ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಾಧ ಕ್ಷಮಿಸಿ ನೀ ಕೃಪೆಯಿಂದ ಸಲಹಯ್ಯ ಗಾತ್ರ ಸಾರಸ ನೇತ್ರ ಪ ಉಪಕಾರವಾಯಿತು ನೀ ಗೈದ ಶಿಕ್ಷೆಯು ವಿಪರೀತ ಮತಿ ಭ್ರಾಂತಿ ಪರಿಹಾರವಾಯಿತು ಅ.ಪ. ಜಗವ ಸೃಷ್ಟಿಪೆ ನೀನು ಜಗದ ನಿಯಾಮಕ ಬಗೆಯಲು ಸೂತ್ರಧಾರಿಯು ನೀನೆ ತೊಗಲು ಬೊಂಬೆಗಳಂತೆ ನೀ ಕುಣಿಸುವೆ ಜಗವ ಬಗೆ ತಿಳಿಯದೆ ಜನರು ಬಯಲು ಭ್ರಾಂತಿಯಿಂದ ಮಿಗೆ ಕರ್ತೃತ್ವವ ತಮ್ಮಲಿ ತಿಳಿಯುತ ಹಗರಣ ಪೊಂದುವುದ ನೀಗಿಸುವುದು ಬಗೆಯೆ ನಿನ್ನ ಪರಮಾನುಗ್ರಹವು ಮುಗಿವೆ ಕರಗಳನು ಕರಿಗಿರಿನಿಲಯ 1
--------------
ವರಾವಾಣಿರಾಮರಾಯದಾಸರು
ಬಂದು ನಿಲ್ಲೆಲೊ ಮನಮಂದಿರದೊಳು ಹರಿ ಇಂದುವದನ ಆನಂದದಿಂದ ಪ. ಮುಂದಗಮನೆರ ಅಂದದಿ ಕೂಡ್ಯರ- ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ. ಗಜವ ಪಾಲಿಸಿದಂಥ ಭುಜಗಶಯನ ಹರೆ ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ- ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ- ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ ಭುಜಗ ಭೂಷಣವಂದ್ಯ ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ ಕುಜನರ ಶಿಕ್ಷಿಪೆ ರಜ ತಮೊ ದೂರನೆ ಸುಜನರ ಪೊರೆಯುವ ಋಜುಗಣವಂದಿತ 1 ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ- ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್ ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ ಸಪ್ತ ಸಪ್ತ ಭುವನೇಶ ಪ್ರಕಾಶ 2 ವೇದಸುತಗೆ ಇತ್ತು ಆದರದಿ ಸುಧೆ ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ ಆದರದಲಿ ಸುಗ್ರೀವನ ಪೊರೆದೆ ಯಾದವ ವಂಶ ಮಹೋದಧಿ ಚಂದ್ರ ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ- ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ 3 ಪದ್ಮನಾಭನ ತೋರೊ ಪದ್ಮಸಂಭವ ಜನಕ ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ ಪದ್ಮ ಬಾಂಧವ ತೇಜ ಪದ್ಮ ನಯನಕರ ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ ಪದ್ಮ ಉದರ ಷಟ್ಪದ್ಮದಿ ವಾಸ ಪದ್ಮ ಸರೋವರ ತೀರವಾಸ ಹೃ ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ 4 ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ ವ್ಯಾಪಕನೊ ಜಗಸ್ಥಾಪಕನೊ ಬಹು ರೂಪಕನೊ ದುಷ್ಟತಾಪಕನೊ ಹರಿ ಪಾಪ ಹರಿಸಿ ಕರ್ಮಲೇಪನ ಮಾಡದೆ ಪರಿ ಪರಿಯಿಂದ ಕಾಪಾಡೊ ಭಕ್ತರ5
--------------
ಅಂಬಾಬಾಯಿ
ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ಪ. ಬಾರೋ ನಿನ್ನ ಮುಖ ತೋರೊ ತ್ವರಿತದಲಿ ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ. ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ ಬೇಕಾದ್ವೈಭವ ನೀ ಕೈಕೊಳುತ ಸಾಕುತಲಿಪ್ಪೆಯೊ ನೀ ಕರೆದವರನು 1 ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ ಈ ವಿಧದಿಂದಲಿ ಭಾವಜನಯ್ಯನೆ ಪಾವಕಸಖನೊಳು ಪಾವನನಾಗಿಹೆ 2 ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ ಮುನ್ನ ಮಾಡಿದ ಘನ್ನ ಪಾಪಗಳು ಇನ್ನಿರಲಾರವೊ ಮನ್ನಿಸಿ ಪೊರೆಯೊ 3 ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ ವಿಗಡ ದೇಹದೊಳು ಬಗೆ ಬಗೆ ದೇವರು ತಗಲಿ ನಿನ್ನ ಪದನಗಧರ ಕಾಣರೊ 4 ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು ಬಣ್ಣಗೆಟ್ಟು ಹಯವನ್ನೇರಿದೆ5 ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ ನೂಕಿ ಎನ್ನ ಭವತಾಪನೀಗಲೆ ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6 ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ ಪರಿ ಅದ್ಭುತ ಚರಿತೆಯ ತೋರುವ ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7
--------------
ಅಂಬಾಬಾಯಿ