ - ರಘು - |ರಾಯಸೇವಕಗೆ ಮಂಗಳ ಪ.ಅಂಜನಿಗರ್ಭಸಂಜಾತಗೆ ಮಂಗಳ |ರಂಜಿತ ದಿವ್ಯ ಮೂರ್ತಿಗೆ ಮಂಗಳ ||ಮಂಜುಳ ಕೀರ್ತಿ ಮಾಹತ್ಮ್ಯಗೆ ಮಂಗಳ |ಸಂಜೀವರಾಯಗೆ ಮಂಗಳ 1ದನುಜನಿಕರ ಸಂಹಾರಗೆ ಮಂಗಳ |ಜಾನಕಿಶೋಕ ವಿನಾಶಗೆ ಮಂಗಳ ||ವನಧಿ ವಿರೋಧಿಗೆ ಮಂಗಳ ಜಯ |ಹನುಮವಿಲಾಸಗೆ ಮಂಗಳ 2ಸೇತುವೆಗಟ್ಟಿದಾತಗೆ ಮಂಗಳ |ಸೀತೆಯ ತಂದ ಬಂಟಗೆ ಮಂಗಳ ||ಖ್ಯಾತ ಪುರಂದರವಿಠಲನ ಕರುಣೆಗೆ |ಪಾತ್ರನಾದ ಭಕುತೆಗೆ ಮಂಗಳ 3
--------------
ಪುರಂದರದಾಸರು