ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಸಿಂಹಾ ಲಕ್ಷ್ಮೀನರಸಿಂಹ ಪ ನಮಿಸುವೆ ಲಕ್ಷ್ಮೀನರಸಿಂಹ ಅಹಾ ಕನಕಕಶ್ಯಪನಳಿದು ಜನಕೆ ಸುಖವನಿತ್ತು ಘನಪುರುಷನೆ ಕ್ಷಣ ಕ್ಷಣ ನಮಿಸುವೆ ಅ.ಪ ಅಟ್ಟಹಾಸದಿ ಕಂಭಸಿಡಿದೂ | ಬಲು ಕಟ್ಟುಗ್ರತನದ ಕೆಟ್ಟ ಹಿರಣ್ಯನ ಹೊಟ್ಟೆಯ ಬಗೆದಂಥ ಶ್ರೇಷ್ಠಮಹಿಮನೆ 1 ತೊಡೆಯ ಮೇಲಿಟ್ಟಿ ಬಹು ಕಂಡೆ ಈ ದಿನ 2 ಸೂರಿಗಳರಸ ಒಡೆಯಾ | ಮೋಲೆ ಸುರಸೋದರರೊಳುಮೆರೆಯ | ಆಹಾ ಕ್ರೂರ ದೈತ್ಯನ ಕೊರಳಹರಿದ ಅ- ಪಾರ ಮಹಿಮಸಿರಿವರ ಸಿಂಹವಿಠಲ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯೊ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ಪ ಭಾಸುರ ಚರಿತನೆ ಭೂಸುರ ವಂದ್ಯನೆ ಶ್ರೀ ಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರರೆನಿಸಿದ ದೇಸಿಕರೊಡೆಯ ರಾಘವೇಂದ್ರರಾಯ ಬಾರೋ 1 ವಂದಿಪ ಜನರಿಗೆ ಮಂದಾರ ತರುವಂತೆ ಕುಂದಾದಭೀಷ್ಟೆಯ ಸಲಿಸುತಿಪ್ಪ ರಾಯ ಕುಂದದಾಭೀಷ್ಟ ಸಲಿಸುತಿಪ್ಪ ಸರ್ವಜ್ಞ ಮಂದನಮತಿಗೆ ರಾಘವೇಂದ್ರ ರಾಯ ಬಾರೋ 2 ಆರು ಮೂರೇಳು ನಾಲ್ಕೆಂಟು ಗ್ರಂಥ ಸಾರಾರ್ಥ ತೋರಿಸಿದೆ ನ್ಯಾಯದಿಂದ ಸರ್ವರಿಗೆ ರಾಯ ಬಾರೋ ಸೂರಿಗಳರಸನೆ ರಾಘವೇಂದ್ರಾ ರಾಯ ಬಾರೋ 3 ರಾಮ ಪಾದಾಂಬುಜ ಸರಸಭೃಂಗ ಕೃಪಾಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ ಭ್ರಾಮಕಜನ ಸನ್ಮಾನಭಂಗ ಮಾಡೀದಾ ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ4 ಭೂತಳಾಧಿಪನಾ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ ಪ್ರೇತತ್ವ ಕಳೆವ ಮಹಿಷಿಯಾ ಶ್ರೀಜಗ ನ್ನಾಥ ವಿಠ್ಠಲನಾ ಪ್ರೀತಿಪಾತ್ರಾ ರಾಯ ಬಾರೋ 5
--------------
ಜಗನ್ನಾಥದಾಸರು
ವಾದಿರಾಜ ಅಸ್ಮದ್ಗುರು ವಾದಿರಾಜ ಪ ವಾದಿರಾಜ ತವ ಪಾದಕಮಲಕಭಿ ವಾದನ ಮಾಳ್ಪೆ ಸಮೋದವಿತ್ತು ಕಾಯೊ 1 ಸಾರಿದರಿಗೆ ಕಲ್ಪ ಭೂರುಹ ದಂತೆ ಮ ನೋರಥ ಸಲಿಸುವ ಸೂರಿಗಳರಸೇ 2 ಭೇದ ಪಂಚಕವನು ಸಾಧಿಸಿ ಕುಮತಕು ವಾದಿಗರ್ವಾದ್ರಿ ವಿಭೇದನ ಗೈದೆ 3 ದೇಶಿಕವರ್ಯ ವಾಗೀಶ ಕುವರನೆ ಕ್ಲೇಶ ಹರಿಸು ಅಘನಾಶ ಗೈದು 4 ಸಿರಿ ಜಗನ್ನಾಥವಿಠಲನ ಸುಗುಣಗಳನುದಿನ ಪೊಗಳಿ ಹಿಗ್ಗುವೊ 5
--------------
ಜಗನ್ನಾಥದಾಸರು