ಒಟ್ಟು 8 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ 2 ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಅನಿಲ ಹೃತ್ಕುಮುದೇಂದು | ವೇದ ವ್ಯಾಸಾಎನಗಿನ್ನು ತವ ಧ್ಯಾನ | ಸುಖವೀಯೊ ಶ್ರೀಶಾ ಪ ಚಿದ ಚಿದ್ವಿಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ | ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ 1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯಎನಗರುಹು ವೇದಾರ್ಥ | ವೇದ ವೇದ್ಯಾ |ಘನ ಮಹಿಮಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮಾ 2 ಸಚ್ಛಾಸ್ತ್ರ ಕರ್ತೃಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವವರುಹೆ | ಬುಧ ಜನರಿಗೇ |ಮತ್ಸ್ಯಾದಿ ರೂಪ ನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಬೋಧಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಲಕ್ಷ್ಮೀ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಳಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ ಮಲ | ಗಲನುವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಬೋಧರ ಸುಸೇವೆಯನು | ಸ್ವೀಕರಿಸುವೇ |ಮೋದಗುಣ ಪೂರ್ಣ ಗುರು | ಗೋವಿಂದ ವಿಠಲನೇಹೇ ದಯಾಂಬುಧೇ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಇಂದು ಶ್ರೀ ಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ ಮನವೆಂಬ ಮನಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಙÁ್ಞನಧ್ಯಾನದಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ 1 ತನುವೆಂಬ ತಾರತಮ್ಯಭಾವ ಮಾಡುವ ಅನುಭದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರನೀಡುವ 2 ಬುದ್ಧಿ ಭಾವನೆಯ ಗಂಧಾಕ್ಷತಿಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯವೇ ಪುಷ್ಪವ ನೀಡುವ ಸಿದ್ಧಾಂತವೆಂಬುದೇ ಸುಸೇವೆ ಮಾಡುವ 3 ಪ್ರಾಣ ಪಂಚವೇ ಪಾದಪೂಜೆಯ ಮಾಡುವ ಪುಣ್ಯಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯ ಧನ್ಯವಾಗುವ ಮುಕ್ತಿಬೇಡುವ 4 ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ 5 ಜೀವ ಭಾವನೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧಗುಣವೆಂಬ ತಾಂಬೋಲನಿಡುವ ಅವಾವಪರಿಯು ಪ್ರಾರ್ಥನೆ ಮಾಡುವ 6 ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಛನ ನೋಡುವ ಪಂಚಭೂತವೆಂಬಾರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪನೀಡುವ 7 ದಿವ್ಯ ಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಪಾದ ನಮಿಸುವ ಭವಬಂಧನದ ಮೂಲ ಛೆÉೀದಿಸುವ 8 ನಮ್ರತವೆಂಬ ಸಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ ಜನ್ಮ ಮರಣದ ಹಾದಿಯು ಬಿಡುವ 9 ನಿರ್ಗುಣದಿಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿ ಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ 10 ಅನಾಹತವೆಂಬ ಧ್ವನಿವಾದ್ಯ ಮಾಡುವ ಅನಂದೋ ಬ್ರಹ್ಮದೊಳು ಮುಳಗ್ಯಾಡುವ ಭಾನುಕೋಟಿತೇಜ ಪ್ರಕಾಶ ನೋಡುವ ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆಲೆಯು ನೋಡಿ ಧ್ರುವ ಕರ್ಮಕ ಮಂದದಿ ಸಿಲುಕಲಿ ಬ್ಯಾಡಿ ವರ್ಮನರುವ್ಹ ಗುರುಯೋಗ ಧರ್ಮವ ಮಾಡಿ ನಿರ್ಮನದಲಿ ನಿಜಘನ ಬೆರೆದಾಡಿ ನಿರ್ಮಳ ನಿಶ್ಚಳ ನಿರ್ಗುಣ ಆತ್ಮನ ಕೂಡಿ 1 ಅನುದಿನ ಅನುಭವಾಮೃತವನು ಸೂರ್ಯಾಡಿ ತನುಮನಧನ ಶ್ರೀಗುರುವಿನರ್ಪಣೆ ಮಾಡಿ ಅನುಭವದಲಿ ಆತ್ಮದ ನೆಲೆನಿಭ ನೋಡಿ ಘನಬ್ರಹ್ಮಾನಂದದ ಸುಖದಲಿ ಲೋಲ್ಯಾಡಿ2 ಮಹಾಮಹಿಮನ ಸುಸೇವೆಯ ಮಾಡಿ ಮಹಿಪತಿ ಒಡಿಯನ ಶ್ರೀಪಾದವ ನೋಡಿ ಇಹಪರ ಸಾಯೋಜ್ಯ ಸದ್ಗತಿ ಮುಕ್ತಿಯ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುರಹರ ನಗಧರ ಪಾಹಿಮಾಂ ಕೃಷ್ಣ ಪ ಪರಮ ದಯಾಕರ ಪಾಹಿಮಾಂ ಕೃಷ್ಣ ಅ.ಪ. ಚರಣ ಸುಸೇವೆಯ ನೀಡೋ ಕೃಷ್ಣ 1 ಭಕ್ತವತ್ಸಲ ಭವನಾಶನ ಸರ್ವ ಶಕ್ತ ನೀನಲ್ಲದಿನ್ಯಾರೋ ಕೃಷ್ಣ 2 ಲೋಕನಾಥ ಜಗದೇಕ ಪರಾತ್ಪರ ರಾಕೇಂದು ವದನ ಶ್ರೀಕಾಂತದೇವ 3
--------------
ಲಕ್ಷ್ಮೀನಾರಯಣರಾಯರು
ಶ್ರೀ ರಮಾದೇವಿ ಅಂಬೋನಿಧಿ ಹೃದಂಬರ ವಾಸಿನಿ ಅಂಬಾ ಬಾ ಬಾ ಅಂಬುಧಿಜಾ ನಮೋ ಪ ಅಂಬುಜನಾಭನ ನಿಜಸತಿ ಶ್ರೀ ಭೂ ರಥಾಂಗ ಪೂ ಕಂಬು ಮಾಲಾದಿ ಸುರೂಪದಿ ಹರಿಗೆ ನೀ ಸಮ್ಮುದದಿಂದೆ ಸುಸೇವೆಯ ಮಾಳ್ಪಳೆ ಅ ಪ ಮಂದರಗಿರಿಯಿಂದ ಸಿಂಧುವ ಮಥಿಸಲು ನಿಂದು ಪ್ರಕಟವಾದೆ ಇಂದಿರಾದೇವಿಯೆ ಕುಂದೇನಿಲ್ಲದ ಸುಂದರಗುಣನಿಧಿ ಬಂಧಮೋಚಕ ಆನಂದಸುಪೂರ್ಣ ಗೋ ವಿಂದ ಶ್ರೀ ಅಜಿತಭೂಮನನ್ನೆ ವರಿಸಿದೆ ಮಂದಜಭವ ಶಿವ ವೃಂದಾರಕನುತ 1 ಹರನ ಚಾಪವ ಶ್ರೀರಾಮನು ಮುರಿಯಲು ವರ ವನಮಾಲೆಯ ಅರ್ಪಿಸಿ ನಿಂದೆ ಸುರಮುನಿರಾಜರು ಪುರಜನರೆಲ್ಲರು ಸುರಿಯಲು ಪೂಮಳೆ ಸಂಭ್ರಮದಿಂದಲಿ ಸರಿಪರರಿಲ್ಲದ ಶ್ರೀ ರಘುರಾಮನು ಸಿರಿಜನಕಜೆ ನಿನ್ನ ಕರವನು ಗ್ರಹಿಸಿದ 2 ಭೈಷ್ಮಿ ರುಕ್ಮಿಣಿ ಸತ್ಯಭಾಮಾ ಶ್ರೀ ಭೂದೇವಿ ವಾಮಚಿನ್ಮಯೆ ಶ್ರೀ ಸ್ವಾಮಿ ಕೃಷ್ಣನ ರಾಣಿ ಹೇಮಗರ್ಭಾದಿ ಸಮಸ್ತ ಸುಜನರಿಗೆ ರಮೆ ನಿನ್ನಯ ಸುಮಂದ ಕಟಾಕ್ಷವು ಕಾಮಿತ ಫಲದವು ಮೋಕ್ಷಹೇತುವೆ ದೇವಿ ಸತಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸಗುಣ ನಿರ್ಗುಣ ಬಾರಯ್ಯ ಬ್ರಹ್ಮಾನಂದ ಸುಖವು ದೋರಯ್ಯ ಧ್ರುವ ಕಣ್ಣು ಬಡೆಯುತದೆ ನಿಮ್ಮ ನೋಡೇನೆಂದು ಪುಣ್ಯಚರಣ ಸುಪ್ರಭೆದೋರೋ ನೀ ಬಂದು ಧನ್ಯಧನ್ಯಗೈಸುವದೋ ಕೃಪಾಸಿಂಧು ಎನ್ನೊಡೆಯ ನೀನಹುದೋ ದೀನಬಂಧು 1 ಅನುದಿನ ಸುಸೇವೆ ನಿಮ್ಮ ಮಾಡೇನೋ ಕ್ಷಣಕ್ಕೊಮ್ಮೆ ಸ್ವರೂಪ ನಾನೋಡೇನೋ ಘನ ಸುಖದೊಳು ನಾ ಬೆರೆದಾಡೇನೋ ನೆನೆವಂಥ ದಾಸರ ನಿಮ್ಮ ಕೂಡೇನೋ 2 ಹೃದಯದೊಳು ನಿಜವಾಗಬೇಕಿಗ ಸದಾಸರ್ವದಾ ಮಾಡೋ ಏನ್ನೊಳೀವ್ಹಾಂಗ ಪಾದಪದ್ಮಕ್ಯೋಗ್ಯ ಮಾಡೋ ಮಹಿಪತಿಗೆ ಇದೆ ಪುಣ್ಯ ನೋಡಯ್ಯ ಕುಲಕೋಟಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು