ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಾಸಿ ತಿಮಿರದಿನಪ ಪ ಈಶನ ವರಸುತ ದಾಸ ಜನರ ಹಿತ ಪಾಶಾಂಕುಶ ಹಸ್ತ ಅ.ಪ ವಿದ್ಯೆ ಪ್ರದಾಯಕ ಬುದ್ಧಿ ಪ್ರಬೋಧಕ ಸಿದ್ಧಿದ ಶ್ರೀ ಬೆನಕ ಹೊದ್ದಿ ನೆನೆವ ಭಕ್ತರುದ್ಧರಿಸುವ ಶಕ್ತ ಮುದ್ದು ಮುಖವ ತೋರಿತ್ತ 1 ಗಿರಿಜೆ ಸತ್ಕುವರನೆ ದ್ವಿರದ ಸುವದನನೆ ಶರಣರ ಪಾಲಿಪನೆ ಪೊರೆಯನ್ನ ಸದ್ದಯದಿ 2 ಕಿಂಕರ ಶಂಕರ ಶತ್ರುಭಯಂಕರ ಶಂಖಚಕ್ರಾಬ್ಜಧರ ಪಂಕಜ ಮುಖವ ತೋರ 3 ರಕ್ತ ವಸ್ತ್ರಾನ್ವಿತ ರಕ್ತ ಗಂಧಾಕ್ಷತ ರಕ್ತ ಮಾಲಾದಿಧೃತ ಭಕ್ತ ಜನಾವನ ಶಕ್ತನೆ ನೀ ಎನ್ನ ಚಿತ್ತದಿ ಪೊಳೆಯೊ ಘನ್ನ 4 ವೇದನಿಕರ ಸುಗೀಯ ಸಾಧು ಸಜ್ಜನ ಸಮ್ಮತ 5 ಇಂಬಿಟ್ಟಿಯೆಂದು ನಿನ್ನ ಅಂಬರೊ ಸುಗುಣಸಿಂಧು 6 ವಕ್ರವ ತುಂಡಿಪ ಕತದಿಂದಲಪ್ಪ ವಕ್ರತುಂಡನು ನೀನಪ್ಪ ಶಕ್ರ ಪೂಜಿಸಿದನು ವೃತ್ರನ ವಧೆಗಿನ್ನುಪಕ್ರಮದಲೆ ತಾನಿನ್ನು 7 ಪರಿವಾರಸಹಿತ ಘನ್ನ ಧುರದಲ್ಲಿ ಬಿದ್ದನು ವರ ಧರ್ಮ ಗೆದ್ದನು ಎರಗಿ ಅರ್ಚಿಸಿ ನಿನ್ನನು 8 ದುರಳ ದಶಾನನ ಸರಕುಮಾಡದೆ ನಿನ್ನ ಗರುವದಿಂದಿರಲವನ ಪರಿಭವ ಕಾರಣವಾದುದೆಂಬರು ಕಣ ಶರಣಜನಾಭರಣ 9 ನೇಮದಿರುತಿದ್ದು ಹೇ ಮಹಿಮ ಖರ ದಶಶಿರನನ್ನು ಧುರದಲ್ಲಿಗೆದ್ದನು ಕರುಣೆಯೆ ಒರೆಯಲೇನು 10 ಕೋರಲು ಸಿದ್ಧಿ ಅಂದು ತೋರಿದೆ ಕರುಣವ ಚಾರುಕರದಿ ಅವನಾರೈಸಿ ಕರುಣಾರ್ಣವ 11 ಮುಪ್ಪುರ ಗೆದ್ದನು ಮುಕ್ಕಣ್ಣ ನಿನ್ನನು ತಪ್ಪದೆ ನೆನೆದವನು ಅಪ್ಪನೆ ನಿನ್ನಯ ಗೊಪ್ಪ ಚರಿತ್ರೆಯ ಇಪ್ಪಂತೆ ಪೇಳಿಸಯ್ಯ 12 ಸೃಷ್ಟಿಕರ್ತನು ತನ್ನ ಸೃಷ್ಟಿಗೈಯ್ಯಲು ಮುನ್ನ ಮುಟ್ಟಿಭಜಿಸಿದ ನಿನ್ನ ಎಷ್ಟೆಂತ ಪೇಳಲಿ ಶ್ರೇಷ್ಠಗುಣಾವಳಿ ಅಷ್ಟೆಲ್ಲ ನೀನೆ ಬಲ್ಲಿ 13 ಮಾಧವ ಪೊಂದಿದ ನಿನ್ನನವ ದ್ವಂದ ವಿವಾಹಾದುದು 14 ಭಾರತ ಬರೆಯಲು ಆಕಾರ ನೋಡಲು ತೋರದೆ ಇರುತಿರಲು ಶೂರನೆ ನಿನ್ನನು ಅರಿಸಿ ವ್ಯಾಸನು ಬೀರಿದ ಮಹಿಮೆಯನು 15 ಏನು ಕರುಣವಯ್ಯ ಶ್ರೀನಿಕೇತನಿಗೈಯ್ಯಾ ತಾನೆ ಇತ್ತಿಹನಯ್ಯ ಆನತಿಸಲು ಇಷ್ಟ ಮಾಣಲು ಸಂಕಟ ನೀನು ಕೊಡೆನುತದಟ 16 ಭಜಿಪರ ಭಾಗ್ಯದ ಯಜಿಪರಭೀಷ್ಟದ ತ್ಯಜಿಪರ ಸಂಕಟದ ಪಡಿ 17 ಜಯ ಜಯ ಕಾಪಿಲನೆ ಫಾಲ ಜಯ ಗಜಮುಖನೆ 18 ದ್ವಾದಶ ನಾಮವ ಆದರದಿಂದಾವ ಓದುವ ಕೇಳುವವ ಆದಿ ಪೂಜಿತನೊಲಿವ 20 ವಿದ್ಯಾರಂಭದಿ ಮುದ್ದು ವಿವಾದÀದಿ ಪೊದ್ದಲ್ಲಿ ನಿರ್ಗಮದಿ ಯುದ್ಧದಿ ನಿನ್ನನು ಬದ್ಧದಿ ನೆನೆವನು ಗೆದ್ದಪನೈ ಅವನು 21 ಏಕವಿಂಶತಿಪದ ಕೋಕನಪುಷ್ಪದ ಶ್ರೀಕರ ಮಾಲೆ ಇದ ಶ್ರೀಕಾಂತ ವರಭಕ್ತ ನೀ ಕರುಣಿಸೆಂದಿತ್ತ ಸ್ವೀಕರಿಸೈ ಮಹಂತ 22 ಬೆಂಗಳೂರಿನಲಿ ತುಂಗರೂಪದಲ್ಲಿ ಕಂಗೊಳಿಸುತಲಿಲ್ಲಿ ಹಿಂಗದೆ ಪೊರೆವೆನೆಂದ 23 ಬಾಲಕೃಷ್ಣಾರ್ಯರ ಬಾಲ ಲಕ್ಷ್ಮೀನಾರಾಯಣನೆಂಬ ಸತ್ಪೆಸರ ತಾಳಿದ ಶರಣನು ಮೇಳೈಸೀನುತಿಯನು ಓಲಗಿಸಿದ ನಿನ್ನನು 24 ಪೊಂದುವ ಮೋದವನು ಇಂದುಧರನ ಸುತನಂದದಿ ಸದ್ಭಕ್ತವೃಂದ ರಕ್ಷಿಪ ಸಂತತ 25 ನಮೋ ಸಾಕುವ ಮಹಿಮ ನಮೋ ಭೀಕರ ಬಿಡಿಸೆನ್ನ ನೀ ಕರುಣಿಸು ಮುನ್ನ ಶ್ರೀಕಾಂತ ಭಕ್ತಿಘನ್ನ 26 ಮಂಗಳ ಸದ್ವಿದ್ಯಾಬುದ್ಧಿದ ಜಯ ಜಯ ಮುಂಗಳ ಸಿದ್ಧದನೆ ಮಂಗಳ ವರ್ಧಿತನೆ 27
--------------
ಲಕ್ಷ್ಮೀನಾರಯಣರಾಯರು
ಅಧ್ಯಾಯ ಐದು ಲೋಕ ಮೋಹಕ: ಪಾತು ಮಾಧವ: ಧ್ವನಿ ರಾಗ:ಯರಕಲ ಕಾಂಬೋದಿ ಅಟತಾಳ ತಿರುಗಿ ವೇಂಕಟಗಿರಿ ಏರಲು ಪ ಪದ್ಮನಾಭನ ಸ್ಮರಿಸಿ ಬಿದ್ದಳು ಮೂರ್ಛಿತಳಾಗಿ ಸದ್ದು ಮಾಡಿದರಲ್ಲಿ ಇದ್ದ ಗೆಳತಿಯರೆಲ್ಲ ಮುದ್ದು ಮುಖದವಳೆ ನೀ ಎದ್ದು ಮಾತಾಡೆಂದರು ಪದ್ಮಿನಿಯು ತಾ ಕೇಳಿ ಎದ್ದು ನುಡಿಯದೆ ಇರಲು ಸಿದ್ಧಮಾಡಿ ಬೇಗೊಬ್ಬ ಬುದ್ಧಿವಂತೆಯ ಕಳುಹಿ ಗದ್ದಲಮಾಡದೆ ಅಂದಣವನು ತರಿಸಿ ಪದ್ಮ ಗಂಧಿಯ ಕೊಂಡು ಎದ್ದು ನಡೆದರು ಪುರಕೆ ಸುದ್ದಿ ಹರಡಿತು ಅಲ್ಲಿ ಗದ್ದಲಾಯಿತು ಬಹಳ 1 ಬಂದಳಲ್ಲಿಗೆ ತಾಯಿ ಅಂದಳೀಪರಿ ನೋಡಿ ಇಂದು ಎಲ್ಲಿಗೆ ಚಿಕ್ಕ ಕಂದಮ್ಮ ನೀ ಪೋಗಿದ್ದೆ ಇಂದು ಬಾಡಿಹುದೇಕೆ ಇಂದು ಮೈಯೊಳು ಜ್ವರ ಬಂದಿಹುದೇಕಮ್ಮಯ್ಯ ಮುಂದೆ ಮಾತಾಡದಿರಲು ತಂದೆ ಕೇಳಿದನಾಗ ಸುಂದರಿಯಳೆ ದಾರೇನಂದರಮ್ಮಯ್ಯ ನಿನಗೆ ಅಂದು ಅವರನು ಬಿಡದೆ ಕೊಂದು ಹಾಕುವೆ ಪೇಳು ಅಂದ ಮಾತಿಗೆ ತಾನು ಒಂದು ಮಾತಾಡಲೊಲ್ಲಳು 2 ತಿಳಿಯಲೊಲ್ಲದು ಎಂದು ಬಳಲಿ ಆಕಾಶರಾಜ ಕಳವಳಿಸುತ ಕರೆಕಳಿಸಿ ಬಲ್ಲವರನು ತಿಳಿಯಬಲ್ಲವರೆಲ್ಲ ತಿಳಿದು ಹೇಳಿರಿ ಎಂದ ಕೆಲವರೆಂದರು ಪಿತ್ತ ತಲೆಗೆ ಏರಿಹುದೆಂದು ಕೆಲವರೆಂದರು ಭೂತ ಬಲಿಯ ಚಲ್ಲಿರಿ ಎಂದು ಕೆಲವರೆಂದರು ಗ್ರಹಗಳ ಬಾಧೆ ಇರುವದು ಉಳಿದ ಮಂದಿಗೆ ಮತ್ತೆ ತಿಳಿಯಲಾಗದಾಯಿತು ಚಲುವನಂತಾದ್ರೀಶನ ಚಲುವಿಕೆಯನೆ ಕಂಡು 3 ವಚನ ಬಹುಶೋಕವನು ಮಾಡುತಲಿ ತಾ ಕರಿಸಿ ಕೇಳಿದನು ನಾಕೇಶಗುರು ಹೀಗೆ ತಾ ಕೇಳುತಲಿ ನುಡಿದ ಆಕಾಶನೃಪ ಚಿಂತೆಯಾಕೆ ಬ್ರಾಹ್ಮಣರ ಏಕಾದಶಾವರ್ತಿ ಏಕಚಿತ್ತದಲಿ 1 ಲೇಸಾಗಿ ತಿಳಿಯೆಂದು ಉರ್ವೀಶ ಭಕುತಿಯಂ ಆಸನಾದಿಗಳಿಂದ ಭೂಸುರರಿಗೆ ಅರ್ಪಿಸಿ ಸಂತೋಷವನು ಮಾಡಿರಿ ಎಂದು ಆಶು ಕಳುಹಿದನಗಸ್ತೇಶ್ವರನಾಲಯಕೆ 2 ಧ್ವನಿ ಕೇವಲ ಚಿಂತೆಯಿಂದಲೇ ದೇವಿಬಕುಲಾವತಿ ತಾನು1 ಪರಿವಾಣದಲ್ಲಿಟ್ಟುಕೊಂಡು ಇದ್ದಲ್ಲೆ ಗೋವಿನಂತೆ 2 ಆಲಯದಿ ಜಗತ್ಪಾಲಯ ಮಲಗಿದ್ದು ಕಂಡು ಬಾಲೆ ತಾಮಾತಾಡಿದಳು ಇಂದು 3 ಹೆಚ್ಚಿನ ವರಹ ಅಚ್ಯುತ ವಾಮನ ಏಳೊ 4 ಉದ್ಧರಿಸಿದಾತನೆ ಏಳೊ ಮುದ್ದು ಹಯವದನ ಏಳೋ 5 ಕೊಡದೆ ಸೃಷ್ಟಿಕರ್ತನು ಹರಿವಾಣ ಕೆಳಗಲ್ಲೆ ದಿಟ್ಟನಡೆದಳು ಬದಿಯಲಿ6 ಎನುತ ಮುಸುಕ ಕಂಡು ಅಂತ:ಕರಣದಿ ನುಡಿದಳು7 ಧ್ವನಿ ರಾಗ:ಕಾಪಿ ಅಟತಾಳ ಯಾಕೆ ಮಲಗಿದೆ ನೀ ಏಳೋ ಅಣ್ಣಯ್ಯಾ ವೇಂಕಟ ಯಾಕೆ ಮಲಗಿದೆ ಏಳೋ ಏನು ಚಿಂತೆಯು ಪೇಳೊ ಲೋಕ ಸಾಕುವ ದಯಾಳೋ ಅಣ್ಣಯ್ಯ ವೇಂಕಟಪ ಬಾಳ ಬಳಲಿದಿಯೊ ಹಸಿದು ಮಾತಾಡದಂಥ ಮೂಲ ಕಾರಣವೇನಿದು ಹಾಲುಸಕ್ಕರೆ ತುಪ್ಪಾಯಾಲಕ್ಕಿ ಪರಮಾನ್ನ ಬಾಲಯ್ಯ ನೀನು ಉಣಲೇಳೋ 1 ವಟದೊಳು ಹೆಬ್ಬುಲಿಯ ಕಂಡಂಜಿದಿಯೇನೊ ನೆಲೆಯು ತಿಳಿಯದು ನಿನ್ನ ಪ್ರಳಯ ಕಾಲಕ್ಕೆ ಆಲದೆಳೆಯೊಳು ಮಲಗಿದವನೋ2 ಹಗಲ್ಹೊತ್ತು ಮಲಗಿದ ದವನಲ್ಲೊ ಹೆತ್ತತಾಯಿ ಆಣೆ ಸತ್ಯವಾಣಿ ನೀಪೇಳೋ ಚಿತ್ತ ವ್ಯಾಕುಲವು ಯಾಕೆ3 ಕೊಂಬುವರೋಮುನ್ನ ಇಂದು ಮೋಹಿತನಾಗಿರುವಿ4 ಬಾಹುವದುಕಂಡು ಮರಳು ಮಾಡಿದಳೋ ನಿನ್ನ 5 ತಕ್ಕ ಉಪಾಯಾ ಅಕ್ಕರವಾಗುವದೆನಗೆ 6 ಎನ್ನ ಮುಂದೆ ನೀ ಸಂಶಯ ಬಿಡು ಚನ್ನಿಗನಂತಾದ್ರೀಶನೆ 7 ವಚನ ಕಣ್ಣೀರುವರಸುತಲೆದ್ದು ಕೀರವಾಣಿಯೇಕೇಳು ಘೋರು ದು:ಖವ ತನಗೆ ಆರಿಗುಸರಲಿ ನಾನು ಆರಿ ಹೇಳುವೆ ನಿನಗೆ ಸಾರಾಂಶ ಮಾತು 1 ನೀನೆ ಎನಗ್ಹಿರಿಯಣ್ಣ ನೀನೆಗಜರಾಜೇಂದ್ರ ವರಧ್ರುವರಾಯ ನೀನು ಸರ್ವವು ಅಭಿಮಾನ ರಕ್ಷಕಳು 2 ಎಂಬೋರನ್ಯಾರನು ನಾ ಎನ್ನ ಮನಸ್ಸಿನ ಅರಣ್ಯದೊಳು ರೂಪ ಲಾವಣ್ಯ ಮುಖವು ಹುಣ್ಣಿಮೆಯ ಚಂದ್ರ 3 ಕಣ್ಣಮೂಗಿಲೆ ಸಂಖ್ಯೆ ಜನ್ಮದಲಿ ಮಾಡಿದ್ದು ಅನ್ಯಾಯದಲಿ ಎನ್ನ ಪ್ರಾಣವನು ಬಿಟ್ಟಿತು ಉಳಿದೆ ಮುನ್ನವಳ ಹೊರತು ಮನ ಉಣ್ಣಲೊಲ್ಲದು ನಿದ್ರೆ ಕಣ್ಣಿಗಿನ್ನೆಲ್ಲಿ 4 ನೀನು ಎಂದದು ಮೋಹಿಸುವಂಥ ಜಾಣೆಯನು ಕಳೆದಂಥ ಮಾನಿನಿಯ ಇರಲುನಾನು ಬದುಕುವನಲ್ಲ ಖೂನ ಪೇಳುವೆನು 5 ಯಾನ ಬರುವದು ಹೆಚ್ಚು ಉಂಟು ಕ್ಷೋಣಿಯಲಿ ಕಟ್ಟಿ, ದಾನದೊಳು ಸಾಹಸ್ರದಾನ ಪಾತ್ರರಿಗೆ ತಿಳಿ ಒಂದು ಕಲ್ಯಾಣ ಕಟ್ಟಿದರೆ 6 ಧ್ವನಿ ರಾಗ:ಸಾರಂಗ ಭಿಲಂದಿತಾಳ ಬಕುಲಾದೇವಿ ತಾ ನುಡಿದಳು ಆ ಕಾಲಕ್ಕೆ ಹೀಗೆ ದೇವಾಧೀಶನೆ ನಿನ್ನ ಕೇವಲ ಮರುಳು ಈವತ್ತಿಗೆ ಮಾಡಿದಳು ಯಾವಕೆ ಅವಳು 1 ಪೂರ್ವಜನ್ಮದಲಾಕೆ ಯಾವಕೆ ಬಂದಿಹಳು ಆ ವಾರ್ತೆ ಪೇಳೊ 2 ಇಂಥ ಮಾತನು ಲಕ್ಷ್ಮಿಕಾಂತಾ ಚಿಂತಿಸಿ ನುಡಿದಾ 'ಶ್ರೀಮದನಂತಾದ್ರೀಶ’ 3 ವಚನ ತಾ ವನದರಲಿರುತಿರಲು ದೇವಿಯನು ಅಪಹರಿಸಿ ತಾ ಒಯ್ಯ ಬೇಕೆಂಬೋ ಭಾವದಲಿ ಬಂದಾ ಆ ವೇಳೆಯಲಿ ಅಗ್ನಿದೇವ ಪತ್ನಿಯಲ್ಲಿದ್ದ ಶ್ರೀ ವೇದವತಿಯನ್ನು ದೇವೇಂದ್ರನ ಸಹಿತ ಆವಾಹನ ಮಾಡಿ ತಾ ವಾಸಮಾಡಿದಳು ಕೈಲಾಸದಲ್ಲಿ1 ಮುಂದೆ ರಾಮನು
--------------
ಅನಂತಾದ್ರೀಶ - ಕಥನಕಾವ್ಯಗಳು
ಜಯ ಜಯವೆಂಬೆ ನಾನು ಶ್ರೀವರ ನಿನಗೆ ಪ ಜಯವೆಂಬೆ ಶ್ರೀವರನೆ ಭಯ ದೋಷವರ್ಜಿತನೆ ಅಯನ ವತ್ಸರಗಳೆಂಬ ನಿಯಮವು ಇಲ್ಲದವನೆ ಅ.ಪ. ತಿರುಗಿಣಿ ಪಾಲಿಸುವಿ ಪಾಲಗಡಲಿನಲ್ಲಿ ಆಲದೆಲೆಯಮೇಲೆ ಕಾಲನು ನೀಡಿ ನೀ ಮಲಗಿರುವಿ 1 ಸೃಷ್ಟಿಕರ್ತನು ಸೃಷ್ಟಿಪಾಲಕ ನೀನು ಶಿಷ್ಟ ಜನರಭಿಪ್ರದ ನೀನು ಕಷ್ಟಲೇಶವಿಲ್ಲದೆ ಶಿಷ್ಟ ಜನರುಗಳರಿಷ್ಟವೆಲ್ಲವ ನೀ ಕಟ್ಟಿ ಕೆಡಹುವಿ 2 ದೇವ ಶ್ರೀವತ್ಸಾಂಕಿತನೆ3
--------------
ಸಿರಿವತ್ಸಾಂಕಿತರು
ಪುರಾಣ ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ 1 ಸತ್ಯಭಾಮೆಯೆ ನಿನ್ನ ಚಿತ್ತದ್ವಲ್ಲಭ ನೀರೊಳು ಪೊಕ್ಕು ವೇದವ ತಂದು ಪುತ್ರಗಿಡಹೋದ 2 ಪನ್ನಂಗಶಯನ ಲಾವಣ್ಯರೂಪನು ಎನ್ನ ಕಣ್ಣಿಗೆ ಮರೆಯಾಗಿ ಇನ್ನೆಲ್ಲೆ ಹೋದ 3 ಪತಿ ಶರಧಿಯೊಳು ಬೆನ್ನಲಿ ಗಿರಿಯೆತ್ತಿ ತನ್ನ ಭಕ್ತರಿಗೆ ಸುಧೆಯ ನೀಡಲು ಹೋದ 4 ವನಜನಾಭನ ಕಾಣದೆ ಘನಕ್ಲೇಶದಿಂದೀಗ ಮನದ ವಿರಹತಾಪವನು ಸೈರಿಸಲ್ಹ್ಯಾಗೆ 5 ಅವನಿ ಕದ್ದವನ ಸಂಹರಿಸಿ ಕೋರೆಗಳಿಂದ ಭುವನಾಧಿಪತಿಯು ಬರುವನೆ ಸತ್ಯಭಾಮೆ 6 ಹಂಬಲ ಬಿಡದರವಿಂದನೇತ್ರನ ಬಿಟ್ಟು ಸುಂದರಾಂಗನ ಕರೆತಂದು ತೋರೆನಗೆ 7 ಕಂಬದಿಂದೊಡೆದು ಕಂದನ ತಂದೀ(ದೆಯ?) ಕರುಳ್ಹಾರ ಕಂದರದಿ ಧರಿಸಿ ತಾ ಬಂದನು ಭಾಮೆ 8 ಸೃಷ್ಟಿಕರ್ತನುಯೆನ್ನ ದಿ(ದೃ?) ಷ್ಟಿಂದೆ ನೋಡದೆ ಎಷ್ಟು ಹೇಳಲೆ ಪ್ರಾಣ ಬಿಟ್ಟು ಹೋಗುವುದೆ 9 ಪುಟ್ಟ ಬ್ರಾಹ್ಮಣನಾಗಿ ದಿಟ್ಟತನದಲಿ ದಾನವ ಕೊಟ್ಟ ಬಲಿ ಪಾತಾಳಕೆ ಮೆಟ್ಟಿ ಬಾಹುವನೆ 10 ತ್ವರಿತದಿಂದಲಿ ಯಾದವರರಸು ಶ್ರೀಕಾಂತನ ಸರಸವಾಡಲೀಗ ಕರೆಸಿ ತೋರೆನಗೆ 11 ಅರಸರ ಕುಲವ ಸಂಹರಿಸಿ ಕ್ಷತ್ರೇರನೆಲ್ಲ ನಿರುತ ನಿಷ್ಠೆಯಲಿ ತಪ ಚರಿಸಿ ಬಾಹುವನೆ 12 ಹೇಮಪುತ್ಥಳಿಗೊಂಬೆ ಸಾಮಜವರದನ ಆ ಮಾಸುರರೊಡೆಯ ಮೇಘಶ್ಯಾಮನ ತೋರೆ13 ಮಾಡಿ ಯುದ್ಧವ ಲಂಕಾ ನೋಡಿ ದಶಶಿರವ ಚೆಂಡಾಡಿ ಜಾನಕಿಯ ಒಡಗೂಡಿ ಬಾಹುವನೆ 14 ವಾಸುದೇವನ ಕಾಣದೊಂದರಘಳಿಗೀಗ ನಾಲ್ಕು ಯುಗವಾಗಿ ತೋರುವುದೆನ್ನ ಮನಕೆ 15 ಶ್ರೀಶ ತಾ ಸೋಳಸಾಸಿರ ಮಂದಿ ಸತಿಯೇರ ವಿ- ಲಾಸದಿಂದಿದ್ದನೀಗಿಂದೀವರಾಕ್ಷ 16 ಸಿರಿವೊಬ್ಬಳಲ್ಲದೆ ಪರನಾರಿಯರ ಕಣ್ಣು ತೆರೆದು ನೋಡುವ ತಾ ಭೂರಮಣನೆಲ್ಲಿಹನೆ 17 ಖರೆಯವೀಮಾತು ತ್ರಿಪುರದ ಸತಿಯರ ಲಜ್ಜೆ ತೊರೆದು ಕೂಡಿದನೆಂಬೋದು ಪರಮ ಮೋಹಕವೆ18 ನಾಡೊಳಗಧಿಕಶ್ವಾರೂಢ ರುಕ್ಮಿಣೀಕಾಂತನ ನೋಡದÉನಜೀವ ನಿಲ್ಲದು ನೀರಜಾಕ್ಷಿ 19 ಬೇಡಿಕೊಂಬುವೆನೆಂ(ಯೆ?)ದು ಭೀಮೇಶಕೃಷ್ಣನ ಕೂಡಿಸುವೆನೆ ಕರೆತಂದು ಕಮಲಾಕ್ಷಿ 20
--------------
ಹರಪನಹಳ್ಳಿಭೀಮವ್ವ
ಯಾಕೆ ಮನದಲಿ ಶೋಕಿಸುತ್ತಿರುವೆ ಜಗ ದೇಕನಾಥನು ಸಾಕುತಿರುವನು ನೀ ತಿಳಿಯದಿರುವೆ ಪ ಲೋಕನಾಥನ ವಿವೇಕದಿ ಸ್ತುತಿಸದೆ ವ್ಯಾಕುಲದಿಂ ಮನ ಕಳವಳಗೊಳುತಲಿ ಅ.ಪ ಸೃಷ್ಟಿಕರ್ತನು ರಕ್ಷಿಸುತ್ತಿರುವ ದುರಿತಂಗಳ ರಾಸಿಯ ಬೆಟ್ಟಗಳ ತರಿದೊಟ್ಟು ತಿರುವ ಅದು ತಿಳಿಯದು ನೀ ಬಲು ಕಷ್ಟಗಳ ಪಡುತಿರ್ಪ ವಿಷಯಗಳ ನೋಡುತ ನಗುತಿರುವ ಇಷ್ಟು ಈತನ ಪ್ರಭಾವವು ತಿಳಿಯದೆ ಲಕ್ಷ್ಮಿರಮಣ ರಕ್ಷಿಸೆನ್ನುತ ಸ್ಮರಿಸದೆ 1 ನಾನು ನನ್ನದು ಎಂಬ ಅಭಿಮಾನ ಅದು ಪೋಗುವ ತನಕ ಜ್ಞಾನ ಮಾರ್ಗಕೆ ಇಲ್ಲ ಸಾಧನ- ವೆಂದರಿಯುತ ಮನದಲಿ ಧ್ಯಾನಿಸುತ್ತಿರು ಶ್ರೀನಿಧಿ ಗುಣಗಳನು ಹೀಗಿರುವುದೆ ಪ್ರಧಾನ ಧ್ಯಾನ ಗಾನ ಮೌನಾದಿ ವ್ರತಗಳನು ಶ್ರೀನಿಧಿಗರ್ಪಿಸಿ ಮನ ಹರುಷಿಸದಲೆ2 ತಂದೆ ಶ್ರೀ ವೆಂಕಟೇಶ ವಿಠ್ಠಲನು ಹರಿಭಕುತರ ಮೊರೆಯನು ಛಂದದಿಂದಲಿ ಕೇಳಿ ಪೋಷಿಪನು ಮುಕುಂದನಲಿ ಭಕುತಿ ಎಂದೆಂದಿಗೂ ತಪ್ಪದೆ ಉದ್ಧರಿಸುವನು ನಿಜವೆಂದರಿ ಇದನು ಮುಂದೆ ಕಮಲನಾಭ ವಿಠ್ಠಲ ಭಕುತರ ಸಂದಣಿ ಪೊರೆದು ಸಂತೈಸುತಲಿರೆ ವೃಥ 3
--------------
ನಿಡಗುರುಕಿ ಜೀವೂಬಾಯಿ
ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ ಶರಣಾಗತನೊಳು ನಿರ್ದಯ ಸರಿಯೇ ಕರುಣಾಕರ ಗುಣನಿಧಿಯೇ ಪ ಅಪರಾಧಗಳನು ಕ್ಷಮಿಸಿ ಸ್ವಾಮಿ ಕಾಪಾಡೋ ಮಾಧವನೇ ಅಪಾರಪರ ಮಹಿಮನೇ ಪುರಾಣ ಪುರುಷೋತ್ತಮನೇ 1 ಸಂಕಟಪರಿಹಾರಕನೇ ನಮ್ಮ ವೆಂಕಟ ವಿಠಲನೆ 2 ಸೃಷ್ಟಿಕರ್ತನು ನೀನೆ ಸ್ವಾಮಿ ಅಷ್ಟೈಶ್ವರ್ಯವೂ ನೀನೆ ಶಿಷ್ಟರ ಪಾಲಿಪ ನೀನೆ ದುಷ್ಟರ ಸಂಹಾರಕನೇ 3 ವೇದ ಪುರಾಣವು ನೀನೆ ಮೇಧಿನಿಗಧಿಪತಿ ನೀನೆ ಮಾಧವ ಮಧುಸೂದನನೇ ಆದಿ ಮೂರುತಿ ನೀನೆ 4 ಹನುಮೇಶ ವಿಠಲನೇ ಸ್ವಾಮಿ ಜನನಿ ಜನಕನು ನೀನೆ ಜ್ಞಾನ ಪ್ರದಾಯಕ ನೀನೆ ಘನ ಮುಕ್ತಿಗೊಡೆಯನು ನೀನೆ 5
--------------
ಹನುಮೇಶವಿಠಲ