ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಚೆನ್ನಿಗರಾಯ ನನ್ನೀನಾಗರ ಏಳು ಪ. ಏಳೆನ್ನ ಕಣ್ಮಣಿಯೇ ಕಾಳಿಮರ್ಧನಕೃಷ್ಣ ಅ.ಪ. ಮಾರನೆಯ ದಿನದಲ್ಲಿ ನೀ ಹಾರುತ್ಯಾರುತ ಬಂದು ಸೀರೆ ಸೆರಗನು ಪಿಡಿದು ಬೆಲ್ಲವನು ಬೇಡಲು ಕೇಳಿಕೊಳ್ಳವುದೇಕೆ ಹಗಲುಗಳ್ಳನೆ ಹೋಗು ಒಳಿತು ಚೋರರಿಗೆಲ್ಲ ಕೇಳಿ ಕೊಳಲೆಂದೆ 1 ಚೋರ ನೀನೆಂದುದಕ್ಕೆ ಈ ಸೀರೆಯನು ಜರಿವರೇ ಚೋರನಲ್ಲವೇ ನೀನು ಮಧ್ವರ ಹೃದಯ ಕದ್ದ 2 ಜಾರ ನೀನೆಂದುದಕೆ ಕರೆಕರೆಗೊಳಿಸುವರೆ ಜಾರೆಯಾಸಹುದು ನೀನಲ್ಲ ಜಾರರಮಣ 3 ಕಂಡದನು ಆಡಿದರೆ ಕಡುಕೋಪವ್ಯಾತಕೆ ಹಿಂಡು ಗೋವಳಲೊಡೆಯ ಪುಂಡನೀನಹುದು 4 ಮಜ್ಜನವ ಮಾಡಿಸುವೆ ಸುಳಿಗುರುಳ ತಿದ್ದುವೆ ಸಜ್ಜಾದ ಚಂದನದ ಚಂದ್ರಮನ ಫಣಿಯಲಿಡುವೆ 5 ಗೊಲ್ಲಬಾಲರು ಈಗ ಕರೆಯಲು ಬರುವರು ಮೆಲ್ಲಗೆ ಎದ್ದು ನೀ ಬೆಲ್ಲವನು ಮೆಲ್ವ ಬಾಲಕೃಷ್ಣ 6 ಮಧ್ವೇಶ ನೀನೇಳು ಮುದ್ದು ಮೊಗದವನೆ ಏಳು ಹದ್ದುವಾಹನ ಏಳೂ ಹಾಲಕುಡಿಯೇಳು 7 ಹಾಲು ಬೆಲ್ಲವ ಸವೆದು ಸುಧೆಯನು ಸುರಿಸೇಳೋ ಪಾಲಗಡಲ ಶಯನ ಶಯನದಿಂದೇಳೋ 8 ಮುನಿಸು ಏಕೇಕೆ ರಮಣ ಮುಸುಕನು ತೆಗೆದೇಳು ತಿನಿಸು ತಿಂಡಿಯ ಕೊಡುವೆ ತನಿವಣ್ಣ ಕೊಡುವೆ 9 ಚಿನ್ನದಾ ಒಂಟೆಳೆಯ ರನ್ನಧಾಭರಣ ಭಿನ್ನ ಭಿನ್ನವಾದ ಆಭರಣಗಳಿಡುವೆ ಕೃಷ್ಣ 10 ಹೆಚ್ಚೇನು ಪೇಳಲಿ ಮಗಸಾಮ್ರಾಜ್ಯದ ದೊರೆತನವು ನಿನ್ನದೊ ಸ್ವಚ್ಚಾಗಿ ಹೇಳುವೆನು ಫಲಿಸೇಳು ಕೃಷ್ಣಾ 11 ಬಾಧಿಸದೆ ಜಾಗವನು ಬಿಟ್ಟೇಳೊ 12 ಏನು ಬಯಸಿದ ಕೊಡುವೆ ಮನಬಯಕೆ ಪೂರೈಸೊ ಮನದನ್ನನೇ ಎನ್ನ ಕಾಳಿಮರ್ಧನಕೃಷ್ಣ 13
--------------
ಕಳಸದ ಸುಂದರಮ್ಮ
ಬಾರೋ ಯಾದವ ಕುಲಚಂದ್ರ ತೋರೊ ಮುಖಾಂಬುಜವ ಕಾರುಣ್ಯ ಪೂರ್ಣನೆ ಬಾರೊ ಯಾದವ ಕುಲಚಂದ್ರ ಪ ಮಾರಾರಿ ದಾನವ ಭೀತಿಯ ಪೊಂದಿರೆ ನಾರೀರೂಪದಿಂದೈದಿ ಪಾಲಿಸಲಿಲ್ಲವೆ 1 ದುರುಳ ದುಶ್ಯಾಸನ ತರಳೆ ದ್ರೌಪದಿ ಸೀರೆ ಸೆರಗನು ಸೆಳೆಯಲು ಕರುಣಿಸಲಿಲ್ಲವೆ 2 ಪಾಲಿಸು ದೇವನೆ ಕಾಲಕಂಧರಪ್ರಿಯ ಬಾಲ ಪ್ರಹ್ಲಾದ ವರದ ಲೀಲಾ ನರಹರಿ ರೂಪ 3 ಮೌನಿ ಮಾನಸಪ್ರಿಯ ಗಾನರೂಪನೆ ಹರೆ ಧೇನುನಗರ ದೊರೆ ಧ್ಯಾನಿಸುವೆನೊ ಶೌರೆ 4
--------------
ಬೇಟೆರಾಯ ದೀಕ್ಷಿತರು
ಬೇಡವೋ ಸ್ತ್ರೀಯರ ವಶದಲಿಬಿದ್ದು ಭವಕೆ ಬೀಳಲಿ ಬೇಡ ಪ ಒನಪುಗಳ ಸುಳ್ಳು ವಾಲಿಗಲು ಸಟೆವೈಯ್ಯಾರ ನಚ್ಚಲಿ ಬೇಡ 1 ಮೋರೆ ಮುರುಕಿ ಪದಮೂಗನೇರಿಸುವುದು ಮುಸುಕನು ನೀ ನಚ್ಚಬೇಡಸೀರೆಯನೊಲೆಯುವುದು ಸೆರಗನು ಸಡಿಲಿಪನಾರಿಯ ನಂಬಲು ಬೇಡ 2 ನರಕದ ಕುಂಡವು ನಾರಿಯೆಂಬವಳು ಸತ್ಯ ನೋಡುತ ನೀ ಬೀಳಬೇಡಕರುಣಿ ಚಿದಾನಂದ ಕಟಾಕ್ಷವನು ಪಡೆ ಕಾಲಗೆ ನೀ ಸಿಕ್ಕಬೇಡ 3
--------------
ಚಿದಾನಂದ ಅವಧೂತರು