ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ದಯಮಾಡು ಬಡವಗೆ ಮಹರಾಯ ದಯಾಕರ ವಿಜಯವಿಠಲರಾಯ ಪ ದೃಢದಿಂದಲಿ ನಂಬಿ ಬೇಡುವೆನು ಕೊಡುಗಡ ನಿನ್ನಡಿಭಕ್ತಿಯನು ಕಡುಪೀಡಿಪ ಈ ಜಡಬಡತನದಿಂ ಕಡೆಹಾಯ್ಸೆನ್ನನು ಕಡುದಯದಿಂ ಪೊರೆ 1 ಸೆರೆಗೊಡ್ಡಿ ಬೇಡುವೆ ಮಾಧವ ಕರುಣದಿ ಕರುಣಿಸು ವರವ ಪರಿಭವ ದು:ಖವ ಪರಿಹರಿಸಿ ನಿಮ್ಮ ಸ್ಮರಣೆಯೊಳಿರಿಸೆನ್ನ 2 ಸತ್ಯಭಾಮೆರಮಾಕಾಂತನೆ ಭಕ್ತರ ಕಕ್ಕುಲಾತಿದೇವನೆ ನಿತ್ಯನಿರಂಜನ ಮುಕ್ತಿದಾಯಕ ಉತ್ತಮಮತಿಕೊಡು ನಿತ್ಯಾತ್ಮ ಶ್ರೀರಾಮ 3
--------------
ರಾಮದಾಸರು