ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಿದೆ ದೂರು ಬರಿದೆ ಪಾಂಡವರಿಗೆ ಪ ಕೊಂದವರಿವರು ಕೌರವರನೆಂಬಪಕೀರ್ತಿ ಅ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1 ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2 ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3 ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4 ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5 ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6 ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7
--------------
ಕನಕದಾಸ
ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಪ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ | ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ 1 ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ 2 ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ | ಕರುಣದಿಂದಲಿ ನಿಜರೂಪ ತೋರಿ | ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ 3 ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು | ಅನಿಲ ಸುತನಿಂದ ಮಾಗಧನ ಕೊಲ್ಲಿಸಿ | ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ | ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ 4 ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ | ತರಣಿಸುತ ದುಶ್ಶಾಸ ಕೌರವೇಶಾ | ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ | ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ5 ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ | ತೋರಿದೆ ಒಬ್ಬೊಬ್ಬ ನಾರಿಯಲಿ | ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ | ವರ ಸಂತಾನವನು ಪಡದೆ ಎಲೊ ಭಾಪುರೆ 6 ವರ ಚಂದ್ರಹಾಸ ಮಿಗಿಲಾದ ಭೂಪಾಲಕರ | ಕರೆಸಿ ಪಾಂಡುವರ ಯಾಗವನೆ ಮುಗಿಸಿ | ಹರುಷದಲಿ ಯದುಕುಲವಾಸ ಮಾಡಿದೆ | ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ 7
--------------
ವಿಜಯದಾಸ