ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎರಡು ದಿನ ಎರಡು ದಿನ ಸಂಸಾರ ಎರಡು ದಿನಎರಡು ದಿನವೆನ್ನದೇ ಕಡುತಲಿಹೆ ಮನುಜ ಪ ಪೋರತನದಿ ಕುಣಿಯುವುದು ಎರಡು ದಿನನಾರಿ ಹಿಂದೆ ತಿರುಗುವುದು ತಾನು ಎರಡು ದಿನಸೇರಿ ಮನೆಯಗ್ಗಳಿಕೆ ಮೂಡುವುದು ತಾನು ಎರಡು ದಿನಜಾರಿ ಸತ್ಯವು ನಡುಗುವುದು ತಲೆಯು ಎರಡು ದಿನ1 ಸಿರಿಯು ಬಂದು ಹಿಂದಕೆ ಸೆಲೆಯುವುದು ತಾನು ಎರಡುದಿನದೊರೆತನವು ದೌಲತ್ತು ತಾನದು ಎರಡು ದಿನಹಿರಿಯ ಆಕೆಯು ಮನೆಯು ಸೇರಿ ಬಳಲುವುದು ಎರಡು ದಿನತೆರಳುವುದು ದೊಡ್ಡ ಯಾತ್ರೆಗೆ ತಾನು ಎರಡು ದಿನ 2 ಬ್ರಹ್ಮಜ್ಞಾನ 3
--------------
ಚಿದಾನಂದ ಅವಧೂತರು
ಕಂತುಜನಕನ ನೆನೆಯಲೆ ಬರಿದೆ ಮನ ಚಿಂತಿಸಿ ಫಲವಿಲ್ಲಲೇ ಪ ಕುಂತಿಸುತರಪಾಲ ಸಂತಜನರ ಪ್ರೀಯ ಚಿಂತೆಯಳಿದು ನಿಶ್ಚಿಂತೆ ಪಾಲಿಸುವಂಥ ಅ.ಪ ಕೀಳುಯೋಚನೆ ಅಳಿಯೆಲೆ ವೈಕುಂಠನ ಶೀಲತನದಿ ಭಜಿಸೆಲೆ ಮೂಲಮಂತ್ರವ ಕೇಳೋ ನೀಲವರ್ಣನ ಜಪ ಕಾಲನ ಬಾಧೆಯ ಗೆಲಿಸಿ ಪಾಲಿಸುವಂಥ 1 ಕರಿಧ್ರುವರೆಂಬುವರೊ ಹರಿಹರಿಯೆಂದು ಸ್ಥಿರಮುಕ್ತಿ ಪಡೆದಿಹ್ಯರೊ ಹರಿಯೆಂದು ಪ್ರಹ್ಲಾದ ಪರಮಕಂಟಕ ಗೆದ್ದ ಹರಿಯೆಂದು ವಿಭೀಷಣ ಸ್ಥಿರಪಟ್ಟ ಪಡೆದನು 2 ವಾಸನಾದೇಹವಿದು ಶಾಶ್ವತವಲ್ಲ ನಾಶನಹೊಂದುವುದು ಬೇಸರಿಲ್ಲದೆ ಪಠಿಸೀಶ ಶ್ರೀರಾಮನ ಧ್ಯಾಸÀವ ಮರೆಯದಿರು ಹೇಸಿಭವವ ಗೆಲಿಪ 3
--------------
ರಾಮದಾಸರು
ನೆನಿಯಬಾರದೆ ಮನವೆ ಹರಿಯ ನಾಮವ ನೆನವು ಸೆಲೆಗೊಳ್ಳಲಿಕ್ಕೆ ಘನಪದವನೀವ ಸ್ವಾಮಿ ಧ್ರುವ ಅಂತು ಇಂತು ಎಂತು ಎನದೆ ತಂತು ಪಿಡಿದು ತನುವಿನೊಳು ಪಾದ 1 ಶ್ರವಣ ಕೀರ್ತನೆ ಮೊದಲಾದ ನವವಿಧ ಭಕುತಿಯಿಂದ ಸವಿದು ಸವಿದು ಸವಿದುಂಬ ಸಾರವಾದ ದಿವ್ಯನಾಮ 2 ಧನ್ಯ ಧನ್ಯನಾಗೊ ಮನವೆ ನೆನೆದು ಪತಿತಪಾವನನಾಮ ಧನ್ಯಗುರುವಿನ ದಿವ್ಯನಾಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ಮರೆತರತಾಮರ ವಲ್ಲದು ನೋಡಲು | ಅರತರತಾ ಅರವಲ್ಲದು ನಿಜದೊಳು | ಅರಹು ಮರಹು ಎರಡನೇ ಮೀರಿಹ | ಘನದರುವೇ ತಾನಾಗಿ | ಕುರುವಿನೊಳಿರುವಾಗಿಹ ಸ್ವಾನಂದದಿ | ತೆರವಿಲ್ಲದೆ ಸೆಲೆತುಂಬಿ ತುಳುಕುತಿಹ | ಪರವೆಂದೆನಿಸಿದ ಶರಣ ರಕ್ಷಕ | ಗುರು ಮಹಿಪತಿ ಜಯ ಜಯತು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ ಅಂಜುವ ಭವದುರಿತ ಹಿಂಗಿಸುವನು ಧ್ರುವ ಕ್ಲೇಶ ಪರಿಹರಿಸುವನು ಭವ ನಾರಾಯಣೆನಲು ಮೀಸಲು ಮನದಲೊಮ್ಮೊ ಮಾಧವೆಂದೆನಲು ತಾ ಭಾವಿಸುವ ಹೃದಯದೊಳು ಗೋವಿಂದನು ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ ದೋಷ ಛೇದಿಸುವ ಮಧುಸೂದನೆನಲು ಲೇಸುಗೈಸುವ ಜನುಮ ವಾಮನೆನಲು 1 ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ ಹರುಷಗತಿನೀವ ಹೃಷೀ ಕೇಶನೆನಲು ಪಾತಕ ದೂರ ಪದ್ಮಾನಾಭೆಂದೆನಲು ಭಂಜನ ದಾಮೋದರೆನಲು ಸುರಿಸುವ ಅಮೃತವ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವೆನಲು ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು ಅರಹುಗತಿನೀವ ಅನಿರುದ್ದನೆನಲು 2 ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು ನರಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತನೆನಲು ಜರಿಸುವ ದುವ್ರ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು ಕರುಣದಿಂದದೊಗುವ ಗುರುಕೃಷ್ಣನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುದುಕನಾಗಿ ಬದುಕಿ ಫಲವೇನು ತನ್ನಯ ಪ್ರಾಣ ಪದಕವಾ ಕಂಡರಿಯದನಕಾ ಪ ಬದುಕಿ ಸಂಸಾರ ಸೆಲೆಯೊಳು ಅದಕಿದಕೆಂದು ಓಡ್ಯಾಡಿ ಮದಕೆ ಮಾಯೆಯೊಳು ಸಿಕ್ಕಿ ಬದರಿಕೊಳ್ಳುತ್ತಿರುವಾ ಮನುಜಾ ಅ.ಪ. ಸತ್ತು ಹುಟ್ಟು ಹುಟ್ಟು ಸಾವಿಗೆ ಅದಕೆ ತಕ್ಕ ಉತ್ತಮ ಶ್ರೀ ಗುರುಮಂತ್ರವನ್ನು ಚಿತ್ತದಿ ಧ್ಯಾನಿಸದೆ ಮುದಿ ಕತ್ತೆಯಂತೆ ಧರೆಯೊಳಗೆ ವ್ಯರ್ಥವಾಗಿ ಜನಿಸಿ ಮದೋ ನ್ಮತ್ತನಾಗಿ ಇರುವ ಮನುಜಾ 1 ಗುರೂಪದೇಶವನ್ನು ಪಡೆಯದೆ ಸಂಸಾರವೆಂಬ ಶರಧಿಯೊಳು ಈಸಾಡಿ ಬಳಲುತ್ತ ಹರಿಯಧಿಕ ಹರನಧಿಕನೆಂದು ವಾದಿಸುತ್ತ ಪರರ ಬರಿದೆ ನಿಂದಿಸಿ ಹೊಟ್ಟೆಯ ಮಂದ ಮನುಜಾ2 ಪರಿಪೂರ್ಣಾತ್ಮಕನನ್ನು ನೋಡದೆ ಪರಾತ್ಮರ ಗುರು ವಿಮಲಾನಂದನೊಳಾಡದೆ ಮರಗಳಲ್ಲಿ ಹಾರುವವಾ ನರನಂತೆ ಮನದೊಳು ಸಿಕ್ಕಿ ನರಳುತ್ತ ಪ್ರಾಯವು ಹೋದ ನರಿಯಂತೆ ಕೂಗುವ ಮನುಜಾ 3
--------------
ಭಟಕಳ ಅಪ್ಪಯ್ಯ
ಅರಿಯಧಮನ ಸಂಗ ಕರಗಿದ್ದ ಹಿತ್ತಾಳೆಒರೆದು ನೋಡಲು ಬಣ್ಣ ಬರುವುದೇ ಹೇಳಿ ಪ.ಮಂಜುನೀರನೆ ತಂದು ತಂದನವ ಹದಮಾಡಿಒಂದಾಗಿ ಕೂಡಿ ಪರಿಮಳವ ಬೇಗಹಂದಿಯನು ಕರೆದು ಸೆಲೆ - ಪೊಸಲು ಅದು ತನ್ನಗಂಜಲವ ನೆನೆನೆನೆದು ಹೋಹಂತೆ ರಮಣಿ 1ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿಶ್ವಾನನನು ಕರೆದು ಬಾಯೊಳಗಿರಿಸಲುತಾನದನು ಸವಿಸವಿದು ನೋಡಲರಿಯದ ತನ್ನದನದ ಮೂಳೆಯ ನೆನೆದು ಹೋಹಂತೆ ರಮಣಿ 2ಅಂತರವನರಿಯದಲೆ ಮಿಯಾ ಹೋಗುವುದರಿಂದಅಂತೆ ಇರುವುದೇ ಲೇಸು ಬಹು ಪ್ರೌಢರುಚಿಂತಿತಾರ್ಥವನೀವ ಸುಗುಣ ಪುರಂದರವಿಠಲನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲರೆ 3
--------------
ಪುರಂದರದಾಸರು
ಉಪ್ಪವಡಿಸೆಲೆಲೆ ತಂದೆಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.ಕಮಲಸಖಸೂರ್ಯಮೂಡದ ಮುನ್ನೆ ಮುನಿಜನರುತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರುರಮೆಯರಸ ಯೋಗನಿದ್ರನೆ 1ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲಸುಲಲಿತ ಸ್ವನದಿ ಪಾಡುತಿರೆಸಾರಸಮಯೂರಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತಬಳಗ ಬಲು ತುತಿಸುತಿವೆ ಕೋ 2ಪವಿತ್ರೆಯೆನಿಸುವ ದೇವನದಿ ಯಮುನೆ ಗೋದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿಕಾವೇರಿ ತುಂಗಭದ್ರೆ ಭೀಮಾದ್ಯರೈತರಲುಪಾವನಿಸುತೀರ್ಥಪದನೆ3ಹನುಮಸುರಋಷಿದೇವ ಗಂಧರ್ವ ಕಿಂಪುರಷರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯಸನಕಾದಿ ವಂದ್ಯ ಕೃಷ್ಣ 4ತಮಜಾರಿ ಕೇಳುಮಂದರಪೊರೆಯಲೇಳೈ ವಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳುಕುಮತಿಜನರಿಪುಭವಾಬ್ಧಿತ್ರಾತ ಸುಖಿಯೋಗಿಅಮಲಪ್ರಸನ್ನ ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ನೋಡಬಾರದೆ ಕೃಷ್ಣಾ ಕರುಣದಿನೋಡಬಾರದೆ ಕೃಷ್ಣಹಾಡಿ ಹರಸಿ ನಿನ್ನನೆ ಹೊಗಳುವಪರಿಮಾಡಬಾರದೆ ಹರಿಯೆ ಪ.ಹಾನಿ ಹಿತಗಳನರಿಯೆ ಸುಜ್ಞಾನ ಭಕುತಿಗಳರಿಯೆದೀನ ದೇಶಿಗನುದ್ಧರಿಸೆಲೆ ದೇವಸಾನುರಾಗದಿ ದೇವ 1ಏಸುಜನ್ಮದಿ ಬಂದೆ ನಾಘಾಸಿಯಾದೆನೊ ತಂದೆದಾಸರೊಳು ಆವಕಾಲಭಿಲಾಷೆಯುಳ್ಳ ಶ್ರೀಲೋಲ 2ಏನು ಹೇಳಲಿ ಮನವು ನಿನ್ನಧ್ಯಾನಕೊದಗದು ಕ್ಷಣವುತಾನೆ ಹರಿದಡೆ ಕೇಡು ಅದರಿಂದಪ್ರಾಣನಾಥ ಮುಕುಂದ 3ಕುಂಬಳವು ಕೈಗತ್ತಿ ಕರಾಂಬುಜಕೆ ನಿನಗಿತ್ತೆನಂಬಿದವಗಿನ್ನೇನಾರೆ ಮಾಡಯ್ಯಅಂಬುಜಜ ಸ್ಮರರಯ್ಯ 4ಕಿಂಕರೌಘದೊಳಿಡೊ ನಿಶ್ಶಂಕನೆ ದಯಮಾಡೊಪಂಕಜಾಕ್ಷ ಮುರಾರಿ ಪ್ರಸನ್ನವೆಂಕಟಾದ್ರಿಪಾವನ್ನ5
--------------
ಪ್ರಸನ್ನವೆಂಕಟದಾಸರು