ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆ ಎಷ್ಟು ಪ್ರೇಮಿಯೋ ಗುರುವು ಎಷ್ಟು ಪ್ರೇಮಿಯೋ ಪ ಎಷ್ಟು ಪ್ರೇಮಿ ಎನ್ನ ಬಿಡದೆ | ಸೃಷ್ಟಿಯಲ್ಲಿ ಕೈಯಪಿಡಿದ ಅ.ಪ ಭಾನುಕೋಟಿ ತೇಜ ವರದ ಸಾನುರಾಗದಿಂದ ಕರೆದು ಜ್ಞಾನ ಶಾಸ್ತ್ರ ಬೋಧಿಸುತ್ತ ಹೀನ ವೃತ್ತಿ ದೂರಿ ಪೊರೆದ 1 ನೀಲವರ್ಣ ಕಂಜನಯನ ನೀಲಕಂಠಮಿತ್ರ ಭಕ್ತ ಪಾಲ ಭೂರಿದುಃಖಭವವ ಧೂಳಿಮಾಡಿ ಬಾಲಗೊಲಿದ 2 ಶ್ರೇಷ್ಠ ಸುಮಹದೇವಪುರದೊಳಿಷ್ಟರಂಗನಾಥ ಭರದಿ ಮುಟ್ಟಿ ಮುಕ್ತಿಯಿತ್ತು ಪುನಃ ಹುಟ್ಟು ಸಾವುಗಳನು ಕಳದ 3
--------------
ರಂಗದಾಸರು
ಎಲ್ಲಿ ನೋಡಿದರಲ್ಲಿ ಚನ್ನಕೇಶವನು ಪುಲ್ಲಲೋಚನನಾದ ಶ್ರೀ ಕೃಷ್ಣನು ಪ ಭೂತಳ ಪಾತಾಳ ಸಕಲ ಲೋಕಗಳಲ್ಲಿ ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ ಮಾತು ಚೇಷ್ಟಗಳಲ್ಲಿ ಕೆರೆ ಭಾವಿ ವನದಲ್ಲಿ ಕೋತಿ ಖಗವೃಂದ ಪಶುವರ್ಗಂಗಳಲ್ಲಿ 1 ವೇದ ಶಾಸ್ತ್ರಗಳಲ್ಲಿ ಸರ್ವ ಧರ್ಮಗಳಲ್ಲಿ ಬೋಧಕ ಮೊದಲಾದ ಗುರು ವರ್ಗದಲ್ಲಿ ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ ವಾದ್ಯ ಮೃದಂಗಾಗಿ ನಾದಂಗಳಲ್ಲಿ 2 ಕಣ್ಣುಗಳಿಗೆಸೆಯುವ ಸಕಲ ವಸ್ತುಗಳಲ್ಲಿ ಮಣ್ಣಿನಲಿ ಸರ್ವತ್ರ ಘನ ಸೃಷ್ಟಿಯಲ್ಲಿ ಬಣ್ಣಿಸಲ್ಕಾಗದ ಹರಿ ಕೀರ್ತನೆಗಳಲ್ಲಿ ಹೆಣ್ಣು ಹೊನ್ನು ಮಣ್ಣು ತ್ರಿವರ್ಗದಲ್ಲಿ 3 ಸಕಲ ಚರ ಪ್ರಾಣಿಯಲಿ ಅಚರ ಜೀವಗಳಲ್ಲಿ ಸಕಲ ಸ್ತ್ರೀ ಪುರುಷರಲಿ ಸುರದನುಜರಲ್ಲಿ ಸಕಲ ಧಾನ್ಯಗಳಲಿ ತಿಂಡಿ ತಿನಸುಗಳಲ್ಲಿ ಸುಖ ದುಃಖ ಬಹಿರಂಗ ಅಂತರಂಗದಲಿ 4 ದಿನದಲ್ಲಿ ನಿಶೆಯಲ್ಲಿ ಅನ್ನಪಾನಗಳಲ್ಲಿ ಅಣುರೇಣು ತೃಣಕಾಷ್ಟ ಸರ್ವ ದಿಕ್ಕಿನಲೀ ಕನಸಿನಲಿ ಮನಸಿನಲಿ ಪಂಚ ಭೂತಗಳಲ್ಲಿ ಜನನ ಮರಣಾತೀತ ಚನ್ನಕೇಶವನು 5
--------------
ಕರ್ಕಿ ಕೇಶವದಾಸ
ದ್ವಾದಶನಾಮ ಸ್ತುತಿ ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ಪ ನಿನ್ನ ನೋಡಿ ಧನ್ಯನಾದೆ ಪನ್ನಗಶಯನ ರಂಗ ಮನ್ನಿಸಿ ರಕ್ಷಿಸು ಎನ್ನ ಮುನ್ನಜನ್ಮ ಬಾರದಂತೆ ಅ.ಪ. ಅರ್ಚ ಶೇಷಶಯನ ಲಕ್ಷ್ಮಿಗೆರಗಿ ಕೇಶವ ನಿಮ್ಮ ಸ್ತುತಿಸುವೆ 1 ಆದಿಸೃಷ್ಟಿಯಲ್ಲಿ ಬ್ರಹ್ಮನ ನಾಭಿಕಮಲದಲ್ಲಿ ಸೃಷ್ಟಿಸಿ ವೇದಸಾರವಾದ ಪ್ರಣವ ಓದಿ ಪೇಳಿದ ನಾರಾಯಣ 2 [ಆರ್ತಿ]ಯಿಂದ ಅಜನು ನಿಮ್ಮ ಮೂರ್ತಿಗಾಗಿ ತಪವ ಮಾಡೆ ಮಧುವೈರಿ ಮಾಧವಾ 3 ಪ್ರಣವಾಕಾರ ವಿಮಾನದಲ್ಲಿ ನಾಲ್ಕು ವೇದಶೃಂಗವಿರಲು [ವಿಷ್ಣು] ಪರವಾಸುದೇವರಿಂದ ಬಂದ ಶ್ರೀಗೋವಿಂದ 4 ಸತ್ಯಲೋಕದಲ್ಲಿ ನಿಂತು ನಿತ್ಯಪೂಜೆಯನ್ನು ಗ್ರಹಿಸಿ ಮತ್ತೆ ಇಕ್ಷ್ವಾಕುಗೊಲಿದ ವಿಶ್ವಮೂರುತಿ ವಿಷ್ಣುವೇ 5 ಸರಯು ತಮಸ ತೀರಮಧ್ಯದಿ ಹರಿಯೆ ನಿಮ್ಮನಿರಿಸಿ ದೊರೆಯು ಪರಮಪುರುಷನಿಂದ ಪೂಜೆ ಗ್ರಹಿಸಿದ ಮಧುಸೂದÀನ 6 ರಾಜ್ಯಾಭಿಷೇಕ ಕಾಲದಲ್ಲಿ ರಾಮಚಂದ್ರರು ರಾಕ್ಷಸೇಂದ್ರಗೆ ಕೊಡಲು [ರಾಜ್ಯವ] ಕಾವೇರಿ ಮಧ್ಯದಿನಿಂದು ತ್ರಿಜಗವಳೆದ ತ್ರಿವಿಕ್ರಮ 7 ಫಾಲ್ಗುಣ ಮೀನ ಉತ್ತರ ಫಲ್ಗುನೀ ನಕ್ಷತ್ರದಲ್ಲಿ ಬಾಲನಾಗಿ ಚಂದ್ರಪುಷ್ಕರಿಣಿ ತೀರದಿ ನಿಂದ ವಾಮನ 8 ಜಾಮಾತನೆನಿಸಿ ಗ್ರಹಿಸಿ[ದ] ಶ್ರೀದೇವಿ ಸಹಿತ ಶ್ರೀಧರ 9 ಮಳೆಯನಿಟ್ಟು ಧ್ವಜವಕಟ್ಟಿ ಸುರರ ಕರದು ಯಾಗವ ಮಾಡಿ ಯಾತ್ರದಾನದ [ತಳೆದ] ಹೃದಯವಾಸ ಹೃಷಿಕೇಶವ 10 ವೀರ ಮರುದಿನದಿ ಜಟಾಶೋಧಕರ ಮಂಟಪದಿ ನಿಂದು (?) [ಧೀರ] ಮುದುಕಿಗೊಲಿದು ದಧ್ಯಾನ್ನವ ಉಂಡ ಶ್ರೀಪದ್ಮನಾಭ 11 ನಾಲ್ಕು ದಿವಸದಲ್ಲಿ ನಾಗವೈರಿಯನ್ನು ಏರಿಬಂದು ಕಲ್ಪವೃಕ್ಷವು ಸರ್ಪವಾಹನ ಏರಿದ ದಾಮೋದರ 12 ಆರು ದಿವಸದಲ್ಲಿ ವರಿಯೂರಿಗೆ ಹೋಗಿ ನಿಮ್ಮ ಸಂತೈಸಿ ಮಾಲೆಧರಿಸಿದ ಸಂಕರ್ಷಣ 13 [ಮಾರನೆ] ದಿವಸದಲಿ ಚೂರ್ಣಾಭಿಷೇಕವನು ಧರಿಸಿ ವಾಸುದೇವ 14 ಎಲ್ಲೇಕೆರೆಗೆ ಪೋಗಿ ಭೂಮಿಯೆಲ್ಲ ನೋಡಿ ಹರುಷದಿಂದ ಅ[ಲ್ಲೆ] ತೇಜಿಯನೇರಿ ತೇರಿನೆದುರೆ ಪೇರಿಬಿಟ್ಟ ಪ್ರದ್ಯುಮ್ನ 15 ಪಂಗುನ್ಯತ್ತರವು ಬರಲು ಉಂಗುರವನು ಬೇಡಿತಂದು ಅನಿರುದ್ಧ 16 ತಿಂದ ಪಂಜಿನಪ್ರಹಾರ ಹರುಷದಿಂದ ಪುರುಷೋತ್ತಮ 17 ಪತ್ನಿಯೊಡನೆ ಪ್ರೇಮಕಲಹ ಅರ್ತಿಯಿಂದ ಮಾಡುತಿರಲು ವಿಷ್ಣು ಚಿತ್ತರ ವಾಕ್ಯದಿಂದ ಅರಸಿಗೇರಿದಾ ಅಧೋಕ್ಷಜಾ 18 ಮಂದರೋದ್ಧರ ತನ್ನ ಇಂದಿರೆಸಹಿತವಾಗಿ ಬಂದು ಗೋರಥವನೇರಿ ನಾಲ್ಕುಬೀದಿ ಮೆರೆದ ನಾರಸಿಂಹ 19 ವಾರಿಜಾಕ್ಷ ರಥವನಿಳಿದು ಕಾವೇರಿಯಲ್ಲಿ ತೀರ್ಥವಿತ್ತು ದರ್ಪಣದ ಗೃಹದಿ ನಿಂದ ಅರ್ತಿಯಿಂದ ಅಚ್ಚುತ 20 ಸಪ್ತ ಆವರಣವೆಲ್ಲ ಶಬ್ದವಿಲ್ಲದೆ ಸುತ್ತಿ ಬಂದು ಭಕ್ತ ಭಾಷ್ಯಕಾರರಿಗೊಲಿದ ದುಷ್ಟಮರ್ದನ ಜನಾರ್ಧನ 21 ಪೃಥವಿಯೊಳಗಾಶ್ಚರ್ಯವಾದ ಪ್ರತಿಯಿಲ್ಲದ ಪಲ್ಲಕ್ಕಿಯೇರಿ ಅತಿಶಯದಿಂದ ಬಂದ ಉರಗಶಯನ ಉಪೇಂದ್ರ 22 ಅಂದು ಸುರರ ಛಂದದಿಂದ ಮಂದಿರಕ್ಕೆ ಕಳುಹಿ ರಂಗ ಬಂದು ಭಕ್ತರ ಪಾಪ[ವ] ಪರಿಹರಿಸಿದಾ ಶ್ರೀಹರಿ 23 ಅಷ್ಟು ಚರಿತ್ರೆಯನ್ನು ಕೇಳಿ ಕಟ್ಟಿದ ಕಂಕಣವ ಬಿಚ್ಚಿ ಶ್ರೇಷ್ಠವಾದ ಸ್ಥಾನದಲ್ಲಿ ಮಂತ್ರಿ ಸಹಿತನಿಂದ ಶ್ರೀಕೃಷ್ಣ 24 ದಕ್ಷಿಣಗಂಗೆಯಾಗಿ ನಿಂದು ಭಕ್ತನ ದ್ವೀಪವನ್ನು ನೋಡುತ ಮುಕ್ತಿಮಾರ್ಗವನ್ನು ತೋರಿದ ಭಕ್ತವತ್ಸಲ ವೆಂಕಟರಂಗ 25
--------------
ಯದುಗಿರಿಯಮ್ಮ