ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತವರಿಗತಿ ಸುಲಭ ಹರಿಯ ಪೂಜೆ ಪ ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ. ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮ ಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು 1 ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೇ ಶ್ರೀಗಂಧ ಧೂಪಾ ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು 2 ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು ದಕ್ಷಿಣೋತ್ತರ ಅಯನಗಳೇ ಬನವು ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3 ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು ಉಡುಪ ಭಾಸ್ಕರರ ಮಂಡಲಗಳಾದರ್ಶಗಳು ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ 4 ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ ಭಗವಂತಗುಪಬರ್ಹಣಗಳು ಷಡೃತುಗಳೆಂದೂ 5 ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ ಯೋಗಗಳೇ ಚೂರ್ಣ ರಾತ್ರೆ ತಾಂಶೊಕ ಭೋಗವತೀ ಜಲವೆ ಗಂಡೂಷೋದಕ ಶುದ್ಧ ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು6 ಶಾತಕುಂಭೋಧರಾಂಡಾಂತಸ್ಥ ರೂಪ ಸಂ ಪ್ರೀತಿಯಿಂದಲಿ ಯಜಿಸಿ ಮೋದಿಪರನಾ ಮಿತ ಶೋಕರ ಮಾಡಿ ಸಂತೈಸುತಿಹ ಜಗ ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ 7
--------------
ಜಗನ್ನಾಥದಾಸರು
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ. ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1 ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2 ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3 ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5 ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6 ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7
--------------
ಶ್ರೀಪಾದರಾಜರು
ಲಕುಮಿ ರಮಣನು ಹೆಜ್ಜೆನಿಕ್ಕಲುಕಿಂಕಿಣಿ ಕಿಂಕಿಣಿ ಎಂದಿವೆ ಟೊಂಕದ ಗೆಜ್ಜೆ ಪ. ಲೆಕ್ಕವಿಲ್ಲದ ಹಗ್ಗ ತಂದುಚಕ್ಕನೆ ಕಟ್ಟೋಳು ಬಂದುಚಿಕ್ಕಟೊಂಕಲಿಂತೆಂದುಅಕ್ಕಜ ಬಟ್ಟಳಾಕೆ ಬಂದು1 ಧಿಟ್ಟನು ವರಳೆಳದು ತಂದುಥಟ್ಟನೆ ಮರ ಮುರಿದು ಬಂದುಸ್ಪಷ್ಟವಾದರೊ ಸೂರ್ಯರೆಂದುಕೊಟ್ಟ ಕೃಷ್ಣ ಅಭಯವೆಂದು2 ತೊಡೆಯ ನೇರುವಳೆ ಬಂದುನಡವ ವರ್ಣಿಸೆವೆÉಂದುನುಡಿಯಲಾರೆವಿತಂಡನುಡಿದಳುರಮೆ ಬಂದು 3
--------------
ಗಲಗಲಿಅವ್ವನವರು