ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯ ಸದ್ಗುರುರಾಯ | ಈಗ ಏಳು ತುರಗ ಸೂತನುದಯಿಸುವ ಸಮಯ ಪ ಎದ್ದು ಶಿಷ್ಯರ ಕರೆಯಬೇಕು | ಗುರು ಇದ್ದ ದೋಷವ ಕಳೆಯಬೇಕು ಪರಿ ಶುದ್ಧರ ಮಾಡಿ ನೀನುದ್ಧರಿಸಬೇಕು 1 ಭಾಗವತ ಶಾಸ್ತ್ರವಿಚಾರ ಮುರೆರಡು ವಿಧ ಭೇದ ತಾರತಮ್ಯ ಸಾರುತ ಸಲಹೋ ಶಿಷ್ಯಪರಿವಾರ 2 ಪದಸುಳಾದಿಗಳ ಕೇಳಬೇಕು | ಕೇಳಿ ಅದರೊಳಿರುವ ತತ್ವವಿವರಿಸಬೇಕು ಮದಡತನವ ಕಳೆಯಬೇಕು ನಿನ್ನ ಪದ ನಂಬಿದವರಿಗೆ ಮುದಗರಿಯ ಬೇಕು 3 ಸತ್ಯನಾರಾಯಣ ಕಥೆಯ | ಬಹುವಿಸ್ತಾರವಾಗಿ ನೀ ಬಿತ್ತರಿಸಯ್ಯ | ಭೃತ್ಯರಾ ಮಾಯೆ ಓಡಿಸಯ್ಯ ಅಜ್ಞಾನ ಜ್ಞಾನ ಭಕ್ತಿ ವೈರಾಗ್ಯ ಸಂಪತ್ತು ನೀಡಯ್ಯ 4 ಒಂದೂರು ನಿಲಯನೆ ಏಳೊ ಶಾಮ ಸುಂದರವಿಠಲನ ಮಂದಿರನಾಳೋ ಬಂದ ನಿಂದೆಗಳೆಲ್ಲ ಹೂಳೋ ನಿನ್ನ ಪೊಂದಿದ ನಮ್ಮನ್ನು ಅಗಲಿದೆ ಆಳೊ 5
--------------
ಶಾಮಸುಂದರ ವಿಠಲ
ತಿರುವಲ್ಲಿಕೇಣಿ (ಚೆನ್ನೈ) ದರುಶನ ಮಾಡುವ ಬಾಬಾರೋ ಪ ಪರಮ ಪುರುಷನವ ಪಾರ್ಥನ ಸೂತನು ವರಗೀತಾಮೃತವುಸುರಿದವನು ಅ.ಪ ಶರನಿಧಿಯೊಳು ಮಿಂದು ಐತರುವವರಿಗೆ ವರದಾಭಯಕರ ತೋರುವವನು ಪರಮಾಚಾರ್ಯಗೆ ದರುಶನವಿತ್ತು ಪರಭಕ್ತಿಯ ಸಾರಿದನಿವನು 1 ಚಾರು ವೇದಂಗಳ ತುರಗವ ಗೈದ ಧಾರುಣಿಯನು ರಥಹೂಡಿದನು ಮರುತಾತ್ಮಜನನು ಧ್ವಜಕೇರಿಸಿದನು ದುರುಳ ಕೌರವನ ಧುರದಿ ಸೋಲಿಸಿದನು2 ಹತ್ತವತಾರದಿ ಬಂದವನಿವನೇ ಮತ್ತದೈತ್ಯರನೆಲ್ಲ ಕೊಂದವನಿವನೇ ಉತ್ತಮಭಕ್ತರ ಕಾಯಲು ಮಾಂಗಿರಿ ಅತ್ತ ನಿಂದಾ ರಂಗನಾಥನು ಇವನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವಿ ಲಕ್ಷಣೆ ಎಮ್ಮ ಸಲಹ ಬೇಕಮ್ಮಭಾವದಲಿ ನೀನಿದ್ದು ಭಾವನಯ್ಯನ ತೋರೀ ಪ ಪಿತನು ಬೃಹತ್ಸೇನ ನಿನಗಾಗಿ ಸ್ವಯಂವರವಹಿತದಿಂದಲೆಸಗುತ್ತ ಲಕ್ಷ್ಯವನೆ ಬಿಗಿದೂ |ಅತಿಶಯದ ಧನುವಿಗೆ ಸಜ್ಜಿಸುತ ಬಾಣವನುಚತುರತೆಲಿ ಭೇದಿಪಗೆ ಸುತೆಯ ಪಣವೆಂದ1 ಮತ್ಸ್ಯ ಯಂತ್ರವಿದಲ್ಲಔಪಚಾರಿಕವೆಲ್ಲ ಸರ್ವವಿಧ ಛನ್ನಾ |ವೈಪರೀತ್ಯದಿ ದ್ವಾರ ಉಪರಿ ಇರುವುದು ಕೇಳಿಕಾಪುರುಷಗಿದು ಕಾಂಬ ಮಾರ್ಗವೇ ಇಲ್ಲ 2 ಸೂತನುತ ಮಾಗಧನು ಕೌತುಕದ ಕೌರವರುಪಾರ್ಥನೂ ಅವನಣ್ಣ ಭೀಮಸೇನಾ |ಆತು ಧನುವನು ಲಕ್ಷ್ಯ ಭೇದಿಸಲೆ ಬೇಕೆಂದುಪೃಥಿವಿಪರು ಮತ್ತಿತರು ಬಂದು ಸೇರಿದರು 3 ಸಜ್ಜುಗೈಯಲು 5ನುವ ಆರಿಂದಲಾಗದಿರೆಲಜ್ಯೆಯಿಂದಲಿ ಮರಳಿ 5ೀಗುವರೆ ಬಹಳ |ಅರ್ಜುನನು ತಾನೊಬ್ಬ ಲಕ್ಷ್ಯವೀಕ್ಷಣ ಶಕ್ತಅರ್ಜುನಾಗ್ರಜ ಹರಿಗೆ ಅಪರಾಧವೆನೆ ಸರಿದ 4 ನೆರೆದ ಸಭೆಯಲ್ಲಿ ಪುಷ್ಪಹಾರವನೆ ಪಿಡಿಯುತ್ತಬರುತ ವೈಯ್ಯಾರದಲಿ ಶಿರಿ ಕೃಷ್ಣ ಕಂಠದಲ್ಲಿ |ಇರಿಸಿ ಪರಮಾನಂದ ಭರಿತಳಾಗಲು ಹರಿಯುಕರಪಿಡಿದು ಹೊರವಂಟ ತನ್ನ ದ್ವಾರಕಿಗೇ 5 ಪರಿ ಪರಿ ಪುಷ್ಪ ವೃಷ್ಟಿಗಳ ಗರೆಯೇ |ದುರುಳರೆದುರಾಗಿ ಸಂಗರಕೆ ಬರುತಿರಲುಹರಿ ಭೀಮರೆದುರಿಸದೆ ದುರುಳರೋಡಿದರು 6 ಮೋದ ಬಡುವಂಥ |ಧೀವರರ ಮನೋಭೀಷ್ಟ ಪೂರ್ಣವನೆ ಗೈಯ್ಯುವನುದೇವ ಗುರು ಗೋವಿಂದ ವಿಠಲ ಕೃಪೆಯಿಂದ 7
--------------
ಗುರುಗೋವಿಂದವಿಠಲರು
ನೋಡೆ ದಯದಿ ಶಿರಿ ನಿನ್ನ ಮಡದಿ ಪ ನೋಡಿ ನೀ ದಯದಿ ನೀಡು ಕರುಣ ದಯ- ಮಾಡು ತ್ವರಿತದಿ ಬೇಡುವೆ ಮುದದಿ ಅ.ಪ. ಮಾಮನೋಹರ ನೀ ಪ್ರೇಮದಿಂದಲಿ ಬಂದ- ಜಾಮೀಳನ ಪೊರದಾ ಶಾಮಸುಂದರನೇ1 ಭಾರಿ ಭಾರಿಗೆ ಎನ್ನ ದಾರಿದ್ರ್ಯವನಧಿಯ ತಾರಿಸಬೇಕೆಂದು ಶೇರಿದೆ ನಿನ್ನನ್ನು 2 ಮರೆಯುವುದುಚಿತವೆ ಶಿರಿಯ ರಮಣ ನೀನು ತರಳ ಧ್ರುವನನ್ನ ಪೊರೆದಂಥ ದೇವ ನೀ 3 ಆರ್ತರಕ್ಷಕ ನೀನು ಪಾರ್ಥನಾ ಸೂತನು ಸಾರ್ಥಕ ಮಾಡು ಲೋಕ ಕರ್ತೃ ದಯಾಪರನೆ 4 ಸರಸಿಜನಾಭನಾದ ಸಿರಿವತ್ಸಾಂಕಿತ ನೀನು ಮರೆಯಬ್ಯಾಡೆನ್ನಯ ಮೊರೆಯನು 5
--------------
ಸಿರಿವತ್ಸಾಂಕಿತರು