ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಲೇಸು ಮಾಡಿದೆ ಮಾತೆ ಪುಣ್ಯದ ರಾಶಿ ಎನಗೊದಗಿತು ಭಲ ಪ ಆಶೆಯನು ಪೂರೈಪೆನಿಂದಿನ ಘಾಸಿಯಾಕೆ ದ್ವಿಜರಿಗಲಾ ಅ.ಪ ಬಂಡಿಯನ್ನವು ಪಾಯಸವುಸುಖಿ ವುಂಡು ತೇಗುತ ಬರುವೆನು1 ಶಾನೆ ಖಾರದಪ್ಪಳ ಸಂಡಿಗೆಯು ನೂರಾರು ಬೆಂಡು ಪುಟ್ಟಿಗೆಗಳು 2 ದೋಸೆ ಕೋಡುಬಳೆಯಪ್ಪಗಳು | ಸೋ- ಮಾಸಿ ಹೂರಗಿ ಮಾಡಿಸು ಸೂಸಲುಪ್ಪಿನಕಾಯಿಗಳನ್ನು ರಾಸಿ ರಾಸಿಯು ತುಂಬಿಸು 3 ಎಲ್ಲವನು ಹೆಚ್ಚಾಗಿ ಮಾಡಿಸು ನಿಲ್ಲದೀಗಲೆ ಪೋಗುತಾ ಸುಳ್ಳಿದಲ್ಲವು ತಿಳಿಯುತ 4 ಕುಡಿವೆ ಭುಜವಪ್ಪಳಿಸಿ ನಾಂ ಸಡಗರವೆನಗೆ ಗೈದ ತಾಂ 5
--------------
ಗುರುರಾಮವಿಠಲ