ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ತುಳಸಿರಾಮದಾಸರ ಅಂತಿಮ ಯಾತ್ರೆ ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ ವಿಧಿಯ ಬರಹವ ತೊಡೆದುಕೊಂಡೆಂದ ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ ಪದವಿ ತೋರಿದ ನಮ್ಮ ದೇಶಿಕ 1 ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ ಇಷ್ಟದೈವದ ಪೂಜೆ ಮಾಡೆಂದಾ ದೃಷ್ಟಿಗೋಚರಮಾದ ಗುರುವು ಸೃಷ್ಟಿಗಧಿಕಾ ತುಲಶಿರಾಮನ ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ 2
--------------
ಚನ್ನಪಟ್ಟಣದ ಅಹೋಬಲದಾಸರು
ನೋಡಿ ದಣಿಯವೆನ್ನ ಕಂಗಳು ಈ ಸೋದೆಲಿರುವ ಈಡು ಇಲ್ಲದುತ್ಸವಂಗಳ ಬೇಡಿದವಗೀ ಧ್ವಜಬುತ್ತಿ (?) ನೀಡಿ ದಯಸೂರ್ಯಾಡುವರ ಪ ಯತಿಗಳ ಸಮೂಹವೆಷ್ಟು ಮಿತಿಯಿಲ್ಲದ ಬ್ರಾಹ್ಮಣ್ಯವೆಷ್ಟು ಮತಿಹೀನರಿಗೆ ಗತಿಯ ಕೊಡುವ ಪೃಥಿವಿಗಧಿಕ ಗುರುಗಳನ್ನು 1 ಭೂತನಾಥಗೆರಗಿ ನಿಂತು ವಾತಸುತಗೆ ಕೈಯ ಮುಗಿದು ಆತ ನಾರಾಯಣಭೂತನೆಂಬೋ ನೀತವಾದ ದೂತನಂತೆ2 ಕೊಳಲ ಕೃಷ್ಣ ಧವಳಗಂಗಾ ಹೊಳೆಯೊ ಮುತ್ತಿನ ಗದ್ದಿಗೆ ಮ್ಯಾಲೆ ಕಳೆಯು ಸುರಿವೊ ಕಮಲಪಾದ ಇಳೆಯೊಳ್ ಇಲ್ಲೀಳಿಗೆಯ ಪೂಜೆ 3 ಸನಕಾದಿ ಸುರೇಶನೆದುರು ಕಣಕ ಹ್ವಾಲಗ (ಹೋಳಿಗೆ?)ವನ್ನೆ ಮಾಡಿ ಮನಕೆ ಬಂದ ಮೃಷ್ಟಾನ್ನವನು ಜನಕೆ ತೃಪ್ತಿಬಡಿಸುತಿರಲು 4 ಸುತ್ತ ವೃಂದಾವನದ ಮಧ್ಯೆ ಉತ್ತಮರಾದ ವಾದಿರಾಜರು ಸತ್ಯವತಿಯ ಸುತರ ಎದುರು ನಿತ್ಯಾನಂದಭರಿತರಾಗಿ 5 ಸೃಷ್ಟಿಗಧಿಕಾನಂತಾಸನವು ಶ್ವೇತದ್ವೀಪ್ವೈಕುಂಠವೆಂಬೊ ಮುಕ್ತಸ್ಥಳದಲ್ವಾಸವಾದ ಲಕ್ಕುಮಿ ತ್ರಿವಿಕ್ರಮನ 6 ನೇಮನಿಷ್ಠ ಸೇವಕ ಜನಕೆ ಬೇಡಿದ ಇಷ್ಟಾರ್ಥ ಕೊಡುವೊ ಭೀಮೇಶಕೃಷ್ಣ ದಯದಿ ನೋಡಿದೆ ಹಯವದನನಂಘ್ರಿ 7
--------------
ಹರಪನಹಳ್ಳಿಭೀಮವ್ವ