ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಲಕ್ಷ್ಮೀಸ್ತುತಿಗಳು ನಾರಿಮಣಿಯೆ ನಿನ್ನಾಣೆ ನಾಕಾಣೆ ಕರತಂದು ತೊರೆ ಚೆಲ್ವ ರಂಗನಾ ಪ ಕರತಂದು ತೋರೆ ಮಧ್ಯರಂಗನಾ ಅ.ಪ ಪಾರವಾರನೆಂಬ ಧೀರ ಭವದೂರನೊ ಬಾರದ ಮನಸೆನ್ನ ಸೂರೆಗೊಳ್ಳುತಿದೇ 1 ಮೀರಿದ ಹದ್ದಿಗೆ ಹಾರಿಬಂದಾ ಗಿಣಿಯು ದಾರಿಯ ತಪ್ಪಿ ಹಿಂತಿರುಗಿದಂತೆ ಮಾರನಯ್ಯನ ಪಾದತೋರಿ ಪೋಗಿಯು ತಾ ತೇರಮೇಲೇರಿದ ಸಾರುವ ಬಾರೆ 2 ಉರಗೇಂದ್ರಶಯನನೆ ಸರಿಗಾಣೆ ರಮಣಿ ಶ್ರೀ ನರಗೆ ಸಾರಥಿಯಾಗಿ ಮೆರೆವ ಶ್ರೀ ಪರಮಾತ್ಮ ನಿರುತಿಹ ನೀನೋಗಿ ಕರತಾರೆ ಕಾಮಿನೀ3
--------------
ಚನ್ನಪಟ್ಟಣದ ಅಹೋಬಲದಾಸರು
ದಧಿ ಕಡೆವ ವೇಳೆಗೆ ಪ ಮಧುವೈರಿ ಬಂದನದಕೋ ಸಂಗಡಿಗರೊಂದಿಗೆ ವಿಧವಿಧ ರಾಗದಿ ಕೊಳಲನೂದುತ ತಾನು ಅ.ಪ. ಅರಳೆಲೆ ಮಾಗಾಯಿ ಕಿರುಗೆಜ್ಜೆ ಪಾಗಡ ಪರಿ ಪರಿಯಾಭರಣಗಳಿಟ್ಟು ಕಿರುನಗೆ ಮುಖದ 1 ವಾರಿಜನೇತ್ರನು ಓರೆನೋಟದಿ ಸಕಲ ನಾರೀಮಣಿಗಳ ಮನಸೂರೆಗೊಳ್ಳುತಲಿ 2 ಬಾಲನಂದದಿ ತಾನು ಲೀಲೆಯ ತೋರುತ ಮಾಲೋಲನು ಆಗ ಬೆಂಣೆ ಕೊಡೆನ್ನುತಲಿ 3 ಏನು ಪುಣ್ಯ ಯಶೋದೆ ತಾನು ಮಾಡಿರ್ದಳೊ ಶ್ರೀನಿಧಿ ಕೃಷ್ಣನು ಸಾನುರಾಗದಲಪ್ಪಿದ 4 ಮುಟ್ಟಿ ಭಜಿಸುವರಘ ಸುಟ್ಟು ಸಲಹು ದಿಟ್ಟ ಶ್ರೀ ರಂಗೇಶವಿಠಲ ನಲಿಯುತ 5
--------------
ರಂಗೇಶವಿಠಲದಾಸರು
ಮಾರಪಿತನ ತೋರಿದಲ್ಲದೆ ನಾ ಬಿಡೆ ನಿನ್ನ ಪಾದವ ಪ ಧೀರ ಹನುಮ ಘೋರ ರೂಪವ ತೋರಿ ಪಾರಲು ದೂರ ನಾ ಸಾರೆನು ಅ.ಪ. ಭಾರ ಧರಿಸಿ ಕೋರೆ ತೋರುತ ಘೋರ ರೂಪದಿ ಪೋರನೆನ್ನಿಸಿ ನಾರಿ ಹತ್ಯದಿ ಚಾರುವನವ ಸೇರಿದವನ 1 ಜಾರನೆನ್ನಿಸಿ ನಾರಿ ಮಾನವ ಸೂರೆಗೊಳ್ಳುತ ಪಾರಿಪೋಗುವ ಶೂರ ತೇಜಿಯನೇರಿ ಮೆರೆದ ವಾರಿಜಾಕ್ಷನ ಧೀರ ಕಲ್ಕಿಯ 2 ದಾರಿ ತೋರದೆ ಸಾರಿ ನಿನ್ನನು ಕೋರಿ ಭಜಿಪೆನು ಬಾರಿ ಬಾರಿಗೆ ಭಾರತೀಶನೆ ತೋರು ಕರುಣದಿ ಸಾರಸಾಕ್ಷ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ಕೂಗದೆ ಉಸುರಿಕ್ಕದೆ- ನೀವು |ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಪಹೆಜ್ಜೆಗಳಿವೆಕೋ ಮನೆಯಲಿ-ಕಾಲ |ಗೆಜ್ಜೆಯ ದನಿ ಕೇಳಬರುತಲಿದೆ ||ನಿರ್ಜರಪತಿ ತನ್ನ ಮನಸಿಗೆ ಬಂದಂತೆ |ಮಜ್ಜಿಗೆ ಓಕುಳಿ ಆಡಿಹನಕ್ಕ 1ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ |ಓರಗೆ ಮಕ್ಕಳುಗಳ ನಿಲ್ಲಿಸಿ ||ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ |ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ 2ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ |ಮೇಲಿನ ಕೆನೆಗಳು ಬಳಿದಿಹವೆ ||ಬಾಲಚೋರ ಶ್ರೀ ಪುರಂದರವಿಠಲನು |ಚಾಲುವರಿದರಿನ್ನು ಬಿಡಬಾರದಕ್ಕ 3
--------------
ಪುರಂದರದಾಸರು