ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ ಕ ರುಣಾಶಾಲಿಗಳನ್ನು ಪಣೆಗಣ್ಣ ಮೊದಲಾದಮರ ಗಣದೊಳು ಇನ್ನು ನಾ ಕಾಣೆ ಮುನ್ನ ಪ ಗುಣನಿಧಿಯೆ ಎಣಿಯಿಲ್ಲ ನಿನ್ನಯ ಅಣು ಮಹಘನರೂಪ ಕ್ರಿಯಗಳು ಕ್ಷಣಬಿಡದೆ ನೀನಖಿಳಜೀವರ ತ್ರಿ- ಗುಣ ಕಾರ್ಯವ ಗೈವೆ ಮುಖ್ಯ ಅ.ಪ ಕರ್ಮ ಜೀವರೊಳು ನೀನೆಸಗಿ ತೋರ್ಪುದೆ ಧರ್ಮ ನಾನರಿಯೆ ಪ್ರತಿ ಕರ್ಮ ಎನ್ನನುಭವಕೆ ತಂದಿಡುವುದೇ ನಿನ್ನ ಧರ್ಮ ನಾ ಕಾಣೆ ಮರ್ಮ ಜನುಮ ಕೋಟಿಗಳಿಂದಲಿ ಅನುಸರಿಸಿ ಬಂದಿಹ ಎನ್ನ ಕರ್ಮವ ಅನಿಲದೇವ ನಿನ್ನಿಂದ ಅಲ್ಲದೆ ಎನಿತು ಇತರನಿಮಿಷರು ಮಾಳ್ವರು ಜ್ಞಾನದಾಯಕ ನೀನೆ ಎನ್ನಯ ಮನದಲಿಹ ಜಂಜಡವ ಕಳೆದು ಹೀನಕರ್ತನು ತಾನು ಅಲ್ಲದೆ ನೀನೆ ಸರ್ವರ ಕರ್ತನೆಂಬುವ ಜ್ಞಾನಿ ಧ್ಯಾನ ಸ್ಮರಣೆಯನು ಸಾನುರಾಗದಿ ಇತ್ತು ನಿನ್ನ ಮತಾನುಗರಲ್ಲನವರತ ಇಡು ಅನೇಕ ಜನುಮಜನುಮಾಂತರದೊಳು 1 ಶ್ವಾಸನಾಮಕ ನೀನು ಜಗದೀಶ ನೀ ಜೀ- ವೇಶ ಸರ್ವಶಕ್ತಾನು ನೀ ತಾಸಿಗೊಂಭೈನೂರು ಶ್ವಾಸಗಳನ್ನು ಈ ಶರೀರದಿ ಜೀವರಿಂ ದೆಸಗುವೆಯೊ ನೀನು ಉಸುರಲೇನಿನ್ನು ವಾಸುದೇವಗೆ ಪ್ರೀತನಾಗಿ ಅ- ಶೇಷತತ್ತ್ವಕ್ಕೀಶನಾಗಿಹೆ ವಾಸವಾದಿಗಳೆಲ್ಲರೊಳು ಇನ್ನು ಈಸುಭಾಗ್ಯವು ಕಾಣಲಿಲ್ಲ ಏಸುಕಾಲಕು ನೀನೇ ಗತಿಯೆಂದು ಈಶ ಶೇಷ ಖಗೇಶ ಪ್ರಮುಖರು ದಾಸರಾಗಿಹಗರಯ್ಯ ಬಿಡದೆ ದೇಶಕಾಲಗಳಲ್ಲಿ ನಿನ್ನೊಳು ಸೂಸುವಾ ಅತಿಭಕುತಿಯಿಂದಲಿ ಈಶ ತಪದಲಿ ನಿನ್ನ ಮೆಚ್ಚಿಸೆ ಶೇಷಪದವಿಯ ಕೊಟ್ಟು ಶ್ರೀಶ- ನ ಶಯನಸೇವೆ ಸಂಪದವನಿತ್ತೆ 2 ಭಕುತ ಜನರ ಬಂಧೂ ಶ್ರೀಹರಿಗೆ ನೀ ಪ್ರಥ- ಮಾಂಗನಹುದೆಂದೂ ಈ ಸಕಲ ಜಗದಾ ಚೇಷ್ಟಪ್ರದನೆಂತೆಂದೂ ನೀನೆ ಭಗವತ್ಕಾರ್ಯಸಾಧಕನೆಂದೂ ಸಾರುತಿದೆ ಶ್ರುತಿ ಇಂದೂ ಲೋಕಮಾತೆಗೆ ನಮಿಸಿ ದಶಶಿರ ನಂದನನ ಸಂಹರಿಸಿ ಮಹದಾನಂದ ನೀ ವನವ ಭಂಗಿಸಿ ರಘುನಂದನಗೆ ಮುದದಿಂದ ವಂದಿಸಿ ನೊಂದ ದೃ- ಪದನಂದನೇಯಳಾ- ನಂದಪಡಿಸಲು ಕೊಂದೆ ಕೌರವ ವೃಂದವೆಲ್ಲವ ಸವರಿ ನಂದನಂದನಿಗಾನಂದ ಪಡಿಸಿದೆ ಇಂದಿರೇಶ ಶ್ರೀ ವೇಂಕಟೇಶನೆ ಎಂದಿಗೂ ಪರದೈವವೆಂದು ಬಂದು ಬೋಧೆಯನಿತ್ತ ಆ- ನಂದತೀರ್ಥ ನೀ ಸಮರ್ಥಾ3
--------------
ಉರಗಾದ್ರಿವಾಸವಿಠಲದಾಸರು
ಭಾರ ನಿನ್ನದು ತಂದೆ ಸಿಂಧು ಎಂದೆಂದು | ಗುರುವರ್ಯ ಬಂದು ಕರುಣಿಸುವನು ಮದ್ಬಂಧೊ 1 ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು ಪೊಂಗಳಧರನ ತೋರಯ್ಯ | ಅಜರಾಯ ಭಂಗಬಡಲಾರೆ ಭವದೊಳÀು 2 ನಾರಾಯಣನ ಪುತ್ರ ನಾರಾಯಣಗೆ ಮಿತ್ರ ನಿರವದ್ಯ | ನೀಡಭಯ ಕರುಣಾತ್ಮ ಗುರುವೆ ಒಲಿದಿಂದು 3 ಕಾಮರೂಪನೆ ಹರಿಯನೇಮದಲಿ ಕಪಿಯಾಗಿ ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ ತಾಮಸರ ಹುರಿದೆ ಪುರದಲ್ಲಿ 4 ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ ಹರಿ ಅಂಗ ಸಂಗ ಪಡೆದಯ್ಯ 5 ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ ಕುಂದದೆ ಅಭಯ ಕೊಡಿಸಿದೆ | ದಯಸಿಂಧು ನಿಂದೆನ್ನ ಒಳಗೆ ಮುದವೀಯೊ 6 ದೇವೇಶನಾಜ್ಞೆಯಲಿ ಜೀವೇಶ ಸಂಜೀವ ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ ಮೊದಲೆಡೆಗೆ ಬಗೆದ ಕುಶಲಾತ್ಮ 7 ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ ಭೀಷಣಗೆ ರಾಷ್ಟ್ರ ಕೊಡಿಸಿದೆ 8 ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು ಕಾಯ ಬಿಡುತೀರೆ | ಉಳುಹಿದೆ ಶ್ರೀ ರಾಮನಾಗಮನ ತಿಳುಹೀಸಿ9 ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು ಪಾದ ಪಿಡಿಯಲು | ಭಕ್ತಿಯಲಿ ಪಟ್ಟಾಭಿರಾಮ ತನ್ನಿತ್ತ 10 ಆಖಣಾತ್ಮಕಾಯನೆ ಅಕಳಂಕ ಗುಣಧಾಮ ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ ಶ್ರೀಕೃಷ್ಣ ಭಕ್ತಾ ಕಲಿಭೀಮ 11 ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು ನಸುನಗುತ ಜನನಿಗಭಯವ | ನಿತ್ತಂಥ ಪಶುಪಾಲ ಪರನೆ ಪೊರೆಯೆನ್ನ 12 ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ ಸರ್ವಜ್ಞ ಭೀಮ ಬಿಡೆ ನಿನ್ನ 13 ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ ಪಶುವಂತೆ ವಧೆಯ ಮಾಡಿದಿ | ರಣದೊಳು ಸುಸ್ವಾದ ಗುಣಸಾರ ಮಹವೀರ 14 ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ ಪ್ರಾಣಸಖನಾಗಿ ಸಲಹಿದೆ | ಜಯಭೀಮ ಪಾಣೆ ಪಿಡಿಯೆನ್ನ ಮಹಘನ್ನ 15 ದುರಾರಾಧಕ ದುಷ್ಟ ಜರಸಂಧನ ಸೀಳಿ ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ ಪುರಾರಿ ವಂದ್ಯಾಗತಿ ನೀನೆ 16 ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ ಧೀರ ಎದುರಾಗಿ ನೀ ನಿಂತೆ 17 ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ ಮರಿಯದೆ ಅವನ ಅನುಜರ | ಸದೆಬಡಿದು ಮೋದ ನೀನಿತ್ತೆ 18 ಉರಗ ಬಂಧವ ಹರಿದು ಕರಿ ಮುಂದೆ | ನೀನಿಂತೆ ಸರ್ವನಿತ್ಯಾತ್ಮ ಕೃಷ್ಣಾತ್ಮ 19 ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ ಮುದದಿಂದ ನಲಿದೆ ಕಮಲಾಕ್ಷ 20 ಅರಗಿನ ಮನೆಯಲ್ಲಿ ವೈರಿಜನರ ಕೊಂದು ಪೊರೆದೆ ನೀ ಜನನಿ ಅನುಜರ | ಪಂಜರನೆ ಧರೆಯೊಳಗೆ ಎನ್ನ ಸಲಹಯ್ಯ 21 ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು ನಡೆದೇಕ ಚಕ್ರಪುರದಲ್ಲಿ | ಬಕನೊರಸಿ ನಡಕ ಬಿಡಿಸೀದಿ ಸುಜನರ 22 ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ ಲೇಸಾಗಿ ಮುಂದೆ ನಡೆದಯ್ಯ 23 ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು ವಾಸುದೇವನ ಕಂಡು ಆನಂದ | ತುಳುಕುತ್ತ ಆ ಸತಿಯ ತಂದೆ ವಿಜಯಾತ್ಮ 24 ರಾಜರೆಲ್ಲರ ಹಿಡಿದು ರಾಜಸೂಯಯಾಗವನು ಪೂಜೆಯನು ಮಾಡಿ ಮೆರದಯ್ಯ 25 ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ ದಕ್ಷನೆ ನೀನು ವನವಾಸ | ಅಜ್ಞಾತ ಪಕ್ಷವ ಕಳೆದು ಮರಳಿದೆ26 ಸಂಗರವ ನೀ ಹೂಡಿ ಭಂಗಿಸಿ ಕೌರವನ ರಂಗನ ಮುಂದೆ ಅರ್ಪಿಸಿ | ವಂದಿಸಿ ಮಂಗಳಾತ್ಮಕನೆ ಸಲಹೆಮ್ಮ 27 ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ ನಿರ್ಮೂಲಗೈದು ಅರಿಗಳ | ಕೊಂದ ಪರ ಧರ್ಮಪರರನ್ನು ಪೊರೆದಯ್ಯ 28 ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ ವಿದ್ಯಾಧಿಪತಿಯೆ ಸಲಹೆನ್ನ 29 ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ ಉಸರಲೇನಯ್ಯ ನಿನ್ನಲ್ಲಿ | ಜೀವೇಶ ಸೂಸುವ ಭಕ್ತಿ ನೀಡಯ್ಯ 30 ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ ಮಧ್ವಾಖ್ಯ ಗುರುವೆ ಪರಿಪಾಹಿ 31 ಸುರರು ದುಂದಭಿ ಮೊರೆಯೆ ದುರುಳರ ಎದೆಯು ನಡುಗಲು | ಹರುಷದಲಿ ಮೆರೆದು ನೆರೆದರು ಸುಜನರು 32 ಕೈವಲ್ಯ ನೀನಿತ್ತೆ ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ ನೀವಲಿದು ಹರಿಯ ತೋರಯ್ಯ 33 ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು ಗುಣಪೂರ್ಣ ಹರಿಯ ಪ್ರತಿಬಿಂಬ 34 ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ ವಿಪ್ರ ಸುರರು ಪೂಜಿಸೆ | ನಲವಿಂದ ಅವನಿಯೊಳು ಪೊಳೆದೆ ರವಿಯಂತೆ 35 ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ ಉದ್ಧರಿಸು ಎನ್ನ ದ್ವಿಜರತ್ನ 36 ಜನನಿ ಜನಕರು ತಡಿಯೆ ಅನುವಾದ ಸುತನಿತ್ತು ಘನವಾದ ತುರ್ಯ ಆಶÀ್ರಮ | ಕೈಗೊಂಡು ಸುನವ ಪದ್ಧತಿಯ ತೋರಿದೆ 37 ಅಚ್ಯುತ ಪ್ರೇಕ್ಷಕರಿಗೆ ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ ಅಚ್ಚುಮೆಚ್ಚುವ ನೀ ಹರಿಗೆಂದು 38 ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ ಛೇದಿಸಿ ಖಳರ ಮದವನ್ನು | ಹರಿಸಿದೆ ಸ್ವಾದ ಗುಣಸಿಂಧು ಮದ್ಬಂಧು 39 ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ ಕೊಳ್ಳುವದುಯೆಂದು ವರದಯ್ಯ 40 ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ ಬೋಧವೊ ಮಹಿಮೆಯೆಂದಾರು 41 ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು ಮುದದಲ್ಲಿ ಬಂದು ನಮಿಸಲು | ಶಿಷ್ಯಜನ ಯೈದಿ ಭಕ್ತಿಯನು ನಮೋ ಎಂದು 42 ಹರಿಯಂತೆ ನರಿಗಳನು ತುರಕ ದೂತರ ಜರಿದು ನರಪನಿಂದರ್ಧ ಮಹಿಮೆಯನ್ನು | ಪಡೆದಂಥ ಯರಡೇಳು ಭುವನ ಅಧಿಪತಿ 43 ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ ಭೃತ್ಯತ್ವಯೆನಗೆ ನೀಡಯ್ಯ 44 ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು ಈಶ ಸಲಹೆಂದು ಎರಗಲು | ಮನವುಬ್ಬಿ ಬಾ ಸುತನೆ ಎಂದು ತಬ್ಬಿದ 45 ಆನಂದ ಮೂರ್ತಿಯ ಆನಂದ ಸಂಗವನು ಆನಂದದಿಂದ ನೀ ಯೈದಿ | ನಂದ ಆನಂದ ತೀರ್ಥ ಕೊಟ್ಟೆಯೊ 46 ನಾರಾಯಣನಲಿ ಕರೆದೊಯ್ಯೆ ಬದರಿಪನ ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ ಗುರುರತ್ನ ಸಲಹೊ ಧನ್ಯಾತ್ಮ 47 ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ ಅಚ್ಯುತಾತ್ಮಾನೆ ಸಲಹೆನ್ನ 48
--------------
ಜಯೇಶವಿಠಲ
ವಾಸುದೇವ ಕೃಷ್ಣ ವಿಠಲನೇ | ಪಾಲಿಸಿವಳಾದೇಶಕಾಲ ಗುಣ ಅತೀತನೇ ಪ ಬಾಸುರಾಂಗ ನಿನ್ನಪಾದ | ಸೂಸಿ ಭಜಿಪ ಮತಿಯು ಇಹುದುಲೇಸು ನಿನ್ನ ಅಂಕಿತೋಪ | ದೇಶದಿಂದ ಸಲಹೊ ಇವಳ ಅ.ಪ. ಅಂಚೆಗಮನ ಪದಕೆ ಯೋಗ್ಯರಾ | ದೃಶ್ಯತೋರ್ದೆಸಂಚಿತಾದಿ ಕಳೆವ ಮಾರ್ಗದಾ |ಪಂಚಬೇಧ ತಾರತಮ್ಯ | ಮುಂಚೆ ತಿಳಿವ ಮತಿಯನಿತ್ತುಮಿಂಚಿನಂತೆ ಮನದಿಕಾಂಬ | ಪಂಚರೂಪಿ ನೀನೆ ವಲಿಯೊ 1 ಪತಿಯು ಸುತರು ಮಿತ್ರರ್ಗೆ ಸೂಸುವಾ | ಶ್ರೀಶ ಶ್ರೀಪತಿಯ ಸೇವೆ ಎಂದು ಕರೆಸುವಾ | ಮತಿಯನಿತ್ತು ಪೊರೆಯೊ ಹರಿಯೆ | ಗತಿಯು ಇದಕೆ ಅನ್ಯಕಾಣೆ ಪತಿಯ ಪರಮದೈವವೆಂಬ | ಪಥವ ತೋರಿ ಪೊರೆಯೊ ಇವಳಾ 2 ಮುಕ್ತಿಯೋಗ್ಯ ದಾರಿ ಎನಿಸುವಾ | ಮಧ್ವ ಶಾಸ್ತ್ರವೃತ್ತಿಯಲ್ಲಿ ಭಕ್ತಿ ಪೂರ್ಣವಾ |ಇತ್ತು ಜ್ಞಾನ ವೃದ್ಧಿಯ ಪ್ರ | ವೃತ್ತಿ ಮನ ವಿರಕ್ತಿಯಲ್ಲಿಶಕ್ತಿ ಕೊಡುವುದೆಂದು ತುತಿಪೆ | ಪ್ರಾರ್ಥನೆಯ ಸಲ್ಲಿಸಯ್ಯ 3 ಅಂಬುಜಾಕ್ಷ ಭವಸಮುದ್ರವಾ | ದಾಟಿಸೂವಅಂಬಿಗಾನೆ ನಿನ್ನ ನಾಮವಾ |ನಂಬಿಹೇನೊ ದೃಢದಿ ಮನದಿ | ಇಂಬಿನಿಂದ ನಾಮ ಮಂತ್ರಉಂಬ ಸುಖವ ನಿವಳಿಗಿತ್ತು | ಸಂಭ್ರಮವ ತೋರಿ ಸಲಹೋ 4 ಗೋವ್ಗಳೇಶ್ಯುಪೇಂದ್ರ ಹಯಮುಖ | ಶರ್ವ ಗುರು -ಗೋವಿಂದ ವಿಠಲ ಸರ್ವ ಪ್ರೇರಕಾ |ಭಾವದಿಂದ ಭಜಿಪ ನಿನ್ನ ಸೇವಕಾಳ ಸಲಹೊ ಎಂಬದೇವದೇವ ಭಿನ್ನಪಾವ | ಓವಿ ಸಲಿಸು ಎಂದು ಬೇಡ್ವೆ 5
--------------
ಗುರುಗೋವಿಂದವಿಠಲರು