ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಖಿಳ ಭುವನದೊಳು ನೀನೆವೊ ಸುಹೃದಯದಲಿ ಸಾಕ್ಷಾತ ಸದ್ಗುರು ನೀ ಸುಲಭವೋ ಧ್ರುವ ನಿಮ್ಮದೇ ಹೊಳಹೋ ನಿಮ್ಮದೆ ಸುಳಿವ್ಹು ನಿಮ್ಮದೇ ಬಲವೊ ನಿಮ್ಮ ದಯದೊಲವೊ 1 ಬಲುತಾನವೋ ಜುಮ್ಮು ಜುಮಗುಡುತಿದೆ ಝೇಂಕಾರವು ಸುಮ್ಮನೆ ಓಂಕಾರವೊ ಝಮ್ಮನೆ ಒಮ್ಮಿತಿಗ್ಹೆಳೆನಿಸುತಿರೆ ಬ್ರಹ್ಮಾನಂದದ ಘೋಷವೋ ನಿಮ್ಮದೆವೊ 2 ನಿಗಮಗೋಚರ ನಿಜವಸ್ತು ನೀನೆ ಭಗತರಿಗೆ ಸಹಕಾರವೊ ನಿಜ ನೀನೆವೋ ಸುಗಮ ಸುಪಥ ಸಜ್ಜನರಾನಂದ ಯೋಗಿಜನರನುಕೂಲವೋ ಘನ ನೀನೆವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ನಾ ನಿಮ್ಮ ಧ್ರುವ ಮಹಾಮಹಿಮೆ ನೀ ದಾನತಹುದೋ ಶ್ರೀ ಅವಧೂತ ಗುಹ್ಯಗುಪಿತ ಶ್ರೀನಾಥ ಸುಹೃದಯದಲಿ ಸಾಕ್ಷಾತ 1 ಅನಾಥರ ಸಹಕಾರ ಮುನಿಜನರ ಮಂದಾರ ಘನಗುರು ಜ್ಞಾನಾಸಾಗರ ದೀನಜನರ ಉದ್ಧಾರ 2 ಮಹಾಗುರು ನಿಜನಿಧಾನ ಬಾಹ್ಯಾಂತ್ರದಲಿ ಪರಿಪೂರ್ಣ ಮಹಿಪತಿ ಜೀವನಪ್ರಾಣ ಇಹ್ಯಪರ ನೀ ಭೂಷಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಲಗು ಮಲಗೆಲೊ ಸುಮ್ಮನೆ ಸುಕುಮಾರ ಚೆಲುವ ಜೋಗುಳವ ಪಾಡುವೆ ಗೋಪಾಲ ಪ ಲಲನಾಮಣಿಯರು ಸುಲಭದಿ ನಿನ್ನನು ಕಲಭಾಷಣದಿಂದ ಸೆಳೆಯ ಬಯಸುತಿಹರೋ ಅ.ಪ ಭೋಗಿಶಯನ ಹರಿ ಈ ಜಗದೊಳಗೆ ಈಗ ಬಂದಿರುವ ಜಾಗವನರಿಯದೆ ಯೋಗಿ ಜನರು ಅನುರಾಗದಿಂದ ನಿನ್ನ ಸಾಗಿಸಲಿರುವರೊ ಕೂಗದೆ ಸುಖದಲಿ 1 ದುರುಳ ಶಕಟನನು ಮುರಿದ ಕೋಮಲದ ಚರಣ ಕಮಲಗಳು ಉರಿಯುತಲಿದ್ದರು ಮರೆಯಲದನು ಸುವಿನೋದವೀಯುವ ಸರಸಪದಗಳನು ಪರಿಪರಿಯರುಹುವೆನೊ 2 ಎನ್ನಯ ಕರಗಳು ನೋಯುತಲಿರುವುವು ಚಿನ್ಮಯ ರೂಪನೆ ನಿದ್ರೆಯ ಮಾಡೊ ದಧಿ ಪಯ ಬೆಣ್ಣೆಯ ಕೊಡುವೆ ಪ್ರಸನ್ನ ಸುಹೃದಯದಲಿ 3
--------------
ವಿದ್ಯಾಪ್ರಸನ್ನತೀರ್ಥರು