ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸೇವಿಸಿದೆ ಗುರು ಯೆಲೊ ಮಾರುತಿ | ಭಾನು ವಂಶೋತ್ತಮನೆ ನಿರುತ ಧಾರ್ಮಿಕನೆಂದು ಪ ಉದಧಿ | ಭೀತಿ ಇಲ್ಲದೆ ಹಾರಿ ಲಂಕಾಪುರವ ದಹಿಸಿ | ಸೀತೆ ವಾರ್ತೆಯ ತÀಂದು ಪೇಳಿದಕೆ ಸುಫಲಾ 1 ವನಧಿ ಭೂತಳವ ತಿರುಗಿ ಪ್ರತಾಪದಿಂದ | ಗೋತುರೋನ್ನತ ತಂದು ತಡಿಯದೆ ಪ್ರಖ್ಯಾತದಿ | ಸೇತುವಿಯ ಕಟ್ಟಿ ಕುಣಿದಾಡಿದದುಕೇನು ಫಲಾ 2 ಅಂದು ವಿಂಶತಿ ಹಸ್ತ ರಣದೊಳಗೆ ರಥವೇರಿ | ಬಂದಿರಲು ನೋಡಿ ಈ ಧನುರ್ಧಾರಿಯಾ ನಿಂದು ಚಾಲ್ವರಿದು ಬೊಬ್ಬಿರಿದದುಕ್ಕೇನು ಫಲಾ 3 ಒಂದೇ ಹಾರಿಕಿಯಲಿ ಜಿಗಿದು ಕುಪ್ಪಳಿಸಿ ನೀ | ಗಂಧಮಾದನಗಿರಿಯ ಕಿತ್ತು ತಂದು | ಅಂದದಲಿ ದೇವತತಿ ಕೊಂಡಾಡುತಿರೆ ಕಪಿ | ವೃಂದವೆಬ್ಬಿಸಿ ಖಳರ ಮಡುಹಿದದುಕ್ಕೇನು ಫಲಾ 4 ಅಪರಿಮಿತ ಉಪಕಾರ ಮಾಡಿದಲ್ಲದೆ ನಿನ್ನ | ಕೌಪೀನ ಬಿಡಿಸಲಿಲ್ಲಾ | ವನಧಿ ನಿಜವೆಂದು ತುತಿಸಿದದುಕ್ಕೇನು ಫಲಾ 5
--------------
ವಿಜಯದಾಸ
ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ. ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ 1 ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ 2 ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ 3 ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ 4 ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ 5
--------------
ಮೋಹನದಾಸರು
ವಿಠ್ಠಲನ ಪದವನಜ ತುಂಬೆ ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ ಪ ಜ್ಞಾನ ಭಕುತಿ ವೈರಾಗ್ಯದಲಿ ಜಾಣ ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ ಮಾನಸದಲಿ ಹರಿಯ ಧ್ಯಾನ ಮಾಡುವ ಆನಂದಮತಿ ವಿಮಲ ಸರ್ವವಿಧಾನ 1 ಮಾತುಮಾತಿಗೆ ನೆನೆಸಿದವರ ಭವದ ಮಾಯಾ ಸೇತುವಿಯ ಕಡಿದು ಸಂತತವಾಗಿ ಸಹಾಯಾ ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ ಪುರಂದರ ರಾಯಾ 2 ವಜ್ರ ಪಂಜರಾ ಕೂವಾದಿ ಮತಹರ ನಂಬಿದವರಾಧಾರ ಪಾವಮಾನಿಯ ಮತದಲಿಪ್ಪ ಮನೋಹರ ಶ್ರೀ ವಿಜಯನಗರ ಮಂದಿರದೊಳಗುಳ್ಳ ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ 3
--------------
ವಿಜಯದಾಸ