ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತನಾಡಲೆ ಜಾಣೆ ಮೋಹನಿಭಿ ಮದಯಾನೆ| ರೀತಿ ನಿನಗುಚಿತವೇನೇ|ಯಾತಕಿದು ಮನ ಮುನಿಸು| ಎನ್ನೊಳು ಸುಖಬೆರೆಸು ಪ್ರೀತಿ ರತಿಸೊಬಗು ದೊರೆನಾರೀ ಪ ತಿಂಗಳಾನನೆ ನಿನ್ನ ತೋಳಿಂಬವಿಲ್ಲದಿರೆ| ಕಂಗಳಿವೆ ಗೊಡವಲ್ಲೆ ನಲ್ಲೆ| ಅಂಗ ದವಯವವು ತಮ್ಮ ಅರ್ಥಿಯನೆ ಜರಿದವಾ| ಲಿಂಗನವ ಬಯಸಿ ನೋಡೆ ನೀಡೇ1 ಮುಂದಕಡಿಯಿಡಲಾರೆ ಮನಸೋತವಗೆ ದಯ| ದಿಂದಕರ ಪಲ್ಲವಾರೆ ದೋರೆ| ಬಂದ ನಿನ್ನಯ ವಿರಹ ಬಹಳ ತಾಪಕ ಸರಸಾ| ನಂದ ಮಳೆಯಗರಿಯೇ ವೆರಿಯೇ 2 ಏಣಾಕ್ಷಿ ಕೇಳಿನ್ನಯ ದೇವನೀಗ ಯಾಚಕನು| ತಾನಾಗಿಬಂದೆನಲ್ಲೆ ನಿಲ್ಲೆ| ತಾ ನೊಲಿದು ಅಧರಾಮೃತ ಫಲವೇ ಸೂರೆಯನು| ಮೌನದಲಿ ಕೊಡಲಿಬಾರೇ ನೀರೇ 3 ಕಾಂತೆ ನಿನ್ನ ವಿಯೋಗ ಕೇಳು ಜನವನ ವಾಗೆ| ಎಂತಶನ ಶುಚಿ ಹೇಳೆ ಕೇಳೆ| ಕಂತುವಿನ ಶರಗಳರಕಂ ಮಡುವಂ ಪೊಕ್ಕೆಗುಣ| ವಂತೆ ಫಣೀ ವೇಣಿ ಪಿಡಿಯೇ ಜಡಿಯೆ4 ಮಂದಗಮನೆ ಬುದ್ದಿಮೋಹಿಸುವದೇನು|ನಿಜ| ಛಂದ ವಾಜಿಯಲಿ ಕೂಡೆ ನೋಡೇ| ಎಂದ ವಚನನಲಿದು ಎರಗಿ ಗಿರಿ ಮಹಿಪತಿ|ನಂದ ನೊಡೆಯನ ನೆರದಳೇ ತರಳೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ರಾಮ ಶ್ರೀ ರಘುರಾಮ ನೀಲಮೇಘ- ಶ್ಯಾಮ ನಿಸ್ಸೀಮ ಕಾಮಿತಾರ್ಥವಕರೆದತಿ- ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ಪ ಕಲ್ಲೋದ್ಧಾರಕ ಕರುಣಾಳು ರಾಮ ಬಿಲ್ಲನೆತ್ತಿದ್ದ ಬಿರುದಾತ ರಾಮ ಸೊಲ್ಲು ಸೊಲ್ಲಿಗಿರಲು ಹರಿನಾಮ ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ 1 ಧೀರಪುರುಷನೆ ದಿಗ್ವಿಜಯ ರಾಮ ವಾರಿಧಿಯ ಕಟ್ಟಿದ್ವನಜಾಕ್ಷ ರಾಮ ಕ್ರೂರರಾಕ್ಷಸರನು ಕೊಂದು ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ 2 ದುಷ್ಟರಾವಣಶತ್ರು ಶ್ರೀರಾಮ ಹುಟ್ಟಿ ಭಾನುವಂಶದಿ ಸೀತಾರಾಮ ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ- ಧಾಮ 3
--------------
ಹರಪನಹಳ್ಳಿಭೀಮವ್ವ
ಸಣ್ಣವನ ಬಿನ್ನಪವ ಸಲಿಸಬಹುದಯ್ಯ ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ ಪ ನಿನ್ನ ಗುಣ ಸುರ ತರುವು ವನದಿ ಶುಕಾದಿಗ ಳುನ್ನತವಾಗಿಹವು ಉಚಿತವೇ ಸರಿಯು ಎನ್ನ ಮನ ಕೋಡಗವು ಅಡವಿಯನು ಬಿದ್ದದೆ ಇ ದನ್ನ ಅದರೊಳಗೆ ಇಡಬಹುದಯ್ಯ ಹರಿಯೆ 1 ಕಮಲಭವ ವಾಣಿ ಮುಖ ನಯನಗಳು ಎಂಬ ಮಹ ಕಮಲೋತ್ಪಲಗಳಿಂದ ಶೋಭಿಸುತಿಹ ವಿಮಲ ಲಾವಣ್ಯ ಸುಧಾಂಬುಧಿಯೊಳಿಡಿಸಯ್ಯ ಮಮ ನೇತ್ರ ಮೀನಗಳ ವಿಷಯ ಪಂಕದಿ ತೆಗಿಸು 2 ನಿಮ್ಮ ನಾಮಾಮೃತದ ಸೂರೆಯನು ಬಿಟ್ಟು ಶ್ರೀ ಭವ ಮುಖರ ಕೆರೆ ಕೋಡೇರಿಸುವಿ ತುತಿ ಚೂರ್ಣ ತೆಗೆದು ತೊಳೆದು ತುಂಬೊ ನಮ್ಮ ವದನ ಕರಡಗೆಯ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು