ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ ಧ್ರುವ ದೇಹದಂಡನೆ ಮಾಡಿದರೇನು ಬಾಹ್ಯಾರಂಜನೆ ದೋರಿದರೇನು 1 ಶಬ್ದ ಜ್ಞಾನ ಸೂರಾಡಿದರೇನು ಲಭ್ದಾ ಲಬ್ಧೇಲಾಡಿದರೇನು 2 ರಿದ್ದಿ ಸಿದ್ದಿಯ ದೋರಿದರೇನು ಗೆದ್ದು ಮಂತ್ರಾಂತ್ರಸೋಲಿಪರೇನು 3 ಗೀರ್ವಾಣ ಆಡಿದರೇನು ಭೂತ ಭವಿಷ್ಯ ಹೇಳಾಡಿದರೇನು 4 ವ್ರತ ತಪ ತೀರ್ಥಾಶ್ರೈಸಿದರೇನು ಕೃತ ಕೋಟ್ಯಜ್ಞಾವ ಮಾಡಿದರೇನು 5 ಯೋಗಾಯೋಗಾಚರಿಸಿದರೇನು ಭೋಗ ತ್ಯಾಗ ಮಾಡಿದರೇನು6 ಏನು ಸಾಧನೆ ಮಾಡಿದಫಲವೇನು ಖೂನ ದೋರದೆ ಮಹಿಪತಿಗುರುತಾನು7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶುಭ | ಮಂಗಳ ಶ್ರೀ ಲಕ್ಷ್ಮೀ ನರಸಿಂಹಗೇ | ಸಹಸ್ರ | ಮಂಗಳ ಭಕ್ತರ ಸಲಹುವಗೆ ಪ ಶರಣ ಪ್ರಲ್ಹಾದಗೆ ಪಟ್ಟಾಭಿಷೇಚನ | ಕರುಣದಿಮಾಡಿಸಿಸುರದಿಂದಲಿ | ಅರಸುತನವಕೊಟ್ಟು ಭಕ್ತಾಗ್ರಣಿ ಮಾಡಿ ವರಮುಕ್ತಿಗಳ ಸೂರಾಡಿದವಗೆ | ಮಂಗಳ .... 1 ಎನ್ನನು ನೆನೆಯಲಿ ನೆನೆಯದವರಿರಲಿ ಒಮ್ಮೆ | ನಿನ್ನ ನೆನೆದು ಘನ ಚರಿತೆಯನು || ಮನ್ನಿಸಿ ಒದುವ ಕೇಳುವ ಮನುಜರ | ಚೆನ್ನಾಗಿ ಕಾಯ್ವೆನೆಂದಭಯ ವಿತ್ತವಗೆ ಮಂಗಳ ..... 2 ಅಂದಿಗಿಂದಿಗೆ ತನ್ನ ದಾಸರಾದಾಸನಾ | ಮಂದಿರ ಸಾರಿದವಗೆ ದಯದೀ || ಚಂದಾಗಿ ತನ್ನ ಭಕುತಿ ಎಚ್ಚರವ ನೀವ | ತಂದೆ ಮಹೀಪತಿ ಸುತ ಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಳಿ ಮೊದಲಾದವರು ಭಾಳೆ ವಸ್ತಗಳಿಟ್ಟುವ್ಯಾಳಾಶಯನÀನ ಮಡದಿಯರು ಪ.ಬಂದು ಶ್ರೀ ಪ್ರದ್ಯುಮ್ನ ಗಂಧಹಚ್ಚಿ ಐವರಿಗೆಅಂದದಲಿಬುಕ್ಕಿಟ್ಟುಸೂರಾಡಿಮಂದಾರಮಲ್ಲಿಗೆ ತಂದು ಕೊರಳಿಗೆ ಹಾಕಿಆನಂದ ಬಟ್ಟನು ನೋಡಕೆಲದಿ1ಅಚ್ಯುತನ ಮಡದಿಯರುಹಚ್ಚಿಅರಿಷಿಣ ಕುಂಕುಮಮಚ್ಚನೇತ್ರಿಯರು ದ್ರೌಪತಿಗೆಅಚ್ಛಾದ ಸುಭದ್ರೆಗೆಹಚ್ಚಿಅರಿಷಿಣ ಕುಂಕುಮಅಚ್ಚ ಮಲ್ಲಿಗೆಯನ್ನೆ ಮುಡಿಸಿ 2ಶಂಬರಾರಿಪಿತನ ಗಂಭೀರ ತಂಗಿಯರಿಗೆತಾಂಬೂಲ ಅಡಿಕೆಯನೆ ಕೊಟ್ಟುಸಂಭ್ರಮದಿ ರಮಿ ಅರಸು ಅಂಬರಗಳ ಉಡಿಸಿಮೈತುಂಬ ವಸ್ತಗಳ ಇಡಿಸಿ 3
--------------
ಗಲಗಲಿಅವ್ವನವರು
ಕೊಂಬು ಕೊಳಲ ತುತ್ತೂರಿ ಊದುತಲಿಕ್ಕುಇಂಬುಕಸ್ತುರಿ ಪರಿಮಳ ಸೂಸುತ ||ಪೊಂಬಟ್ಟೆ ಚೆಲ್ಲಣ ಸೋಸಿದ ಮೊಸರಿನ |ಕುಂಭಒಡೆದು ಕೆಸರಾಗಿದೆಯಮ್ಮ2ಮಿಂಚಿನಂದದಿ ಹೊಳೆಯುತ ಬದಿಯಲಿದ್ದ |ಸಂಚಿತಾರ್ಥಗಳೆಲ್ಲ ಸೂರಾಡಿದ ||ವಂಚನೆಯಿಲ್ಲದೆ ಭಕ್ತರ ಸಲುಹಿದ |ಸಂಚುಕಾರ ಪುರಂದರವಿಠಲನಲ್ಲದೆ 3
--------------
ಪುರಂದರದಾಸರು
ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |ಗೋಕುಲದೊಳಗಿರಲಾರೆವಮ್ಮ ಪಸಾಕು ಸಾಕು ನಮಗೇಕೆ ರಚ್ಚೆಗಳು |ಆ ಕೃಷ್ಣನಪರಿನೀ ಕೇಳಮ್ಮಅ.ಪಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||ರೇಳು ಭುವನದೊಳಾಡುತಲಿರಲಿ |ಆಲದೆಲೆಯ ನಮ್ಮಾಲಯವನೆ ಪೊಕ್ಕು-|ಬಾಲೆಯರೆಲ್ಲರ ಬತ್ತಲೆ ಮಾಡಿ ||ಶಾಲೆಗಳೆಲ್ಲ ಮೇಲಕೆ ಹಾರಿಸಿ |ಆಲಂಗಿಸಿಕೊಂಡು ಬರುವನಮ್ಮ 1ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |ಅನುಬಂಧನಾಗಿ ಇದ್ದರೆ ಇರಲಿ ||ಅನುವು ಕಂಡುಕೊಂಡಾವೇಳೆಯಲಿ |ಉಣಬಿಟ್ಟಾಕಳ ಕರುಗಳನುಣಿಸಿ ||ಮನೆಯವರೆಲ್ಲರನೆಬ್ಬಿಸಿ ತಾನೇ |ಮನೆಯೆಲ್ಲವ ಸೂರಾಡಿದನಮ್ಮ 2ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |ಯಾರ ಮುಂದೆ ಹೇಳಲಿ ಸೊಲ್ಲ? ||ಓರಗೆಯಲಿ ಸಂಸಾರ ಮಾಡುವ |ನಾರಿಯರೆಲ್ಲರ ರಂಬಿಸಿಕರೆದು ವಿ-|ಕಾರ ಮಾಡದಂತೆ ಪುರಂದರವಿಠಲಗೆ |ಸಾರಿಸಾರಿ ನೀ ಬುದ್ಧಿ ಹೇಳಮ್ಮ 3
--------------
ಪುರಂದರದಾಸರು
ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು