ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉಡುಪಿಯ ಅನಂತೇಶ್ವರ) ಚಿಂತಾಂಬುಧಿ ನಿ:ಶೇಷ ವಿಶೇಷಾನಂತೇಶ್ವರ ಕರುಣಾಂಬುಧಿಯೇ ಮನದಿರವೆಂತಿಹುದೆನಗೆಂಬುದ ದೊರೆಯೆ ಪ. ಸಂತತ ಸಂಸ್ಕøತಿ ಚಕ್ರದಿ ತಿರುಗುವ ಭ್ರಾಂತ ಜನರಿಗೀ ಜಗದಲ್ಲಿ ಸಂತತಿ ಸಂಪತ್ಪ್ರಮುಖ ಸುಖಾಶಾ ತಂತುಬಂಧ ಬಿಟ್ಟಿಹುದೆಲ್ಲಿ ಅಂತರಂಗ ಭಕ್ತರ ತಾನಾಗಿಯೆ ಸಂತೈಸುವ ಮಹ ಬಿರುದೆಲ್ಲಿ ಮನೋಗತವೆಂತಿಹುದೆಂಬುದ ನೀ ಬಲ್ಲಿ 1 ನಿನ್ನೊಲುಮೆಯಲೀ ಪರಿಪೂರಿಸಿಕೊಂಡಿಹ ಕಥೆಗಳನು ತೋರಿದಂತೆ ಪೇಳಿರುವುದನು ತೋರು ತಡೆಯದಿರು ತತ್ವವನು2 ಸಾಂದ್ರಸುಧಾಕರ ಸೇಚನದಿ ಸಾಂದ್ರ ನಿನ್ನ ಕರುಣಾರಸದಿ ಸಕಲೇಂದ್ರಿಯ ತೃಪ್ತಿಯಬಡಿಸುತಲಿ ಧರೇಶ ನೀ ತ್ವರಿತದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ರಾಘವೇಂದ್ರರು ಈ ಪದಾರಾಧಾನಾ, ಪಾವನ ಮಹಾ ಪಾವೇಭ ಸಂಚಾನನಾ ಪ ತಾಪತ್ರಯ ಹರ, ರಾಘವೇಂದ್ರರ ಬಹುಪದವ್ಯಾಪಾರನಾ, ಅನುದಿನಾ ಅ.ಪ. ದುರಿತ ರೇಣು ಮುಂತಾದ ತೃಣಪ ರಕ್ಷಿಪಗಿಡು ತೃಣ ಪರಿಹಾರವಿದೆ, ನಾಘಾದೆ 1 ಅಂಧ ಬದಿರ ಮೂಕರು ಸೇವಿಸುತ ನಂದಾಗಳೇರುವರು ವೃಂದಾವನ ಸೇವೆ, ಗೈದು ವಂದಿಸಿ ದಿವ್ಯ ಕಂದನ್ನೆತ್ತಾಡಿಸಿರೋ, ಜೋ ಎನ್ನಿರೊ 2 ಕುಪ್ಠ ಭಗೇಂದ್ರಕ್ಷಯಾ, ಬಾಲಗ್ರಹ ದುಷ್ಟ ಪಿಶಾಚಭಯ ಕಷ್ಟ ಓಡಿಸಿ ದಯ ದಯದೃಷ್ಟಿಯಿಂದ ನಿಖಿ- ಳಾಷ್ಠ ವಿಟ್ಟು ಕರೆವಾ, ತಾ ಮೆರೆವಾ 3 ಆರಾಧಿಸುತಲಿ ಬಂದ, ನವಲಗುಂದ ಸಾರಸಿಂದಾರ್ಯರಿಂದ ಕ್ಷೀರ ಸೇಚನ ಮೂವತ್ತಾರು ವರುಷ ಗುರುವಾರ ಮೃಷ್ಠಾನ್ನದಿಂದ, ಆನಂದ 4 ಬಹಳ ಗುಣಗಳ ನೋಡಿ, ಒಲಿದು ಒಲಿದು ಮಂತ್ರಾ ಲಯದೊಳು ನಿಂತು ಶೀಲ ಸಂಪತ್ತಿಗೆ ಒಲಿದಿಹ ರಾಜ ಗೋಪಾಲ ಭಕ್ತರ ಚಯಾ ಆಶ್ಚರ್ಯ ಶ್ರೀರಸ್ತು5
--------------
ರಾಜಗೋಪಾಲದಾಸರು
ಸ್ವಾಂತವ ತೊಳೆಯುತಲಿರಬೇಕು ಶಾಂತಿನಿಕೇತನವಾಗುವ ತನಕ ಪ ಶಾಂತ ಮೂರುತಿ ಶ್ರೀಶಾಂತನು ತನ್ನ ಏ ಕಾಂತ ಮಂದಿರವೆಂದೊಪ್ಪುವ ತನಕ ಅ.ಪ ಕಾಮ ಕ್ರೋಧವೆಂಬೊ ಕಸಗಳನು ನೇಮದಿಂದ ಗುಡಿಸುತಲಿರಬೇಕು ಪ್ರೇಮಜಲದ ಸೇಚನೆ ಮಾಡಿ ಹರಿ ನಾಮಸ್ಮರಣೆ ಧೂಪವ ಕೊಡಬೇಕು 1 ಕಲಿಪುರುಷನ ಓಡಿಸಬೇಕು ತಿಳಿಯ ವೈರಾಗ್ಯ ಭಕ್ತಿಗಳೆಂಬ ತಳಿರು ತೋರಣವ ಕಟ್ಟಲಿಬೇಕು ನಳಿನನಾಭನ ಮನ ಸೆಳೆಯುವ ತೆರದಿ 2 ಕಾಣಲು ಪರಮತತ್ವದ ದಿವ್ಯ ಜ್ಞಾನದ ಜ್ಯೋತಿಯ ಮುಡಿಸಲಿ ಬೇಕು ಜ್ಞಾನ ಸುಖಾದಿ ಸದ್ಗುಣ ನಿಧಿಯು ತಾನೆ ಪ್ರಸನ್ನನಾಗುತ ನೆಲೆಸುವ ಪರಿ3
--------------
ವಿದ್ಯಾಪ್ರಸನ್ನತೀರ್ಥರು