ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ ಭವ ನಷ್ಟವಗೈಸೋದು ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ ಯಾಸ ಬಡುತಲಿದ್ದೆ ಲೇಶವಾದರು ಸುಖ ಲೇಶಗಾಣದಿರಲು ಏಸು ಜನ್ಮದ ಪುಣ್ಯ ಸೂಸಿತೋ ನಿನ್ನಯ ದರುಶನ ಲಾಭವಾಗೆ ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ ಈ ಸುಲಭ ವೊಂದಿಸನುದಿನ ದು ರಾಶೆಯ ಬಿಡಿಸೆಂದು ನಾಶರಹಿತ ಗುಣರಾಶಿ ರಮೇಶ 1 ವೇದಪರಾಯಣ ಸಾಧುಗಳರಸಾ ವಿ ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು ನಾದ ಸನಕಾದಿ ಮುನಿವಂದಿತಾ ಮಾಧವ ಮಹಿಧರ ಯಾದವ ಕರುಣ ಪ ಯೋಧದಿ ಎನ್ನಪರಾಧವನೆಣಿಸದೆ ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು ಭೂದೇವರೊಡಿಯಾ 2 ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು ಕರದ ಮಾತಿಗೆ ಭಯಂಕರವ ಓಡಿಸಿ ಮಂದ ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ ನಿತ್ಯ ಕರ ಪತಿ ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ ತೋರಿಸೊ ಭಜಕರರೊಳಗಿಡುವುದು 3
--------------
ವಿಜಯದಾಸ
ದಣಿಯಾ ನೋಡಿದೆ ನಿನ್ನಾ ಪ. ಋಜಗಣದೊಡೆಯನೆ ಬಿಡುವಿಲ್ಲದೆ ನಿನ್ನ ಅಡಿಗಳಿಗೆ ವಂದಿಪೆ ಅ.ಪ. ಮಹದ್ವಾರ ಬಾಗಿಲಾದಲ್ಲಿ ಇರುತಿರುವೋರು ಜಯವಿಜಯರಿಲ್ಲಿ ವಾರವಾರಕ್ಕೆ ನಿನ್ನ ಬ್ರಹ್ಮಾದಿ ದ್ವಿಜರು ಹಾರೈಸಿ ಹರುಷದಿ ಪೂಜೆಗೊಂಬೊರೆ 1 ಯಡಬಲದಲ್ಲಿ ನಿನ್ನ ಮಡದಿಯರಿಂದ ಒಡಗೂಡಿ ಸಡಗರದಲ್ಲಿ ಇಂದಿರೇಶ ಗರುಡವಾಹನೆ ರಂಗಾ ಉರಗಾದ್ರಿನಿವಾಸ ಶೇಷಾಚಲವಾಸ ಶ್ರೀ ವೆಂಕಟೇಶಾ 2 ಸೃಷ್ಟ್ಯಾದಷ್ಟ ಕರ್ತಾ ಶ್ರೀವಿಠಲ ನಿನ್ನಾ ಗುಣಯೆಷ್ಟೆಂದು ವರ್ಣಿಪೆನಾ ಅಷ್ಟ ಮಹಿಷಿಯರ ಆಳದ ಮದವೆಷ್ಟೊ ಕಾಳಿಮರ್ದನಕೃಷ್ಣ ಬಲು ಜೋರಾ ದಿಟ್ಟಾ ಆನಂದ ಕೊಟ್ಟಾ3
--------------
ಕಳಸದ ಸುಂದರಮ್ಮ
ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ ನಾನು ದೃಷ್ಟಿಯಿಂದಲಿ ನೋಡು ಮನಮುಟ್ಟಿ ಭಜಿಸುವೆನು ಸೃಷ್ಟ್ಯಾದಷ್ಟ ಕರ್ತಾ ವಿಠಲಗುಣಶೀಲ ಅಷ್ಟಯತಿಗಳಿಂದ ಇಷ್ಟದಿ ಪೂಜೆಗೊಂಡ ಮದವೋ ಅಟ್ಟಹಾಸದಿಂದಲಿ ಬೆಟ್ಟ ಬೆರಳಿನಿಂದಲಿನೆತ್ತಿದ ಮದವೊ ದಿಟ್ಟಮೂರುತಿ ನಮ್ಮ ಕಾಳೀಮರ್ಧನಕೃಷ್ಣ ಮನೋಭೀಷ್ಟೆಯ ಕೊಡೋ 1 ಇಂದಿರೇಶನೆ ನಿನ್ನ ಒಂದಿನವು ನಾನು ಗೋವಿಂದ ನಿನ್ನಯ ಪಾದಾರವಿಂದವ ಭಜಿಸಲಿಲ್ಲ ಆನಂದ ಮೂರುತಿ ನಿನಗಿಂತ ಸಮಾನ ಅನಿಮಿತ್ತ ಬಂಧುಗಳು ಯನಗಿಲ್ಲ ಎನ್ನಂಥ ಭಕುತರು ನಿನಗನಂತರರಿರುವರು ನಿನ್ನಂಥ ಕರುಣೆ ಇನ್ನಿಲ್ಲ ಜಗದೊಳು ಸರ್ಪಶಯನ ನಮ್ಮ ಕಾಳೀಮರ್ಧನಕೃಷ್ಣ ನಿರುತದಿ ವೊಲಿಯೇ 2 ಸುಂದರಿಯರ ಸೇರಿ ಆನಂದದಿಂದ ಕಳೆದ ಮದವೋ ಸೇವೆಗೊಂಬುವ ಮದವೋ ಸೋಳಸಾಸಿರ ಸುದತಿಯರೊಪ್ಪುವ ಮದವೊ ಮುರಳೀಧರ ನಮ್ಮ ಕಾಳೀಮರ್ಧನಕೃಷ್ಣ ಇಷ್ಟದಿ ಒಲಿಯೆ 3 ಪಾದ ಎಂದಿಗೆ ಲಭ್ಯವೊ ಕಂದನ ನುಡಿ ಕೇಳಿ ಆನಂದ ಪದವಿಯನಿತ್ತು ಮಾನವ ಕಾಯ್ದು ವಸುದೇವ ದೇವಕಿಯ ಬಂಧನವ ಬಿಡಿಸಿದಿ ಆನಂದದಿಂದಲಿ ಅಜಮಿಳಗೊಲಿದು ಮಡುವಿನೊಳಗಿರಲು ಗಜರಾಜ ಮಡದಿಗೆ ಹೇಳದೆ ಗರುಡವಾಹನನಾಗಿ ಬಂದು ಮಕರಿಯನ್ನು ಕೊಂದ ಸಿಂಧುಶಯನ ನಮ್ಮ ಕಾಳೀಮರ್ಧನಕೃಷ್ಣ ಆಪತ್-ಬಂಧೋ 4 ಬಾಲಕತನದಲ್ಲಿ ಏನೇನು ಲೀಲೆಯ ಮಾಡಿದ್ಯೊ ಗೋಪಾಲಕೃಷ್ಣ ಮೂರುತಿ ಎಂದು ವರ್ಣಿಸಲೋ ನಿನ್ನ ಕೀರುತಿ ಗೋವುಗಳ ಕಾಯ್ದುಕೊಂಡು ಎಂದಿಗೆ ಬರುತಿ ನಿನಗೇಕೋ ಇಂಥಾ ಮದವು ಪಾರ್ಥಸಾರಥಿ ಕ್ಷೀರಸಾಗರದಲ್ಲಿ ಲಕ್ಷ್ಮೀ ಸಹಿತವಾಗಿ ಆಲದೆಲೆಯ ಮೇಲೆ ಮಲಗಿರುತ್ತೀ ಥರವಲ್ಲವೋ ನಿನಗಿಂಥ ಮದವು ಬ್ರಹ್ಮಾದ್ಯಮರ ಒಂದಿತ ಮದವು ಜಾರಚೋರ ನಮ್ಮ ಕಾಳೀಮರ್ಧನಕೃಷ್ಣ ಕರುಣಾಸಾಗರ 5
--------------
ಕಳಸದ ಸುಂದರಮ್ಮ