ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ. ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ 1 ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ 2 ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ 3 ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ 4 ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ 5
--------------
ಮೋಹನದಾಸರು
ಶೋಭನವೆ ಹರಿ ಶೋಭನವುವೈಭವಾಮಲ ಪಾವನ ಮೂರುತಿಗೆಶೋಭನವೆ ಶೋಭನವು ಪ. ಕುಂಡಲಿ ನಗರದ ರುಕ್ಮಿಣಿ ಸ್ವಯಂವರಗಂಡಕಿ ಕ್ಷೋಣಿಯ ತೀರದಲಿ ಚಂದ್ರಮಂಡಲ ಕ್ಷೋಣಿಜಾತೆ ಪ್ರಭೆದುಂದುಭಿ ಪಾರಿಜಾತ ಎಸೆಯೆ 1 ಕನ್ನಡಿ ಕಲಶವು ಕನಕದುಪ್ಪರಿಗೆ ಸು-ವರ್ಣ ಮಾಣಿಕದ ಗಗನದಲೆಸೆಯೆರನ್ನದ ಕಿಟಕಿ ಉಜ್ವ[ಲ]ಪನ್ನಗಾಸ್ಯಲಿ ಸು-ವರ್ಣ ಮಾಣಿಕದ ತೋರಣವೆ 2 ಪಚ್ಚದ ಪರಿಮಳ ತಳಿರುತೋರಣ ಕಟ್ಟಿನಿ[ಚ್ಚ]ಕಲ್ಯಾಣ ನೀಲವರ್ಣಉ[ಚ್ಚ]ಹವಾಯಿತು ಇರುಳಿನ ಚರಿತ್ರಾಅಚ್ಚುತನೆ ಗಮ್ಮನೆ ಬಾಹುದು 3 ಭೀಷ್ಮಕ ರುಕ್ಮಿಣಿ ಶಿಶುಪಾಲ[ಗೀವೆ]ನೆಂದುಸೇಸೆಯ ತಳೆದು ಧಾರೆನೆರೆಯೆಆ ಸಮಯದಲಿ ದ್ವಾರ[ಕೆ]ಕೃಷ್ಣಗೆಲೇಸಾದ ಓಲೆಯ ಬರೆದಳಾಕೆ 4 ಬರೆದೋಲೆಯ ಕಾಣಿಸಿ ತೆಗೆದೋದಿಪುರೋಹಿತ ಗಗ್ರ್ಯಾಚಾರ್ಯರುನಿರೂಪ ಕೊಡು ನಮಗೆ ನಿಗಮಗೋ- ಚರನು ಗರುಡವಾಹನ ಗಮ್ಮನೆಬಾಹೋನು 5 ಗವರಿಯ ನೋನುವ ಮದುವೆಯ ಸಡಗರಭುವನೇಶ ತಾ ತಡೆದನ್ಯಾಕೆಂದುತಾ ಚಿಂತಿಸಿದಳು ತಾವರೆಗಂಗಳೆಹವಣಿಸಿದಳು ವಿಲಕ್ಷಣಗಾಗಿ6 ಚಂದದಿ ರುಕ್ಮಿಣಿ ಮುತ್ತೈದೆರಿಗೆಲ್ಲಸಂಭ್ರಮದಿಂದ ಬಾಗಿಣ[ಬೀರೆ ಐ]ತಂದು ತಾಳಿಯ ಮಂಗಳಸೂತ್ರ ಮು-ಕುಂದ ಕಟ್ಟಿ ಕಲ್ಯಾಣವಾದ 7 ಅಂಬಿಕೆಗುಡಿಯಲಿ ಚಂದದಿಂದ ಪೂಜೆಯ ಮಾಡಿರಂಗ[ನ] ಕೂಡಿದ ಸಂಭ್ರಮದಿಂದಮಂದಾರಮಾಲೆಯ ಚಂದದಿಂದಲಿ ತಂದುರಂಗನ ಕೊರಳೊಳು ಹಾಕಿದಳು8 ಹಿಂದಿಂದ ಬಹ ರುಕುಮನ ಕಂಡುಭಂಗಿಸಿ ಕರೆದು ಭಂಗವ ಮಾಡಿಹಿಂದಿಂದ ಕರೆದು ಮುಂದಕೆ ಕಟ್ಟಿ ಮು-ಕುಂದ ಹಯವದನ ದ್ವಾರಕೆ ಪೊಕ್ಕ9
--------------
ವಾದಿರಾಜ
ವೆಂಕಟರಮಣ ವೇದಾಂತಕೋಟಿವಂದ್ಯಶಂಕರಪ್ರಿಯಪತಿಏಳೆನ್ನುತಪ.ಪಂಕಜಮುಖಿಪದ್ಮಾವತಿ ಸರ್ವಾ-ಲಂಕಾರದ ನಿದ್ದೆ ಸಾಕೆನ್ನುತ ಅ.ಪ.ಮಂಗಲಚರಿತ ಭುಜಂಗಶಯನ ನಿ-ನ್ನಂಗದಾಯಾಸವ ಪರಿಹರಿಸಿಪೊಂಗಲಶದಿ ಉಷ್ಣೋದಕ ಗಂಧ ತೈಲಾ-ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ 1ದಧಿಯ ಪೃಥುಕದಲಿ ಹದಗೈದು ಮಧುರದಿಮಧುಸೂದನ ನಿನ್ನ ಪದದ ಮುಂದೆಸದ್ ಹೃದಯರು ತಂದಿಹರು ಸಮರ್ಪಿಸೆಮದಜನಕ ನಿನ್ನ ಓಲೈಸುವರಯ್ಯ 2ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿಚೆನ್ನಾದ ಗೋಕ್ಷೀರವನ್ನು ತಂದುಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3ವಿಧವಿಧ ಷಡುರಸಭರಿತ ಮನೋಹರಸುಧೆಗೆಯಿಮ್ಮಡಿ ಮಧುರತ್ವದಲಿಮೃದುವಾದ ಉದ್ದಿನ ದೋಸೆಯ ಸವಿಯೆಂದುಪದುಮನಾಭನೆ ನಿನ್ನ ಹಾರೈಸುವರಯ್ಯ 4ಸಕ್ಕರೆಕದಳಿಉತ್ತಮ ಫಲಗಳ ತಂದುರಕ್ಕಸವೈರಿಯೆ ನಿನ್ನ ಮುಂದೆಚೊಕ್ಕಟವಾಗಿಡೆ ಲೆಕ್ಕ ಲೇಖನಗಳಒಕ್ಕಣಿಪರುವಾಸುದೇವನೀನೇಳಯ್ಯ5ಸಾರಹೃದಯ ಗೌಡಸಾರಸ್ವತವಿಪ್ರಭೂರಿವೇದಾದಿ ಮಂತ್ರದ ಘೋಷದಿಶ್ರೀರಮಣನೆ ದಯೆದೋರೆಂದು ಕರ್ಪೂರ-ದಾರತಿಯನು ಪಿಡಿದಿಹರು ಶ್ರೀಹರಿಯೇ 6ಭಾಗವತರು ಬಂದು ಬಾಗಿಲೊಳಗೆನಿಂದುಭೋಗಿಶಯನಶರಣಾದೆನೆಂದುಜಾಗರದಲಿ ಮದ್ದಳ ತಾಳರಭಸದಿರೇಗುಪ್ತಿರಾಗ ಸಂಗೀತ ಪಾಡುವರಯ್ಯ 7ಕರುಣಾಸಾಗರ ನಿನ್ನ ಚರಣದ ಸೇವೆಯಕರುಣಿಸೆಂದೆನುತಾಶ್ರಿತ ಜನರುಕರವಮುಗಿದು ಕಮಲಾಕ್ಷ ನಿನ್ನಯ ಪಾದ-ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8ನಾನಾ ಜನರು ಬಂದುಕಾಣಿಕೆಕಪ್ಪವಶ್ರೀನಿವಾಸನೆ ನಿನ್ನ ಪದಕೆ ಒಪ್ಪಿದಾನವಾಂತಕ ನಿನ್ನ ದಯವೊಂದೆ ಸಾಕೆಂದುಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9ನೀನೆ ಗತಿಯೆಂದು ನಿನ್ನ ನಂಬಿಹರು ಲ-ಕ್ಷ್ಮೀನಾರಾಯಣ ಪುರುಷೋತ್ತಮನೆಮಾನದಿ ಭಕ್ತರ ಸಲಹಯ್ಯ ಸಂತತಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ