ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ. ಫಾಲಲೋಚನನುತ ಶ್ರೀಲೋಲ ನಿನ್ನನೇ ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ 1 ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು ಮೆರೆಯುವ ದಡ್ಡನೆಂದೊರೆದ ಕಾರಣದಿಂದ 2 ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ3 ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ ಚಿತ್ತವಸೆರೆಗೈದ ಮತ್ತನೆಂದೆನಲಾಗಿ 4 ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ ಸುತ್ತುವನಿವನುನ್ಮತ್ತನೆಂದುದರಿಂದ 5 ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ 6 ಕಂದನಿವಗೈದ ಕುಂದುಗಳೆಣಿಸದೆ ತಂದೆ ಸಲಹಯ್ಯ ಶ್ರೀ ಶೇಷಗಿರಿವರ 7
--------------
ನಂಜನಗೂಡು ತಿರುಮಲಾಂಬಾ
ಸನಿಹದಲೆ ದೆಸೆದೆಸೆಗೆ ಪ ಇನಿತುಪಾದಗಳಿಂದ ಅನಿಲನ ಸೋಲಿಸಿ ಅ.ಪ ಕಾಮಕ್ರೋಧಗಳೆಂಬ ನೇತ್ರಗಳಿದಕಿದೆ ವ್ಯಾಮೋಹ ಲೋಚನ ಎಂಬ ಕರ್ಣಂಗಳಿವೆ ದುರ್ಮದವೆಂಬುವ ಪುಚ್ಚವೊಂದಿಹುದಯ್ಯ ಈ ಮದಹಯಕೆ ಮಾತ್ಸರ್ಯ ನಾಸಿಕವಯ್ಯ1 ಮೃಡನು ತಾ ಎಂಬುವ ಕಡಿವಾಣದ ಹಿಡಿ ದೃಢಭಕ್ತಿಯೆಂಬ ಪಾಶ ಕೊರಳೊಳಗಿರಲಿ ಎಡಗೈಯೊಳು ಹರಿಯೆಂಬ ಕೊಳಲನು ಹಿಡಿ ತಡವೇಕೆ ಮನುಜ ಓಡಿ ಹಯವ ತಡಿ 2 ಆಡಲು ನಿಲಬೇಡ ನೋಡಿ ನಲಿಯಬೇಡ ಓಡಾಡಿ ತುರಗವ ಹಿಡಿ ಹಿಡಿ ಮನುಜ ಓಡಿ ಹಯವ ಪಿಡಿದು ಬಂಧಿಸದಿದ್ದರೆ ಕಾಡಿಗೈದಿ ದೊಡ್ಡ ಮಡುವ ಸೇರುವುದು 3 ನರಹರಿಯೆಂಬ ಕುಣಿಕೆಯ ಗೈದು ತ್ವರಿತದಿ ತುರಗದ ಕೊರಳಿಗೆ ಬಿಗಿದು ಕರದೊಳಗಿರುವ ಕಡಿವಾಣ ಒಂದಿಡಿ ನೆರೆ ಭಕ್ತಿಪಾಶದಿ ತುರಗವ ಸೆರೆಗೈ 4 ನಾರಾಯಣಾ ಎಂಬ ನೀರ ಕುಡಿಸುತಲಿ ಶ್ರೀರಮಣ ಎಂಬ ಹುರಳಿಯ ನಿಡುತೆ ಮಾರ[ಮಣ] ಎಂಬ ತೃಣವನೆಣಿಸಿ ದಿವ್ಯಾ ಕಾರದಿ ಮಾಂಗಿರಿರಂಗಗರ್ಪಿಸಿರೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್