ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

*ಸುದಿನ ದುರ್ದಿನಮೆಂಬುದವರವರ ಸಂಪ್ರಾಪ್ತಿ ಸುದಿನಮದು ಜನಿಸಿದೊಡೆ ದುರ್ದಿನಮದಳಿಯಲ್ಕೆ ವಿಧಿಲೀಲೆ ಜನನಮರಣಂಗಳೈ ರಕ್ತಾಕ್ಷಿ ಮಧುಮಾಸ ಸಿತಪಕ್ಷದ ಸದಮಲಾನ್ವಿತಮಪ್ಪ ತಾರಗೆಪುನರ್ವಸೂ ವಿಧುವಾರ ಪೂರ್ವಾಹ್ನಮಾಸೂರಿ ನಾಮಮೆದಿ ಮಾಂಗಿರಿಯ ರಂಗಪದಮಂ 1 ಬಂಧುಜನÀಮಿತ್ರರ್ಗೆ ದುರ್ದಾಂತ ದುರ್ದಿನಂ ಸಂದಮಾಂಗಿರಿರಂಗಪದನಳಿನಮಂ ಸೇರ್ದ ಸಿಂಧುಪುತ್ರಂ ಬಳಗದಾಸೂರಿಯಾತ್ಮಮದು ಚಿರಶಾಂತಿಯಂಪಡೆಯಲೈ ಚೆಂದವಹ ಕಮಲಮದು ಕಮನೀಯ ಕಾಂತಿಯಿಂ ದಂದವಡೆದಿರ್ಪುದೇ ನಿಡುಗಾಲಮದು ಬಳಿಕ ಕುಂದದಿರದೇಂ ನಿಜದೆಯಾದರ್ಶಜೀವನಂ ಶ್ರೀರಕ್ಷೆಯಲ್ತೆ ನಮಗೆ 2 ವರಮಹಾಲೆಕ್ಕಿಗರ ಶಾಖೆಯೊಳ್ ಪರಿಣತಿಯ ಕರಣಿಕಂ ತಾನಾಗಿ ವಿಶ್ರಾಮ ಜೀವನದೆ ಸರಸಕಾವ್ಯಾದಿ ಪದರಚನೆಯಿಂ ಗಮಕಿಗಳ ತಣಿಸಿಯಾನಂದಮುಣಿಸಿ ಸಿರಿಲೋಲ ಸುವಿಲಾಸ ಗೋಕರ್ಣಮಹಿಮೆಯಂ ಭರತಮಾರುತಿಭಕ್ತಿಯಾಳ್ವಾರುವೈಭವಂ ಸರಿಸದಲಿ ಕಾವ್ಯಪಂಚಕ ರಚಿಸಿ ಪಂಚತ್ವವೈದಿದರ್ ಧನ್ಯರಲ್ತೆ 3 ಕಿವಿಚುರುಕು ನಿಡುಮೂಗು ದೃಷ್ಟಿಪಾಟವಹೊಳಪು ಸವಿನೆನಪಿನಂಗಳಂ ಬೇವುಬೆಲ್ಲದಪದರು ರವಿಯೆಡೆಗೆ ನಿಟ್ಟಯಿಸಿ ಧೀರ್ಘಾಯುವೆಂದೆನಿಸಿ, ಶರದಶಕಗಳ ಕಳೆದನು ಇವಗೆ ಮಣಿವುದೆ ಬೆಲ್ಲ ಹರಿಚಿಂತನೆಯಬಲ್ಲ ದಿವರಾತ್ರಿ ಸಂತೃಪ್ತಿ ಮಾಳ್ಪಕಾರ್ಯಂಗಳಲಿ ತವಕದಿಂ ಸುತ್ತುವರೆದಿರ್ಪರೈ ಹಿರಿತನದ ನಮ್ರತೆಗೆ ಬೆರಗಾಗುತ 4 ಸುತರತ್ನರೀರ್ವರಂ ಸುತೆಯರಂ ಸೊಸೆಯರಂ ಹಿತಮಪ್ಪಮೊಮ್ಮಂದಿರಂ ನೆಂಟರಿಷ್ಟರಂ ಮಿತವಚನದಿಂ ನಲಿಸಿ ಮನದಳಲಿಗೆಡೆಮಾಡಿ ವೈಕುಂಠಮಂ ಸೇರಿದೈ ಶತಪತ್ರಲೋಚನದ ಪರಿಚರ್ಯೆಯಂ ಗೈದು ಶತವರುಷಮಂ ತುಂಬುಜೀವನವ ತಾಳ್ದೆ ಸ ತ್ಪಥವಿಡಿದು ನಿನಗಾತ್ಮಶಾಂತಿಯುಂಟಾಗಲೈ ತವಕುಲಂ ವರ್ಧಿಸಿರಲೈ5
--------------
ಪರಿಶಿಷ್ಟಂ
ತಂದೆ ನಿನ್ನೊಲುಮೆಯೊಂದೆ ಎನ್ನ ಬಯಕೆ ಪ ಬಂದ ಕಷ್ಟಗಳೆಲ್ಲ ಎನ್ನಭ್ಯುದಯಕೆ ಅ.ಪ ಆಸೂರಿಯಾದರೂ ಈ ಸೂರಿಯಾದರೂ ಏಸೂರಿಗ್ಹೋದರೂ ವಾಸಿಯಿಲ್ಲ ಕೂಸುಗಳ ಪಡೆದರೂ ಆಸೆಗಳ ತೋರಿದರೂ ಹೇಸಿಕೆ ಬೇಳಲೆದರೂ ಲೇಸಾಗಲಿಲ್ಲ 1 ಈ ವೂರಿನೈವತ್ತು ಆ ವೂರಿನೈವತ್ತು ದೇವರ್ಕಳಿಗೆ ನಾಮ ಹರಕೆ ಹೊತ್ತು ಬೇವಿನಲಿ ಸಿಹಿಯ ನೀನೀವುದೆಂದತ್ತತ್ತು ಜೀವಿತವು ಬರಿದಾಯ್ತ ಬಾಧಿಸುವುದೈಮುಪ್ಪು 2 ತಂದೆ ಗೋವಿಂದನಯ್ಯ ಒಂದುನೂರ್ವಂದನೆಯ ಇಂದರ್ಪಿಸುವೆನಯ್ಯ ಕೈಹಿಡಿಯಯ್ಯ ಕುಂದ ಕಳೆಗಾಣಿಸಯ್ಯ ಬಂಧನವ ಬಿಡಿಸಯ್ಯ ಇಂದಿರಾನಂದ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ ಪ ಸೂರಿಯಾ ನಿಳಿಯಲು ಅಪರದ ಜಾವಕ ಸಾರಿಸಿ ಗೋಧನ ತಿರುಗಿಸುತಾ ವಾರಿಗ ರೆಲ್ಲರು ವಂದಾಗಿ ಹರುಷದಿ ಧೀರನು ದಾರನು ಆಡೂತ ಬರುವಾ 1 ಚಂಡು ಬಗರಿ ಚಿಣಿ ಕೋಲು ಚಪ್ಪಳಿಕೈಯ್ಯಾ ಹಿಂಡ ನೆರೆದು ಹಂಬಲಿ ಹಾಕುತಾ ಮಂಡಳದೊಳಗುಳ್ಳ ಆಟವ ನಾಡುತ ಪಂಡರಿ ಕಾಕ್ಷನು ಲೀಲೆಯ ನಲುವಾ 2 ಗೋಧೂಳಿ ತುಂಬಿದ ಗುಂಗುರ ಗೂದಲು ಉದಿಸಿದ ಹಣೆಯಲಿ ಕಿರಿ ಬೆವರು ಬೆರಿಸಿ ಪರಿಪರಿ ಸ್ವರದಲ್ಲಿ ಕೊಳಲವ ನೂದುತ ಕುಣಿಯುತ ನಗೆವುತ ಬರುವಾ3 ಕುಂಡಲ ಹೊಳೆಯುತ ಕಣ್ಣಿನ ಚಲುವಿನ ಕಸ್ತೂರಿ ರೇಖೆಯಲಿ ನೌಲಗರಿಯ ವಾರಿ ದುರುಬವ ಕಟ್ಟಿಸಿ ಪುತ್ಥಳಿ ಬರುವಾ4 ಪೇಂದ್ಯ ಉದ್ದದ ಬಲರಾಯ ಸುಧಾಮರ ವೃಂದದಿ ಮಹಿಪತಿ ಸುತ ಪ್ರೀಯನು ಇಂದು ವದನೆಯರು ಆರುತಿ ಕೊಳುತಲಿ ವಂದದಿ ಮಧ್ಯ ನಾಯಕನಾಗಿ ಬರುವಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪುರಂದರದಾಸರು ಎಂತು ಪೊಗಳಲಿ ನಾನು ಪ ಕಂತುಪಿತನೇಕಾಂತ ಭಕ್ತನ ಪಂಥವನು ಪದ ಪಂಕ್ತಿಯಲಿ ತುಂಬಿಟ್ಟು ಸಲಹಿದ ದಾಸವರ್ಯರ ಅ.ಪ. ನಿತ್ಯ ನೆನೆಯುತ್ತ ಪಂಡಿತೋತ್ತಮರೊಡನೆ ಸುಖಿಸುತ್ತ ಕಂಡು ಹರಿಯನು ಮುಂದೆ ಕುಣಿಯುತ್ತ ಕುಂಡಲಿಗೆ ನಿಜ ಭೂಷಣವು ಎನಿಸುತ್ತ ಭಂಡಜನರಾ ಪುಂಡುಮಾರ್ಗವ ಕಂಡಕಂಡೆಡೆ ಖಂಡ್ರಿಸುತ ಬ್ರಹ್ಮಾಂಡ ದೊಡೆಯನ ಭಕ್ತಿ ಬಿತ್ತುತ ಹಿಂಡಿ ಮತಿಮತ ರಸವ ಕುಡಿಸಿದ ದಾಸವರ್ಯರ 1 ಮೊದಲು ಗಾಯಕ ದೇವಸಭೆಯಲ್ಲಿ ಮುದದಿ ಕಾಮುಕ ಚೇಷ್ಟೆ ನಡೆಸುತಲಿ ಪದವಿಯಿಂ ಚ್ಯುತನಾಗಿ ದಾಸಿಯಲಿ ಉದಿಸಿ ಬಂದು ಸಾಧು ಸಂಗದಲಿ ಬದಿಗೆ ತಳ್ಳುತ ಭವದ ಕೋಟಲೆ ಮುದದಿ ಜಪಿಸುತ ವಾಸುದೇವನ ಪದವಿ ಸಾಧಿಸಿ ದೇವ ಋಷಿ ತಾ ಪದುಮನಾಭನ ನೆನೆದು ನರಕವ ಬ ರಿದು ಮಾಡ್ಡ ಮಹಾನುಭಾವನ 2 ಕಾಸಿನಾಶಯವು ಮೋಸವೆಂತೆಂದು ಹೇಸಿವಿಷಯದಿ ಲೇಸು ಸಿಗದೆಂದು ಶ್ರೀಶ ಸಿಗುವನು ದಾಸಗೆಂತೆಂದು ಆಶೆಯಿಂದಲಿ ಸಾರಬೇಕೆಂದು ಓಸು ಸಂಪದ ನೂಕಿ ಭರದಿಂ ವ್ಯಾಸರಾಯರ ಶಿಷ್ಯನೆನಿಸುತ ವಾಸುದೇವನ ದಾಸನಾಗುತ ದೋಷಜ್ಞಾನವ ನಾಶಮಾಡಿದ ದೇಶ ತಿರುಗಿದ ದಾಸವರ್ಯರ 3 ಭಕ್ತಿಯಿಲ್ಲದ ಗಾನ ತಾನಿನ್ನು ಕತ್ತೆಕೂಗನುಮಾನವಿಲ್ಲೆಂದು ನಿತ್ಯದೇವನ ಗಾನ ಗೈಯಲು ಗಾತ್ರವಿದು ನಿಜವೀಣೆಯೆಂತೆಂದು ಸಪ್ತಸ್ವರಗಳ ಕ್ಲಪ್ತಮರ್ಮಗ ಳೆತ್ತಿ ತೋರುತ ಶ್ರೇಷ್ಠತರ ಸಂಗೀತ ಸೂತ್ರ ಸಂಮತ ನೀತಿ ನುಡಿದಿಹ ದಾಸವರ್ಯರ 4 ಪೊಂದಿ ಪುಸ್ತಕ ದೀಚೆ ಬರದೆಂದು ಛಂದ ಮರ್ಮವ ತಂದಿಡುವೆ ನಮ್ಮೀ ಅಂದ ಕನ್ನಡ ದೊಳಗೆ ಎಂತೆಂದು ಕಂದ ವೃತ್ತ ಸುಳಾದಿ ಪದಗಳ ಛಂದ ಭೂಷಣವೃಂದ ನೀಡುತ ನಂದದಿಂ ಕರ್ಣಾಟಮಾತೆಯ ಮುಂದೆ ತಾ ನಲಿವಂತೆ ಮಾಡಿದ ದಾಸವರ್ಯರ 5 ನಾರಿ ಮನೆ ಪರಿವಾರ ಹರಿಗೆಂದು ಸಾರವನ್ನೆ ಮುರಾರಿ ಮನೆಯೆಂದು ಚಾರು ಶ್ರುತಿಗತಸಾರ ನಡತೆಯಲಿ ಸೂರಿಯಾದವ ತೊರಬೇಕೆಂದು ನೀರಜಾಕ್ಷನ ಧೀರ ದೂತನ ಸಾರ ಮನವನು ಸಾರಿ ಸಾರುತ ದೂರ ಒಡಿಸಿ ಮೂರು ಮತಗಳ ನೇರ ಸುಖಪಥ ತೋರಿಸಿದ ಮಹರಾಯ ದಾಸರ 6 ಕರ್ಮಕೋಟಲೆಗಿಲ್ಲ ಕೊನೆಯೆಂದು ಮರ್ಮತಿಳಿಯುತ ಬಿಂಬಹೃದಯಗನ ನಿರ್ಮಮತೆಯಿಂದೆಸಗಿ ಕರ್ಮಗಳ ಕರ್ಮಪತಿಗೊಪ್ಪಿಸುತ ಸರ್ವಸ್ವ ಭರ್ಮಗರ್ಭನ ಭಕ್ತಿ ಭಾಗ್ಯದಿ ಪೇರ್ಮೆಯಿಂ ಹರಿದಾಸನೆಸಿಸುತ ಶರ್ಮ ಶಾಶ್ವತವಿತ್ತು ಸಲಹುವ ವರ್ಮ ನೀಡಿದ ವಿಶ್ವಬಾಂಧವ 7 ಇಂದಿರೇಶನು ಮುಂದೆ ಕುಣಿಯುತಿರೆ ಕುಂದುಂಟೆ ಮಹಿಮಾತಿಶಯಗಳಿಗೆ ತಂದೆ ಕೌತಕ ವೃಂದ ಮಳೆಗರೆದು ಕಂದನನು ಪೊರೆದಂದವೇನೆಂಬೆ ಬಂದು ಸತಿಸಹ ಮಂದಿರಕೆ ಗೋ ವಿಂದ ಪಾಕವಗೈದು ಬ್ರಾಹ್ಮಣ ವೃಂದಕಿಕ್ಕುತ ದಾಸರಿಗೆ ಮುದ ಮಾಧವ ಭಾಗ್ಯಕೆಣೆಯುಂಟೆ 8 ದೀನ ಹೊಲೆಯಗೆ ಪ್ರಾಣ ಬರಿಸಿದನು ಏನು ಒಲ್ಲದೆ ಹರಿಯ ಯಜಿಸಿದನು ಜ್ಞಾನ ಭಾಗ್ಯದಿ ಮುಳುಗಿ ತೇಲಿದನು ದೀನ ಜನರುದ್ಧಾರ ಮಾಡಿದನು ದಾನಿ ಜಯಮುನಿ ವಾಯು ಹೃದಯಗ ಚಿನ್ಮಯ ಶ್ರೀ ಕೃಷ್ಣವಿಠಲನ ಗಾನ ಸುಧೆಯನು ಬೀರಿಸುತ ವಿ ಜ್ಞಾನವಿತ್ತ ಮಹೋಪಕಾರಿ ವಿಶೇಷ ಮಹಿಮನ 9
--------------
ಕೃಷ್ಣವಿಠಲದಾಸರು