ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ ವಾಸವಾಗದಂತೆ ಕಾಯೋ ಮೋಹನ್ನಾ ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ ಬೆಂಬಿಡದೆಲೆ ನಿಜದರಿವನ್ನು ಕೊಡುವಾ ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ ನಂಬಿಗೆ ಕೊಡುವವರ್ಯಾರೋ ನಾರಾಯಣಾ 1 ಬೆಂದೆನು ನಾ ಭವದೊಳಗೆ ಎನ್ನಾ ತಂದೆ ನೀ ಕಾಯೋ ನಿಜಪದದೊಳಗೆ ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ ಮುಂದೆ ನೀ ಸಲಹೊ ಪರಮಪುರುಷನೆ ಹರಿ 2 ವಾಸನೆ ಬಂಧವೇ ಜೀವಾ ನಿ ರ್ವಾಸನೆಯನು ಕೊಟ್ಟು ಸಲಹೊ ಮಾಧವಾ ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ ಆಶೆಯನು ಸಲಿಸಯ್ಯಾ ಮುರಾರಿ 3 ಅನಂತ ಮಹಿಮಾ ಮೇಘಶ್ಯಾಮಾ ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ ನಂತಪರಾಧವ ಕ್ಷಮಿಸೆನ್ನಾ ಗುರುವೇ 4
--------------
ಶಾಂತಿಬಾಯಿ
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ಸುವ್ವಿ ಎಂದು ಪಾಡಿರೆ ಸುಜ್ಞಾನ ದೇವರಭವಹರಿವುದು ಭಯವಿಲ್ಲ ಸುವ್ವಿಪಂಚ ಶಕ್ತಿಗಳೆಂಬಪರಮಮುತ್ತೈದೆಯರುವಂಚನೆಗೆ ದೂರಾಗಿ ವರ್ತಿಸುತ ಸುವ್ವಿವಂಚನೆಗೆ ದೂರಾಗಿ ವರ್ತಿಪಐದೆಯರುಮುಂಚೆ ಬೇಗದಲಿ ಮಡಿಯಾಗಿ ಸುವ್ವಿ1ಕ್ಷೇತ್ರದ ಒರಳಲ್ಲಿ ಕ್ಷರನೆಂಬ ಅಕ್ಕಿಯುಕ್ಷೇತ್ರಜÕನೆಂಬ ಒನಕೆಯ ಸುವ್ವಿಕ್ಷೇತ್ರಜÕನೆಂಬ ಒನಕೆಯ ಪಿಡಿದುಪಾತ್ರನಾಗೆಂದು ಹರಸುತ ಸುವ್ವಿ2ಆರು ಮೂರಾದವನ ಐದು ಎಂಟಾದವನಬೇರೇಳು ನಾಲ್ಕೆರಡು ಬಗೆಯಾದವನ ಸುವ್ವಿಬೇರೇಳು ನಾಲ್ಕೆರಡು ಬಗೆಯಾದನೆಲ್ಲನುವಾರಣದಿ ನೀವೆಲ್ಲ ತಳಿಸಿರೆ ಸುವ್ವಿ3ವಾಸನೆಯ ಮೆರುಗನು ಒಳಿತಾಗಿ ತಳಿಸುತ್ತಸೂಸದಂತೆಲ್ಲವ ಮಗುಚುತ್ತ ಸುವ್ವಿಸೂಸದಂತೆಲ್ಲವ ಮಗಚುತ್ತ ಅಕ್ಕಿಯರಾಶಿಯನು ಮಾಡಿ ಬಿಡಿರವ್ವ ಸುವ್ವಿ4ಪರವಸ್ತುವಾದವನ ಪರಬ್ರಹ್ಮವಾದವನಪರಮಾತ್ಮನೆಂಬ ಪುರುಷನ ಸುವ್ವಿಪರಮಾತ್ಮನೆಂಬ ಪುರುಷ ಚಿದಾನಂದನಪರಮನೈವೇದ್ಯದ ಪಾಕಕ್ಕೆ ಸುವ್ವಿ5
--------------
ಚಿದಾನಂದ ಅವಧೂತರು