ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ ಕಂತುಪಿತ ತನ್ನ ಕಾಂತೇಯರೊಡಗೂಡಿ | ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ ನಂದಾವ್ರಜದಿ ಇಂದ್ರನೂ | ಕುಪಿತನಾಗಿ | ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ | ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ | ಚೆಂದಾದಿಂದಲೆ ಪೊರೆಯೆ | ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ | ತಂದಿಂದಿರೆಯರಸಗೆ | ಮಿಂದು ಮಧುರಕ್ಷೀರಧಾರೆಯ ಕರೆಯಲು | ನಂದಕುವರಾನಂದವ ಬೀರಿದ 1 ಕಿರಿಯರೊಡನೆ ಕೂಡುತ | ಗೋಪಾಲನು | ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ | ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ | ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು | ಯದುವರನಾಲೈಸುತ ಬರುವರ ಸುಳಿವನು | ಸರಸದಿ ಕಂಡಾಕ್ಷಣದಿಂದೋಡಲು | ಸುರಿದುದು ಶಿರದಲಿ ದಧೀಘೃತಧಾರೆಯು 2 ಕರುಣಾಸಾಗರ ಹರಿಯು | ಮೋಹದಿ ವರ | ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು | ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ | ಹರುಷದಿ ಸುರಿಸಲು ಸುರ ಸಂದೋಹವು | ಪರಿ 3 ಅಂಗಳದೊಳು ಆಡುತ | ಮಂಗಳಮೂರ್ತಿ | ಸಂಗಡಿಗರ ಸೇರುತಾ | ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ | ಗೋಪಿ ರಂಗನ್ನಪ್ಪಿದಳು ಮುದದೀ || ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4 ಸುರನದೀ ಜನಕ ತಾನೂ | ಕುಂಜವನದಿ | ಸರಸಿಜಾಕ್ಷೇರ ಕೂಡುತ | ಸರಸವಾಡುತಲಿರೇ | ಪರಮ ಸಂತೋಷದಿ | ತರುಲತೆಗಳು ಹರಿಯ ಚರಣ ಸೇವೆಯಗೈಯ್ದು | ಕದಳಿಗಳುದುರಿಸೆ | ಗಳಿತ ಫಲಂಗಳು | ಸರಸಿಜನಾಭನು ಕರುಣಿಸಿ ಭಕುತರ | ಶಿರಿಯಾಳಪುರದೊಳು ಮೆರೆದನು ವಿಭವದಿ 5 ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ ಭವ | ಪರಿಪರಿ ನರಳುವ ದಾಸರ ಸಲಹಲಿನ್ನು | ಸಾಸಿರ ಶಂಖದಿ ಪೂಜೆಯಗೊಳುತಿರೆ | ದೇಶದೇಶದ ಜನರಾಲಿಸಿ ಬರುತಿರೆ | ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
--------------
ಶ್ರೀಶ ಕೇಶವದಾಸರು
ಪತಿತಪಾವನ ನಾಮ ಪೂರ್ಣಕಾಮಾ | ಗತಿಯ ಪಾಲಿಸೊ ಎನಗೆ ಗುರುಸಾರ್ವಭೌಮಾ ಪ ಹದಿನಾರು ಸಾವಿರ ಸುದತಿಯರೆಲ್ಲರು | ತ್ರಿದಶವಿರೋಧಿಯ ಸದನದಲ್ಲಿ || ಮದದಿಂದ ಸೆರೆಬಿದ್ದು ಹದುಳ ಕಾಣದೆ | ಸುತ್ತಿಸಿದರು ಮನದೆ ನಾರದನಿಂದ ನಲಿದಾಡಿ1 ಕಾರ್ತಿಕ ಮಾಸದಲಿ ಕಾಂತೆಯ ಒಡಗೂಡಿ | ಕಾರ್ತರಥವನೇರಿ ಕೀರ್ತಿಪುರುಷಾ || ಧೂರ್ತನ ಕೊಂದು ಬಾಲೆಯರಾರ್ತವ ಪರಿಹರಿಸೆ | ತೀರ್ಥಧರಾದಿಗಳು ನರ್ತನದಲಿ ಪೊಗಳೆ 2 ಇಂದುಮುಖಿಯರ ಬಂಧನ ತರಿದವರು | ಅಂದು ಉತ್ಸಾಹದಿಂದ ದ್ವಾರಾವತಿಗೆ || ಮಜ್ಜನ ಮಾಡೆ | ಮಂದಾರ ಮಳೆ ನಭದಿಂದ ಸುರಿಯೆ 3 ದೇವ ಶೃಂಗಾರವಾಗೆ ವೇದಾದಿಗಳು ನಿಂದು | ತಾವೆಲ್ಲ ಮಣಿಭೂಷಣಾವಳಿಯಿಟ್ಟು || ನೋವ ಪೋಗಾಡಿಸಿ ಪಾವನರಾಗಿ ಸುಖ- | ವನಧಿಯೊಳು ಮೀಯುತ್ತ ಕೊಂಡಾಡೆ 4 ನರಕಾಸುರನ ಕೊಂದು ಇರಳು ಈ ಪರಿಯಲ್ಲಿ | ಹರಿಮಾಡಿದ ಚರಿತೆ ತಿಳಿದುದನು- || ಚ್ಚರಿಸಿದವನ ಕುಲ ನರಕದಿಂದುದ್ಧಾರ | ಮೊರೆಹೊಕ್ಕೆ ಇದÀಕೇಳಿ ವಿಜಯವಿಠ್ಠಲರೇಯಾ 5
--------------
ವಿಜಯದಾಸ
ಹರಿ ಎಂಬ ನಾಮ ಎರಡಕ್ಷರವ ದುರಿತ ಕಾನನ ಛೇದ ಪ ವೇದರಾಶೀ ಎಂಬ ಭೂಸುರನು ಯಮಪುರದ ಹಾದಿಯಲಿ ಪೋಗುತಿರೆ ಎಡಬಲದಲಿ ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ 1 ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ ಮೃತ್ಯು ನಡುಗೀ ನಿಂದು ಪೂಜೆ ಮಾಡೀ ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ 2 ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ ಅಂತಕ ಬಂದು ಕಾದೆ ಸ ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ3 ಹದಿನಾರು ಸಾವಿರ ತರುಣಿಯರು ಅಸುರನ್ನ ಸದನದಲಿ ಸೆರೆಬಿದ್ದು ಹರಿಯ ತುತಿಸೇ ಮುದದಿಂದ ಹರಿಪೋಗಿ ಖಳನ ಕೊಂದು ಆ ಸುದತಿಯರಿಗೆ ತನ್ನ ಅಂಗಸಂಗವನಿತ್ತ4 ಕಂಡವರ ಮನೆ ಉಂಡು ಚಾಂಡಾಲರ ಕೂಡ ಮಂಡಲದೊಳಗೆ ಪಾತಕನಾದರೂ ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ ಮುಕುತಿ ಸುರರಿಗಿಂತಲೂ ವೇಗ5
--------------
ವಿಜಯದಾಸ