ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡೋ ಭ್ರಾಂತಿ ಜೀವಾ ಬಿಡೋ ಕಾಮ್ಯಸೇವಾ ಅಹಂತಾ ಮಮತ್ವ ಮಹಾಮೂಢಭಾವಾ ಪ ಜಗವನೆಲ್ಲ ಈಶ್ವರನೆ ಸೃಷ್ಟಿಸಿದ ಕೇಳೋ ಇದೋ ನಿನ್ನದೆಂಬುವದು ಏನಿಲ್ಲ ತಾಳೋ ಜಗವ ಸೃಷ್ಟಿಸಿದನಾತ ಪಾಲಿಸುವನಾತ ಇಗೋ ನಾನೆ ಪಾಲಿಸುವೆನೆನ್ನುವದು ವ್ಯರ್ಥ ಭಾರ 1 ನೀ ಧರಿಸಿರ್ದ ದೇಹವಿದ ನೀ ಸೃಷ್ಟಿಸಿದೆಯಾ ಇದೇ ರೀತಿ ಹೆರವರದು ಬಿಡು ನಿನ್ನ ಮಾಯಾ ಇದನು ಪಾಲಿಸುವನಾತನೀಶ್ವರನು ನೋಡಾ ಇದೇ ರೀತಿ ಪಾಲಿಸುವನೆಲ್ಲವನು ನೋಡಾ ಮಹಾ ವಿಶ್ವವೆಲ್ಲ ತಿಳೀ ಈಶಲೀಲಾ 2 ಜಗವ ನಾಶಗೊಳಿಸುವನು ಪ್ರಳಯದಲಿ ಈಶಾ ಮಗುಳೆ ಜಗ ಜೀವರನು ಸೃಷ್ಟಿಸುವ ತಾನೆ ಜಗದಿ ವರ್ಣವಾಶ್ರಮದ ಬಲುಕಾರ್ಯ ಪಾಶಾ ಬಗೆಯಲೀಗ ಪಶುವಿನೊಳು ತಿರುಗಿಸುವನೀಶ ಮಹಾಯೋಗಿ ಶಂಕರನ ಶರಣಾಗೋ ಜೀವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಸಾಕೇತಪುರ ವಾಸಿ ಕಪಟವೇಷ | ಶ್ರೀಕಮಲನಾಭನ ನಖದಲಿ ಕಾಶೀ ಪ ವಿಶ್ವತೋಮುಖ ಬ್ರಹ್ಮ ವಿಶ್ವತೋಚಕ್ಷು | ವಿಶ್ವ ವಿಶ್ವಬಾಹು ವಿಶ್ವರೂಪ ರೂಪ || ವಿಶ್ವ ಬ್ರಹ್ಮಾಂಡ ಆಧಾರ ಕಾರಣ | ವಿಶ್ವೇಶ್ವರ ಪ್ರಾಣ ಮಂತ್ರ ರಾಮ ರಾಮ 1 ಪರಿಯಂತ ರೋಮಕೂಪ | ಅಗಣಿತ ಕಮಲಜ | ಹಸ್ತಿ ಚರ್ಮಾಂಬರರು ಇದ್ದು ನೆಲೆಗಾಣರು | ನಾಸ್ತಿ ವಿಷ್ಣು ಪರದೈವ ಇಹಪರದಲಿ2 ಕಷ್ಟವಿಲ್ಲದೆ ಮಕ್ಕಳಾಟಕೆ ತ್ವರದಿಂದ | ಸೃಷ್ಟಿಸುವ ಕಣ್ಣು ಎವೆ ಹಾಕುವ || ಅಷ್ಟರೊಳನೇಕ ಬ್ರಹ್ಮಾಂಡ ನಾಟಕ | ವಿಷ್ಣು ಕರ್ಮಾಣಿ ಪಶ್ಯತೆ ಪಶ್ಯತೆ 3 ನಿತ್ಯ ತೃಪ್ತಿ ನಿರಾಹಾರಿ ನಿತ್ಯಾನಂದ | ಮೃತ್ಯು ಹಾ ಕಾಲಪ್ರಮಾಣ ಪರುಷಾ || ಶರಧಿ | ಸತ್ಯ ಸಂಕಲ್ಪ ನಿಷ್ಠನಾಹಂತೆ 4 ಅಜನಯ್ಯ ಅದ್ಭುತ ಮಹಿಮ ಪುರುಷೋತ್ತಮ | ಭುಜಧರನಯ್ಯಯಾ | ಅಮಿತಕಾಯಾ | ವಿಜಯಸಾರಥಿ ವಿಚಕ್ಷಣ ದೀಪ್ತ ಮೂರುತಿ | ಭುಜಗಂಗಿರಿ ವಿಜಯವಿಠ್ಠಲ ವೆಂಕಟೇಶಾ 5
--------------
ವಿಜಯದಾಸ
ಹೊನ್ನು ಹೆಣ್ಣು ಮಣ್ಣು ಮಾಯೆಯದು ಮೂರು ರೂಪಗಳ ನಾನು ಪೇಳುವೆನು ಹೊನ್ನು ಹೆಣ್ಣು ಮಣ್ಣು ಎಂಬ ಮೂರವುಗಳ್ ಅವುಗಳನು ಹಂಬಲಿಸಿ ಕೆಡಬೇಡ ಮರುಳೆ ನೀನ್ ಅವುಗಳೇ ಮೃತ್ಯುವಿನ ಕಡೆಗೊಯ್ಯುವವುಗಳ್ 52 ಕಷ್ಟದಿಂ ಸೃಷ್ಟಿಯಲಿ ನಗ್ನತೆಯೆ ಸುಂದರವು ಕಷ್ಟದಿಂ ಮರಣದಲಿ ನಗ್ನತೆಯ ದೇಹ ಕಷ್ಟವಿಕ್ಕ್ಕೆಡೆಗಳಲಿ ನಾಸ್ತಿಸುಖ ಮಧ್ಯದಲಿ ಕನಕ ಕನಕವದೆಂದು ಹೊನ್ನ ಪೇಳುವರು53 ಮೋಹಿನಿಯು ತಾನಾಗಿ ದ್ಯೆತ್ಯರನು ವಂಚಿಸಿದ ಮೋಹಿನಿಯು ತಾನಾಗಿ ರುದ್ರ ವಂಚಿತನು ಮೋಹಿನಿಯು ತಾನಾಗಿ ಸುಂದೋಪಸುಂದ ವಧೆ ಮೋಹಿನಿಯು ಪೆಣ್ಣು ಮೋಸವದಲ್ತೆ ಮನುಜ? 54 ಮಣ್ಣಿನಿಂದಲೆ ಹರಿಯು ದೇಹವನು ಸೃಷ್ಟಿಸುವ ಮಣ್ಣೆ ಅನ್ನವದಾಗೆ ಪಾಲಿಸುವ ನಮ್ಮ ಮರಣಕಾಲದಲದುವೆ ಮಣ್ಣನಪ್ಪುವದು ತಿಳಿ ಮಣ್ಣಿಗಾಗಿಯೇ ನೀನು ಹಂಬಲಿಪೆಯೇಕೆ 55 ಪ್ರಾಣದೇವರೆ ನಿನ್ನ ಉಸಿರಾಟ ಕಾರಣರು ಪ್ರಾಣನುಸಿರಾಟವದು ಯಾರಿಂದಲಹದು? ಅವನೆ ಪರಮಾತ್ಮ ತಿಳಿ ದೇವಾಧಿದೇವನವ ನಿನ್ನ ಬಾಳಿಗೆ ಕಾರಣರು ಇಬ್ಬರಹರು56 ಸೂರ್ಯದೇವನು ನೇತ್ರತತ್ವಕ್ಕೆ ಒಡೆಯನವ ಸೂರ್ಯನದು ಕಣ್ಣು ಯಾರಿಂದ ತೋರುವುದು? ಅವನೆ ಪುರುಷೋತ್ತಮನು ಪರಮಾತ್ಮ ಹರಿಯವನು ಆ ವಿಶ್ವರೂಪಿಯೇ ವಿಶ್ವಧಾರಕನು57 ವಾಸದಿಂ ಬೆಳಗಿಸುವ ಕಾರಣದಿ ಭಗವಂತ ವಾಸುದೇವಾತ್ಮಕನು ಸೃಷ್ಟಿಮೂಲನವ ವಸುದೇವಪುತ್ರನಾಗವತರಿಸಿ ಸಿರಿವರನು ಉಡುಪಿಯಲಿ ಪೂಜೆಗೊಂಬನು ನಿಜವ ಪೇಳ್ವೆ 58 ಕೃತಯುಗದ ಭಾರ್ಗವನು ತ್ರೇತೆಯಲಿ ದಾಶರಥಿ ದ್ವಾರಪದ ಕೃಷ್ಣ ನೀನೇಯಿರುವೆ ದೇವಾ ಮಧ್ವವರದನು ನೀನು ಭಾರ್ಗವನ ನೋಡಲ್ಕೆ ಉಡುಪಿಗೇ ಬಂದಿರುವೆ ಪರಮಾತ್ಮ ನೀನು 59 ಪರಶುರಾಮ ಕ್ಷೇತ್ರ ಶ್ರೀಕೃಷ್ಣನ ಕ್ಷೇತ್ರ ಪದ್ಮನಾಭಕ್ಷೇತ್ರ ಶಂಕರಕ್ಷೇತ್ರ ಹಲವಾರು ದೇವತೆಗಳಿಲ್ಲಿ ನೆಲೆಗೊಳ್ಳುತ್ತ ಪಾವನವ ಗೈಯುವರು ಭೂಮಿಯನ್ನಿದನು 60 ತುಲೆಯಲ್ಲಿ ತೂಗಿದಾಗುತ್ತಮವದದರಿಂದ ತುಲು ದೇಶವಿದು ಜಗದಿ ವಿಖ್ಯಾತವಹುದು ತುಲು ಲಿಪಿಯೆ ಸರ್ವಮೂಲ ಗ್ರಂಥ ಲೇಖನಕೆ ವೇದಾದ್ರಿಯಾಯಿತಿದು ವೇದಾಂತಭೂಮಿ 61 ಮಧ್ಯಗೇಹದ ಭಟ್ಟರಿಂ ಸೇವೆಯ ಪಡೆದು ವಾಯುದೇವೋತ್ತಮನ ಮಗನಾಗಿ ಕೊಡಿಸಿ ಸಜ್ಜನರ ಹೃದಯದಲಿ ಮುಖ್ಯ ತತ್ವವ ತಿಳಿಸೆ ಸರ್ವಜ್ಞ ಮೂರ್ತಿಯನು ತಂದಿರುವೆ ದೇವಾ62 ಪರಶುರಾಮನ ರೂಪದಿಂ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದ ನೀನು ಅವನ ಹೃದಯವ ಪೊಕ್ಕು ಮಧ್ವಮತವನು ನೀನು ಪಸರಿಸಿದೆ ಹರಿಯೆ 63
--------------
ನಿಡಂಬೂರು ರಾಮದಾಸ
ತಾತ್ತ್ವಿಕತೆ245ಆರಿಗಾದರು ಪೂರ್ವಕರ್ಮ ಬಿಡದುವಾರಿಜೋದ್ಭವಅಜಭವಾದಿಗಳ ಕಾಡುತಿಹುದುಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ವೀರಭೈರವನಂತೆ ತಾನು ಬತ್ತಲೆಯಂತೆಮಾರಿಮಸಣಿಗಳಂತೆ ತಿರಿದು ತಿಂಬರಂತೆಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆಮೂರೆರಡು ತಲೆ ಹರಗೆ ಕೈಲಿ ಕಪ್ಪರವಂತೆ1ಶಿಷ್ಟ ಹರಿಶ್ಚಂದ್ರನಿಗೆ ಮಸಣದಡಿಗೆಯಂತೆಸೃಷ್ಟಿಸುವ ಬೊಮ್ಮನಿಗೆ ಶಿರ ಹೋಯಿತಂತೆಅಷ್ಟದಿಕಾಲ್ಪಕರು ಸೆರೆಯಾಗಿರುವರಂತೆಕಟ್ಟುಗ್ರದಿಂದ್ರನಿಗೆ ಮೈಯೆಲ್ಲ ಕಣ್ಣಂತೆ2ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನುರಣದೊಳಗೆ ತೊಡೆಮುರಿದು ಬಿದ್ದನಂತೆವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆವನಿತೆ ಧರ್ಮಜನ ತಾಯ್ತಿರಿದುಂಡಳಂತೆ3ಧರೆಗೆ ಧರ್ಮಜನಂತೆ ಕಂಕಭಟ್ಟನಂತೆಶೂರ ಭೀಮನು ಬಾಣಸಿಗನಾದನಂತೆವೀರ ಫಲುಗುಣನಂತೆ ಕೈಯೊಳಗೆ ಬಳೆಯಂತೆಕಿರಿಯ ನಕುಲ ಸಹದೇವರು ತುರುಗಾಯ್ದರಂತೆ4ಹರನ ವಾಹನವಂತೆ ಹುಲ್ಲು ತಿಂಬುವುದಂತೆವಿರಿಂಚಿವಾಹನವಂತೆಕಮಲಭಕ್ಷಿಪನಂತೆಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆಸಿರಿಯಾದಿಕೇಶವನು ತಾ ಬೆಣ್ಣೆಗಳ್ಳನಂತೆ5
--------------
ಕನಕದಾಸ