ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ಎಷ್ಟು ಪುಣ್ಯ ಮಾಡಿ ಇಲ್ಲಿ ಇಟ್ಟಿಗೆ ನೆಲಸಿತೋ ವಿಠ್ಠಲನ್ನ ಚರಣ ಶಿರದಿ ಮೆಟ್ಟಿಸಿ ಕೊಂಡಿತೋ ಪ. ಭಕ್ತನಾದ ಪುಂಡಲೀಕನ ಕರಕೆ ಸೋಕಿತೋ ಚಿತ್ತಧೃಡನು ಎಸೆಯೆ ರಂಗನ ಪಾದಕೆರಗಿತೋ 1 ಹರಿಯೆ ಎನ್ನ ಶಿರವ ಮೆಟ್ಟೆಂದ್ಹರಿಕೆ ಮಾಡಿತೋ ಪರಮ ಪುರುಷ ಬಂದು ನಿಲ್ಲೆ ಖ್ಯಾತಿ ಪೊಂದಿತೋ 2 ಪಾದ ಶಿರದಿ ಪೊತ್ತಿತೋ ಪಾದ ಇಲ್ಲಿ ಅಡಿಗಿಸಿಕೊಂಡಿತೋ 3 ಪಾದ ಸೋಕಿಸಿಕೊಂಡಿತೋ ಪಾದ ನನ್ನದೆಂದಿತೋ 4 ಯಮುನ ದಡದಿ ಸುಳಿದ ಪಾದಯತ್ನದಿ ಪೊಂದಿತೋ ಪಾದ ರಜವ ಧರಿಸಿತೋ 5 ಬಂಧ ಬಿಡಿಸುವಂಥ ಪದದಿ ಬಂಧಿಸಿಕೊಂಡಿತೋ ಪಾದ ಸೂಕ್ಷ್ಮದಿ ಪೊತ್ತಿತೋ 6 ಪಾದ ಘಳಿಗೆ ಬಿಡದಾಯ್ತೋ ಜಗದಲಿಟ್ಟಿಗೆ ನಿಲಯನೆಂಬೊ ಲಾಭ ಹೊಂದಿತೋ 7 ನಂದ ಕಂದ ಬಂದನೆಂದು ನಲಿದು ನಿಂತಿತೋ ಇಂದಿರೇಶ ಪೋಗದಿರೆಂದು ಇಲ್ಲೆ ಹಿಡಿದಿತೋ 8 ಪಾಪ ಕಳೆದು ಪಾವನ್ನದಲಿ ಮುಕ್ತಿ ಪೊಂದಿತೋ ಗೋಪಾಲಕೃಷ್ಣವಿಠ್ಠಲನ ಚರಣ ಸೇರಿತೋ9
--------------
ಅಂಬಾಬಾಯಿ
ನರನಾಗ್ಹುಟ್ಟಿದ್ದೀ ಮರುಳೆ ಅರಿವು ಎಲ್ಲಿಟ್ಟಿದ್ದೀ ಪ ವರವೇದಸ್ಮøತಿಶಾಸ್ತ್ರರಿದುನೋಡದೆ ವರವರ ಒದರುವಿ ಮರೆವಿನೊಳಗೆ ಬಿದ್ದು ಅ.ಪ ಮನಗಳು ಸ್ಥಿರಮಾಡಿ ಬರಿದ್ವಾಕ್ಕೆಣೆಸುವಿ ಸಟ್ಟೆಮಾಡಿ ಮನಕೆ ಬಂದಂತಾಡಿ ನರಕದ ಕುಣಿಗೆ ಬೀಳುವಿ ಖೋಡಿ ಜನನಮರಣವೆಂಬ ಕುಣಿಕೆಯೊಳಗೆ ಸಿಕ್ಕು ಘನತರ ನೋಯ್ವುವ ನೆನೆಸಿಕೊಳ್ಳದೆ 1 ಕುಜನ ಸಂಗೀಡ್ಯಾಡೊ ಸುಮನದಿ ಸುಜನರೊಡಗೂಡೊ ನಿಜಮತಿಯೊಳು ಕೂಡೊ ನಿಶ್ಚಲದಿ ನಿಜವನ್ನು ಹುಡಿಕ್ಯಾಡೊ ಗಜಿಬಿಜಿಯೊಳು ಬಿದ್ದು ಗಿಜಿಗಿಜಿಯಾಗದೆ ತ್ಯಜಿಸೆಲೋ ಸಂಶಯ ನಿಜವು ತಿಳಿಯುತಿದೆ 2 ಪಕ್ಷಪಾತವನ್ನು ನೀಗಿ ಜ್ಞಾನಚಕ್ಷು ತೆರೆದು ಇನ್ನು ಸಾಕ್ಷಿಯಾಗಿ ನೀನು ಮಹದಪರೋಕ್ಷವನ್ನು ಕಾಣು ಶಿಕ್ಷೆ ಪಡೆಯದೆ ಮಹಮೋಕ್ಷ ಪಡೆಯೊ ಜಗ ದ್ರಕ್ಷ ಶ್ರೀರಾಮನ ಸೂಕ್ಷ್ಮದಿ ತಿಳಿದು 3
--------------
ರಾಮದಾಸರು
ನಿನ್ನ ಭಕ್ತರು ಬಹಳ ಬಲವಂತರಹುದೈ ಜನ್ಮಜನ್ಮಕೂ ಚರಣಶರಣನ್ನ ಮಾಡೈ ಪ ಹಾರಿದನು ಹನುಮಂತ ಕಡಲ ಕಾಲುವೆಯಂತೆ ಸಾರಿ ಸೇತುವೆಯ ಕಟ್ಟಿ ನೀ ದಾಟಿದೇ ಮಾರುತಿಯು ಬಲ್ಲಿದನು ಎಂದು ನಾಂಪೇಳಲೇ ಸಾರಸಾಕ್ಷನೆ ಸಾಕ್ಷಿ ಯೇತಕೈ ಬೇರೆ 1 ಭೀಷ್ಮನನು ಬೆದರಿಸಲು ತೋರಚಾಪವ ತೊಟ್ಟ ಸೂಕ್ಷ್ಮದಿಂಹಾರಿಸಿದ ಸಂಗರದಲವನು ತೀಕ್ಷ್ಣಸಾಹಸಿಯಾತನೆಂದು ನೀಂತಿಳಿಯತೈ ಶ್ರೇಷ್ಠ ಮಾರುತಿಕೈಯ ಪರಶುವಂ ಕೇಳು 2 ಶಬರ ಶಂಕರನೊಡನೆ ಕಾದಿ ಕಡೆಯಲಿ ಗೆಲ್ದು ಪ್ರಬಲನೆನ್ನಿಸಿ ಪಾಶುಪತವನ್ನೆ ಪಡೆದಾ ಪ್ರಭುವೆ ನಿನ್ನು ಪದೇಶ ಪಡೆದ ಪಾರ್ಥನ ಕೇಳು ಸುಬಲರೈ ಜಾಜೀಶ ದಾಸರೀ ಜಗದಿ 3
--------------
ಶಾಮಶರ್ಮರು
ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ ಪಾದ ಗಡನೆ ಪೋಗಿ ಪ ಧ್ಯಾನಧೃಢ ಅವನು ಇರುವ ಸ್ಥಾನ ಪೇಳುವೆ ಜಾಣೆ ಕೇಳೆ ಹಗಲು ಇರುಳು ಖೂನವಿಲ್ಲವನಿಹ್ಯ ಸ್ಥಳದಿ ತಾನೆತಾನಾಗಿ ಸೂಕ್ಷ್ಮದಿ ಶೂನ್ಯ ಪೀಠದಿ ವಾಸಿಪ ಜಾಣನ ಜವದಿಂ ಪೋಗಿ 1 ಅರಿದು ಮರೆದಿರೆ ಅವನ ಗುರುತು ಒರೆಯುವೆ ಜರಾಮರಣಿವಲ್ಲವಗೆ ಧರಿಸಿರುವಂತವತಾರ ತಿರುಗಲು ಮೂಡವು ಅಡಿಗಳು ನೆರಳೇ ಇಲ್ಲವು ನಿಲ್ಲಲು ಶರೀರವಿಲ್ಲದೆ ತೋರುವ ಪರಮನ ತ್ವರಿತದಿ ಹಿಡಿದು 2 ಪ್ರೇಮ ಸುಂದರೀ ಅವನ ನಾಮ ಪೇಳುವೆ ನೇಮದಿಂದ ಕೂಗುತಿಹ್ಯವು ಸಾಮಯಜುರಾದಿ ವೇದವು ಆಮಹಮಹಿಮನ ಘನತರ ನಾಮದ ನೆಲೆಯೇ ಸಿಗದಿದೆ ಕಾಮಿನಿಯಂಥ ಸ್ವಾಮಿ ಶ್ರೀ ರಾಮ ಸದ್ಗುರು ಪ್ರಭುವಿನ 3
--------------
ರಾಮದಾಸರು