ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಪಾಂಡುರಂಗ ವಿಠಲ | ದಯದಿ ಪೊರೆ ಇವನಾ ಪ ಭಯ ಕೃತೂ ಭಯನಾಶ | ಹಯಮೊಗನೆ ಹರಿಯೇ ಅ.ಪ. ಹಿಂದಿನ ಸುಸಂಸ್ಕಾರ | ಛಂದದಲಿ ಅನುಭವಿಸಿಇಂದು ತವದಾಸ್ಯವನು | ಕಾಂಕ್ಷಿಸುವ ಹರಿಯೇಅಂದ ಪುಣ್ಯದರಾಶಿ | ಬಂದೊದಗಿತೋ ಎನೋಇಂದಿರಾ ನಂದದಾ | ನಂದವನೆ ಈಯೋ 1 ಕರ್ಮಾಕರ್ಮಗಳ | ಮರ್ಮವನೆ ತಿಳಿಸುತ್ತಧರ್ಮನಾಮಕ ನಿನ್ನ | ಪೇರ್ಮೆ ಸನ್ನಾಮಾಒಮ್ಮನದಿ ಸರ್ವದಾ | ಸುಸ್ಮರಣೆ ಈಯುವುದುದುಮ್ಮಾನಗಳ ಕಳೆದು | ಸಲಹಬೇಕಿವನಾ 2 ಪಂಚ ಭೇದ ಜ್ಞಾನ | ಸಂ ಚಿಂತನೆಯ ಕೊಟ್ಟುವಾಂಛಿತಾರ್ಥವನೀಡೋ | ಪಂಚ ಪಂಚಾತ್ಮಾಹೆಂಚು ಹಾಟಕದಿ ಸಮ | ಚಿಂತನೆಯು ಬರುತಿರಲಿಅಂಚೆವಾಹನ ಪಿತನೆ | ಸಂಚಿತಾಗಮ ಕಳೆಯೋ3 ಭೂರಿ ಭಕ್ತಿಗಳಾ 4 ಧೀವರರ ಆಶಿಷವು | ತೀವರಾಗಲಿ ಇವಗೆಮಾವಾರಿ ಪದಚಿಂತೆ | ಯಾವಾಗ್ಯೂ ಇರಲೀಕೇವಲಾನಂದಗಳು | ಭಾವದಲಿ ಮೈದೋರೆದೇವಗುರು ಗೋವಿಂದ | ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಸ್ಮರಿಸೆನ್ನ ಮನವೇ ಯಾದವ ರಾಯನಾ| ಸರಸಿಜೊವನುತ ಭಕುತರ ಪ್ರೀಯನಾ ಪ ವರನಿಗ ಮೋಯಿದವನಾ ಶೀಳಿ ಎಳಹಿದವನಾ| ಶರಧಿ ಮಥನ ಗೋಸುಗನ ಪೊತ್ತನಾ ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ| ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ1 ಭೂಸುರೋತ್ತಮನಾಗಿ ದಾನವ ಬೇಡಿದನಾ| ಹೇಸದೇ ಕ್ಷತ್ರಿಯರ ಕುಲ ಕೊಂದನಾ| ವಾಸು-ಕ್ಯಾ ಭರಣನ ಧನುವ ಮುರಿದವನಾ| ವಾಸವಾತ್ಮಜ ಮಿತ್ರ ದೇವಕಿ ಕಂದನಾ2 ಪತಿವೃತೆ ನಾರಿಯರ ವೃತಭಂಗ ಮಾಡಿದನಾ| ಸಿತ ಹಯವೇರಿದ ಶ್ರೀ ಜಗದೀಶನಾ| ಪತಿತ ಪಾವನನಾದಾ ಅನಂತಾವತಾರನ| ನುತ ಗುರು ಮಹಿಪತಿ ನಂದನ ಪ್ರೀನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು