ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಟ್ಹಾಂಗಿರಬೇಕು ಮಾಂ ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ | ವಿಕಳಿತಗೊಂಬುವದ್ಯಾಕೆ ಮಾಂ | ಅಖಿಳ ಭುವನಕೆಲ್ಲ ಸಾಕಿ ಸ - | ಹಕಾರ ನೊಬ್ಬ ಶ್ರೀಪತಿಯ ಮಾಂ | 1 ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ | ತಂತ್ರವೆ ನಾನೆಂಬುದ್ಯಾತಕೆ ಮಾಂ | ಚಿತ್ರ ವಿಚಿತ್ರವು ದೋರುವ ಸೂತ್ರವು | ಕರ್ತು ಸದ್ಗುರು ಸುತಂತ್ರವು ಮಾಂ 2 ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ | ತಂತ್ರ ಮಂತ್ರಗಳ್ಯಾತಕೆ ಮಾಂ | ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ | ಗಂತ್ರವು ಎಂದಿಗೆ ತಿಳಿಯದು ಮಾಂ 3 ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು | ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ | ಹೊಟ್ಟಿಗಾಗಿ ಅಷ್ಟು ಸಾಯಾಸ | ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ 4 ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು | ಘಟ್ಟಿಗೊಂಡ ಗುರುಪಾದವು ಮಾಂ | ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು | ಕೊಟ್ಟು ನಿನಗೆ ಸ್ವಾನುಭವವು ಮಾಂ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವತಾ ಸ್ತುತಿ ರಾಧೆ ತಿಲಕದ ಒಲುಮೆ ಮೇಲು ರಾಧೇ ನಿನ್ನ ತಿಲಕದೊಲುಮೆ ಪ ತಿಲಕದೊಲುಮೆ ಹರಿ ಬಂಧ ಒಲುಮೆ ಘಿÀಲುಘಿÀಲುಕುಲು ಗೆಜ್ಜೆ ಕಾಲು ರಾಧೇ ನಿನ್ನ ಅ.ಪ. ಕುಂಕುಮ ಕರದು ಹಚ್ಚಿ ವಂಕಿ ಬಾಜು ಬಂದಿನಿಟ್ಟು ಪಂಕಜಾಕ್ಷನೆತ್ತಿಕೊಂಬೊ ತೋಳು ರಾಧೆ ನಿನ್ನ 1 ಉಟ್ಟುದು ಪೈಠಣಿ ಸೀರೆ ತೊಟ್ಟುದು ಬುಟ್ಟುದ ಕುಪ್ಪಸ ಮುಟ್ಟಿದರೆ ಮಾಸುವದು ಶಾಲು ರಾಧೇ ನಿನ್ನ 2 ಕೈಗೆ ಬಂಗಾರದ ಬಳೆ ಕಿವಿಗೆ ಪರಿಜನ ವಾಲೆ ರಂಗಯ್ಯ ಕರೆದರೆ ನೀ ಹೋ ಎಂಬೊ ರಾಧೆ ನಿನ್ನ 3 ಮಂಗಳಸೂತ್ರವು ಬೆಳದಿಂಗಳು ಪೊಳೆವಂತೆ ತೆಂಗು ಬ್ಯಾಳೆ ಮಣಿಯೆಣ್ಣೆ ನೂಲು ರಾಧೆ ನಿನ್ನ 4 ಪಿಲ್ಯ ಕಾಲುಂಗುರ ಕಿರು ಬಲ್ಯ ಆಣಿಮೆಂಟು ಧೈರ್ಯದಲಿ ಮೆರೆವ ಗಿಳಿಗೇಲು ರಾಧೆ ನಿನ್ನ 5 ಚೌರಿ ರಾಗಟಿ ಗೊಂಡೆ ಹೆರಳು ಬಂಗಾರವೂ ಚಂದಿರ ಪ್ರಫುಲ್ಲ ಮುತ್ತಿನ ಬಟ್ಟು ರಾಧೆ ನಿನ್ನ6 ದಿಟ್ಟ ಹಗಲೊಳು ಶ್ರೀದವಿಠಲನ್ನ ಯೇರಿಕೊಂಡು ಬಟ್ಟ ಬಯಲೊಳಗೆ ಕೇಳೇ ರಾಧೆ ನಿನ್ನ 7
--------------
ಶ್ರೀದವಿಠಲರು
ದಾರುದಾರಿಲ್ಲೆಲೆ ರಂಗದಾರುದಾರಿಲ್ಲ ಸಂಗನೀರಜಾಕ್ಷನೀನೆ ಭವಸಾಗರತಾರಿಸಿ ಕೀರ್ತಿ ಪಡೆಯೊ ದಾತಾರ ಪ.ಮೀನವಾಮಿಷವುಂಡಂತೆ ಸುಖಮಾನಿನಿಯರ ತಡಿಯುಧೇನುಜರಿಯಾದಂತೆ ಏಳಿಲುಸೂನುಗಳ ಬಿರುನುಡಿಯುಏನು ಬಳಗಾಮೃಗ ದಗ್ಧ ವಿಪಿನದ ಸ್ನೇಹದೆ ಕಡಿಯುಪ್ರಾಣ ಪಯಣಕೆ ಬುತ್ತಿಲ್ಲಭವಸಂಧಾನ ಹರಿದರೆ ಆರಿಲ್ಲ ಒಡೆಯಾ 1ಏಸೋ ದಿನ ನೆಚ್ಚಿದಕಾಯಹೇಸಿಕೆಘನವಾಯಿತುಆಸೆಬಟ್ಟಾರ್ಥ ವೃಥಾವ್ರಯಕಾಸು ನಾಶಾಯಿತುಲೇಶ ಮಾತ್ರವು ಹಿತ ಹೊಂದದೆ ಮನದ್ವೇಷಿ ತಾನಾಯಿತು ಆಯುಷ್ಯ ಸೂತ್ರವು ಹರಿದರೆ ಭವರೋಗಭೇಷಜರಿಲ್ಲದಂತಾಯಿತು 2ಕುನ್ನಿ ಸಂತೆಗೆ ಹೋದಂತೆ ಬಹುಜನ್ಮ ನೋವಾದವುಮಣ್ಣಿನೊಳು ಹಾಲ ಕೊಡ ಒಡೆದಂತೆನನ್ನ ಧರ್ಮಕರ್ಮವುನನ್ನೆಚ್ಚರ ನನಗಿಲ್ಲವುನಿನ್ನೆಚ್ಚರವೆಲ್ಲಿಯದು ಪ್ರಸನ್ನವೆಂಕಟ ನಿನ್ನ ಯಾತ್ರೆಗೆ ನೀನೆಬೆನ್ನಾದರೆನಗೆಲ್ಲ ಗೆಲುವು 3
--------------
ಪ್ರಸನ್ನವೆಂಕಟದಾಸರು
ಶ್ರೀ ಕಂಚಿ ಕಾಮಾಕ್ಷಿ82ಶರಣು ಶರಣು ಶರಣು ಶರಣು ಕಾಮಾಕ್ಷಿಶರಣು ಮೋಹಿನಿಮಾವಾಣಿಶರ್ವಾಣಿಪಹರಿಸಿರಿಸರಸ್ವತಿ ಸಹ ಪ್ರಜ್ವಲಿಸುವೆಗಿರಿಜೆ ಶರಣು ಕಂಚಿನಿಲಯೆ ಸತತಕಾಯೆ ಅ ಪಏಕಾತ್ಮಾನಂದಮಯನಿಖಿಳಗುಣಾರ್ಣವಜಗಜ್ಜನ್ಮಾದಿಗಳಿಗೆ ಮುಖ್ಯ ಕಾರಣೆ ವ್ಯಾಪ್ತೆಅಕಳಂಕ ಪುಂಸ್ತ್ರೀಗಾತ್ರೆ ಚಿನ್ಮಯೆ ವೃಂದಾರಕರಿಗೆಪೀಯೂಷಕರುಣಿಸಿ ಉಣಿಸಿದೆ1ಭಾಮಾ ರುಕ್ಮಿಣಿ ಸೀತಾ ಸೋಮಸೋದರಿ ರಮೆಕಮಲಾಸನಾದಿ ಸುಮನಸವಂದಿತೆ ತ್ರಾತೆಕಮಲನಾಭನ ಸೇವೆ ವನಮಾಲೆ ಚಾಮರಾದ್ಯಮಿತ ರೂಪದಿ ಮಾಳ್ಪ ಮಹಾಲಕ್ಷ್ಮೀ ನಮೋ ನಮೋ 2ಪಕ್ಷಿವಾಹನ ಸಾಕ್ಷಿ ಚೇತಾನಿರ್ಗುಣ ಅಧೋಕ್ಷಜ ಸರ್ವಾಂತರಾತ್ಮನ ತೀವ್ರಪ್ರೇಕ್ಷಿಸೊ ಜ್ಞಾನ ಭಕುತಿ ಮತಿ ಎನಗಿತ್ತುರಕ್ಷಿಸೆ ಸರಸ್ವತಿ ಫಣಿರ ಪಕ್ಷಿಪ ನುತೆ 3ಹೇಮಅಂಕುಶಪಾಶಇಕ್ಷುದಂಡವು ಪುಷ್ಪಕೋಮಲಹಸ್ತ 2 ನಾಲ್ಕಲ್ಲಿ ಶೋಭಿತವುಕಾಮಿತವರಪ್ರದೆ ಕಾತ್ಯಾಯನಿ ಉಮಾಹೈಮವತಿಯೆ ಶಿವೆ ದಯಮಾಡಿ ಪೊರೆಯೆನ್ನ 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ ತತ್ ಶಕ್ತಿ ಪ್ರದರ್ಶಯನ್ಸೂತ್ರವು ಮಣಿಗಳೊಳಂತೆ ಧಾರಕಹರಿವೃತತಿಜಪಿತ ವಿಷ್ಣು ಪ್ರಸನ್ನ ಶ್ರೀನಿವಾಸಗತಿಪ್ರಿಯತರೆ ಶಿವೆ ಸತತ ಪಾಲಿಸೆ ಎನ್ನ5
--------------
ಪ್ರಸನ್ನ ಶ್ರೀನಿವಾಸದಾಸರು