ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವನಾರೆ ಮನಸೂರೆಗೈದೋಡುವಾ ನವನೀತ ಮೆಲುವಾತ ಪರಿದೋಡುವಾ ಪ ಸವಿನೋಟ ರಸದೂಟವನೆ ಬೀರುವ ಸುವಿಲಾಸ ಪರಿಹಾಸಗಳ ತೋರುವ ಅ.ಪ ಓರೆನೋಟವ ತೋರುತ ನಲಿವ ಕ್ಷೀರವ ಕುಡಿವ ಬೆರಳಲಿ ಕರೆವ ಕೊರಳಿನ ಹಾರವ ಎಡಬಲಕೆಳೆವ ಕೊರಳನು ಕೊಂಕಿಸಿ ಪರಿಪರಿ ಕುಣಿವ 1 ನೀರಜನೇತ್ರನು ನೀರದ ಗಾತ್ರನು ನಾರಿಯತನುವನು ಬರಸೆಳೆಯುವನು ಚೋರನು ಭವಭಯಹಾರನು ಧೀರನು ಶ್ರೀರಮೆಯರಸನು ಮಾಂಗಿರಿವರನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡಿರೆ ಶ್ರೀ ಕೃಷ್ಣನ ಪ. ಪುಂಡರಿಕಾಕ್ಷ ಪುರುಷೋತ್ತಮನ ಅಂಡಜವಾಹನ ಅಸುರಾಂತಕನ ಅ.ಪ. ಅರುಣ ಕಿರಣ ಸೋಲಿಪ ಚರಣ ವರ ಗೆಜ್ಜೆಯ ಧರಿಶಿಹನ ಕಿರುನಗೆಯಿಂದಲಿ ಬೆರಳಲಿ ಮುರಳಿಯ ಸ್ವರÀ ಊದಿದ ಮುರಹರನ 1 ಸೂರ್ಯ ಕಿರೀಟ ಧರಿಸಿ ಹಾಟಕಾಂಬರಧರ ನಮ್ಮ ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ ನೋಟದಿ ಮನ ಸೆಳೆಯುವನ2 ಅಂಗಿಯ ತೊಡಿಸಿ ಉಂಗುರವಿಟ್ಟು ಅಂಗಳದೊಳು ಬಿಟ್ಟೆನಮ್ಮ ರಂಗ ಶ್ರೀ ಶ್ರೀನಿವಾಸನ ಕಾಣೆ ನಿ ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ 3
--------------
ಸರಸ್ವತಿ ಬಾಯಿ
ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡು ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು 1 ಗುರುಗಳನ್ನು ಜರೆದು ಕರೆಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು 2 ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನಯಿಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಬಹು ಹೀನ ನುಡಿವುದು 3 ಅನ್ನವನ್ನು ಇತ್ತವರ ಮುನ್ನ ಬೈಯ್ವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು 4 ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು 5
--------------
ವರಹತಿಮ್ಮಪ್ಪ
ಕೂಗಿದವರ ಬಳಿ ರಾಗವ ಬೀರುವ ನಾಗಶಯನ ನಮ್ಮ ವೇಣುಗೋಪಾಲ ಪ ನಾಗನ ಕೂಗಿಗೆ ಜಗುಡುತೈದಿದ ತ್ಯಾಗಶೀಲನವ ಗೋಪಿಯ ಬಾಲ ಅ.ಪ ಕರದ ಮುರಳಿಯಲ್ಲಿ ಪರಿಪರಿಗಾನವ ಉರುಳಿಸಿ ನಾಟ್ಯಕೆ ಕಿರುನಗೆದೋರಿ ತರುಣ ತರುಣಿಯರ ಬರಸೆಳೆಯುವ ಮಾಂ ಗಿರಿ ಶಿಖರಾಗ್ರದಿ ಮಹಿಮೆಯ ತೋರಿ1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಟಮಾಯ ಮಟಮಾಯ ದಿಟ್ಟಿಸಿ ನೋಡೆಲೊ ಪ ದುಷ್ಟ ಸಂಸಾರವ ಕುಟ್ಟಿಕುಟ್ಟಿಕೊಂ ದೆಷ್ಟು ಮಾಡಿದರು ಕಟ್ಟಕಡೆಗೆಯಿದು ಅ.ಪ ಕೋಟಿಧನವ ನೀಟಾಗಿ ಗಳಿಸಲೇನು ಸಾಟಿಯಿಲ್ಲದ ಸಂಪತ್ತು ಇರ್ದರೇನು ಕಾಟುಮಾಡಿ ಯಮಗೂಟ ಒದಗಲಾಗ ದಾಟಿ ಹೋಗಬೇಕು ಅಷ್ಟು ಸಂಪದ ಬಿಟ್ಟು 1 ಆನೆಕುದುರೆ ಒಂಟೆ ವಾಹನವಿರಲು ಏನು ನಾನಾಸಿರಿಯು ಮಾನ್ಯ ಮಿರಾಸಿಗಿರಲೇನು ತ್ರಾಣಗುಂಡಿಸಿ ಯಮ ಪ್ರಾಣ ಸೆಳೆಯುವಾಗ ನಾನಾಭಾಗ್ಯ ಬಿಟ್ಟು ತಾನೆ ಹೋಗಬೇಕು 2 ಮಾನಪಾನದಿ ತಾನೆ ಹಿರಿಯನೆನಿಸಲೇನು ನಾನಾಪೊಡವಿಗೋರ್ವ ದಣಿಯಾಗಾಳಿದರೇನು ಪ್ರಾಣೇಶ ಶ್ರೀರಾಮಧ್ಯಾನವೊಂದಿಲ್ಲದಿರೆ ಏನು ಗಳಿಸಿದ್ದೆಲ್ಲ ಹಾನಿಯೆನಿಪುದೆಲೋ 3
--------------
ರಾಮದಾಸರು
ಸಿದ್ದಮಾಡಿಕೊ ಹರಿನಾಮ ಬದ್ಧನಾಗದಲೆ ಶುದ್ಧಬುದ್ಧಿಯು ನಿನ್ನೊಳಿದ್ದ ಸಮಯದಲ್ಲೇ ಪ ಕಿತ್ತಿ ಅರ್ಭಟಿಸುತ ಸುತ್ತಿದ ಮಹ ಧನುರ್ವಾಯ ಪಿತ್ತ ಕಫ ಮೇಲಕ್ಕೆ ಒತ್ತಿಕೊಂಡೊಯ್ದು ಕುತ್ತಿಗೆ ಅಡರಿಕೊಂಡೆತ್ತೆತ್ತ ಬೊಗಳಿಸುವ ಹೊತ್ತಿಗ್ಗೆ ಹರಿನಾಮ ಮತ್ತಾಗಿ ಬರದು 1 ನಾಲಗೆ ಸೆಳೆಯುವುದು ಆಲಿಗಳು ತಿರುಗುವುವು ಮೇಲಕ್ಕ್ಹರಿವುವು ನಯನ ನೀಲಗೊಂಬೆಗಳು ಕಾಲಚಕ್ರನಿಗಂಜಿ ಮಲ ಒಸರುತಿರುವಾಗ ನೀಲಶ್ಯಾಮನ ನಾಮ ನಾಲಗ್ಗೆ ಬರದು 2 ಎಂಟೆರಡು ವಾಯುಗಳ ಕಂಠನಾಳಕೆ ಸೇರಿ ಸುಂಟರಗಾಳ್ಯಂತೆ ಅಂಟಿ ಸುಳಿಸುತ್ತೆ ಮೀಂಟಿ ಕರ್ಣದಿ ಒದರಿ ಹೊಂಟೋಗ್ವ ಸಮಯ ದ್ವೈ ಕುಂಠ ನಾಮವು ತಂಟೆಗೆ ಬರದು 3 ಅಡವು ಬಂದು ಅವಯವ ಕೂಡಿಕೊಳ್ಳಲು ಸೊನ್ನೆ ಕಾಯ ನಾಡಿಗಳು ಕುಂದಿ ನೋಡಿ ಸತಿಸುತರಂ ಮಾತಾಡೇನೆಂದೆನಲಾಗ ರೂಢಿಗೀಶನ ಧ್ಯಾನ ಕೂಡಿ ಬರದಯ್ಯ 4 ಮೂಳನಾಗಿ ಸಮಯ ಹಾಳುಮಾಡಿಕೊಳ್ಳದೆ ಕಾಲನಾಳಿನ ಮಹ ಧಾಳಿಯನು ಗೆಲಿಯೊ ಕಾಲಿಮರ್ದನ ಜಗತ್ಪಾಲ ಶ್ರೀರಾಮನಡಿ ಕಾಲತ್ರದಲಿ ದೃಢದಿ ಮೇಲಾಗಿ ಭಜಿಸಿ 5
--------------
ರಾಮದಾಸರು
ಸ್ವಾಂತವ ತೊಳೆಯುತಲಿರಬೇಕು ಶಾಂತಿನಿಕೇತನವಾಗುವ ತನಕ ಪ ಶಾಂತ ಮೂರುತಿ ಶ್ರೀಶಾಂತನು ತನ್ನ ಏ ಕಾಂತ ಮಂದಿರವೆಂದೊಪ್ಪುವ ತನಕ ಅ.ಪ ಕಾಮ ಕ್ರೋಧವೆಂಬೊ ಕಸಗಳನು ನೇಮದಿಂದ ಗುಡಿಸುತಲಿರಬೇಕು ಪ್ರೇಮಜಲದ ಸೇಚನೆ ಮಾಡಿ ಹರಿ ನಾಮಸ್ಮರಣೆ ಧೂಪವ ಕೊಡಬೇಕು 1 ಕಲಿಪುರುಷನ ಓಡಿಸಬೇಕು ತಿಳಿಯ ವೈರಾಗ್ಯ ಭಕ್ತಿಗಳೆಂಬ ತಳಿರು ತೋರಣವ ಕಟ್ಟಲಿಬೇಕು ನಳಿನನಾಭನ ಮನ ಸೆಳೆಯುವ ತೆರದಿ 2 ಕಾಣಲು ಪರಮತತ್ವದ ದಿವ್ಯ ಜ್ಞಾನದ ಜ್ಯೋತಿಯ ಮುಡಿಸಲಿ ಬೇಕು ಜ್ಞಾನ ಸುಖಾದಿ ಸದ್ಗುಣ ನಿಧಿಯು ತಾನೆ ಪ್ರಸನ್ನನಾಗುತ ನೆಲೆಸುವ ಪರಿ3
--------------
ವಿದ್ಯಾಪ್ರಸನ್ನತೀರ್ಥರು
ನಮಸ್ಕಾರ ಮಾಡುವೆನು ಭಾಸ್ಕರನಿಗೆನಮಸ್ಕಾರ ಮಾಡುವೆನುಪನಮಸ್ಕಾರ ಮಾಡುವೆ ಸಮವರ್ತಿ ತಾತಗೆಕುಮುದವಿರೋಧಿಗೆ ಕಮಲಮಿತ್ರನಿಗೆಅ.ಪತಮವೆಂಬ ಯಾಮಿನಿಯ ನಿವಾರಿಸಿದ್ಯುಮಣಿಶೋಭಿಸೆ ಭೂಮಿಯನಮಿಸಿದ ಭಕ್ತರ ದೋಷನಾಶವಗೈದಅಮಿತ ಮಂಗಳದ್ವಯ ಅಯನ ಆದಿತ್ಯಗೆ1ಉರಗರೂ ಗಂಧರ್ವರು ಅಪ್ಸರ ಸ್ತ್ರೀಯರಧರಣಿಸುರರುಯಕ್ಷರುಪರಿಪರಿಯಲಿ ಬಂದು ಸೇವೆಯನೆಸಗಲುಭರದಿಂದ ಬರದಿ ಸಂಚರಿಸುವರ್ಕಗೆ2ಗಾಲಿ ಒಂದರ ರಥದೀ ಬಂಧಿಸಿದಂಥಏಳಶ್ವಗಳ ಮಧ್ಯದೀಕಾಲಿಲ್ಲದರುಣನು ಸಾರಥಿಯಾಗಿರೇಮೂರ್ಲೋಕವನು ಸುತ್ತಿ ಬೆಳಗುವ ತರಣಿಗೆ3ಮಾಸಕ್ಕೆ ಒಂದೊಂದರ ಸಂಖ್ಯೆಯೊಳ್ರಾಶಿ ಚಕ್ರದಿ ಸಂಚಾರದೇಶದಿ ಪ್ರಾಣಿಗಳಾಯುಷ್ಯವ ಸೆಳೆಯುವದೋಷವರ್ಜಿತ ಕಮಳಸಾಕ್ಷಿ ಮಾರ್ತಾಂಡಗೆ4ಹಿರಣ್ಯರೇತಸ್ಸುಭಾನುನವಗ್ರಹಾ-ದ್ಯರೊಳು ಶೋಭಿಸುತೀರ್ಪನುಧರಣಿಗೆ ಲಕ್ಷಯೋಜನ ದೂರ ತೋರುವಹರ ಗೋವಿಂದ ದಾಸನೊಡೆಯ ಪ್ರಭಾಕರಗೆ ನಮಸ್ಕಾರ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
--------------
ಪುರಂದರದಾಸರು