ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡು ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು 1 ಗುರುಗಳನ್ನು ಜರೆದು ಕರೆಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು 2 ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನಯಿಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಬಹು ಹೀನ ನುಡಿವುದು 3 ಅನ್ನವನ್ನು ಇತ್ತವರ ಮುನ್ನ ಬೈಯ್ವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು 4 ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು 5
--------------
ವರಹತಿಮ್ಮಪ್ಪ
ಸಿದ್ದಮಾಡಿಕೊ ಹರಿನಾಮ ಬದ್ಧನಾಗದಲೆ ಶುದ್ಧಬುದ್ಧಿಯು ನಿನ್ನೊಳಿದ್ದ ಸಮಯದಲ್ಲೇ ಪ ಕಿತ್ತಿ ಅರ್ಭಟಿಸುತ ಸುತ್ತಿದ ಮಹ ಧನುರ್ವಾಯ ಪಿತ್ತ ಕಫ ಮೇಲಕ್ಕೆ ಒತ್ತಿಕೊಂಡೊಯ್ದು ಕುತ್ತಿಗೆ ಅಡರಿಕೊಂಡೆತ್ತೆತ್ತ ಬೊಗಳಿಸುವ ಹೊತ್ತಿಗ್ಗೆ ಹರಿನಾಮ ಮತ್ತಾಗಿ ಬರದು 1 ನಾಲಗೆ ಸೆಳೆಯುವುದು ಆಲಿಗಳು ತಿರುಗುವುವು ಮೇಲಕ್ಕ್ಹರಿವುವು ನಯನ ನೀಲಗೊಂಬೆಗಳು ಕಾಲಚಕ್ರನಿಗಂಜಿ ಮಲ ಒಸರುತಿರುವಾಗ ನೀಲಶ್ಯಾಮನ ನಾಮ ನಾಲಗ್ಗೆ ಬರದು 2 ಎಂಟೆರಡು ವಾಯುಗಳ ಕಂಠನಾಳಕೆ ಸೇರಿ ಸುಂಟರಗಾಳ್ಯಂತೆ ಅಂಟಿ ಸುಳಿಸುತ್ತೆ ಮೀಂಟಿ ಕರ್ಣದಿ ಒದರಿ ಹೊಂಟೋಗ್ವ ಸಮಯ ದ್ವೈ ಕುಂಠ ನಾಮವು ತಂಟೆಗೆ ಬರದು 3 ಅಡವು ಬಂದು ಅವಯವ ಕೂಡಿಕೊಳ್ಳಲು ಸೊನ್ನೆ ಕಾಯ ನಾಡಿಗಳು ಕುಂದಿ ನೋಡಿ ಸತಿಸುತರಂ ಮಾತಾಡೇನೆಂದೆನಲಾಗ ರೂಢಿಗೀಶನ ಧ್ಯಾನ ಕೂಡಿ ಬರದಯ್ಯ 4 ಮೂಳನಾಗಿ ಸಮಯ ಹಾಳುಮಾಡಿಕೊಳ್ಳದೆ ಕಾಲನಾಳಿನ ಮಹ ಧಾಳಿಯನು ಗೆಲಿಯೊ ಕಾಲಿಮರ್ದನ ಜಗತ್ಪಾಲ ಶ್ರೀರಾಮನಡಿ ಕಾಲತ್ರದಲಿ ದೃಢದಿ ಮೇಲಾಗಿ ಭಜಿಸಿ 5
--------------
ರಾಮದಾಸರು
ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
--------------
ಪುರಂದರದಾಸರು