ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಧ್ರುವನು ಜನಿಸಿದಾಗಿನ ಜೋಗುಳ ಹಾಡು) ಮುತ್ತಿನ ಸರಪಣಿ ಹಸ್ತದಿ ಪಿಡಿದು ಮತ್ತೈದೆಯರೆಲ್ಲ ಸುತ್ತಲೂ ನೆರೆದು ಪುತ್ರರತ್ನವ ತಂದು ತೊಟ್ಟಿಲೊಳಿಟ್ಟು ಮತ್ತಕಾಶಿನಿಯರು ತೂಗಿದರೊಟ್ಟು ಜೋ ಜೋ 1 ಮಾರನ ಹೋಲ್ವ ಶೃಂಗಾರನೆ ಜೋ ಜೋ ಧಾರುಣಿಪತಿ ಸುಕುಮಾರನೆ ಜೋಜೋ ಸಾರಸನೇತ್ರಪವಿತ್ರನೆ ಜೋ ಜೋ ಚಾರುಮೋಹನ ಶುಭಗಾತ್ರನೆ ಜೋಜೋ ಜೋಜೋ 2 ಜೋ ಜೋ ಮಕ್ಕಳ ಕಂಠಾಭರಣ ಜೋ ಜೋ ಸುರತರುಪಲ್ಲವಚರಣ ಜೋ ಜೋ ಸಜ್ಜನ ಹೃದಯಾನಂದ ಜೋ ಜೋ ಉತ್ತಾನಪಾದನ ಕಂದ ಜೋ ಜೋ3 ತೃವಿ ತೃವಿ ಲಕ್ಷ್ಮೀನಾರಾಯಣ ಶರಣ ತೃವಿ ತೃವಿ ಪರಿಪೂರ್ಣ ಸದ್ಗುಣಾಭರಣ ತೃವಿ ತೃವಿ ಸುಸ್ಮಿತವದನವಿಲಾಸ ತೃವಿ ತೃವಿ ಚಂದಿರಕಿರಣ ಪ್ರಕಾಶ ಜೋ ಜೋ 4
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಯ ಸೀತಾರಾಮಭೌಮಪ.ದಶರಥನಂದನ ದಶಮುಖಭಂಜನ ತ್ರಿದಶಭಯಶಮನ ಸುಸ್ಮಿತವದನ 1ವಾತಜನುತ ಪಾತಕಹರ ವಿಧಿತಾತ ಪುನೀತಪದ ಭೂತಪವರದ 2ಇನಕುಲರಕ್ಷ ದೀನಜನರಕ್ಷಮುನಿಜನತೋಷ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು