ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಾಲದಾಸರ ಸ್ಮರಣೆ | ಬಹುತಾಪತ್ರಯದ ನಿವಾರಣೆ ಪ ಶ್ರೀಪತಿ ವೇಂಕಟೇಶನ | ಸಾಪರೋಕ್ಷದಿ ಕಂಡುಹಿಗ್ಗುತವ್ಯಾಪ್ತದರ್ಶಿಗಳಾಗಿ ಭಕ್ತಿಲಿ | ಆಪರಂತಪನೊಲುಮೆಗಳಿಸಿದ ಅ.ಪ. ಬಾಲ್ಯತನದಿ ವೇದಮಾತಾ | ಎಂಬಗಾಯತ್ರಿ ಮಂತ್ರವು ಜಪ್ತಾ |ಸೂರ್ಯಾಂತರ್ಗತನಾದ | ಹರಿಯನ್ನು ಕಾಣುತಾಕಾರ್ಯೋನ್ಮುಖನು ಆದ | ಪ್ರಶ್ನೆಗಳ ಪೇಳಲು 1 ಇರಲೊಂದು ಕಾಲಕ್ಕೆ ವಿಜಯಾ | ದಾಸರ್ ಬರವಾಯ್ತು ಕೇಳಿರಿ ಚರ್ಯಾ || ವರ ವಿಜಯ ದಾಸಾರ್ಯರೆಂಬರ | ಪ್ರತಿಭೆಯಾವರಣ ಮುಸುಕಿಲಿನಿರುತ್ತರರು ಆಗಿಹರ್ | ಪ್ರಶ್ನೋತ್ತರಗಳ ಕೇಳಲು2 ಮೂಷಕ | ವರಸುವಾಹನನಂಶ ಸಂಭವ 3
--------------
ಗುರುಗೋವಿಂದವಿಠಲರು
ಲೋಕನೀತಿ 1 ಕಾಮಧೇನು ಕಲ್ಪತರು ಕಾಮಿತಾರ್ಥವನೀವ ಹರಿಯೇ ಎನಗಿರೆ ಎನಗ್ಯಾತಕೆ ಚಿಂತೆ ಕಾಮಿತಾರ್ಥವನೀವ ದೊರೆಯಿರಲು ಯನಗ್ಯಾತರ ಕೊರೆತೆ ಹರಿಕಾವದೇವ ನೀನಿರಲು ಕೋಳಿ ತನ್ನ ಮರಿಗೆ ಹಾಲುಕೊಟ್ಟು ಸಾಕುವದೆ ಕಾಳ ರಾತ್ರಿಯು ಕಳೆದು ಹರಿ ಉದಿಸುವನೆಂದು ಕೋಳಿಕೂಗಿದರೂ ಏಳದೆ ಮಲಗಿ ಕಾಲಕಳೆವರು ಮನುಜರುಹರಿಯೆ ಕಾಲಕೂಟ ಸಮ ಕಾಮಿತಾರ್ಥವ ಬೇಡುವರು ಕಾಲದೂತರು ಬರುವ ವ್ಯಾಳೆತನಕ ನಿನಧ್ಯಾನಿಸದೆ ಕಾಲಕಳೆವರು ಮನುಜರು ಕಾಲಮೂರುತಿ ನೀನೆ ಎಂದರಿಯರು ಹರಿ ಕಾಲ ಅಕಾಲ ನಿನಗುಂಟೆ ಎನಗುಂಟೆ ದೇವ ನೀ ಎನಗೆ ಇಂಥಾ ಕೀಳು ಬುದ್ಧಿಯ ಕೊಡದಿರೊ, ಏಳು ಬೆಟ್ಟದ ಒಡೆಯ ಶ್ರೀ ಶ್ರೀನಿವಾಸ 2 ಬೆಳಗೆದ್ದು ಹರಿ ನಿನ್ನ ಧ್ಯಾನಿಸದೆ ಪರಧ್ಯಾನ ಪರನಿಂದೆಯಲ್ಲಿಹರು ನಿತ್ಯ ನಿನ್ನ ಧ್ಯಾನ ಬಿಟ್ಟು ಬೆಳಗಾಗೆ ನಿನ್ನ ಸೂರ್ಯರಶ್ಮಿ ಬಿದ್ದರೂ ಏಳರು ಶಯನ ಬಿಟ್ಟು ಈ ಜಗದಿ ದೇವ ಈ ಕಲಿ ಜನರು ಇಂಥಾ ಬೆಳಗ ಎನಗೀಯದೆ ನೀ ಎನ್ನೊಳಗಿದ್ದು ಬೆಳಗಿನ ಜಾವದಿ ನಿನ್ನ ಕಳೆಕಳೆರೂಪ ಎನಗೆ ತೋರೋ ಘಳಿರನೆ ಶ್ರೀ ಶ್ರೀನಿವಾಸ 3 ಎರಡನೆ ಜಾವದಲಿ ಹುಂಜ ಹರಿಪೂರ್ವದಲಿ ಬರುವ ಏಳಿರೆಂದು ಕೂಗಲು ಸತಿ ಸಹಿತ ಕಾಮಕೇಳಿಯಲಿಹರು ಮೂರನೆ ಝಾವದಲಿ ಹರಿ ಉದಿಸಿ ಬ್ರಾಹ್ಮೀಮುಹೂರ್ತದೊಳು ಹರಿ ಬೆಳಕೀವ ಲೋಕಕೆ ಎಂದು ಕೂಗುವುದು ಕೋಳಿ ಕೇಳಿ ಕರ್ಣದಲಿ ಶಯನ ಬಿಟ್ಟೇಳರೊ ಈ ಜಗದಿ ಮೂರೆರಡು ಶತಶ್ವಾಸ ಜಪ ಮಾಡಿಸುವ ಹರಿಭಕ್ತ ಹನುಮನೆಂದರಿಯದೆ ಮಲಗಿ ಕಾಲ ಎರಗಿ ಬರುವುದು ಆಯುಷ್ಯವೆಂದರಿಯದೆ ಭಾರತೀಪತಿ ಅಂತರ್ಯಾಮಿ ನಿನ್ನಧ್ಯಾನಿಸದೆ ಇಹರಲ್ಲೋ ಈ ಜಗದಿ ಶ್ರೀ ಶ್ರೀನಿವಾಸ ಎನ್ನ ನೀನವರ ಸಂಗ ಸೇರಿಸದೆ ಕಾಯೊ ಹರಿಯೆ ಎನ್ನ ದೊರೆಯೆ 4 ಸೂರ್ಯನಂತರ್ಯಾಮಿ ನೀನಲದೆ ಮತ್ಯಾರಿಹರು ಹರಿ ಸೂರ್ಯಾಂತರ್ಗತ ಸೂರ್ಯನಾರಾಯಣ ಸೂರ್ಯಕೋಟಿ ತೇಜದಿ ಮೆರೆವೆ ಸೂರ್ಯ ಸಹಸ್ರ ಉದಿಸಿದಂತೆ ಬರುವೆ ಕರ್ಮ ನೀ ಮಾಡಿಸಿ ಪೆರ್ಮೆಯಿಂದವರ ಕಾಯ್ವ ಶರ್ವಾದಿವಂದಿತ ಗರ್ವರಹಿತ ವೈಕುಂಠಪತಿ ನೀ ನಿನ್ನವರ ಕಾಯಲು ಸರ್ವದಾ ಅವರಿಗೆ ವಲಿದು ಕಾವೆ ಆದಿನಾರಾಯಣ ಶ್ರೀ ಶ್ರೀನಿವಾಸ ಕಾಯೆನ್ನ ಸೂರ್ಯಾಂತರ್ಗತ ವೆಂಕಟೇಶಾ 5 ಹಗಲಿರುಳು ಎನ್ನದೆ ನಿನ್ನ ಸ್ತುತಿಪರು ಭಕ್ತರು ಅಘಹರನೆ ನಿನ್ನ ಪ್ರೇರಣೆಯಿಂದಲವರಿರಲು ಬಗೆಬಗೆಯ ರೂಪದಿ ಬಂದವರ ಸಲಹುವೆ ನಗೆ ಮೊಗದ ಶ್ರೀ ರಮೆಯರಸ ಲಕ್ಷ್ಮೀಶ ನಿನ್ನ ಬಗೆ ಅರಿತಿಹರಾರಿರೀಜಗದಿ ಪಗಲಿರುಳೆನ್ನದೆ ನೀನವರಲ್ಲಿದ್ದು ಸಲಹಲು ಬಗೆವರೆ ಅನ್ಯರಿಗೆ ಅಲ್ಪರಿವರೆ ನಿನ್ನವರು ಜಗದಾಖ್ಯ ವೃಕ್ಷನೀನಿರಲು ನಿನ್ನ ಭಕ್ತರು ನಿನಗಲ್ಲದೆ ಜಗದೊಡೆಯ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯ ಮಾರುತಿ ಪಂಚಪ್ರಾಣ ಪ ಭಾರ್ಯಳೆಂದೊಡಗೂಡಿ ಸರ್ವಜೀವರೊಳಿದ್ದು ವೀರ್ಯ ಕೊಡುತಲಿರ್ದ ಶರ್ವಾದಿ ವಂದ್ಯಾತಿಅ.ಪ. ದ್ರುಪದನ ಸುತೆ ನಿನ್ನ ಕರೆಯೆ ಅಂದು ಕೃಪಣ ವತ್ಸಲ ಶೀರೆ ಮಳೆಯೇ ಅಪರಿಮಿತವು ನೀರ ಸುರಿಯೆ ಸ್ವಾಮಿ ಕುಪಿತ ದೈತ್ಯರ ಗರ್ವ ಮುರಿಯೇ ಜನಸೋ ಜನರ ವಿಪತ್ತು ಕಳೆದೆ ಈ ಪರಿಯ ದೇವರನೆಲ್ಲಿ ಕಾಣೆನೊ ತಪನಕೋಟ ಪ್ರಕಾಶ ಬಲ ಉಳ್ಳ ಕಪಿಲರೂಪನೆ ಜ್ಞಾನದಾಯಕ 1 ಹೃದಯ ಮಂಟಪದೊಳಗೆಲ್ಲ ಪ್ರಾಣ- ದದುಭುತ ಮಹಿಮೆಯ ಬಲ್ಲ ಸದಮಲನಾಗಿ ತಾವೆಲ್ಲ ಕಾರ್ಯ ಮುದದಿ ಮಾಡಿಸುವ ಶ್ರೀನಲ್ಲ ಹದುಳ ಕೊಡುತಲಿ ಬದಿಲಿ ತಾನಿದ್ದು ಒದಗಿ ನಿನಗೆಲ್ಲ ಮದುವೆ ಮಾಡಿದ ಪದುಮಜಾಂಡೋದರ ಸುದತಿಯ ಮುದದಿ ರಮಿಸೆಂದು ಒದಗಿ ಬೇಡುವೆ 2 ಎನ್ನ ಬಿನ್ನಪವನ್ನು ಕೇಳೊ ಪ್ರಿಯ ಮನ್ನಿಸಿ ನೋಡೊ ದಯಾಳೋ ಹೆಣ್ಣಬಲೆಯ ಮಾತು ಕೇಳೂ ನಾನು ನಿನ್ನವಳಲ್ಲವೇನು ಹೇಳೋ ನಿನ್ನ ಮನದನುಮಾನ ತಿಳಿಯಿತು ಕನ್ಯಾವಸ್ಥೆಯು ಎನ್ನದೆನ್ನದೆ ಚೆನ್ನ ಶ್ರೀನಿಧಿವಿಠಲ ಪ್ರಾಯದ ಕನ್ನೆ ಇವಳನು ದೇವ ಕೂಡಿಕೊ 3
--------------
ಶ್ರೀನಿಧಿವಿಠಲರು
ಸೂರ್ಯಾಂತರ್ಗತ ಹರಿ ನಮೋ ನಮೋ ವೀರ್ಯಾದಿಗಳದಾತ ನಮೋ ನಮೋ ಜಗಬಿಂಬ ಪ ತೋಯಜಾಕ್ಷನ ವಿಷ್ಣು ನಮೋನಮೋ ಜೀಯ ಪಾಲಿಸುದೇವ ನಮೋನಮೋ ಮಮಬಿಂಬ ಅ.ಪ ಆನಂದ ಪರಿಪೂರ್ಣ ನಮೋನಮೋ ಏನೆಂಬೆ ಪರಮೋಚ್ಚ ನಮೋನಮೋ ಶ್ರೀನಾಥ ಸಿರಿಪೂರ್ಣ ನಮೋನಮೋ ಏನೆಂಬೆ ಪರದೋಚ್ಚ ನಮೋನಮೋ ಶ್ರೀನಾಥ ಸಿರಿಪೂರ್ಣ ನಮೋನಮೋ ನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ 1 ನಾಲ್ಕರು ನಿಜರೂಪಿ ನಮೋನಮೋ ಕಾಲಾದಿಗಳ ನಾಳು ನಮೋನಮೋ ಏಳೆರಡು ಜಗಪಾಲ ನಮೋನಮೋ ಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ 2 ಸರ್ವಾಂಗರ್ಬಹಿವ್ಯಾಪ್ತ ನಮೋನಮೋ ಸರ್ವಾಶ್ರಯನೆಗೋಜ ನಮೋನಮೋ ದೇವಾದಿದೇವ ವಿಭು ನಮೋನಮೋ ಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ 3 ಸರ್ವದೋಷವಿದೂರ ನಮೋ ನಮೋ ಸರ್ವಸುಗುಣ ಪರಿಪೂರ್ಣ ನಮೋನಮೋ ಜೀವ ಜಗದಿಂದ ಬಿನ್ನ ನಮೋ ನಮೋ ಶ್ರೀ ವಿಧೀರ ಪರಿಪಾಲ ನಿಸ್ಸೀಮ 4 ಸೃಷ್ಟ್ಯಾದ್ಯಷ್ಠಕರ್ತ ನಮೋನಮೋ ತುಷ್ಠಿ ಪುಷ್ಠಿಯ ನೀಡು ನಮೋನಮೋ ಶ್ರೇಷ್ಟ ಶ್ರೀಕೃಷ್ಣ ವಿಠಲ ನಮೋನಮೋ ದೃಷ್ಠಿ ಬೀರುತ ಬೇಗ ಕಾಣಿಸೈ ತವರೂಪಮೋಕ್ಷದನೆ 5
--------------
ಕೃಷ್ಣವಿಠಲದಾಸರು